Content Creator: ಇನ್‌ಸ್ಟಾಗ್ರಾಂನಿಂದ ತಿಂಗಳಿಗೆ 70 ಲಕ್ಷ ರೂಪಾಯಿ ಗಳಿಕೆ: ಎಲ್ಲರ ಹುಬ್ಬೇರಿಸಿದ ಕೇರಳ ಕಂಟೆಂಟ್‌ ಕ್ರಿಯೇಟರ್‌

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಚರ್ಚೆಯಲ್ಲಿರುವ ಹೆಸರು ಪರ್ಪಲ್ ಹ್ಯಾಲ್ಸಿಯಾನ್ (Purplehalcyon) ಅಥವಾ ಅಶ್ವನಿ ಎ (Ashwani A). ಇನ್‌ಸ್ಟಾಗ್ರಾಂನಲ್ಲಿ ತನ್ನ ಗ್ಲಾಮರಸ್ ಫೋಟೋಗಳು ಮತ್ತು ವಿಡಿಯೋಗಳ ಮೂಲಕ ವೈರಲ್ ಆಗಿರುವ ಈ ಕೇರಳ ಯುವತಿ, ಸಬ್‌ಸ್ಕ್ರಿಪ್ಷನ್ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಯಾರು ಈ ಅಶ್ವನಿ?

ಕೇರಳದ ಮೂಲದವರಾದ ಅಶ್ವನಿ ಅವರು ಸಾಂಪ್ರದಾಯಿಕ ಡಿಜಿಟಲ್ ಮಾರ್ಕೆಟಿಂಗ್ ಶೈಲಿಯನ್ನು ಮೀರಿ ಬೆಳೆದವರು. ಸಾಮಾನ್ಯವಾಗಿ ಕ್ರಿಯೇಟರ್‌ಗಳು ಬ್ರ್ಯಾಂಡ್ ಜಾಹೀರಾತುಗಳು ಅಥವಾ ಪ್ರಾಯೋಜಿತ ಪೋಸ್ಟ್‌ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ, ಅಶ್ವಿನಿ ಅವರ ಯಶಸ್ಸಿನ ಸೂತ್ರವೇ ಬೇರೆಯಾಗಿದೆ. ಇವರು ಇನ್‌ಸ್ಟಾಗ್ರಾಮ್‌ನಲ್ಲಿ 'Purplehalcyon' ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಕೇವಲ ಮಾಡೆಲಿಂಗ್ ಮಾತ್ರವಲ್ಲದೆ, ಇವರು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅಶ್ವನಿ ಅವರು ಕೇವಲ ಇನ್‌ಸ್ಟಾಗ್ರಾಂ ಜಾಹೀರಾತುಗಳಿಂದ ಮಾತ್ರವಲ್ಲದೆ, ಪ್ರಮುಖವಾಗಿ ಸಬ್‌ಸ್ಕ್ರಿಪ್ಷನ್ ಆಧಾರಿತ ಪ್ಲಾಟ್‌ಫಾರ್ಮ್‌ಗಳ ಮೂಲಕ ಆದಾಯ ಗಳಿಸುತ್ತಿದ್ದಾರೆ.

Content Creator

ಸೋಷಿಯಲ್ ಮೀಡಿಯಾ ಕೇವಲ ಮನೋರಂಜನೆಗೆ ಮಾತ್ರವಲ್ಲ, ಅದು ಲಕ್ಷಗಟ್ಟಲೆ ಹಣ ಗಳಿಸುವ ವೇದಿಕೆಯೂ ಹೌದು ಎಂಬುದನ್ನು ಪರ್ಪಲ್ ಹ್ಯಾಲ್ಸಿಯಾನ್ (Purple Halcyon) ಖ್ಯಾತಿಯ ಅಶ್ವನಿ ಸಾಬೀತುಪಡಿಸುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಇವರ ಮಾಸಿಕ ಆದಾಯದ ಅಂಕಿ-ಅಂಶಗಳು ಕೇಳಿದರೆ ಯಾರಿಗಾದರೂ ಅಚ್ಚರಿಯಾಗುವುದು ಖಂಡಿತ.

