Get Updates
Get notified of breaking news, exclusive insights, and must-see stories!
Live

Assembly Elections 2023 Live: ಮೇಘಾಲಯ, ನಾಗಾಲ್ಯಾಂಡ್ ರಾಜ್ಯದಲ್ಲಿ ಮತದಾನ ಆರಂಭ

ತ್ರಿಪುರಾದಲ್ಲಿ ಇತ್ತೀಚೆಗೆ ಚುನಾವಣೆ ನಡೆದಿದ್ದು, ಸುಮಾರು 28 ಲಕ್ಷ ಮತದಾರರು, ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ಇತ್ತ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಮತದಾನ ಸೋಮವಾರ (ಫೆ. 27) ಜರುಗಲಿದೆ.

ನವದೆಹಲಿ, ಫೆಬ್ರವರಿ 27: ದೇಶದ ಪ್ರಮುಖ ರಾಜ್ಯಗಳ ಪೈಕಿ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ 2023 ಮತ್ತು ಫಲಿತಾಂಶ ಭಾರೀ ಕುತೂಹಲ ಕೆರಳಿಸಿವೆ. ಈ ಮೂರು ರಾಜ್ಯಗಳ ಪೈಕಿ ತ್ರಿಪುರಾದಲ್ಲಿ ಇತ್ತೀಚೆಗೆ ಚುನಾವಣೆ ನಡೆದಿದ್ದು, ಸುಮಾರು 28 ಲಕ್ಷ ಮತದಾರರು, ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ಇತ್ತ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಮತದಾನ ಸೋಮವಾರ (ಫೆ. 27) ಆರಂಭವಾಗಿದೆ.

ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ 2023ಯ ಫಲಿತಾಂಶ ಮಾರ್ಚ್ 02 ರಂದು ಪ್ರಕಟಗೊಳ್ಳಲಿದೆ. ಸೋಮವಾರ ಸಂಜೆ ನಾಗಾಲ್ಯಾಂಡ್ ಮತ್ತು ಮೇಘಾಲಯದ ಮತದಾನ ಮುಕ್ತಾಯವಾಗುತ್ತಿದ್ದಂತೆ, ಮೂರು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಸಂಜೆ ಬಿತ್ತರವಾಗಲಿದೆ. ಈ ಕುರಿತು ಒಂದಷ್ಟು ಮಾಹಿತಿಗಳು, ಲೈವ್ ಅಪ್ಟೇಟ್ಸ್ ಇಲ್ಲಿ ತಿಳಿಯಬಹುದು.

Tripura, Nagaland, Meghalaya Assembly Election Voting and Exit Polls Results Live Updates in Kannada

ಕೇಂದ್ರ ಚುನಾವಣಾ ಆಯೋಗವು ಎರಡು ರಾಜ್ಯಗಳ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ನಾಗಾಲ್ಯಾಂಡ್‌ ರಾಜ್ಯದಲ್ಲಿ 60 ವಿಧಾನಸಭಾ ಕ್ಷೇತ್ರಗಳು ಇವೆ. ಇಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿ ಸರಿ ಸುಮಾರು 13,09,651 ಮತದಾರರು ಇದ್ದಾರೆ. ಅದೇ ರೀತಿ ಮೇಘಾಲಯ ರಾಜ್ಯದಲ್ಲಿ 60 ವಿಧಾನಸಭಾ ಕ್ಷೇತ್ರಗಳಲ್ಲಿ 21,61,129 ಒಟ್ಟು ಮತದಾರರು ಇದ್ದಾರೆ. ಇಲ್ಲಿ 81,443 ಹೊಸ ಮತದಾರರಿದ್ದಾರೆ.

ಯಾರಿಗೆ ಎಷ್ಟು ಸ್ಥಾನಗಳು, ಮತದಾರರು ಯಾರಿಗೆ ಮಣೆ ಹಾಕಿದ್ದಾರೆ, ಗೆಲವು ಯಾರ ಪಾಲು ಎಂಬುದು ಫಲಿತಾಂಶ ದಿನ ಗೊತ್ತಾಗಲಿದೆ. ಅದಕ್ಕೂ ಮುನ್ನ ಒಂದಷ್ಟು ಸುಳಿವು ಈ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹಿರಂಗಗೊಳ್ಳಲಿದೆ. ಎರಡು ರಾಜ್ಯಗಳ ಚುನಾವಣೆ ಮತ್ತು ಮೂರು ರಾಜ್ಯಗಳ ಮತಗಟ್ಟೆ (Exit Poll) ಸಮೀಕ್ಷೆ ಕುರಿತು ಒಂದಷ್ಟು ಮಾಹಿತಿ ಇಲ್ಲಿ ತಿಳಿಯಬಹುದು.

