ಹೃದಯಸ್ಪರ್ಶಿ ಕ್ಷಣ: ರಾಹುಲ್ ಗಾಂಧಿ ಅಪ್ಪಿಕೊಂಡು ಆಶೀರ್ವಾದ ಮಾಡಿದ ವೃದ್ಧೆ
ಭಾರತ್ ಜೋಡೋ ಯಾತ್ರೆಯಲ್ಲಿ ಹಿರಿಯ ಮಹಿಳೆಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಪ್ಪಿಕೊಂಡು ಆಶೀರ್ವಾದ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ರಾಹುಲ್ ಗಾಂಧಿಯವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಕನ್ಯಾಕುಮಾರಿಯಿಂದ ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕ್ರಮಿಸಿ ಕಾಶ್ಮೀರವನ್ನು ತಲುಪುವ ಗುರಿಯೊಂದಿಗೆ ಮೆರವಣಿಗೆಯನ್ನು ಮುಂದುವರೆಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಅಪ್‌ಲೋಡ್ ಮಾಡಿದ ವಿಡಿಯೊ ಕ್ಲಿಪ್‌ನಲ್ಲಿ, ರಾಹುಲ್ ಗಾಂಧಿ ಜನಸಮೂಹದಿಂದ ಸುತ್ತುವರೆದಿರುವುದನ್ನು ಮತ್ತು ವೃದ್ಧೆಯೊಂದಿಗೆ ಸಂವಹನ ನಡೆಸುತ್ತಿರುವುದನ್ನು ಕಾಣಬಹುದು. ಮಹಿಳೆಯು ಕಾಂಗ್ರೆಸ್ ನಾಯಕನ ಭುಜವನ್ನು ತಟ್ಟಿ ಆಶೀರ್ವದಿಸುತ್ತಿರುವುದನ್ನು ಕಾಣಬಹುದು. ಕೊನೆಯಲ್ಲಿ ರಾಹುಲ್ ಗಾಂಧಿಯವರನ್ನು ವೃದ್ಧೆ ಅಪ್ಪಿಕೊಂಡು ಮುತ್ತಿಟ್ಟು ತಾಯಿ ಪ್ರೀತಿ ತೋರುತ್ತಾರೆ. ಬಳಿಕ ರಾಹುಲ್ ಅನುಯಾಯಿಗಳತ್ತ ಕೈ ಬೀಸುತ್ತಾ ಮೆರವಣಿಗೆಗೆ ತೆರಳುತ್ತಾರೆ. ಈ ವಿಡಿಯೋವನ್ನು "Mamta ki chaon" ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ರಾಹುಲ್ ಗಾಂಧಿ ಮತ್ತು ಅವರ ಸಹ ಯಾತ್ರಿಗಳೊಂದಿಗೆ ಸೆಪ್ಟೆಂಬರ್ 7 ರಂದು ಆರಂಭವಾದ ಕಾಂಗ್ರೆಸ್ ಪಾದಯಾತ್ರೆ 1,000 ಕಿ.ಮೀ. ಪ್ರಯಾಣದುದ್ದಕ್ಕೂ ಜನರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಮತ್ತು ನಾಯಕರು ಜನರೊಂದಿಗೆ ವಿಶೇಷ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ.
'ममता' की छाँव#BharatJodoYatra pic.twitter.com/YFv4zwQ4YA
— Congress (@INCIndia) October 20, 2022
ಕರ್ನಾಟಕದ ಮಂಡ್ಯದಲ್ಲಿ ರಾಹುಲ್ ಗಾಂಧಿ ಅವರ ತಾಯಿ, ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸೇರಿಕೊಂಡರು. ಈ ವರ್ಷದ ಆರಂಭದಲ್ಲಿ COVID-19 ಸೋಂಕಿಗೆ ಒಳಗಾದ ನಂತರ ಸೋನಿಯಾ ಗಾಂಧಿಯವರ ಮೊದಲ ಸಾರ್ವಜನಿಕ ಪ್ರವಾಸ ಇದಾಗಿದೆ. ಈ ಹಿಂದೆ ನಡಿಗೆಯಲ್ಲಿ ಗಾಂಧಿಯವರು ತಮ್ಮ ತಾಯಿಯ ಶೂಲೇಸ್‌ಗಳನ್ನು ಕಟ್ಟುತ್ತಿರುವ ಫೋಟೋವನ್ನು ಪಕ್ಷವು ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು.
No caption needed.
— Bharat Jodo (@bharatjodo) September 28, 2022
Only love ♥️#BharatJodoYatra pic.twitter.com/LSnbCEBk5v
ಈ ಹಿಂದೆ ಪಾದಯಾತ್ರೆಯ ಮತ್ತೊಂದು ವಿಡಿಯೊ ವೈರಲ್ ಆಗಿತ್ತು. ಅಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ ಹುಡುಗಿಯೊಬ್ಬಳು ಸಂತೋಷದಿಂದ ಕುಣಿದಾಡಿ ಕಣ್ಣೀರು ಹಾಕಿದ್ದಳು. ಕಾಂಗ್ರೆಸ್ ನಾಯಕನನ್ನು ಭೇಟಿಯಾಗಲು ಅವಕಾಶ ನೀಡಿದಾಗ ಹುಡುಗಿ ಸಂತೋಷದಿಂದ ಜಿಗಿಯುವುದು, ನಗುವುದು ಮತ್ತು ಅದೇ ಸಮಯದಲ್ಲಿ ಅಳುವುದು ವಿಡಿಯೋದಲ್ಲಿ ಕಾಣಬಹುದು. ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ರಾಹುಲ್ ಗಾಂಧಿ ಸರಿಸುಮಾರು ಐದು ತಿಂಗಳಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಪಾದಯಾತ್ರೆ ಮಾಡಲಿದ್ದಾರೆ.












Click it and Unblock the Notifications