Urvashi Palandurkar: 500K ಫಾಲೋವರ್ಸ್; ಮಗಳ ಸಾಧನೆ ಕಂಡು ತಂದೆಯ ರಿಯಾಕ್ಷನ್‌ಗೆ ನೆಟ್ಟಿಗರು ಫಿದಾ!
Urvashi Palandurkar: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕಂಟೆಂಟ್ ಕ್ರಿಯೇಟರ್‌ವೊಬ್ಬರ ತಂದೆಯ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ನೆಟ್ಟಿಗರ ಮನಸ್ಸು ಗೆದ್ದಿದೆ. ಮುಂಬೈನ ಕಂಟೆಂಟ್ ಕ್ರಿಯೇಟರ್ ಅವರ ತಂದೆಯ ಹೃದಯಸ್ಪರ್ಶಿ ರಿಯಾಕ್ಷನ್ ಆನ್‌ಲೈನ್‌ನಲ್ಲಿ ವೈರಲ್ ಆಗುವುದರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 5 ಲಕ್ಷ ಜನ ಫಾಲೋವರ್‌ಗಳ ದಾಖಲೆಯೂ ಸೃಷ್ಟಿಯಾಗಿದೆ.
ಇದು ಮಹಾರಾಷ್ಟ್ರದ ಮುಂಬೈನಲ್ಲಿರುವ ಕಂಟೆಂಟ್ ಕ್ರಿಯೇಟರ್ ಉರ್ವಾಶಿ ಪಳಂದೂರ್ಕರ್ ಅವರ ಕಥೆ. ಉರ್ವಾಶಿ ಪಳಂದೂರ್ಕರ್ ಅವರು ಈ ವಿಷಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಉರ್ವಾಶಿ ಪಳಂದೂರ್ಕರ್ ಅವರು, ಅವರ ತಂದೆಯ ಬಳಿ ತನ್ನ ಫೋನ್‌ನಲ್ಲಿ ತನ್ನ ಪ್ರೊಫೈಲ್ ತೆರೆಯಲು ಕೇಳಿದ್ದಾರೆ, ಆ ಪುಟವನ್ನು ನೋಡುತ್ತಿದ್ದಂತೆ, ಅವರ ಫಾಲೋವರ್‌ಗಳ ಸಂಖ್ಯೆ 500,000 ದಾಟಿರುವುದನ್ನು ಅವರು ಗಮನಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆ 5 ಮಿಲಿಯನ್ ಆಗಿರುವ ಖುಷಿಯನ್ನು ಉರ್ವಾಶಿ ಪಳಂದೂರ್ಕರ್ ಅವರು ತಮ್ಮ ತಂದೆಯೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ತೆಗೆದು ನೋಡುವಂತೆ ಕೇಳಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆ ತೆಗೆದು ನೋಡಿದಾಗ ಉರ್ವಾಶಿ ಪಳಂದೂರ್ಕರ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ 5 ಮಿಲಿಯನ್ ಫಾಲೋವರ್ಸ್ ತಲುಪಿದ್ದಾರೆ ಎನ್ನುವುದನ್ನು ನೋಡಿ ಪುಟ್ಟ ಮಗುವಿನಂತೆ ಅವರ ತಂದೆ ಸಂಭ್ರಮಿಸಿದ್ದಾರೆ.
ಮಗಳ ಸಾಧನೆಯ ನೋಡಿ ಅವರ ತಂದೆ ಸಂಭ್ರಮದಲ್ಲಿ ಕುಣಿದಾಡಿದ್ದಾರೆ. ತಮ್ಮ ಮಗಳನ್ನು ತಬ್ಬಿಕೊಂಡು ಆಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫಾಲೋವರ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಮುಂದಿನ ಗುರಿ 1 ಮಿಲಿಯನ್ ಫಾಲೋವರ್ ಅಂತಲೂ ಅವರು ಹೇಳಿದ್ದಾರೆ. ಉರ್ವಾಶಿ ಅವರು ಕೇಕ್ ಕತ್ತರಿಸಿ ಸಾಧನೆಯನ್ನು ತಲುಪಲು ಸಹಾಯ ಮಾಡಿದ್ದಕ್ಕಾಗಿ ತಮ್ಮ ಫಾಲೋವರ್‌ಗಳಿಗೆ ಧನ್ಯವಾದ ಹೇಳಿದ್ದಾರೆ.
