ವಿಡಿಯೋ: ತಿಂದ ತಟ್ಟೆ ತೊಳೆದಿಟ್ಟ ಕಾಂಗ್ರೆಸ್‌ನ ರಾಜಕುಮಾರ

ನಾಗ್ಪುರ, ಅಕ್ಟೋಬರ್ 02: ಕಾಂಗ್ರೆಸ್‌ನ ಗಾಂಧಿ ಕುಟುಂಬದ ಮೇಲೆ ಬಿಜೆಪಿ ಸಾಮಾನ್ಯವಾಗಿ ಹೇಳುವ ದೂರೆಂದರೆ, ಗಾಂಧಿ ಕುಟುಂಬ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ ಕುಟುಂಬ ಅವರು ಸಾಮಾನ್ಯರಂತೆ ಬದುಕಲಾರರೆಂದು. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆ ಇಂದು ನಡೆದಿದೆ.

ಮಹಾರಾಷ್ಟ್ರದ ವರ್ದಾದ ಸೇವಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್‌ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವು ಉಂಡ ತಟ್ಟೆಯನ್ನು ತಾವೇ ತೊಳೆದಿಟ್ಟಿದ್ದಾರೆ. ಅಷ್ಟೆ ಅಲ್ಲ ಸೋನಿಯಾ ಗಾಂಧಿ ಸಹ ತಮ್ಮ ತಟ್ಟೆಯನ್ನು ತಾವೇ ತೊಳೆದಿಟ್ಟಿದ್ದಾರೆ.

ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೆಲ್ಲರೂ ತಾವು ಊಟಮಾಡಿದ ತಟ್ಟೆಯನ್ನು ತಾವೇ ತೊಳೆದಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸಹ ತಾವೇನೂ ಭಿನ್ನರಲ್ಲ ಎಂದು ತಾವೂ ಸಹ ಎಲ್ಲರಂತೆ ತಮ್ಮ ತಟ್ಟೆಗಳನ್ನು ತೊಳೆದು ಇತರರಿಗೆ ಮಾದರಿಯಾಗಿದ್ದಾರೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಟ್ಟೆ ತೊಳೆದಿಡುವ ವಿಡಿಯೋ ಎಎನ್‌ಐ ಪ್ರಕಟಿಸಿದ್ದು, ಕೆಲವೇ ಸಮಯದಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳು ಚಿತ್ರ ವಿಚಿತ್ರವಾಗಿವೆ. ವಿಡಿಯೋಕ್ಕೆ ಬಂದಿರುವ ಕೆಲವು ಆಯ್ದ ಟ್ವಿಟ್ಟರ್ ಪ್ರತಿಕ್ರಿಯೆಗಳು ಇಲ್ಲಿವೆ...

ತಿಹಾರ್ ಜೈಲಿಗೆ ಹೋಗಲು ತಯಾರಾಗುತ್ತಿದ್ದಾರೆ

ನ್ಯಾಷನಲ್ ಹೆರಾಲ್ಡ್‌ ಕೇಸಿನಲ್ಲಿ ಜಾಮೀನಿನ ಮೇಲಿರುವ ಇಬ್ಬರೂ ತಟ್ಟೆಗಳನ್ನು ತೊಳೆಯುವುದನ್ನು ಅಭ್ಯಾಸ ಮಾಡುವ ತಿಹಾರ್ ಜೈಲಿಗೆ ಹೋಗಲು ತಯಾರಿ ನಡೆಸಿದ್ದಾರೆ ಎಂದು ತಮನ್ ಟ್ವೀಟ್ ಮಾಡಿದ್ದಾರೆ.

Array

ಜೀವನದಲ್ಲಿ ಮೊದಲ ಬಾರಿ ತೊಳೆದಿದ್ದಾರೆ

ರಾಹುಲ್ ಗಾಂಧಿ ಮತ್ತು ಸೊನಿಯಾ ಗಾಂಧಿ ಅವರು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ತಟ್ಟೆ ತೊಳೆದಿದ್ದಾರೆ ಎನಿಸುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಟ್ರುತ್‌ ಎಂಬ ಟ್ವಿಟ್ಟರ್ ಖಾತೆ.

ತಟ್ಟೆ ತೊಳೆಯುವುದು ಸುದ್ದಿಯಾ?

ರಾಹುಲ್ ಗಾಂಧಿ ಸೋನಿಯಾ ಗಾಂಧಿ ತಾವು ತಿಂದ ತಟ್ಟೆಯನ್ನು ತೊಳೆದಿಡುವುದನ್ನು ಸುದ್ದಿ ಮಾಡಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವ್ಯಕ್ತಿ ತಾನು ಉಂಡ ತಟ್ಟೆಯನ್ನು ತೊಳೆಯುವುದು ಸುದ್ದಿ ಹೇಗಾಗುತ್ತದೆ ಎಂದಿದ್ದಾರೆ.

ವಿಮ್ ಜಾಹೀರಾತು, ಮುಂದೆ?

ತಟ್ಟೆ ತೊಳೆಯುವ ಮೂಲಕ ರಾಹುಲ್ ಗಾಂಧಿ ವಿಮ್ ಜಾಹಿರಾತು ನೀಡಿದ್ದಾರೆ. ಮುಂದೆ ಹಾರ್ಪಿಕ್ ಜಾಹಿರಾತು ಜಾಹೀರಾತಿಗಾಗಿ ಟಾಯ್ಲೆಟ್‌ ಸ್ವಚ್ಛ ಮಾಡುತ್ತಾರೋ ಏನೋ ಎಂದು ಹಾಸ್ಯ ಮಾಡಿದ್ದಾರೆ ಆರ್‌.ಕೆ.ಮುತ್ತು.

ಇಷ್ಟು ದಿನ ದೇಶ ಸ್ವಚ್ಛ ಮಾಡಿದ್ರು ಈಗ ತಟ್ಟೆ

ಇಷ್ಟು ದಿನ ದೇಶವನ್ನು ಸ್ವಚ್ಚ ಮಾಡಿದರು ಈಗ ತಟ್ಟೆ ಸ್ವಚ್ಚ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಭ್ರಷ್ಟ ಆಡಳಿತದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ ತಮ್ಮನ್ನು ತಾವು 'ಸಂಘಿ' ಎಂದು ಕರೆದುಕೊಂಡಿರುವ ಖಾತೆಯೊಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+