8:51 PM, 27 Feb

ಮೇಘಾಲಯ ಎಕ್ಸಿಟ್ ಪೋಲ್ಸ್ 2023

ಮೇಘಾಲಯ ಎಕ್ಸಿಟ್ ಪೋಲ್ಸ್ 2023

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಪ್ರಕಾರ, ಮೇಘಾಲಯದಲ್ಲಿ ಟಿಎಂಸಿ ಯಾವುದೇ ಸ್ಥಾನಗಳನ್ನು ಪಡೆಯುವುದಿಲ್ಲ. ಇನ್ನೂ ಎನ್‌ಪಿಪಿ 18-24 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ 4-8, ಇತರ ಪಕ್ಷಗಳು 4-8, ಜೊತೆಗೆ ಕಾಂಗ್ರೆಸ್ 6-12 ಸ್ಥಾನಗಳನ್ನು ಪಡೆಯಲಿದೆ.

8:49 PM, 27 Feb

ಮೇಘಾಲಯ ಎಕ್ಸಿಟ್ ಪೋಲ್ಸ್ 2023

ಮೇಘಾಲಯ ಎಕ್ಸಿಟ್ ಪೋಲ್ಸ್ 2023

ಜನ್ ಕಿ ಬಾತ್‌ ಪ್ರಕಾರ, ಮೇಘಾಲಯದಲ್ಲಿ ಟಿಎಂಸಿ ಯಾವುದೇ ಸ್ಥಾನಗಳನ್ನು ಪಡೆಯುವುದಿಲ್ಲ. ಇನ್ನೂ ಎನ್‌ಪಿಪಿ 11-16 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ 3-7, ಇತರ ಪಕ್ಷಗಳು 5-12, ಜೊತೆಗೆ ಕಾಂಗ್ರೆಸ್ 6-11 ಸ್ಥಾನಗಳನ್ನು ಪಡೆಯಲಿದೆ.

8:42 PM, 27 Feb

ಮೇಘಾಲಯ ಎಕ್ಸಿಟ್ ಪೋಲ್ಸ್ 2023

ಮೇಘಾಲಯ ಎಕ್ಸಿಟ್ ಪೋಲ್ಸ್ 2023

ಟೈಮ್ಸ್‌ ನೌ-ಇಟಿಜಿ ರಿಸರ್ಚ್‌ ಪ್ರಕಾರ, ಮೇಘಾಲಯದಲ್ಲಿ ಟಿಎಂಸಿ ಯಾವುದೇ ಸ್ಥಾನಗಳನ್ನು ಪಡೆಯುವುದಿಲ್ಲ. ಇನ್ನೂ ಎನ್‌ಪಿಪಿ 22 ಸ್ಥಾನಗಳನ್ನು ಪಡೆದುಕೊಳ್ಳಲಿದೆ. 5 ಬಿಜೆಪಿ, ಇತರೆ ಪಕ್ಷಗಳು 30 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 3 ಸ್ಥಾನಗಳನ್ನು ಪಡೆಯಲಿದೆ. ಮೇಘಾಲಯದಲ್ಲಿ ಒಟ್ಟು 60 ಕ್ಷೇತ್ರಗಳಿದ್ದು ಮ್ಯಾಜಿಕ್ ನಂಬರ್ 31 ಆಗಿದೆ.

