Ahmedabad plane crash: 'ಮೇಡೇ' ಎಂಬ ಶಬ್ದದ ಅರ್ಥವೇನು, ಯಾಕೆ & ಯಾವಾಗ ಬಳಸುತ್ತಾರೆ ತಿಳಿಯಿರಿ
Ahmedabad Plane Crash: ಲಂಡನ್‌ಗೆ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ AI 171 ಏರ್ ಇಂಡಿಯಾ ವಿಮಾನವು ಗುರುವಾರ ಅಹಮದಾಬಾದ್‌ನಲ್ಲಿ ಪತನ ಆಗಿತ್ತು. ಇದಕ್ಕೂ ಮುನ್ನ ಪೈಲಟ್ ಮೇಡೇ ಸಂದೇಶ ನೀಡಿದ್ದು, ಇದಾಯ ಸ್ವಲ್ಪ ಹೊತ್ತಲ್ಲೇ ಮೇಘಾನಿ ನಗರದ ಬಳಿ ವಿಮಾನ ಪತನವಾಯಿತು. ಹಾಗಾದ್ರೆ 'ಮೇಡೇ' ಎಂಬ ಶಬ್ದದ ಅರ್ಥವೇನು ಹಾಗೂ ಯಾಕೆ ಬಳಸುತ್ತಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಏರ್ ಇಂಡಿಯಾ AI 171 ಪತನವಾಗುವುದಕ್ಕೂ ಮುನ್ನ ಇನ್ನೂ ಎಟಿಸಿಯ ಸಂಪರ್ಕವನ್ನು ಉಳಿಸಿಕೊಂಡಿತ್ತು. ಆದರೆ, ಪೈಲಟ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತದ ಸೂಚನೆಯನ್ನು ಕಂಡುಕೊಂಡಿದ್ದು, ಈ ಹಿನ್ನೆಲೆ 'ಮೇಡೇ' ಸಂದೇಶ ಕಳುಹಿಸಿದ್ದರು. ಇದರ ಬೆನ್ನಲ್ಲೇ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರೋಟೋ ಕಾಲ್‌ಗಳನ್ನು ತಕ್ಷಣವೇ ಸಕ್ರಿಯಗೊಳಿಸಲಾಗಿತ್ತು. ಅಗ್ನಿಶಾಮಕ, ವೈದ್ಯಕೀಯ ತಂಡಗಳು ಹಾಗೂ ಭದ್ರತಾ ಸಿಬ್ಬಂದಿಯನ್ನ ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಯಿತ್ತು.

'ಮೇಡೇ' ಪದದ ಇತಿಹಾಸ: 'ಮೇಡೇ' ಎಂಬ ಶಬ್ದವವನ್ನು 1920ರ ಆರಂಭದಲ್ಲಿ ಇಂಗ್ಲೆಂಡ್‌ನ ಕ್ರಾಯ್ಡನ್ ವಿಮಾನ ನಿಲ್ದಾಣದ ಹಿರಿಯ ರೇಡಿಯೋ ಅಧಿಕಾರಿ ಫ್ರೆಡರಿಕ್ ಸ್ಟಾನ್ಲಿ ಮ್ಯಾಕ್‌ಫರ್ಡ್ ಅವರು ಬಳಕೆಗೆ ತಂದರು. ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವಿನ ವಿಮಾನ ಸಂಚಾರ ಹೆಚ್ಚಾಗಿ, ಎರಡೂ ದೇಶಗಳ ಸಿಬ್ಬಂದಿಗೆ ಸುಲಭವಾಗಿ ಅರ್ಥ ಆಗುವಂತೆ ಒಂದು ತುರ್ತು ಸಂಕೇತದ ಪದವನ್ನು ಹುಡುಕಬೇಕಾಗಿತ್ತು. ಆಗ ಸಿಕ್ಕಿದ್ದೇ ಈ ಮೇಡೇ ಪದ.
ಬಳಕೆಗೆ ತಂದವರು ಯಾರು?: 'ಮೇಡೇ' ಎಂಬ ಪದ ಫ್ರೆಂಚ್ ಮೂಲದ್ದಾಗಿದೆ. ಇದನ್ನು 1920ರ ದಶಕದ ಆರಂಭದಲ್ಲಿ ಬಳಕೆಗೆ ತರಲಾಗಿತ್ತು. ಲಂಡನ್‌ನ ಕ್ರಾಯ್ಡನ್ ವಿಮಾನ ನಿಲ್ದಾಣದಲ್ಲಿ ರೇಡಿಯೋ ಅಧಿಕಾರಿ ಆಗಿದ್ದ ಫ್ರೆಡೆರಿಕ್ ಸ್ಟಾನ್ಲಿ ಮಾಕ್‌ಫೋರ್ಡ್ ಬಳಕೆಗೆ ತಂದರು.
