Summer Special Trains: ಮೈಸೂರಿನಿಂದ ವಿಶೇಷ ರೈಲು ಸೇವೆ; ಹುಬ್ಬಳ್ಳಿ, ಬೆಂಗಳೂರಿನ ರೈಲು ಸೇವೆ ವಿಸ್ತರಣೆ
Summer Special Trains Karnataka: ಶಾಲಾ ಮಕ್ಕಳಿಗೆ ಬೇಸಿಗೆ ರಜೆ. ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಬೇರೆ ಬೇರೆ ಊರುಗಳಿಗೆ, ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ದಟ್ಟಣೆ ನಿವಾರಣೆಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು ಹುಬ್ಬಳ್ಳಿ ಹಾಗೂ ಮೈಸೂರು ನಗರಗಳಿಂದ ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸುತ್ತಿದೆ. ಈ ರೈಲುಗಳ ಸಮಯ, ಸಂಖ್ಯೆ, ವೇಳಾಪಟ್ಟಿ ವಿವರ ಇಲ್ಲಿದೆ.
ಬೇಸಿಗೆಯ ಹೆಚ್ಚುವರಿ ಪ್ರಯಾಣಿಕರ ಸಂಚಾರವನ್ನು ನಿಭಾಯಿಸಲು ಮೈಸೂರು ಜೋಧಪುರ್ ನಡುವೆ ವಿಶೇಷ ರೈಲುಗಳು ಮತ್ತು ಹುಬ್ಬಳ್ಳಿಯಿಂದ ವಿವಿಧೆಡೆ ಹೊರಡುವ ವಿಶೇಷ ರೈಲುಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ಮೈಸೂರು - ಜೋಧಪುರ್ ಎಕ್ಸ್‌ಪ್ರೆಸ್ ವಿಶೇಷ ರೈಲು (06273) ಈ ರೈಲು ಏಪ್ರಿಲ್ 13, 20 ಮತ್ತು 27 ರಂದು ಮೂರೂ ಸೋಮವಾರ ದಿನದಂದು ಮೈಸೂರು ನಿಲ್ದಾಣದಿಂದ ರಾತ್ರಿ 20:15 ಗಂಟೆಗೆ ಹೊರಡುತ್ತದೆ. ಜೋಧಪುರ್ ಗೆ ಬುಧವಾರ ಸಂಜೆ 17 ಗಂಟೆಗೆ ತಲುಪಲಿದೆ.
* ಮರಳಿ ಅದೇ ದಿನಕ್ಕಿನಲ್ಲಿ ಜೋಧಪುರ್ ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06274) ಜೋಧಪುರ್ ನಿಲ್ದಾಣದಿಂದ ರಾತ್ರಿ 22:45 ಗಂಟೆಗೆ ಮೂರು ಗುರುವಾರ ಅಂದರೆ ಏಪ್ರಿಲ್ 16, 23 ಮತ್ತು 30 ರಂದು ಸಂಚಾರ ಮಾಡುತ್ತದೆ. ಶನಿವಾರ ಸಂಜೆ 18 ಗಂಟೆಗೆ ಮೈಸೂರು ಮುಟ್ಟುತ್ತದೆ.
ಹುಬ್ಬಳ್ಳಿ ವಿಶೇಷ ರೈಲು ಸೇವೆ ವಿಸ್ತರಣೆ
ಬೇಸಿಗೆ ದಟ್ಟಣೆ ನಿರ್ವಹಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಹೊರಡುವ ಈ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
* ಎಸ್‌ಎಸ್‌ಎಸ್ ಹುಬ್ಬಳ್ಳಿ-ಗಾಜಿಪುರ ಸಿಟಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (07337) ಪ್ರತಿ ಸೋಮವಾರ ಹುಬ್ಬಳ್ಳಿಯಿಂದ ಹೊರಡುತ್ತದೆ. ಈ ರೈಲು ಸೇವೆಯನ್ನು ಏಪ್ರಿಲ್ 6 ರಿಂದ ಏಪ್ರಿಲ್ 27 ರವರೆಗೆ ಸಂಚರಿಸುವಂತೆ ವಿಸ್ತರಿಸಲಾಗಿದೆ.