8:42 PM, 27 Feb

ನಾಗಾಲ್ಯಾಂಡ್ ಎಕ್ಸಿಟ್ ಪೋಲ್ಸ್ 2023

ನಾಗಾಲ್ಯಾಂಡ್ ಎಕ್ಸಿಟ್ ಪೋಲ್ಸ್ 2023

ಎಕ್ಸಿಟ್ ಪೋಲ್ಸ್ 2023: ಮಾತ್ರಿಝ್ (Matrize) ಪ್ರಕಾರ, ಬಿಜೆಪಿ 35 ರಿಂದ 43ರವರೆಗೆ ಸ್ಥಾನ ಪಡೆಯಲಿದೆ. ಎನ್‌ಪಿಎಫ್‌ 2-5 ಸ್ಥಾನ, ಐಎನ್‌ಸಿ 1-3 ಸ್ಥಾನ, ಇತರ ಪಕ್ಷಗಳು 6-12 ಸ್ಥಾನಗಳು ಪಡೆಯಲಿದೆ.

8:37 PM, 27 Feb

ನಾಗಾಲ್ಯಾಂಡ್ ಎಕ್ಸಿಟ್ ಪೋಲ್ಸ್ 2023

ಟೈಮ್ಸ್‌ ನೌ-ಇಟಿಜಿ ರಿಸರ್ಚ್‌ ಪ್ರಕಾರ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ 39 ರಿಂದ 49 ಸ್ಥಾನಗಳನ್ನು ಪಡೆಯಲಿದೆ. ಎನ್‌ಪಿಎಫ್ 4 ರಿಂದ 8ರವರೆಗೆ ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಯಾವುದೇ ಸ್ಥಾನಗಳನ್ನು ಪಡೆಯುವುದಿಲ್ಲ.

8:36 PM, 27 Feb

ತ್ರಿಪುರ ಎಕ್ಸಿಟ್ ಪೋಲ್ಸ್ 2023:

ತ್ರಿಪುರ ಎಕ್ಸಿಟ್ ಪೋಲ್ಸ್ 2023:

ಎಕ್ಸಿಟ್ ಪೋಲ್ಸ್ 2023: ಝೀ ನ್ಯೂಸ್-ಮಾತ್ರಿಝ್ (Matrize) ಪ್ರಕಾರ, ತ್ರಿಪುರದಲ್ಲಿ ಸಿಪಿಐಎಂ 13ರಿಂದ 21ರವರೆಗೆ ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ 29-36 ಸ್ಥಾನಗಳನ್ನು ಪಡೆಯಲಿದೆ. ಇತರೆ ಪಕ್ಷಗಳು ಯಾವುದೇ ಸ್ಥಾನಗಳಲ್ಲಿ ಜಯ ಸಾಧಿಸುವುದಿಲ್ಲ.

8:29 PM, 27 Feb

ನಾಗಾಲ್ಯಾಂಡ್ ಎಕ್ಸಿಟ್ ಪೋಲ್ಸ್ 2023

ನಾಗಾಲ್ಯಾಂಡ್ ಎಕ್ಸಿಟ್ ಪೋಲ್ಸ್ 2023

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಪ್ರಕಾರ, ನಾಗಾಲ್ಯಾಂಡ್ ನಲ್ಲಿ ಬಿಜೆಪಿ 10 ರಿಂದ 14ರವರೆಗೆ ಸ್ಥಾನಗಳನ್ನು ಪಡೆಯಲಿದೆ. ಎನ್‌ಪಿಎಫ್ 3-8 ಸ್ಥಾನ ಹಾಗೂ ಕಾಂಗ್ರೆಸ್ 1-2 ಸ್ಥಾನಗಳನ್ನು ಪಡೆಯಲಿದೆ. ಇನ್ನೂ ಎನ್‌ಪಿಪಿ 28-34 ಸ್ಥಾನಗಳನ್ನು ಪಡೆದರೆ, 5-15 ಸ್ಥಾನಗಳನ್ನು ಇತರೆ ಪಕ್ಷಗಳು ಪಡೆಯಲಿದೆ.

8:25 PM, 27 Feb

ಎಕ್ಸಿಟ್ ಪೋಲ್ಸ್ 2023: ತ್ರಿಪುರಾದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ

ಎಕ್ಸಿಟ್ ಪೋಲ್ಸ್ 2023: ತ್ರಿಪುರಾದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ

ಎಕ್ಸಿಟ್ ಪೋಲ್ಸ್ 2023: ಆಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿರುವ ಪ್ರಕಾರ ತ್ರಿಪುರಾದಲ್ಲಿ ಬಿಜೆಪಿ 36 ರಿಂದ 45 ಸ್ಥಾನಗಳನ್ನು ಪಡೆಯಲಿದೆ. ಸಿಪಿಐಎಂ 6-11 ಸ್ಥಾನಗಳನ್ನು ಪಡೆಯಲಿದ್ದರೆ ಟಿಎಂಪಿ 9-16 ಮತ್ತು ಇತರೆ ಪಕ್ಷಗಳು ಯಾವುದೇ ಸ್ಥಾನಗಳನ್ನು ಗೆಲ್ಲುವುದಿಲ್ಲ.