22,000ಕ್ಕೂ ಹೆಚ್ಚು ಪೇಡ್ ಸಬ್‌ಸ್ಕ್ರೈಬರ್ಸ್

ಸಾಮಾನ್ಯವಾಗಿ ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಇರುವುದು ಸಹಜ. ಆದರೆ, ಅಶ್ವನಿ ಅವರ ವಿಶೇಷತೆ ಏನೆಂದರೆ, ಇವರ ಎಕ್ಸ್‌ಕ್ಲೂಸಿವ್ ಕಂಟೆಂಟ್ ನೋಡಲು ಹಣ ಪಾವತಿಸುವ ಚಂದಾದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿದೆ. ವರದಿಗಳ ಪ್ರಕಾರ ಅಶ್ವನಿ ಅವರು ಸುಮಾರು 22,000ಕ್ಕೂ ಹೆಚ್ಚು ಮಾಸಿಕ ಚಂದಾದಾರರನ್ನು ಹೊಂದಿದ್ದಾರೆ. ಈ ಸಬ್‌ಸ್ಕ್ರಿಪ್ಷನ್ ಶುಲ್ಕವನ್ನು ಲೆಕ್ಕ ಹಾಕಿದರೆ, ಇವರು ತಿಂಗಳಿಗೆ ಅಂದಾಜು ₹70ರಿಂದ ₹74 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ಗಳಿಸುತ್ತಿದ್ದಾರೆ ಎನ್ನಲಾಗಿದೆ.

ಅಧಿಕೃತವೇ ಈ ಅಂಕಿ-ಅಂಶಗಳು?

ಈ ಆದಾಯದ ಮೊತ್ತದ ಬಗ್ಗೆ ಅಶ್ವನಿ ಅವರಾಗಲಿ ಅಥವಾ ಯಾವುದೇ ಅಧಿಕೃತ ಸಂಸ್ಥೆಯಾಗಲಿ ಇನ್ನು ಮುದ್ರೆ ಒತ್ತಿಲ್ಲ. ಆದರೆ ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತು ಕಂಟೆಂಟ್ ಕ್ರಿಯೇಟರ್‌ಗಳ ವಲಯದಲ್ಲಿ ಈ ಅಂಕಿ-ಅಂಶಗಳು ಕಾಳ್ಗಿಚ್ಚಿನಂತೆ ಹರಡಿವೆ. ಈ ಸುದ್ದಿಯೇ ಅಶ್ವನಿ ಅವರ ಜನಪ್ರಿಯತೆಯನ್ನು ರಾತ್ರೋರಾತ್ರಿ ದುಪ್ಪಟ್ಟುಗೊಳಿಸಿದೆ.

ಏನಿದು ಎಕ್ಸ್‌ಕ್ಲೂಸಿವ್ ಕಂಟೆಂಟ್?

