Viral Video: ಬೆಳಗ್ಗೆ ಚಪ್ಪಲಿ ವ್ಯಾಪಾರ, ಮಧ್ಯಾಹ್ನ ಶಾಲೆ, ಸಂಜೆ ಸ್ವಿಗ್ಗಿ ಡೆಲಿವರಿ: 14 ವರ್ಷದ ಬಾಲಕನ ಸ್ಫೂರ್ತಿದಾಯಕ ಕಥೆ
ಬೆಳಗಿನ ಜಾವ ಹೆಚ್ಚಿನ ಹದಿಹರೆಯದವರು ಇನ್ನೂ ನಿದ್ರೆಯ ಮಂಪರಿನಲ್ಲಿರುವಾಗ, ಬಂಗಾಳದ 14 ವರ್ಷದ ಬಾಲಕ ಸೋಹನ್ ಮಾತ್ರ ತನ್ನ ದಿನಚರಿಯನ್ನು ಆರಂಭಿಸಿರುತ್ತಾನೆ. ರಸ್ತೆಬದಿಯ ಫುಟ್ಪಾತ್ ಮೇಲೆ ತನ್ನ ಸಣ್ಣ ಅಂಗಡಿಯಲ್ಲಿ ಪ್ಲಾಸ್ಟಿಕ್ ಚಪ್ಪಲಿಗಳನ್ನು ಜೋಡಿಸಿಟ್ಟು, ಮುಂಜಾನೆಯ ವ್ಯಾಪಾರಕ್ಕೆ ಸಿದ್ಧನಾಗುತ್ತಾನೆ. ಈತನ ದೈನಂದಿನ ಬದುಕಿನ ಹೋರಾಟ ಮತ್ತು ಕಠಿಣ ಪರಿಶ್ರಮದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಲಕ್ಷಾಂತರ ಜನರ ಹೃದಯ ಗೆದ್ದಿದೆ.
ಇನ್ಸ್ಟಾಗ್ರಾಮ್ನಲ್ಲಿ ಈಗಾಗಲೇ 30,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸೋಹನ್ ಹಂಚಿಕೊಂಡಿರುವ ಈ ದೈನಂದಿನ ಬದುಕಿನ ವಿಡಿಯೋ ಬರೋಬ್ಬರಿ 1.3 ಮಿಲಿಯನ್ (13 ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆತ ತನ್ನ ಇನ್ಸ್ಟಾಗ್ರಾಮ್ ಪೇಜ್ ಮೂಲಕ ತನ್ನ ದಿನನಿತ್ಯದ ಬದುಕಿನ ಸಣ್ಣ-ಪುಟ್ಟ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೆ. ಆದರೆ ಆತನ ಈ ದಿನಚರಿ ಖಂಡಿತವಾಗಿಯೂ ಸಾಮಾನ್ಯವಾದದ್ದಲ್ಲ.

ವೈರಲ್ ವಿಡಿಯೋದಲ್ಲಿ ಏನಿದೆ?
ಮುಂಜಾನೆಯ ಮಂಜಿನ ನಡುವೆ ರಸ್ತೆಬದಿಯಲ್ಲಿ ಚಪ್ಪಲಿ ಮಾರಾಟ ಮಾಡುವ ಮೂಲಕ ಆತನ ಬಿಡುವಿಲ್ಲದ ದಿನ ಆರಂಭವಾಗುತ್ತದೆ. ಕುಟುಂಬ ಜವಾಬ್ದಾರಿಯನ್ನು ಈ ಎಳೆಯ ವಯಸ್ಸಿನಲ್ಲೇ ಈತ ಹೊತ್ತಿದ್ದಾನೆ. ವಿಡಿಯೋದ ಮುಂದಿನ ಭಾಗದಲ್ಲಿ, ಆತ ತನ್ನ ಶಾಲಾ ಸಮವಸ್ತ್ರ ಧರಿಸಿ, ಕೈಯಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು ಶಾಲೆಗೆ ಹೋಗಲು ಅಚ್ಚುಕಟ್ಟಾಗಿ ಸಿದ್ಧನಾಗುವುದನ್ನು ನೋಡಬಹುದು. ಶಾಲೆಯ ತರಗತಿಗಳು ಮುಗಿದ ನಂತರ ಆತನ ಪಾತ್ರ ಮತ್ತೆ ಬದಲಾಗುತ್ತದೆ. ಮರುಕ್ಷಣವೇ ಆತ ಸ್ವಿಗ್ಗಿ (Swiggy) ಡೆಲಿವರಿ ಬಾಯ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಾನೆ. ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಆಸರೆಯಾಗಲು ಹಾಗೂ ಸ್ವಲ್ಪ ಆದಾಯ ಗಳಿಸಲು ಮನೆ-ಮನೆಗೆ ಆಹಾರ ತಲುಪಿಸುವ ಡೆಲಿವರಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾನೆ.