8:22 PM, 27 Feb

ತ್ರಿಪುರ ಎಕ್ಸಿಟ್ ಪೋಲ್ಸ್ 2023

ಟೈಮ್ಸ್‌ ನೌ-ಇಟಿಜಿ ರಿಸರ್ಚ್‌ ಪ್ರಕಾರ, ತ್ರಿಪುರದಲ್ಲಿ ಸಿಪಿಐಎನ್‌ 18 ರಿಂದ 24ರವರೆಗೆ ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ 21ರಿಂದ 27ರವರೆಗೆ ಸ್ಥಾನಗಳನ್ನು ಗೆಲ್ಲಲಿದೆ.

8:16 PM, 27 Feb

ತ್ರಿಪುರ ಎಕ್ಸಿಟ್ ಪೋಲ್ಸ್ 2023

ಎಕ್ಸಿಟ್ ಪೋಲ್ಸ್ 2023: ಝೀ ನ್ಯೂಸ್-ಮಾತ್ರಿಝ್ (Matrize) ಪ್ರಕಾರ, ತ್ರಿಪುರದಲ್ಲಿ ಸಿಪಿಐಎಂ 13ರಿಂದ 21ರವರೆಗೆ ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ 29-36 ಸ್ಥಾನಗಳನ್ನು ಪಡೆಯಲಿದೆ. ಇತರೆ ಪಕ್ಷಗಳು ಯಾವುದೇ ಸ್ಥಾನಗಳಲ್ಲಿ ಜಯ ಸಾಧಿಸುವುದಿಲ್ಲ.

8:12 PM, 27 Feb

ನಾಗಾಲ್ಯಾಂಡ್ ಎಕ್ಸಿಟ್ ಪೋಲ್ಸ್ 2023

ನಾಗಾಲ್ಯಾಂಡ್ ಎಕ್ಸಿಟ್ ಪೋಲ್ಸ್ 2023

ಎಕ್ಸಿಟ್ ಪೋಲ್ಸ್ 2023: ಮಾತ್ರಿಝ್ (Matrize) ಪ್ರಕಾರ, ಬಿಜೆಪಿ 35 ರಿಂದ 43ರವರೆಗೆ ಸ್ಥಾನ ಪಡೆಯಲಿದೆ. ಎನ್‌ಪಿಎಫ್‌ 2-5 ಸ್ಥಾನ, ಐಎನ್‌ಸಿ 1-3 ಸ್ಥಾನ, ಇತರ ಪಕ್ಷಗಳು 6-12 ಸ್ಥಾನಗಳು ಪಡೆಯಲಿದೆ.

8:01 PM, 27 Feb

ಮೇಘಾಲಯ ಎಕ್ಸಿಟ್ ಪೋಲ್ಸ್

ಎಕ್ಸಿಟ್ ಪೋಲ್ಸ್ 2023: ಮಾತ್ರಿಝ್ (Matrize) ಪ್ರಕಾರ, ಮೇಘಾಲಯದ ವಿಧಾನಸಭಾ ಚುನಾವಣಾ ಎಕ್ಸಿಟ್ ಪೋಲ್ಸ್ ನಲ್ಲಿ ಟಿಎಂಸಿ 8ರಿಂದ13 ಸ್ಥಾನಗಳನ್ನು ಪಡೆದರೆ, ಎನ್‌ಪಿಪಿ 21 ರಿಂದ 26 ಸ್ಥಾನಗಳನ್ನು ಪಡೆದಿದೆ. ಬಿಜೆಪಿ 6-11, ಐಎನ್‌ಡಿ 10-19 ಸ್ಥಾನ, ಐಎನ್‌ಸಿ 3-6 ಸ್ಥಾನ ಪಡೆಯಲಿವೆ.