ವಿಡಿಯೋದಲ್ಲಿ ತಮ್ಮ ಕಂಟೆಂಟ್ ಕ್ರಿಯೇಟರ್ ಪ್ರಯಾಣ ಹೇಗೆ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಂಡರು. ಅವರು ತಮ್ಮ ಟೆರೇಸ್‌ನಲ್ಲಿ ವೀಡಿಯೊಗಳನ್ನು ಚಿತ್ರೀಕರಿಸುವುದಕ್ಕೆ ಹಾಗೂ ಅದನ್ನು ಉತ್ತಮವಾಗಿಸುವುದಕ್ಕೆ ಗಂಟೆಗಟ್ಟಲೆ ಕಳೆದದ್ದನ್ನು ನೆನಪಿಸಿಕೊಂಡಿದ್ದಾರೆ. 1 ಲಕ್ಷ ಮಾರ್ಕ್ ಅನ್ನು ತಲುಪುವ ಮೊದಲು ಹಲವಾರು ವಾರಗಳ ಕಾಲ 99,000 ಫಾಲೋವರ್‌ಗಳನ್ನು ಹೊಂದಿದ್ದೆ ಅಂತಲೂ ಹೇಳಿಕೊಂಡಿದ್ದಾರೆ.
ನಾನು ನಮ್ಮ ಮನೆಯ ಟೆರೇಸ್‌ನಲ್ಲಿ ವಿಡಿಯೊಗಳನ್ನು ಮಾಡುವುದಕ್ಕೆ ಪ್ರಾರಂಭಿಸಿದೆ. ಹಲವು ತಾಸುಗಳು ಇದಕ್ಕಾಗಿ ಮೀಸಲಿಟ್ಟೆ. ನಾನು ಹಲವು ವಾರಗಳ ಕಾಲ 99K ನಲ್ಲಿ ಸಿಲುಕಿಕೊಂಡಿದ್ದನ್ನು ಮತ್ತು ಅಂತಿಮವಾಗಿ 100K ತಲುಪಿದ್ದೂ ಇನ್ನೂ ನೆನಪಿದೆ. ಇಂದು ನಾವು 500K ಯಲ್ಲಿದ್ದೇವೆ ಇದು ಇಂದಿಗೂ ನಂಬಲು ಆಗುತ್ತಿಲ್ಲ. ಈ ಪ್ರಯಾಣದುದ್ದಕ್ಕೂ ನನ್ನೊಂದಿಗೆ ನಿಂತ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು ಅಂತ ಉರ್ವಾಶಿ ಪಳಂದೂರ್ಕರ್ ಅವರು ಹೇಳಿಕೊಂಡಿದ್ದಾರೆ.
Urvashi Palandurkar: ತುಂಬಾ ಸಂತೋಷವಾಗಿದೆ ಈ ಪಯಣ
ಇದು ನಿಜವಾಗಿಯೂ ಆಗಿದೆ... ಅಯ್ಯೋ, ಈಗ ನಾನು ತುಂಬಾ ಭಾವುಕಳಾಗಿದ್ದೇನೆ!!! 😭❤️ನಾನು ಮೊದಲಿಗೆ ನನ್ನ ಮನೆಯ ಟೆರೇಸ್‌ನಲ್ಲಿ ವಿಡಿಯೋ ಮಾಡುತ್ತಿದ್ದ ದಿನಗಳು ನೆನಪಾಗುತ್ತಿವೆ. ನಂತರ ಒಂದೊಂದೇ ಸಣ್ಣ ಮೈಲಿಗಲ್ಲುಗಳನ್ನು ದಾಟುತ್ತಾ, ಗಂಟೆಗಟ್ಟಲೆ ವಿಡಿಯೋ ಎಡಿಟ್ ಮಾಡುತ್ತಾ ಈ ಹಂತಕ್ಕೆ ಬಂದಿದ್ದೇನೆ. ಈ ಪೇಜ್‌ಗಾಗಿ ನಾನು ನನ್ನ ಹೃದಯ ಮತ್ತು ಆತ್ಮವನ್ನೇ ಸಂಪೂರ್ಣವಾಗಿ, ಪ್ರಾಮಾಣಿಕತೆ, ಪ್ರೀತಿ ಮತ್ತು ಉತ್ಸಾಹದಿಂದ ತೊಡಗಿಸಿಕೊಂಡಿದ್ದೇನೆ. ಇಂದು ಈ ಸಂಖ್ಯೆಯನ್ನು ನೋಡುತ್ತಿರುವುದು ನನಗೆ ತುಂಬಾ ಸಂತೋಷ ಮತ್ತು ಭಾವುಕತೆಯನ್ನು ನೀಡುತ್ತಿದೆ ಅಂತ ಅವರು ಹೇಳಿದ್ದಾರೆ.
ಇದೇ ರೀತಿ ನಿಮ್ಮ ಬೆಂಬಲ ಮುಂದುವರಿಯಲಿ. ನಾವು ಚಂದ್ರನನ್ನೂ ಮೀರಿ ಇನ್ನೂ ಮುಂದೆ ಹೋಗಬೇಕು! ನನ್ನ ಸ್ನೇಹಿತರು ಮತ್ತು ಕುಟುಂಬದವರು ಸಂಪೂರ್ಣ ಮನಸ್ಸಿನಿಂದ ನನ್ನ ಜೊತೆ ನಿಂತಿದ್ದಕ್ಕಾಗಿ ಅವರಿಗೆ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಅಂತಲೂ ಹೇಳಿದ್ದಾರೆ.


Click it and Unblock the Notifications