* ಮರಳಿ ಅದೇ ದಿಕ್ಕಿನಲ್ಲಿ ಪ್ರತಿ ಗುರುವಾರ ಗಾಜಿಪುರ ಸಿಟಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (07338) ಸೇವೆಯು ಏಪ್ರಿಲ್ 9 ರಿಂದ ಏಪ್ರಿಲ್ 30 ರವರೆಗೆ ಸಂಚರಿಸಲಿದೆ. ಈ ವಿಸ್ತರಣೆಯ ಅವಧಿಯಲ್ಲಿ ಎರಡು ದಿಕ್ಕಗಳಲ್ಲಿ ತಲಾ ನಾಲ್ಕು ಟ್ರಿಪ್‌ಗಳ ಸೇವೆ ಲಭ್ಯವಾಗಲಿದೆ.
* ಎಸ್‌ಎಸ್‌ಎಸ್ ಹುಬ್ಬಳ್ಳಿ-ಮುಜಾಫರ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (07315) ಪ್ರತಿ ಬುಧವಾರ ಹುಬ್ಬಳ್ಳಿಯಿಂದ ಹೊರಡುತ್ತದೆ. ಏಪ್ರಿಲ್ 8 ರಿಂದ ಏಪ್ರಿಲ್ 29 ರವರೆಗೆ ರೈಲಿನ ಸೇವೆ ವಿಸ್ತರಣೆ ಮಾಡಲಾಗಿದೆ.
* ಮರಳಿ ಅದೇ ರೈಲು (07316) ಪ್ರತಿ ಶನಿವಾರ ಮುಜಾಫರ್‌ಪುರದಿಂದ ಹೊರಟ ಎಸ್‌ಎಸ್‌ಎಸ್ ಹುಬ್ಬಳ್ಳಿಗೆ ಬಂದು ಸೇರುತ್ತದೆ. ಈ ಹಿಂದೆ ನಿಗದಿ ಆಗಿದ್ದ ಏಪ್ರಿಲ್ 4 ರ ಬದಲಾಗಿ ಏಪ್ರಿಲ್ 11 ರಿಂದ ಮೇ 2 ರವರೆಗೆ ಸಂಚರಿಸುವಂತೆ ಸೇವೆ ವಿಸ್ತರಣೆ ಮಾಡಲಾಗಿದ್ದು, ಒಟ್ಟು ಎಂಟು ಟ್ರಿಪ್ ಸೇವೆ ಪ್ರಯಾಣಿಕರಿಗೆ ಸಿಗಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ಸೇವೆ ವಿಸ್ತರಣೆ
* ಯಶವಂತಪುರ-ಬಿಕಾನೇರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06543) ಪ್ರತಿ ಬುಧವಾರ ಯಶವಂತಪುರದಿಂದ ಹೊರಡುತ್ತದೆ. ಈ ರೈಲು ಕಾರ್ಯಾಚರಣೆಯನ್ನು ಏಪ್ರಿಲ್ 8 ರಿಂದ ಏಪ್ರಿಲ್ 29 ರವರೆಗೆ ವಿಸ್ತರಿಸಲಾಗಿದೆ.