7:55 PM, 27 Feb

Nagaland Exit Poll Results: ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯ- ಸಮೀಕ್ಷೆ ಹೇಳಿದ್ದೇನು?

Nagaland Exit Poll Results: ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯ- ಸಮೀಕ್ಷೆ ಹೇಳಿದ್ದೇನು?

27 ಫೆಬ್ರವರಿ 2023ರಂದು ನಾಗಾಲ್ಯಾಂಡ್ ವಿಧಾನಸಭೆಯ ಎಲ್ಲಾ 60 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಈ ಚುನಾವಣೆಯ ಫಲಿತಾಂಶಗಳು 2 ಮಾರ್ಚ್ 2023 ರಂದು ಹೊರಬರಲಿವೆ. ಚುನಾವಣೋತ್ತರ ಸಮೀಕ್ಷೆಗಳು ಹೇಳಿವುದೇನು? ಫಲಿತಾಂಶ ತಿಳಿಯಲು ಈ ವರದಿ ಓದಿ.

7:43 PM, 27 Feb

ತ್ರಿಪುರಾ ಚುನಾವಣಾ ಎಕ್ಸಿಟ್ ಪೋಲ್ ಫಲಿತಾಂಶ 2023: ಎಲ್ಲಿ? ಯಾವಾಗ ವೀಕ್ಷಿಸಬೇಕು?

ತ್ರಿಪುರಾ ಚುನಾವಣಾ ಎಕ್ಸಿಟ್ ಪೋಲ್ ಫಲಿತಾಂಶ 2023: ಎಲ್ಲಿ? ಯಾವಾಗ ವೀಕ್ಷಿಸಬೇಕು?

ಫೆಬ್ರವರಿ 16 ರಂದು ತ್ರಿಪುರಾದ ಎಲ್ಲಾ 60 ಅಸೆಂಬ್ಲಿ ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸಲಾಯಿತು. ಚುನಾವಣಾ ಆಯೋಗದ ಪ್ರಕಾರ, ರಾಜ್ಯ ಸುಮಾರು 88 ರಷ್ಟು ಮತದಾನವನ್ನು ದಾಖಲಿಸಿದ್ದರಿಂದ ಮತದಾನದ ಬಹುತೇಕ ಶಾಂತಿಯುತವಾಗಿ ನಡೆದಿದೆ.

7:28 PM, 27 Feb

ಎಕ್ಸಿಟ್ ಪೋಲ್ಸ್ 2023: ತ್ರಿಪುರಾದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ

ಎಕ್ಸಿಟ್ ಪೋಲ್ಸ್ 2023: ಆಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿರುವ ಪ್ರಕಾರ ತ್ರಿಪುರಾದಲ್ಲಿ ಬಿಜೆಪಿ 36 ರಿಂದ 45 ಸ್ಥಾನಗಳನ್ನು ಪಡೆಯಲಿದೆ. ಸಿಪಿಐಎಂ 6-11 ಸ್ಥಾನಗಳನ್ನು ಪಡೆಯಲಿದ್ದರೆ ಟಿಎಂಪಿ 9-16 ಮತ್ತು ಇತರೆ ಪಕ್ಷಗಳು ಯಾವುದೇ ಸ್ಥಾನಗಳನ್ನು ಗೆಲ್ಲುವುದಿಲ್ಲ.

6:44 PM, 27 Feb

ಇಂದು ಸಂಜೆ 7ಕ್ಕೆ ತ್ರಿಪುರ ವಿಧಾನಸಭೆ ಚುನಾವಣಾ ಎಕ್ಸಿಟ್ ಪೋಲ್ ಫಲಿತಾಂಶ

ತ್ರಿಪುರ ವಿಧಾನಸಭೆ ಚುನಾವಣೆಯ ನಿರ್ಗಮನ ಸಮೀಕ್ಷೆಗಳು ಇಂದು ಸಂಜೆ (ಫೆಬ್ರವರಿ 27, 2023) 7ಕ್ಕೆ ಪ್ರಕಟವಾಗಲಿದೆ. ತ್ರಿಪುರಾ ಮುಖ್ಯ ಚುನಾವಣಾಧಿಕಾರಿ ಕಿರಣ್ ಗಿಟ್ಟೆ ಅವರು, ಎಕ್ಸಿಟ್‌ ಪೋಲ್ ವರದಿಗಳನ್ನು ಫೆಬ್ರವರಿ 27ರಂದು ಸಂಜೆ 7ಗಂಟೆವರೆಗೆ ನಿಷೇಧಿಸಲಾಗಿದೆ ಎಂದು ಹೇಳಿದರು. ಹೀಗಾಗಿ ತ್ರಿಪುರಾಮ ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳು ನಡೆಸಿದ ಪ್ರಮುಖ ಎಕ್ಸಿಟ್ ಪೋಲ್‌ ಫಲಿತಾಂಶಗಳು ಇಂದು ಸಂಜೆ 7ಗಂಟೆಯ ನಂತರ ಪ್ರಕಟವಾಗಲಿದೆ.

5:36 PM, 27 Feb

ಮತದಾನ ಮುಕ್ತಾಯ

ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯದಲ್ಲಿನ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯ

4:01 PM, 27 Feb

ಅರ್ಧಕ್ಕಿಂತಲೂ ಅಧಿಕ ಮತದಾನ

ಮೇಘಾಲಯ ಹಾಗೂ ನಾಗಾಲ್ಯಾಂಡ್‌ಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಮಧ್ಯಾಹ್ನ 1 ಗಂಟೆಯವರೆಗೆ, ಮೇಘಾಲಯದಲ್ಲಿ ಶೇಕಡಾ 44.73ರಷ್ಟು ಹಾಗೂ ನಾಗಲ್ಯಾಂಡ್‌ನಲ್ಲಿ ಶೇಕಡಾ 57.06ರಷ್ಟು ಮತದಾನ ಆಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

1:44 PM, 27 Feb

ಮೇಘಾಲಯ ಸಿಎಂ ಮತದಾನ

ಮೇಘಾಲಯ ಸಿಎಂ ಮತದಾನ

ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅವರು ಗರೋ ಹಿಲ್ಸ್‌ನ ತುರಾದಲ್ಲಿನ ವಾಲ್ಬಕ್ಗ್ರೆ -29 ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಬರುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು. ಈ ರೀತಿಯ ಮತದಾನವನ್ನು ನಾನು ಹಿಂದೆ ನೋಡಿರಲಿಲ್ಲ. ಇದು ನಮ್ಮ ಪರವಾಗಿರುತ್ತದೆ ಎಂಬ ವಿಶ್ವಾಸವಿದೆ" ಎಂದು ಮತದಾನದ ಬಳಿಕ ಪ್ರತಿಕ್ರಿಯಿಸಿದರು.

12:49 PM, 27 Feb

ನಾಗರಿಕರ ಮತದಾನಕ್ಕೆ ಸಹಾಯ

ಮೇಘಾಲಯದಲ್ಲಿ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಸೇವಕರು, ಸ್ಕೌಟ್ಸ್ ಆಂಡ್ ಗೈಡ್ಸ್‌ವಿದ್ಯಾರ್ಥಿಗಳು ಹಿರಿಯ ನಾಗರಿಕರು ಮತಗಟ್ಟೆಗೆ ಬಂದು ಮತ ಹಾಕಲು ಸಹಾಯ ಮಾಡಿದರು. ಹಲವರನ್ನು ಕೈ ಹಿಡಿದು ಮತಗಟ್ಟೆಗೆ ಕರೆ ತಂದ ದೃಶ್ಯ ಸಹ ಕಂಡು ಬಂತು.

11:05 AM, 27 Feb

ಶಾಂತಿಯುತ ಮತದಾನ

ನಾಗಾಲ್ಯಾಂಡ್ ರಾಜ್ಯದ ಕೊಹಿಮಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎತ್ತರದ ಪಿಆರ್‌ ಬೆಟ್ಟದ ಮತಗಟ್ಟೆಯಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

