ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇರಾವ ಮೈತ್ರಿ ಬಗ್ಗೆಯೂ ನಮಗೆ ಆಸಕ್ತಿಯಿಲ್ಲ: ಮುಫ್ತಿ

By Sachhidananda Acharya
|
Google Oneindia Kannada News

ಕಾಶ್ಮೀರ, ಜೂನ್ 19: ನಾವು ಯಾವುದೇ ಬೇರೆ ಯಾವುದೇ ಪಕ್ಷದ ಜೊತೆಗೆ ಮೈತ್ರಿಯನ್ನು ನಿರೀಕ್ಷಿಸುತ್ತಿಲ್ಲ ಎಂಬುದಾಗಿ ಪಿಡಿಪಿ ನಾಯಕಿ ಮತ್ತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಪಿಡಿಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಇಂದು ಬಿಜೆಪಿ ಹಿಂಪಡೆದಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾನು ರಾಜ್ಯಪಾಲರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ಈ ವೇಳೆ ನಾನು ಬೇರೆ ಯಾವುದೇ ಮೈತ್ರಿ ಬಗ್ಗೆ ನೋಡುತ್ತಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ," ಎಂದಿದ್ದಾರೆ.

We are not looking to explore any other alliance: Mehbooba Mufti

ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?ಪಿಡಿಪಿಯಿಂದ ಬಿಜೆಪಿ ಬೆಂಬಲ ವಾಪಸ್: ಅಸಲಿ ಕಾರಣವೇನು?

"ನಾನು ಇದರಿಂದ ಆಘಾತಗೊಂಡಿಲ್ಲ. ನಾವು ಅಧಿಕಾರಕ್ಕಾಗಿ ಈ ಮೈತ್ರಿ ಮಾಡಿಕೊಂಡಿರಲಿಲ್ಲ. ಈ ಮೈತ್ರಿಕೂಟವು ಮಹತ್ವಾಕಾಂಕ್ಷೆಯನ್ನು ಹೊಂದಿತ್ತು. ಏಕಪಕ್ಷೀಯ ಕದನ ವಿರಾಮ, ಪಾಕಿಸ್ತಾನಕ್ಕೆ ಪ್ರಧಾನಿ ಭೇಟಿ, 11,000 ಯುವಕರ ವಿರುದ್ಧ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ನಮ್ಮ ಆದ್ಯತೆಯಾಗಿತ್ತು," ಎಂದು ಮೆಹಬೂಬಾ ಮುಫ್ತಿ ವಿವರಿಸಿದ್ದಾರೆ.

English summary
"I submitted my resignation (as Jammu and Kashmir CM) to the Governor and told him that we are not looking to explore any other alliance," said PDP leader Mehbooba Mufti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X