* ಮರಳಿ ಅದೇ ದಿಕ್ಕಿನಲ್ಲಿ ಶನಿವಾರ ಬಿಕಾನೇರ್‌ನಿಂದ ಹೊರಡುವ ಬಿಕಾನೇರ್-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (06544) ಏಪ್ರಿಲ್ 11 ರಿಂದ ಮೇ 2 ರವರೆಗೆ ಸಂಚರಿಸಲಿದೆ. ಈ ಸೇವೆಗಳು ಸಹ ತಲಾ ನಾಲ್ಕು ಟ್ರಿಪ್‌ಗಳನ್ನು ಪೂರೈಸಲಿವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
First Rail: ದಶಕ ಪೂರೈಸಿದ ದೇಶದ ಮೊದಲ ಸೆಮಿ-ಹೈ-ಸ್ಪೀಡ್ ರೈಲು; ಅದರ ಸಂಚಾರ ವೇಗ, ಮಾರ್ಗದ ವಿವರ -
Silk Board: ಹಳದಿ-ನೀಲಿ ಮೆಟ್ರೋ ಲೈನ್ ಪ್ರಯಾಣಿಕರಿಗಾಗಿ 'ಟ್ರಾವೆಲೇಟರ್-ಕನೆಕ್ಟಿಂಗ್ ವಾಕ್ವೇ ಸಂಪರ್ಕ -
Amrit Bharat Express 3.0: ಹೊಸ ವಿನ್ಯಾಸ, ಎಸಿ ಕೋಚ್ ಸಹಿತ ಅಮೃತ್ ಭಾರತ್ ರೈಲು ಸೇವೆ -
High Speed Rail: ಬೆಂಗಳೂರು ಸೇರಿ 3 ಹೈಸ್ಪೀಡ್ ರೈಲು ಕಾರಿಡಾರ್ ಡಿಪಿಆರ್ 2027ಕ್ಕೆ ಪೂರ್ಣ, ವಿವರ -
Bengaluru Metro: ನೇರಳೆ- ಹಸಿರು ಮಾರ್ಗದ ಸಂಚಾರ ದಟ್ಟಣೆಗೆ ಮುಕ್ತಿ, ಹೊಸ ರೈಲುಗಳಿಗೆ ಬೋರ್ಡ್ ಅನುಮತಿ -
Rajaratha Bus: ಉತ್ತರ ಕರ್ನಾಟಕದಿಂದ ಹೈದರಾಬಾದ್ಗೆ ರಾಜರಥ ಎಸಿ ಸ್ಲೀಪರ್ ಬಸ್ ಸೇವೆ; ಮಾರ್ಗ, ವೇಳಾಪಟ್ಟಿ -
Namma Metro: ಹಳದಿ ಮಾರ್ಗಕ್ಕೆ ಶೀಘ್ರವೇ ಮತ್ತೆರಡು ಹೊಸ ಮೆಟ್ರೋ ಸೇರ್ಪಡೆ: 5 ನಿಮಿಷಕ್ಕೊಮ್ಮೆ ಸಂಚಾರ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
ಧನುಷ್ ಜೊತೆ ಸ್ನೇಹ ಕಳೆದುಕೊಂಡಿದ್ದು ನನ್ನ ಜೀವನದ ದೊಡ್ಡ ನಷ್ಟ: ಪತ್ನಿ ನಯನತಾರ ಜೊತೆಗಿನ ಮನಸ್ತಾಪಕ್ಕೆ ವಿಘ್ನೇಶ್ ಶಿವನ್ ಬೇಸರ -
"ನಾನು ಔಟ್ ಆಗಿದ್ದಕ್ಕೇ ತುಂಬಾ ಖುಷಿಯಾಯ್ತು": ಸಿಎಸ್ಕೆ ಎದುರು ರನ್ ಮಳೆ ಹರಿಸಿದ ಬಳಿಕ ಪಡಿಕ್ಕಲ್ ಹೀಗಂದಿದ್ದೇಕೆ? -
2026ರ PUC ಫಲಿತಾಂಶಕ್ಕೆ ಕ್ಷಣಗಣನೆ; ಈ ಬಾರಿ ಡಿಜಿಲಾಕರ್ನಲ್ಲೂ ರಿಸಲ್ಟ್ ಲಭ್ಯ, ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru: ನಸುಕಿನ ಜಾವ 3 ಗಂಟೆಗೆ ರಾಪಿಡೋ ರೈಡರ್ ತೋರಿದ ಮಾನವೀಯತೆಗೆ ಮಹಿಳೆ ಫಿದಾ, Video Viral -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್














Click it and Unblock the Notifications