Western Railway: ಈ ಮಾರ್ಗಗಳಲ್ಲಿ ಫೆಬ್ರವರಿವರೆಗೂ ರೈಲು ಸಂಚಾರ ರದ್ದು, ಕಾರಣ ಹಾಗೂ ದಿನಾಂಕಗಳ ವಿವರ ತಿಳಿಯಿರಿ
ಮುಂಬೈ, ಜನವರಿ, 08: ಹಳಿ ಕಾಮಗಾರಿ ಸೇರಿದಂತೆ ಇನ್ನಿತರೆ ಕಾಮಗಾರಿಗಳು ಇರುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ರೈಲುಗಳನ್ನು ರದ್ದು ಮಾಡಲಾಗುತ್ತದೆ. ಅದೇ ರೀತಿ ಇದೀಗ ಮಥುರಾ ಜಂಕ್ಷನ್‌ನಲ್ಲಿ ಇಂಟರ್‌ಲಾಕ್ ಕಾಮಗಾರಿಯಿಂದಾಗಿ, ಆಗ್ರಾ ವಿಭಾಗದ ನಿಲ್ದಾಣ, ಮುಂಬೈನಿಂದ ಕೆಲವು ಪಶ್ಚಿಮ ರೈಲ್ವೆ ರೈಲುಗಳನ್ನು ಜನವರಿಯಿಂದ ಫೆಬ್ರವರಿಯ ಈ ದಿನಾಂಕದವರೆಗೂ ರದ್ದುಗೊಳಿಸಲಾಗುತ್ತದೆ ಎಂದು ಪಶ್ಚಿಮ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರದ್ದಾದ ರೈಲುಗಳ ವಿವರ
* ರೈಲು ಸಂಖ್ಯೆ 22209 ಮುಂಬೈ ಸೆಂಟ್ರಲ್-ನವದೆಹಲಿ ಡುರೊಂಟೊ ಎಕ್ಸ್‌ಪ್ರೆಸ್ ಜನವರಿ 8ರಿಂದ ಫೆಬ್ರವರಿ 2ರವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 22210 ನವದೆಹಲಿ - ಮುಂಬೈ ಸೆಂಟ್ರಲ್ ಡುರೊಂಟೊ ಎಕ್ಸ್‌ಪ್ರೆಸ್ ಜನವರಿ 9ರಿಂದ ಫೆಬ್ರವರಿ 3ರವರೆಗೆ ರದ್ದಾಗಲಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ವಕ್ತಾರ ಸುಮಿತ್ ಠಾಕೂರ್ ತಿಳಿಸಿದ್ದಾರೆ.

* 22917 ಬಾಂದ್ರಾ ಟರ್ಮಿನಸ್-ಹರಿದ್ವಾರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 10ರಿಂದ 31ರವರೆಗೆ ಮತ್ತು ರೈಲು ಸಂಖ್ಯೆ 22918 ಹರಿದ್ವಾರ -ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 11ರಿಂದ ಫೆಬ್ರವರಿ 1ರವರೆಗೆ ರದ್ದಾಗಲಿದೆ ಎಂದು ಅವರು ಹೇಳಿದರು.
* 12247 ಬಾಂದ್ರಾ ಟರ್ಮಿನಸ್- ನಿಜಾಮುದ್ದೀನ್ ಯುವ ಎಕ್ಸ್‌ಪ್ರೆಸ್. ಜನವರಿ 12 ರಿಂದ ಫೆಬ್ರುವರಿ 2 ರಿಂದ ರದ್ದಾಗಿರುತ್ತದೆ. ರೈಲು ಸಂಖ್ಯೆ 12248 ಹೆಚ್. ನಿಜಾಮುದ್ದೀನ್ ಬಾಂದ್ರಾ ಟರ್ಮಿನಸ್ ಯುವ ಎಕ್ಸ್‌ಪ್ರೆಸ್ ಜನವರಿ 13 ರಿಂದ ಫೆಬ್ರವರಿ 3ರವರೆಗೆ ರದ್ದಾಗಿರುತ್ತದೆ.
* 22917 ಬಾಂದ್ರಾ ಟರ್ಮಿನಸ್-ಹರಿದ್ವಾರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 10ರಿಂದ 31ರವರೆಗೆ ಮತ್ತು ರೈಲು ಸಂಖ್ಯೆ 22918 ಹರಿದ್ವಾರ - ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 11ರಿಂದ ಫೆಬ್ರವರಿ 1ರವರೆಗೆ ರದ್ದಾಗಲಿದೆ ಎಂದು ಅವರು ಹೇಳಿದರು.
