ಮತೋತ್ಸವದ 6ನೇ ಹಂತ: ವಿಶೇಷತೆಯೇನು?
ನವದೆಹಲಿ, ಮೇ 12: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾರರು ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಉತ್ತರಪ್ರದೇಶ, ಹರಿಯಾಣ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ದೆಹಲಿ ಹಾಗೂ ಜಾರ್ಖಂಡ್‌ನ 979 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 10.16 ಮತದಾರರು ಹಕ್ಕು ಚಲಾವಣೆಗೆ ಅರ್ಹರಾಗಿದ್ದಾರೆ.

ಬಂಗಾಳದಲ್ಲಿ ಎಲ್ಲೆಡೆ ಅರೆಸೇನಾಪಡೆ
ಹಿಂದಿನ ೫ ಹಂತಗಳ ಚುನಾವಣೆಯಲ್ಲಿ ಹಿಂಸಾಚಾರಗಳು ನಡೆದ ಹಿನ್ನೆಲೆಯಲ್ಲಿ೬ನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲೆಡೆ ಅರೆಸೇನಾ ಪಡೆಯನ್ನು ಚುನಾವಣಾ ಆಯೋಗ ಆಯೋಜಿಸಿದೆ. 8 ಕ್ಷೇತ್ರಗಳ 15,428ಮತಗಟ್ಟೆಗಳಲ್ಲಿ ವಿಶೇಷವಾಗಿ ಈ ಅರೆಸೇನಾಪಡೆಗಳಿವೆ. ಅರೆಸೇನಾ ಪಡೆ ನಿಯೋಜಿಸಲು ಬಿಜೆಪಿ ಹಾಗೂ ಎಡಪಕ್ಷಗಳು ಆಯೋಗಕ್ಕೆ ಮನವಿ ಮಾಡಿದ್ದವು. ಆದರೆ ಇದಕ್ಕೆ ಟಿಎಂಸಿ ವಿರೋಧವ್ಯಕ್ತಪಡಿಸಿತ್ತು.
ಆರನೇ ಚುನಾವಣಾ ಹಂತದ ಮಾಹಿತಿ
ಒಟ್ಟು ಸೀಟು: 59
ರಾಜ್ಯಗಳು: ಉತ್ತರಪ್ರದೇಶ(14), ಹರಿಯಾಣ(10), ಪಶ್ಚಿಮ ಬಂಗಾಳ(8), ಬಿಹಾರ(8), ಮಧ್ಯಪ್ರದೇಶ(8), ದೆಹಲಿ(7), ಜಾರ್ಖಂಡ್(4)
ಒಟ್ಟು ಅಭ್ಯರ್ಥಿಗಳು: 979
ಪುರುಷ ಅಭ್ಯರ್ಥಿ: 896
ಮಹಿಳಾ ಅಭ್ಯರ್ಥಿ: 83
ಒಟ್ಟು ಮತದಾರರು: 10.16 ಕೋಟಿ
ಪುರುಷ ಮತದಾರರು: 5.41 ಕೋಟಿ
ಮಹಿಳಾ ಮತದಾರರು: 4.74 ಕೋಟಿ
ಒಟ್ಟು ಮತಗಟ್ಟೆಗಳು: 1.13 ಲಕ್ಷ
ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಸೀಟುಗಳು: 44












Click it and Unblock the Notifications