ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.22: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಅ.22: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

5.40: ಪೊಲೀಸರ ಚಾರ್ಜ್ ಶೀಟ್ ನಲ್ಲಿ ಶಾರದಾ ಚಿಟ್ ಫಂಡ್ 4 ಕಂಪನಿಗಳು, ಸುದೀಪ್ತೋ ಸೇನ್, ಟಿಎಂಸಿ ಮಾಜಿ ಸಂಸದ ಕುನಾಲ್ ಘೋಷ್ ದೇಬ್ಜಾನಿ ಮುಖರ್ಜಿ ಹೆಸರು ಉಲ್ಲೇಖ.

5.30: ಕೋಲ್ಕತ್ತಾ: ಬಹುಕೋಟಿ ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಟ್ಟಮೊದಲ ಬಾರಿಗೆ ಪೊಲೀಸರು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

12.35: ಬೆಂಗಳೂರಿನ ಆರ್ಕಿಡ್ಸ್ ಶಾಲೆಯಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಲಲಿತಾ ಕುಮಾರಮಂಗಲಂ ಹೇಳಿದ್ದಾರೆ.

12.15: ದಕ್ಷಿಣ ಕೊರಿಯಾದ ಇಂಚಿಯನ್ ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ ನಲ್ಲಿ ವಿವಾದ ಹುಟ್ಟಿಹಾಕಿದ್ದ ಬಾಕ್ಸರ್ ಸರಿತಾ ದೇವಿ ಅವರನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಮಿತಿ ಅಮಾನತು ಮಾಡಿದೆ.[ವಿವರ ಇಲ್ಲಿದೆ]

12.00: ಡಿಎಲ್ ಎಫ್ ಹಾಗೂ ರಾಬರ್ಟ್ ವದ್ರಾ ಭೂ ಅವ್ಯವಹಾರ ಕುರಿತಂತೆ ಮರು ತನಿಖೆಗೆ ನೂತನ ಹರ್ಯಾಣ ಸರ್ಕಾರ ಆದೇಶಿಸಲು ಮುಂದಾಗಿದೆ.

11.45:
ಮುಜುಗರಕ್ಕೀಡಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, ಶೀಘ್ರದಲ್ಲೇ ಬಿಸಿಸಿಐ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದೆ.

10.50: ಹಾಕಿ ಇಂಡಿಯಾ ಕೋಚ್ ಟೆರಿ ವಾಲ್ಷ್ ಅವರು ತಮ್ಮ ರಾಜಿನಾಮೆಯನ್ನು ವಾಪಸ್ ಪಡೆದಿದ್ದು, ಕೋಚ್ ಆಗಿ ಮುಂದುವರೆಯಲು ಒಪ್ಪಿದ್ದಾರೆ.

9.25: ಬೆಂಗಳೂರಿನ ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 3 ವರ್ಷದ ಬಾಲಕಿ ಮೇಲೆ ಶಾಲಾ ಸಿಬ್ಬಂದಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. [ವರದಿ ಇಲ್ಲಿದೆ ಓದಿ]

9.20:
ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ, ಆರ್ಥಿಕ ಸುಧಾರಣೆ ಬಗ್ಗೆ ಅಮೆರಿಕದಲ್ಲಿ ಭಾರಿ ಮೆಚ್ಚುಗೆ ಸಿಕ್ಕಿದೆ ಎಂದು ರಾಯಭಾರಿ ಕಚೇರಿ ಹೇಳಿದೆ.


9.15: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸರ್ಕಸ್ ಮುಂದುವರೆದಿದ್ದು , ಶಿವಸೇನಾ ಜೊತೆ ಮರುಮೈತ್ರಿಗೆ ಬಿಜೆಪಿ ಹಿರಿಯ ನಾಯಕರು ಓಕೆ ಎಂದಿರುವ ಸುದ್ದಿ ಬಂದಿದೆ. ಅದರೆ, ಎನ್ ಸಿಪಿ ಬಾಹ್ಯ ಬೆಂಬಲವನ್ನು ಉಳಿಸಿಕೊಳ್ಳುವ ಚಿಂತನೆ ಕೂಡಾ ನಡೆದಿದೆ.
English summary
Top News of the today : The Central Bureau of Investigation has filed the first chargesheet in the multi-crore Saradha Ponzi scam, naming Sardha Group chief Sudipto Sen, company director Debjani Mukherjee and suspended Trinamool Congress parliamentarian Kunal Ghose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X