10:06 AM, 27 Feb

ಸಂಜೆ 4ರವರೆಗೆ ಮತದಾನ

ಮೇಘಾಲಯ ವಿಧಾನಸಭೆಗೆ ಮತದಾನ ಪ್ರಾರಂಭವಾಗಿದ್ದು, ಮೊದಲು ಐದು ಮತದಾರರು ದೃಢವಾದ ಮತದಾನ ಮತ್ತು ಮತದಾನವನ್ನು ಉತ್ತೇಜಿಸುವ ಭಾಗವಾಗಿ ಸ್ಮರಣಿಕೆ ಸ್ವೀಕರಿಸಿದರು. ರಾಜ್ಯದ 59 ವಿಧಾನಸಭಾ ಕ್ಷೇತ್ರಗಳ 3,419 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮೇಘಾಲಯದ 60 ವಿಧಾನಸಭಾ ಕ್ಷೇತ್ರಗಳಲ್ಲಿ 36 ಕ್ಷೇತ್ರಗಳು ಖಾಸಿ, ಜೈನ್ತಿಯಾ ಹಿಲ್ಸ್ ಪ್ರದೇಶದಲ್ಲಿದ್ದರೆ 24 ಗರೋ ಹಿಲ್ಸ್ ಪ್ರದೇಶದಲ್ಲಿವೆ.

9:22 AM, 27 Feb

ಮತದಾನಕ್ಕೆ ಉತ್ತೇಜನ

ಮೇಘಾಲಯ ರಾಜ್ಯದಲ್ಲಿ ಈ ಸಲ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವುದು ಹಾಗೂ ಸ್ಥಳಿಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲಾಯಿತು. ಮತದಾನ ನಮ್ಮ ಹಕ್ಕು ಅದನ್ನು ಚಲಾಯಿಸಬೇಕು ಎಂಬುದನ್ನು ಸಾರಲಾಯಿತು. ಈ ಕುರಿತು ಫೋಟೋಗಳನ್ನು ಮೇಘಾಲಯದ ಮುಖ್ಯ ಚುನಾವಣಾಧಿಕಾರಿಗಳು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

9:15 AM, 27 Feb

ಕಾಂಗ್ರೆಸ್‌ಗೆ ಅವಕಾಶ ನೀಡಿ: ಖರ್ಗೆ ಮನವಿ

ನಾಗಾಲ್ಯಾಂಡ್ ಮತ್ತು ಮೇಘಾಲಯ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ನಮ್ಮ ಸಹೋದರಿ ಮತ್ತು ಸೋದರರಾದ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಆ ಮೂಲಕ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

9:13 AM, 27 Feb

ಮೇಘಾಲಯ ಮತ್ತು ನಾಗಾಲ್ಯಾಂಡ್ ಮತದಾರರಲ್ಲಿ ಅದರಲ್ಲೂ ಯುವ ವೋಟರ್ಸ್ ಗೆ ಮತದಾನ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ.

7:02 PM, 26 Feb

ಸೂಕ್ತ ಪೊಲೀಸ್ ಭದ್ರತೆ

ಮೇಘಾಲಯ ಮತ್ತು ನಾಗಾಲ್ಯಾಂಡ್‌ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸುವ್ಯವಸ್ಥಿತವಾಗಿ, ಅಡೆತಡೆ ಇಲ್ಲದೆ ನಡೆಸಲು ಪೊಲೀಸ್ ಇಲಾಖೆಯು ಸೂಕ್ತ ಭದ್ರತೆ ನೀಡುತ್ತಿದೆ. ಈ ಮೂಲಕ ಎರಡು ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲಾಗಿದೆ.

5:10 PM, 26 Feb

ಮೇಘಾಲಯ ರಾಜ್ಯದಲ್ಲಿ ಒಟ್ಟು 900 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಸೋಮವಾರ ಬೆಳಗ್ಗೆ ಆರಂಭವಾಗಲಿದೆ. ಇಲ್ಲಿ ಹಲವು ಗಂಭೀರ ಮತಗಟ್ಟೆಗಳು ಎಂದು ಚುನಾವಣೆ ಆಯೋಗ ಗುರುತಿಸಿದೆ.

5:09 PM, 26 Feb

ಮತದಾನಕ್ಕೆ ಕ್ಷಣಗಣನೆ

ಮೇಘಾಲಯ ಹಾಗೂ ನಾಗಾಲ್ಯಾಂಡ್‌ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆ 2023 ಮತದಾನಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಎರಡು ರಾಜ್ಯಗಳ ತಲಾ 60 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಚುನಾವಣೆ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಎಲ್ಲಡೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+