Vijay: ತಮಿಳುನಾಡಿನಲ್ಲಿ ವಿಜಯ್ ಮಾಯೆಯ ಪರಿಣಾಮ; ಕಿಂಗ್ ಮೇಕರ್ ಆಗುವ ಸಾಧ್ಯತೆ

Vijay: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ನಟ ಹಾಗೂ ರಾಜಕಾರಣಿ ವಿಜಯ್ ಅವರು ಹೊಸ ಭಾಷ್ಯಾ ಬರೆದಿದ್ದಾರೆ. ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಎರಡೂವರೆ ವರ್ಷ ಅವಧಿ ಇನ್ನೂ ಬಾಕಿ ಇರುವಾಗಲೇ ನಟ ವಿಜಯ್ ಅವರು ರಾಜಕೀಯಕ್ಕೆ ಬರುವುದಾಗಿ ಘೋಷಿಸಿದ್ದರು. ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಂ ಎನ್ನುವ ಪಕ್ಷವನ್ನು ಸ್ಥಾಪಿಸಿದರು. ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವನ್ನು ಸ್ಥಾಪಿಸಿದರೂ, ಆದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ತಮಿಳುನಾಡಿನಲ್ಲಿ ತಮ್ಮದೇ ಶೈಲಿಯಲ್ಲಿ ಚುನಾವಣಾ ಪ್ರಚಾರವನ್ನು ವಿಜಯ್ ನಡೆಸಿದ್ದರು.

ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಜಯ್ ಬಗ್ಗೆ ಮಾತನಾಡಿವೆ ಎಂದರೆ ಅದರ ಪ್ರಭಾವ ತಿಳಿಯುತ್ತದೆ. ಆಡಳಿತರೂಢ ಡಿಎಂಕೆಯಿಂದ ವಿರೋಧ ಪಕ್ಷವಾದ ಎಐಎಡಿಎಂಕೆ - ಕಾಂಗ್ರೆಸ್ - ಬಿಜೆಪಿ ಪಕ್ಷವು ಸಹ ವಿಜಯ್ ಹೆಸರು ಪ್ರಸ್ತಾಪಿಸಿದ್ದವು. ಒಂದು ವಿಜಯ್ ಅವರನ್ನು ಮೆಚ್ಚಿಕೊಳ್ಳಬೇಕು ಅಥವಾ ವಿರೋಧಿಸಬೇಕು. ಆದರೆ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎನ್ನುವ ಮಾದರಿಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಇತ್ತು. ಇದೇ ಕಾರಣಕ್ಕೆ ಈ ಬಾರಿ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ, ರಾಜಕಾರಣಿ ವಿಜಯ್ ಅವರು ಕಿಂಗ್ ಮೇಕರ್ ಆಗಲಿದ್ದಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ.

Vijay

ವಿಜಯ್ ಅವರು ರಾಜಕೀಯ ಪ್ರವೇಶಿಸಿದ ಬೆನ್ನಲ್ಲೇ ಹಲವು ಸವಾಲುಗಳನ್ನು ಎದುರಿಸುವಂತೆ ಆಯಿತು. ಅದು ಸಾರ್ವಜನಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಲಿಲ್ಲ. ಅವರ ವೈಯಕ್ತಿಕ ಜೀವನದಲ್ಲೂ ಬಿರುಗಾಳಿಯೇ ಎದ್ದಿದೆ. ಈ ಎಲ್ಲ ಸವಾಲುಗಳ ನಡುವೆ ವಿಜಯ್ ತಮಿಳುನಾಡಿನ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ಯುವ ಮತದಾರರನ್ನು ಸೆಳೆಯುವಲ್ಲಿ ವಿಜಯ್ ಯಶಸ್ವಿಯಾಗಿದ್ದಾರೆ.

Tamilnadu Election 2026: ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಕರ್ನಾಟಕಕ್ಕೆ ಸಂಕಷ್ಟ, ಯಾಕೆ
Tamilnadu Election 2026: ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಕರ್ನಾಟಕಕ್ಕೆ ಸಂಕಷ್ಟ, ಯಾಕೆ

Vijay: ಒಂದು ತಲೆಮಾರಿನ ಚುನಾವಣೆ

ಇನ್ನು ನಟ ವಿಜಯ್ ಅವರು 2026ನೇ ಸಾಲಿನ ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಸಭೆಗಳಲ್ಲಿ ಬಹುತೇಕ ಬಳಸಿದ್ದು, ಇದು ಒಂದು ತಲೆಮಾರಿನ ಬದಲಾವಣೆಗಾಗಿ ನಡೆಯುತ್ತಿರುವ ಚುನಾವಣೆ ಎಂದು. ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಮತದಾನವಾಗಿದೆ. ಅದರ ಹಿಂದೆ ವಿಜಯ್ ಅವರ ಪ್ರಚಾರ - ಮಾತುಗಳು ಸಹ ಪ್ರಭಾವ ಬೀರಿದೆ.

ಈ ಚುನಾವಣೆಯು ಒಂದಿಡೀ ತಲೆಮಾರನ್ನು ಬದಲಾಯಿಸುವ ಚುನಾವಣೆಯಾಗಲಿದೆ. ಹೀಗಾಗಿ ತಪ್ಪದೆ ಮತದಾನ ಮಾಡಿ ಎಂದು ನಟ ವಿಜಯ್ ಅವರು ಹೇಳಿದ್ದರು. ಒಂದು ದಿನ ರಜೆ ಸಿಗುತ್ತದೆ. ಊರು ಬಿಟ್ಟು ಊರಿಗೆ ಬಂದು ಮತ ಚಲಾಯಿಸಬೇಕಲ್ಲ ಎಂದು ವಿಚಾರ ಮಾಡಬೇಡಿ. ಚುನಾವಣೆಯ ದಿನ ನೀವು ಎಲ್ಲೆ ಇದ್ದರೂ ಬಂದು ಮತಚಲಾಯಿಸಿ ಎಂದು ಕರೆ ನೀಡಿದ್ದರು.

ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್‌

ಇನ್ನು ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ವಿಜಯ್‌ ಯಶಸ್ಸು ಕಂಡಿದ್ದಾರೆ. 2026ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ 18ರಿಂದ 24 ಸ್ಥಾನಗಳು ಬರಲಿವೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕೇವಲ ಅಲ್ಪಾವಧಿಯಲ್ಲಿಯೇ ವಿಜಯ್‌ ಅವರ ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರುವುದು ವಿಶೇಷ ಎಂದೇ ಪರಿಗಣಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+