ಯಾವಾಗ 'ಮೇಡೇ' ಬಳಕೆ ಮಾಡಲಾಗುತ್ತದೆ?: 'ಮೇಡೇ' ಪದವು ಫ್ರೆಂಚ್ ಮೂಲದಾಗಿದ್ದು, ಇದರ ಅರ್ಥ ನನಗೆ ಸಹಾಯ ಮಾಡಿ ಎನ್ನುವುದಾಗಿದೆ. ತುರ್ತು ಪರಿಸ್ಥಿತಿ ಬಗ್ಗೆ ವಿಮಾನ ಸಂಚಾರ ನಿಯಂತ್ರಣ ಅಥವಾ ಇತರ ವಿಮಾನಗಳಿಗೆ ತಿಳಿಸಲು 'ಮೇಡೇ' ಅನ್ನು ಬಳಸುತ್ತಾರೆ. ಇದು ತಕ್ಷಣದ ಅಗತ್ಯವಿರುವ ಸಹಾಯದ ಬಗ್ಗೆ ಸೂಚಿಸುತ್ತದೆ.
ಯಾವುದೇ ವಿಮಾನ ಅಥವಾ ಹೆಲಿಕಾಪ್ಟರ್ ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲಾಗುತ್ತದೆ. ತುರ್ತಾಗಿ ನನಗೆ ಸಹಾಯ ಮಾಡಿ ಎಂಬುದನ್ನು ಸುಲಭವಾಗಿ ತಿಳಿಸಲು ಈ ಪದವನ್ನು ಬಳಕೆ ಮಾಡಲು ಆರಂಭಿಸಿದರು. ಇದರ ಉದ್ದೇಶ ಸುಲಭವಾಗಿ ಸಂದೇಶ ಕಳುಹಿಸುವುದು, ಸರಳವಾಗಿ ಅರ್ಥ ಮಾಡಿಸುವುದಾಗಿದೆ
ಹೇಗೆ ಸಹಾಯ ಆಗಲಿದೆ?: ಯಾವುದೇ ವಿಮಾನದ ಪೈಲಟ್ ಮೇಡೇ ಎಂದು ಸಂದೇಶ ಕಳುಹಿಸುತ್ತುದ್ದಾರೆ ಅಂದ್ರೆ ಅವರು ತಕ್ಷಣದ ಸಹಾಯ ಕೇಳುತ್ತಿದ್ದಾರೆ. ಮಾರಣಾಂತಿಕ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡುತ್ತಿದ್ದಾರೆ ಎಂಬರ್ಥವಾಗಿದೆ. ಈ ಸಂದೇಶ ಕಳುಹಿಸಿದ ಸಮಯದಲ್ಲಿ ಅನಿವಾರ್ಯವ ಅಲ್ಲದ ರೇಡಿಯೋ ಎಲ್ಲಾ ಸಂವಹನಗಳೂ ಸ್ಥಗಿತಗೊಳ್ಳಬೇಕು ಮತ್ತು ಎಟಿಸಿ ಎಂದು ಕರೆಯಲ್ಪಡುವ ವಾಯು ಸಂಚಾರ ನಿಯಂತ್ರಣವು ಆ ಕರೆಗೆ ಆದ್ಯತೆಯನ್ನು ನೀಡುತ್ತದೆ.
ಯಾವಾಗಿನಿಂದ ಮೇಡೇ ಪದದ ಬಳಕೆ?: ಇದರಿಂದ ಪೈಲಟ್‌ಗಳು ಅಪಾಯದ ಪರಿಸ್ಥಿತಿ, ಸ್ಥಳ, ತುರ್ತುಸ್ಥಿತಿಯ ಸ್ವರೂಪ, ವಿಮಾನದಲ್ಲಿರುವ ಜನರ ಸಂಖ್ಯೆ ಹಾಗೂ ಮನವಿಗಳೇನಾದರೂ ಇದ್ದರೆ ಅದನ್ನು ತಿಳಿಸುತ್ತಾರೆ. ಇದರಿಂದ ರಕ್ಷಣಾ ತಂಡಗಳಿಗೆ ಬೇಗನೇ ಕಾರ್ಯನಿರ್ವಹಿಸಲು ಸಹಾಯ ಆದಂತಾಗಲಿದೆ. ಇನ್ನು ಈ ಪದವನ್ನು 1920ರಲ್ಲಿ ಬಳಕೆಗೆ ತರಲಾಗಿತ್ತಾದರೂ, 1923ರಲ್ಲಿ ಮೊದಲ ಬಾರಿಗೆ ವಿಮಾನಗಳಲ್ಲಿ ಈ ಪದವನ್ನು ತುರ್ತು ಸಂಕೇತವಾಗಿ ಬಳಸಲು ಪ್ರಾರಂಭಿಸಲಾಯಿತು. ನಂತರ, 1927ರಲ್ಲಿ ಇದನ್ನು ಅಂತಾರಾಷ್ಟ್ರೀಯವಾಗಿ ಅಧಿಕೃತವಾಗಿ ಅಂಗೀಕರಿಸಲಾಯಿತು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications