Gold Price April 6: ಚಿನ್ನದ ಬೆಲೆ ಭರ್ಜರಿ 18,000 ರೂ. ಇಳಿಕೆ, ಬಂಗಾರ ಪ್ರಿಯರಿಗೆ ಗುಡ್ನ್ಯೂಸ್
Gold Price April 6: ಚಿನ್ನ ಪ್ರಿಯರಿಗೆ ಏಪ್ರಿಲ್ 6ರ ಸೋಮವಾರ ಭರ್ಜರಿ ಗುಡ್ನ್ಯೂಸ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ಭಾರೀ ಏರಿಳಿತ ಕಂಡಿತ್ತು. ಇದೀಗ ಸೋಮವಾರದಂದು ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಇಂದಿನ ಚಿನ್ನ ಬೆಲೆ ಇಳಿಕೆಯು ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ. ಹಾಗಾದರೆ ಏಪ್ರಿಲ್ 6ರಂದು ಚಿನ್ನ ಮತ್ತು ಬೆಳ್ಳಿಯ ನಿಖರವಾದ ಬೆಲೆ ಎಷ್ಟಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.
ಬೆಂಗಳೂರು ಸೇರಿದಂತೆ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಭಾರೀ ಇಳಿಕೆ ಕಂಡಿದೆ. ಚಿನ್ನದ ಬೆಲೆಯು ಬರೋಬ್ಬರಿ 18,000 ರೂ. ಇಳಿಕೆಯಾಗಿದೆ. ಎಷ್ಟು ಗ್ರಾಂ ಚಿನ್ನದ ಮೇಲೆ 18,000 ರೂ. ಇಳಿಕೆಯಾಗಿದೆ ಹಾಗೂ 18, 22 ಹಾಗೂ 24 ಕ್ಯಾರೆಟ್ ಬಂಗಾರದ ಮೇಲೆ ಎಷ್ಟು ಬೆಲೆ ಕಡಿಮೆಯಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಏಪ್ರಿಲ್ 6ರ ಸೋಮವಾರ ಭರ್ಜರಿ ಇಳಿಕೆಯಾಗಿದೆ. 18 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 11,185 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,11,850 ರೂ. ಆಗಿದೆ. ಇನ್ನು 18 ಕ್ಯಾರೆಟ್ನ ಚಿನ್ನದ ಬೆಲೆಯು ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂನ ಮೇಲೆ 135 ರೂ. ಹಾಗೂ 10 ಗ್ರಾಂನ ಮೇಲೆ 1,350 ರೂ. ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 13,670 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,36,700 ರೂ. ಆಗಿದೆ. ಏಪ್ರಿಲ್ ಮೊದಲ ವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ನ ಚಿನ್ನದ ಬೆಲೆಯು 1ಗ್ರಾಂನ ಮೇಲೆ 165 ರೂ. ಹಾಗೂ 10 ಗ್ರಾಂನ ಮೇಲೆ 1,650 ರೂ. ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 18 ಹಾಗೂ 22 ಕ್ಯಾರೆಟ್ನಂತೆ 24 ಕ್ಯಾರೆಟ್ನ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 14,913 ರೂ. ಹಾಗೂ 10 ಗ್ರಾಂ ಬೆಲೆಯು 1,49,130 ರೂ. ಆಗಿದೆ. ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂನ ಮೇಲೆ 180 ರೂಪಾಯಿ ಹಾಗೂ 10 ಗ್ರಾಂನ ಮೇಲೆ 1,800 ರೂ. ಕಡಿಮೆಯಾಗಿದೆ.
Gold Price April 6: 100 ಗ್ರಾಂ ಚಿನ್ನದ ಮೇಲೆ ಭರ್ಜರಿ ಇಳಿಕೆ
ಸೋಮವಾರ ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಈ ಮೂಲಕ 24 ಕ್ಯಾರೆಟ್ 100 ಗ್ರಾಂನ ಚಿನ್ನದ ಬೆಲೆಯು 14,91,300 ರೂ. ಆಗಿದೆ. 24 ಕ್ಯಾರೆಟ್ನ 100 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 18,000 ರೂ. ಇಳಿಕೆಯಾಗಿದೆ.
ಬೆಳ್ಳಿ ಬೆಲೆ ಎಷ್ಟಾಗಿದೆ ?
ಇನ್ನು ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಬಂಗಾರ - ಬೆಳ್ಳಿ ಪ್ರಿಯರಲ್ಲಿ ಸಮಾಧಾನ ತಂದಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 250 ರೂ. ಆಗಿದ್ದರೆ ಒಂದು ಕೆ.ಜಿ ಬೆಳ್ಳಿ ಬೆಲೆಯು 2.50 ಲಕ್ಷ ರೂ. ಆಗಿದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications