Get Updates
Get notified of breaking news, exclusive insights, and must-see stories!

ಒರಾಕಲ್‌ನಲ್ಲಿ ಕೆಲಸ ಕಳೆದುಕೊಂಡ ಟೆಕ್ಕಿ ಊರಿಗೆ ಮರಳಿ ಉಬರ್ ಓಡಿಸುತ್ತಿರುವ ಸ್ಫೂರ್ತಿದಾಯಕ ಕಥೆ Viral

ಇತ್ತೀಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಉದ್ಯೋಗ ಕಡಿತ ಒಂದು ಸಾಮಾನ್ಯವಾಗಿ ಹೋಗಿದೆ. ಪ್ರಮುಖ ಐಟಿ ದೈತ್ಯ ಕಂಪನಿಯಾದ ಒರಾಕಲ್ (Oracle) ಕೂಡ ಜಾಗತಿಕವಾಗಿ ಬೃಹತ್ ಪುನರ್‌ರಚನಾ ಪ್ರಕ್ರಿಯೆಯ ಭಾಗವಾಗಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಕೆಲಸ ಕಳೆದುಕೊಂಡ ಅನೇಕರು ತಮ್ಮ ಕಷ್ಟದ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇವೆಲ್ಲದರ ನಡುವೆ ವೈರಲ್ ಆಗಿರುವ ಒಂದು ಪೋಸ್ಟ್, ಕಷ್ಟದ ಸಮಯದಲ್ಲಿ ಹೇಗೆ ಶಾಂತ ಹಾಗೂ ಪ್ರಾಯೋಗಿಕವಾಗಿ ಯೋಚಿಸಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಟೆಕ್ ಉದ್ಯಮದಲ್ಲಿ ಬರೋಬ್ಬರಿ 14 ವರ್ಷಗಳ ಕಾಲ ಕೆಲಸ ಮಾಡಿದ್ದ ಒರಾಕಲ್‌ನ ಉದ್ಯೋಗಿಯೊಬ್ಬರು, ಏಕಾಏಕಿ ಕೆಲಸ ಕಳೆದುಕೊಂಡಾಗ ಗಾಬರಿಯಾಗದೆ ಅಥವಾ ಆತಂಕಕ್ಕೆ ಒಳಗಾಗದೆ, ತಮ್ಮ ಹುಟ್ಟೂರಾದ ಭುವನೇಶ್ವರಕ್ಕೆ ಮರಳಲು ನಿರ್ಧರಿಸಿದರು. ಈ ಟೆಕ್ಕಿಯ ಆಪ್ತ ಸ್ನೇಹಿತ ನಾಯಕ್ ಸತ್ಯ ಎನ್ನುವವರು ಎಕ್ಸ್ ಖಾತೆಯಲ್ಲಿ ಈ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ.

Oracle

"ಯಾವುದೇ ಆತಂಕವಿಲ್ಲ, ಯಾವುದೇ ಒತ್ತಡವಿಲ್ಲ. ಆತ ನೇರವಾಗಿ ತನ್ನ ಹುಟ್ಟೂರಾದ ಭುವನೇಶ್ವರಕ್ಕೆ ಮರಳಿದ," ಎಂದು ಸತ್ಯ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಹಣಕಾಸಿನ ಶಿಸ್ತು ತಂದುಕೊಟ್ಟ ನೆಮ್ಮದಿ

ಪೋಸ್ಟ್‌ನಲ್ಲಿ ವಿವರಿಸಿರುವಂತೆ, ಆ ಟೆಕ್ಕಿಯು ಅಂಚೆ ಕಚೇರಿಯಲ್ಲಿ ಎರಡು ಜಂಟಿ ಖಾತೆಗಳನ್ನು ಹೊಂದಿದ್ದು, ತಲಾ 15 ಲಕ್ಷ ರೂಪಾಯಿಗಳನ್ನು ಠೇವಣಿ ಇಟ್ಟಿದ್ದರು. ಒಂದು ಖಾತೆ ಪೋಷಕರ ಹೆಸರಿನಲ್ಲಿದ್ದರೆ, ಮತ್ತೊಂದು ಪತ್ನಿಯ ಹೆಸರಿನಲ್ಲಿದೆ. ಜೊತೆಗೆ ಮಗುವಿನ ಹೆಸರಿನಲ್ಲಿಯೂ ಸಣ್ಣ ಖಾತೆಯೊಂದನ್ನು ತೆರೆದಿದ್ದಾರೆ. ಈ ಖಾತೆಗಳಿಂದಲೇ ಅವರಿಗೆ ಪ್ರತಿ ತಿಂಗಳು ಸುಮಾರು 28,000 ರೂಪಾಯಿ ಬಡ್ಡಿ ಬರುತ್ತಿದೆ. ಇದಲ್ಲದೆ, ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿರುವ ಸುಮಾರು 30 ಲಕ್ಷ ರೂಪಾಯಿಗಳ ಫಿಕ್ಸೆಡ್ ಡೆಪಾಸಿಟ್‌ನಿಂದ (FD) ಹೆಚ್ಚುವರಿಯಾಗಿ 15,000 ರೂ. ಬಡ್ಡಿ ದೊರೆಯುತ್ತಿದೆ.

Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು
Zomato: ಬೆಂಗಳೂರು Vs ಚೆನ್ನೈ ಸಾಂಬಾರ್ ಎಂದ ಝೊಮ್ಯಾಟೊ; ನಮಗೆ ಸ್ವಿಗ್ಗಿ ಸಾಕು ಎಂದ ನೆಟ್ಟಿಗರು

ಮೆಟ್ರೋ ನಗರಗಳಲ್ಲಿ ಫ್ಲಾಟ್ ಖರೀದಿಸಲು ಯಾವುದೇ ಇಎಂಐ ಅಥವಾ ಸಾಲದ ಸುಳಿಗೆ ಸಿಲುಕದ ಈತ, ಈಗ ತಮ್ಮ ಪೋಷಕರ ಮನೆಯಲ್ಲಿ ಅತ್ಯಂತ ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ.