ಕೇವಲ ವ್ಯಾಪಾರ, ಶಾಲೆ ಮತ್ತು ಡೆಲಿವರಿ ಕೆಲಸ ಮಾತ್ರವಲ್ಲ, ಇಷ್ಟೆಲ್ಲಾ ಜವಾಬ್ದಾರಿಗಳ ನಡುವೆಯೂ ಆತ ತನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೂ ಗಮನ ಹರಿಸಿದ್ದಾನೆ. ತನ್ನ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಆತ ಸ್ಥಳೀಯ ಜಿಮ್ಗೆ ಹೋಗಲು ಸಮಯ ಮೀಸಲಿಡುತ್ತಾನೆ. ಅಲ್ಲಿ ಅತ್ಯಂತ ಶಿಸ್ತಿನಿಂದ ವ್ಯಾಯಾಮ ಮಾಡುತ್ತಾನೆ. ಇನ್ನು, ಆತನ ಬದುಕಿನ ನೈಜ ಸ್ಥಿತಿಯನ್ನು ಈ ವಿಡಿಯೋದಲ್ಲಿ ಎಲ್ಲಿಯೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಅತ್ಯಂತ ಚಿಕ್ಕದಾದ, ಇಕ್ಕಟ್ಟಾದ ಕೋಣೆ, ಸಣ್ಣ ಅಡುಗೆಮನೆ ಇವೆಲ್ಲವೂ ಆತ ಪ್ರತಿದಿನ ಎದುರಿಸುತ್ತಿರುವ ಕಷ್ಟದ ದಿನಗಳ ಕಟು ವಾಸ್ತವವನ್ನು ನೋಡುಗರ ಮುಂದೆ ತೆರೆದಿಡುತ್ತವೆ.
ಆತ ಜವಬ್ದಾರಿಯನ್ನು ನಿಭಾಯಿಸುತ್ತಿರುವ ರೀತಿ ಹಾಗೂ ಮುಖದಲ್ಲಿರುವ ಆತ್ಮವಿಶ್ವಾಸ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿದೆ. ಕೇವಲ 14 ವರ್ಷ ವಯಸ್ಸಿನಲ್ಲಿಯೇ ಆತ ತೋರುತ್ತಿರುವ ಈ ಅಗಾಧ ಪರಿಶ್ರಮ, ಗುರಿಯೆಡೆಗಿನ ಏಕಾಗ್ರತೆ ಮತ್ತು ಆತನಲ್ಲಿರುವ ಪ್ರಬುದ್ಧತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಕಾಮೆಂಟ್ಗಳ ಮೂಲಕ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆತನನ್ನು ಕಠಿಣ ಪರಿಶ್ರಮಿ ಹಾಗೂ ಅಸಾಧಾರಣ ಯುವಕ ಎಂದು ಬಣ್ಣಿಸಿದ್ದಾರೆ. ಸಣ್ಣಪುಟ್ಟ ಕಷ್ಟಗಳಿಗೆ ಕುಗ್ಗುವ ಯುವಜನತೆಗೆ ಸೋಹನ್ನ ಈ ಕಥೆ ಬಹುದೊಡ್ಡ ಸ್ಫೂರ್ತಿಯಾಗಿದೆ.
-
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
ಕೊಡಗು ಚಾರಣ: 4 ದಿನ ದಟ್ಟ ಕಾಡಿನಲ್ಲಿದ್ದ ಕೇರಳಂ ಮೂಲದ ಜಿ.ಎಸ್.ಶರಣ್ಯ ಬದುಕುಳಿದಿದ್ದು ಹೇಗೆ, ರೋಚಕ ಕಾರ್ಯಾಚರಣೆ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ -
"ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು": ಸಿಎಸ್ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ? -
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
Virat Kohli: ನಾನೇನು ವಿದೇಶಿ ಆಟಗಾರನಾ?: ಲಂಡನ್ ವಾಸ್ತವ್ಯದ ಬಗ್ಗೆ ಟೀಕಾಕಾರರಿಗೆ ವಿರಾಟ್ ಕೊಹ್ಲಿ ತಿರುಗೇಟು -
ಒರಾಕಲ್ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral -
Silk Board: ಹಳದಿ-ನೀಲಿ ಮೆಟ್ರೋ ಲೈನ್ ಪ್ರಯಾಣಿಕರಿಗಾಗಿ 'ಟ್ರಾವೆಲೇಟರ್-ಕನೆಕ್ಟಿಂಗ್ ವಾಕ್ವೇ ಸಂಪರ್ಕ














Click it and Unblock the Notifications