* 12247 ಬಾಂದ್ರಾ ಟರ್ಮಿನಸ್- ನಿಜಾಮುದ್ದೀನ್ ಯುವ ಎಕ್ಸ್‌ಪ್ರೆಸ್ ಜನವರಿ 12ರಿಂದ ಫೆಬ್ರುವರಿ 2ರವರೆಗೆ ರದ್ದಾಗುತ್ತದೆ. ರೈಲು ಸಂಖ್ಯೆ 12248 ಹೆಚ್.ನಿಜಾಮುದ್ದೀನ್ ಬಾಂದ್ರಾ ಟರ್ಮಿನಸ್ ಯುವ ಎಕ್ಸ್‌ಪ್ರೆಸ್ ಜನವರಿ 13ರಿಂದ ಫೆಬ್ರವರಿ 3ರವರೆಗೆ ರದ್ದಾಗಲಿದೆ.
* ರೈಲು ಸಂಖ್ಯೆ 22921 ಬಾಂದ್ರಾ ಟರ್ಮಿನಸ್- ಗೋರಖ್‌ಪುರ ಜನವರಿ 21ರಿಂದ ಫೆಬ್ರವರಿ 4ರವರೆಗೆ ರದ್ದಾಗಲಿದೆ. ರೈಲು ಸಂಖ್ಯೆ 22922 ಗೋರಖ್‌ಪುರ - ಬಾಂದ್ರಾ ಟರ್ಮಿನಸ್ ಜನವರಿ 23ರಿಂದ ಫೆಬ್ರವರಿ 6ರವರೆಗೆ ರದ್ದುಗೊಳಿಸಲಿದೆ.
* ರೈಲು ನಂ. 22975 ಬಾಂದ್ರಾ ಟರ್ಮಿನಸ್- ರಾಮನಗರ ಸೂಪರ್‌ಫಾಸ್ಟ್ ಅನ್ನು ಜನವರಿ 25 ಮತ್ತು ಫೆಬ್ರವರಿ 1ರಂದು ರದ್ದಾಗಲಿದೆ. ರೈಲು ನಂ.22976 ರಾಮನಗರ - ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಅನ್ನು ಜನವರಿ 26 ಮತ್ತು ಫೆಬ್ರವರಿ 2ರಂದು ರದ್ದಾಗಲಿದೆ.
* ರೈಲು ನಂ.22444 ಬಾಂದ್ರಾ ಟರ್ಮಿನಸ್- ಕಾನ್ಪುರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 26 ಮತ್ತು ಫೆಬ್ರವರಿ 2ರಂದು ರದ್ದಾಗಲಿದೆ. ರೈಲು ನಂ.22443 ಕಾನ್ಪುರ- ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 24 ಮತ್ತು 31ರಂದು ರದ್ದಾಗಲಿದೆ. ರೈಲು ಸಂಖ್ಯೆ 20921 ಬಾಂದ್ರಾ ಟರ್ಮಿನಸ್ -ಲಕ್ನೋ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 20ರಿಂದ ಫೆಬ್ರವರಿ 3 ರವರೆಗೆ ರದ್ದಾಗಲಿದೆ.
* ರೈಲು ಸಂಖ್ಯೆ 20922 ಲಕ್ನೋ - ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 21ರಿಂದ ಫೆಬ್ರವರಿ 4ರವರೆಗೆ ರದ್ದಾಗಲಿದೆ. ರೈಲು ಸಂಖ್ಯೆ 05054 ಬಾಂದ್ರಾ ಟರ್ಮಿನಸ್- ಗೋರಖ್‌ಪುರ ಜನವರಿ 13ರಿಂದ ಫೆಬ್ರವರಿ 3ರವರೆಗೆ ಮತ್ತು ರೈಲು ನಂ.05053 ಗೋರಖ್‌ಪುರ - ಬಾಂದ್ರಾ ಟರ್ಮಿನಸ್ ಜನವರಿ 12ರಿಂದ ಫೆಬ್ರವರಿ 2ರವರೆಗೆ ರದ್ದಾಗಲಿದೆ.












Click it and Unblock the Notifications