Union Budget 2025: ಅತೀ ಹೆಚ್ಚು ಹಾಗೂ ಕಡಿಮೆ ಸಮಯದಲ್ಲಿ ಮಂಡಿಸಿದ ಕೆಂದ್ರ ಬಜೆಟ್‌ ಭಾಷಣಗಳು

Union Budget 2025: ಮಂಬರುವ 2025-2ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಲಿದ್ದಾರೆ. ಹಾಗಾದರೆ ಇದುವರೆಗೂ ಯಾರು ಅತೀ ಹೆಚ್ಚು ಹಾಗೂ ಕಡಿಮೆ ಸಮಯಗಳಲ್ಲೇ ಬಜೆಟ್‌ ಮಂಡನೆ ಮುಗಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕೇಂದ್ರ ಬಜೆಟ್ 2025-26ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದಯ ಮಂಡಿಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ 3ನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಲಿದ್ದು, ನಿರ್ಮಲಾ ಸೀತಾರಾಮನ್‌ ಅವರು ಮಂಡನೆ ಮಾಡಲಿರುವ 8ನೇ ಕೇಂದ್ರ ಬಜೆಟ್‌ ಆಗಲಿದೆ. ಫೆಬ್ರವರಿ 1ರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಆಗುವ ಸಾಧ್ಯತೆಯಿದ್ದು, ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 8ನೇ ಬಜೆಟ್ ಇದಾಗಲಿದ್ದು, ಇದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು ಸೇರಿವೆ.

Union Budget 2025 Know Longest and Shortest Budget Speeches details

ಇದುವರೆಗೂ ಬಜೆಟ್‌ ಮಂಡನೆಗೆ ಅತೀ ಹೆಚ್ಚು ಹಾಗೂ ಕಡಿಕೆ ಸಮಯ ತೆಗೆದುಕೊಂಡವರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರ ಹೆರಸೇ ಮುನ್ನಲೆಗೆ ಬರುತ್ತದೆ. ಅಲ್ಲದೆ, ಹೆಚ್ಚು ಬಜೆಟ್‌ಗಳನ್ನು ಮಂಡಿಸಿ ದಾಖಲೆ ನಿರ್ಮಿಸಿದ ಕೀರ್ತಯೂ ಇವರದ್ದಾಗಿದೆ. ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿ ಬಜೆಟ್ ಮಂಡನೆಗಳಲನ್ನು ಮಾಡಿದ್ದು, ಈ ದಾಖಲೆಯನ್ನು ನಿರ್ಮಲಾ ಸೀತಾರಾಮನ್‌ ಅವರು ಹಿಂದಿಕ್ಕಿದ್ದಾರೆ.

ಅತೀ ಹೆಚ್ಚು ಹಾಗೂ ಕಡಿಮೆ ಸಮಯದ ಬಜೆಟ್‌ ಭಾಷಣಗಳು

* ಕಳೆದ ವರ್ಷದ ಅಂದರೆ 2024ರ ಜುಲೈನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಂತರ ಬಜೆಟ್ ಭಾಷಣವನ್ನು ಕೇಲವಕ 60 ನಿಮಿಷಗಳು ಅಂದರೆ 1 ಗಂಟೆಯಲ್ಲೇ ಮುಗಿಸಿದ್ದರು. ಇದು ಅವರ ಇಲ್ಲಿಯವರೆಗಿನ ಚಿಕ್ಕ ಬಜೆಟ್ ಭಾಷಣವಾಗಿದೆ. ಮುಂಬರುವ 2025-2026ನೇ ಸಾಲಿನ ಬಜೆಟ್‌ ಭಾಷಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ಕಾದುನೋಡಬೇಕಿದೆ.

* 2020-2021ರ ಬಜೆಟ್‌ ಭಾಷಷಣಕ್ಕೆ ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ 2 ಗಂಟೆ 42 ನಿಮಿಷಗಳನ್ನು ತೆಗೆದುಕೊಂಡಿದ್ದರು. ಇದು ಹೆಚ್ಚು ಸಮಯ ಬಜೆಟ್‌ ಮಂಡನೆಯಾಗಿದ್ದು, ದಾಖಲೆ ಬಜೆಟ್‌ ಭಾಷಣಗಳ ಪಟ್ಟಿಗೆ ಸೇರಿದೆ. 2020ರ ಬಜೆಟ್ ಭಾಷಣವನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ 1:40ರ ವರೆಗೆ ಮಾಡಲಾಗಿದೆ.

* 2019-20ರ ಬಜೆಟ್‌ ಭಾಷಣಕ್ಕೆ ನಿರ್ಮಲಾ ಸೀತಾರಾಮನ್ ಅವರು 2 ಗಂಟೆ 17 ನಿಮಿಷಗಳನ್ನು ತೆಗೆದುಕೊಂಡಿದ್ದರು. 2019ರಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡ ನಂತರ ಅವರ ಎರಡನೇ ಸುದೀರ್ಘ ಬಜೆಟ್ ಭಾಷಣ ಇದಾಗಿದೆ.

* ಸೀತಾರಾಮನ್ ಅವರು 2022ರಲ್ಲಿ 1 ಗಂಟೆ 30 ನಿಮಿಷಗಳ ಕಾಲ ಬಜೆಟ್ ಭಾಷಣವನ್ನು ಮಾಡಿದರು.

* ಜಸ್ವಂತ್ ಸಿಂಗ್ ಅವರು 2003-2004ರ ಬಜೆಟ್‌ ಭಾಷಣಕ್ಕೆ 2 ಗಂಟೆ 13 ನಿಮಿಷಗಳನ್ನು ತೆಗೆದುಕೊಂಡರು.

* ಅರುಣ್ ಜೇಟ್ಲಿ ಅವರು 2014-2015ರ ಬಜೆಟ್‌ ಮಂಡನೆ ಭಾಷಣ ಮಾಡಲು 2 ಗಂಟೆ 10 ನಿಮಿಷಗಳನ್ನು ತೆಗೆದುಕೊಂಡರು.

* ಮಾಜಿ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರು 1991ರ ಬಜೆಟ್ ಮಂಡನೆ ವೇಳೆ 18,700 ಪದಗಳೊಂದಿಗೆ ಸುದೀರ್ಘ ಭಾಷಣ ಮಾಡಿದರು.

* ಮಾಜಿ ಹಣಕಾಸು ಸಚಿವ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರು 1977-1978ರ ಮಧ್ಯಂತರ ಬಜೆಟ್‌ ಅನ್ನು ಸುಮಾರು 800 ಪದಗಳೊಂದಿಗೆ ಮಂಡಿಸಿದರು. ಇದು ಅತ್ಯಂತ ಕಡಿಮೆ ಸಮಯದಲ್ಲಿ ಮಂಡಿಸಿದ ಬಜೆಟ್‌ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+