ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ನಂತರ ಜಯಾಗೆ ಅಕ್ರಮ ಆಸ್ತಿ ಕಂಟಕ ಶುರು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ತಮಿಳುನಾಡಿನ ಜನತೆ ಪಾಲಿಗೆ 'ಅಮ್ಮ' ಎನಿಸಿರುವ ಜೆ. ಜಯಲಲಿತಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ದಸರಾ ರಜೆ ಮುಗಿದ ಬಳಿಕ ಅಕ್ಟೋಬರ್ 15ರಿಂದ ಈ ಪ್ರಕರಣದ ವಿಚಾರಣೆ, ತೀರ್ಪು ಹೊರಬೀಳಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾ ಅವರ ವಿರುದ್ಧ ಆರೋಪ ಸಾಬೀತಾಗಿ ಅಪರಾಧಿ ಎನಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ನಂತರ ಜಾಮೀನು ಪಡೆದು ಚೆನ್ನೈ ತೆರಳಿ ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಮುಂದುವರೆಸಿದ್ದರು. ಈಗ ಅನಾರೋಗ್ಯ ಪೀಡಿತರಾಗಿ ಅಪೊಲೋ ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆಯುತ್ತಿದ್ದಾರೆ. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

Verdict in Jayalalithaa disproportionate assets case only after Oct 17

ಕೋರ್ಟಿಗೆ ರಜೆ: ಸುಪ್ರೀಂಕೋರ್ಟಿಗೆ ಅಕ್ಟೋಬರ್ 10 ರಿಂದ 15ರ ತನಕ ದಸರಾ ರಜೆ ಇರುವುದರಿಂದ ವಿಚಾರಣೆಯನ್ನು ಅಕ್ಟೋಬರ್ 17ರಂದು ನಡೆಸುವ ಸಾಧ್ಯತೆಯಿದೆ. ಅಕ್ಟೋಬರ್ 7ರಂದೇ ಈ ಪ್ರಕರಣದ ತೀರ್ಪು ಹೊರ ಬೀಳುವ ನಿರೀಕ್ಷೆಯಿತ್ತು. ಆದರೆ, ಜಸ್ಟೀಸ್ ಪಿಸಿ ಘೋಸೆ ಹಾಗೂ ಅಮಿತವ ರಾಯ್ ಅವರಿರುವ ನ್ಯಾಯಪೀಠ ರಜೆಯಲ್ಲಿದೆ.

ತೀರ್ಪು ಯಾವಾಗ: ರಜೆ ಪೀಠದಲ್ಲಿ ಒಂದು ವೇಳೆ ವಿಚಾರಣೆ ಕೈಗೆತ್ತಿಕೊಂಡರೂ, ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಕಡಿಮೆಯಿದೆ. ವಿಶೇಷ ನ್ಯಾಯಪೀಠ ಮತ್ತೊಮ್ಮೆ ಚಾಲನೆ ಪಡೆದಾಗ ಮಾತ್ರ ಅಂತಿಮ ತೀರ್ಪು ನಿರೀಕ್ಷಿಸಬಹುದು.ಜೂನ್ 8, 2016ರಂದು ವಿಚಾರಣೆ ಬಳಿಕ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಪೀಠ ಒಂದು ತಿಂಗಳೊಳಗೆ ತೀರ್ಪು ನೀಡುವ ಸೂಚನೆ ನೀಡಿತ್ತು.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೆ ಜಯಲಿತಾ ಅವರಿಗೆ ಜಾಮೀನು ಸಿಕ್ಕಿರುವುದನ್ನು ಪ್ರಶ್ನಿಸಿ ಕರ್ನಾಟಕ ಅರ್ಜಿ ಸಲ್ಲಿಸಿದೆ. ಜೆ ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಹಾಗೂ ಸುಧಾಕರಣ್ ಅವರನ್ನು ಅಪರಾಧಿ ಎಂದು ಕೆಳಹಂತದ ನ್ಯಾಯಲಯ ಘೋಷಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲಿ ಅಪೀಲ್ ಹಾಕಿದ ಬಳಿಕ ಎಲ್ಲರಿಗೂ ನೆಮ್ಮದಿ ಸಿಕ್ಕಿತ್ತು. ಈಗ ಪ್ರಕರಣ ಸುಪ್ರೀಂಕೋರ್ಟಿನಲ್ಲಿದ್ದು ,ತೀರ್ಪು ಹೊರ ಬೀಳಬೇಕಿದೆ.(ಒನ್ಇಂಡಿಯಾ ಸುದ್ದಿ)

English summary
The verdict in the J Jayalalithaa disproportionate assets case is likely to come up only after October 15. It was being anticipated that an order in the case which has been reserved for orders would come up on Friday considering it is the last working day for the Supreme Court after which it will be closed for Dusshera vacations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X