ಇನ್‌ಸ್ಟಾಗ್ರಾಂ ತನ್ನ ಕ್ರಿಯೇಟರ್‌ಗಳಿಗಾಗಿ 'ಸಬ್‌ಸ್ಕ್ರಿಪ್ಷನ್' ಎಂಬ ಫೀಚರ್ ನೀಡಿದೆ. ಇದರಲ್ಲಿ ಫಾಲೋವರ್ಸ್ ನಿರ್ದಿಷ್ಟ ಹಣವನ್ನು ಪಾವತಿಸಿದರೆ ಮಾತ್ರ ಕ್ರಿಯೇಟರ್ ಹಾಕುವ ವಿಶೇಷ ಫೋಟೋಗಳು, ವಿಡಿಯೋಗಳು ಮತ್ತು ಲೈವ್ ಸೆಷನ್‌ಗಳನ್ನು ನೋಡಲು ಸಾಧ್ಯವಾಗುತ್ತದೆ. ಅಶ್ವಿನಿ ಅವರು ಈ ಫೀಚರ್ ಅನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಕೇವಲ ಗ್ಲಾಮರ್ ಮಾತ್ರವಲ್ಲದೆ, ತನ್ನ ಆಡಿಯನ್ಸ್ ಅನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಕಲೆ ಅಶ್ವಿನಿ ಅವರಿಗೆ ತಿಳಿದಿದೆ. ಇದೇ ಕಾರಣಕ್ಕೆ ಸಾವಿರಾರು ಜನರು ಹಣ ನೀಡಿ ಅವರ ಚಂದಾದಾರರಾಗುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ ಆಗಿ ಹಣ ಗಳಿಸುವುದು ಹೇಗೆ ಎಂಬುದಕ್ಕೆ ಅಶ್ವಿನಿ ಈಗ ಒಂದು ದೊಡ್ಡ ಉದಾಹರಣೆಯಾಗಿ ನಿಂತಿದ್ದಾರೆ.

Content Creator

ಇನ್‌ಸ್ಟಾಗ್ರಾಂನಲ್ಲಿ ಕಾಣ ಸಿಗದ ತಮ್ಮ ವಿಶೇಷ ಫೋಟೋ ಮತ್ತು ವಿಡಿಯೋಗಳನ್ನು ನೋಡಲು ಅಭಿಮಾನಿಗಳು ಹಣ ಪಾವತಿಸಿ ಚಂದಾದಾರರಾಗಬೇಕು. ಇವರ ವಿಭಿನ್ನ ಫ್ಯಾಶನ್ ಸೆನ್ಸ್ ಮತ್ತು ಗ್ಲಾಮರಸ್ ಫೋಟೋಶೂಟ್‌ಗಳು ಯುವಜನತೆಯನ್ನು ಸೆಳೆಯುತ್ತಿವೆ. ಅಲ್ಪ ಕಾಲದಲ್ಲೇ ಲಕ್ಷಾಂತರ ಫಾಲೋವರ್ಸ್ ಗಳಿಸಿರುವುದು ಇವರ ಯಶಸ್ಸಿನ ಗುಟ್ಟು. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಸೋಷಿಯಲ್ ಮೀಡಿಯಾ ಮೂಲಕ ಗಳಿಸಬಹುದು ಎಂಬ ವಿಚಾರವೇ ಇವರನ್ನು ಸುದ್ದಿಯ ಕೇಂದ್ರಬಿಂದುವನ್ನಾಗಿ ಮಾಡಿದೆ.

ಡಿಜಿಟಲ್ ಯುಗದಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಇಷ್ಟೊಂದು ಹಣ ಗಳಿಸುವುದು ಕೆಲವರಿಗೆ ಸ್ಫೂರ್ತಿಯಾದರೆ, ಇನ್ನು ಕೆಲವರು ಸೋಷಿಯಲ್ ಮೀಡಿಯಾದ ಇಂತಹ ಸಂಸ್ಕೃತಿಯ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅಶ್ವನಿ ಮಾತ್ರ ತನ್ನದೇ ಆದ ಶೈಲಿಯಲ್ಲಿ ಡಿಜಿಟಲ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಸಾಂಪ್ರದಾಯಿಕ ಕೆಲಸಗಳಿಗಿಂತ ಭಿನ್ನವಾಗಿ ಸೋಷಿಯಲ್ ಮೀಡಿಯಾವನ್ನೇ ಪ್ರಬಲ ಆದಾಯದ ಮೂಲವನ್ನಾಗಿ ಮಾಡಿಕೊಂಡಿರುವ ಹೊಸ ತಲೆಮಾರಿನ ಪ್ರತಿನಿಧಿಯಾಗಿ ಅಶ್ವನಿ ಅಲಿಯಾಸ್ ಪರ್ಪಲ್ ಹ್ಯಾಲ್ಸಿಯಾನ್ ಗುರುತಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+