ಉಬರ್ ಚಾಲಕನಾಗಿ ಹೊಸ ಹೆಜ್ಜೆ

ಉತ್ತಮವಾಗಿ ಕಾರು ಚಾಲನೆ ಮಾಡುವುದು ತಿಳಿದಿದ್ದ ಈತ, ಊರಿಗೆ ಬಂದ ಕೂಡಲೇ ಉಬರ್ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ತನ್ನದೇ ಆದ ಸಮಯದಲ್ಲಿ, ಯಾವುದೇ ಒತ್ತಡವಿಲ್ಲದೆ ವಾಹನ ಓಡಿಸುತ್ತಾ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾನೆ. ಇದರ ಜೊತೆಗೆ, ಪೋಷಕರ ಬೆಂಬಲದೊಂದಿಗೆ ಸಣ್ಣ ವ್ಯಾಪಾರವೊಂದನ್ನು ಪ್ರಾರಂಭಿಸುವ ಬಗ್ಗೆಯೂ ಆತ ಶಾಂತಚಿತ್ತದಿಂದ ಯೋಚಿಸುತ್ತಿದ್ದಾನೆ.

"ಅವನಿಗೆ ಕಾರು ಓಡಿಸಲು ಬರುತ್ತಿದ್ದ ಕಾರಣ, ತನ್ನದೇ ಅನುಕೂಲಕ್ಕೆ ತಕ್ಕಂತೆ ತಕ್ಷಣವೇ ಉಬರ್ ಚಾಲಕನಾಗಿ ಕೆಲಸ ಶುರುಮಾಡಿ, ಉತ್ತಮ ಸಂಪಾದನೆ ಮಾಡುತ್ತಿದ್ದಾನೆ" ಎಂದು ಬರೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಮ್ಯೂಚುಯಲ್ ಫಂಡ್‌ಗಳು, ಎಸ್‌ಐಪಿ (SIP) ಅಥವಾ ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳ ಆರ್ಥಿಕ ಸಲಹೆಗಳ ಹಿಂದೆ ಹೋಗದ ಈತ, ಸಾಂಪ್ರದಾಯಿಕ ಉಳಿತಾಯದ ಅಭ್ಯಾಸಗಳು, ತಾಳ್ಮೆ ಮತ್ತು ಶಿಸ್ತನ್ನು ಮಾತ್ರ ನಂಬಿದ್ದ. ಇದೇ ಆತನ ನೆಮ್ಮದಿಯ ಜೀವನಕ್ಕೆ ಕಾರಣ ಎನ್ನಲಾಗಿದೆ. ಈ "ಹಳೆಯ ಶೈಲಿಯ" ಆರ್ಥಿಕ ಯೋಜನೆಯೇ ಆತನಿಗೆ ಹಠಾತ್ ಉದ್ಯೋಗ ನಷ್ಟವನ್ನು ಎದುರಿಸಲು ನೆರವಾಗಿದೆ.

ನೆಟ್ಟಿಗರ ಮೆಚ್ಚುಗೆ

ಈ ಪೋಸ್ಟ್‌ಗೆ ಎಕ್ಸ್ ಬಳಕೆದಾರರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆತನ ಶಿಸ್ತುಬದ್ಧ ಹಣಕಾಸು ಯೋಜನೆ ಮತ್ತು ಸಾಂಪ್ರದಾಯಿಕ ಉಳಿತಾಯದ ಪ್ರಾಮುಖ್ಯತೆಯನ್ನು ಅನೇಕರು ಕೊಂಡಾಡಿದ್ದಾರೆ. ಹಠಾತ್ ಎದುರಾದ ಸಂಕಷ್ಟವನ್ನು ಆತಂಕವಿಲ್ಲದೆ ಹೇಗೆ ಅವಕಾಶವನ್ನಾಗಿ ಪರಿವರ್ತಿಸಬಹುದು ಎಂಬುದಕ್ಕೆ ಈತನೇ ನಿದರ್ಶನ ಎಂದಿದ್ದಾರೆ.

Viral Video: ತಮಿಳುನಾಡು ಚುನಾವಣೆ: ಹಸಿ ಸೊಪ್ಪು, ತರಕಾರಿ ತಿನ್ನುತ್ತಾ ಮತಯಾಚಿಸಿದ ಸ್ವತಂತ್ರ ಅಭ್ಯರ್ಥಿ ನಟ ಮನ್ಸೂರ್ ಅಲಿ ಖಾನ್
Viral Video: ತಮಿಳುನಾಡು ಚುನಾವಣೆ: ಹಸಿ ಸೊಪ್ಪು, ತರಕಾರಿ ತಿನ್ನುತ್ತಾ ಮತಯಾಚಿಸಿದ ಸ್ವತಂತ್ರ ಅಭ್ಯರ್ಥಿ ನಟ ಮನ್ಸೂರ್ ಅಲಿ ಖಾನ್

ಬಳಕೆದಾರರೊಬ್ಬರು "ಮೊದಲ ದಿನದಿಂದಲೇ ನಮಗೆ ಬ್ಯಾಕಪ್ ಇರಬೇಕು" ಎಂದು ಕಮೆಂಟ್ ಮಾಡಿದರೆ, ಮತ್ತೊಬ್ಬರು "ಮೊದಲು ಉಳಿಸಿ, ನಂತರ ಖರ್ಚು ಮಾಡಿ ಎನ್ನುವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ" ಎಂದು ಪ್ರಶಂಸಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+