Nagaland Exit Poll Results: ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯ- ಸಮೀಕ್ಷೆ ಹೇಳಿದ್ದೇನು?
27 ಫೆಬ್ರವರಿ 2023ರಂದು ನಾಗಾಲ್ಯಾಂಡ್ ವಿಧಾನಸಭೆಯ ಎಲ್ಲಾ 60 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಈ ಚುನಾವಣೆಯ ಫಲಿತಾಂಶಗಳು 2 ಮಾರ್ಚ್ 2023 ರಂದು ಹೊರಬರಲಿವೆ. ಚುನಾವನೋತ್ತರ ಸಮೀಕ್ಷೆಗಳು ಹೇಳಿವುದೇನು? ಫಲಿತಾಂಶ ತಿಳಿಯಲು ಈ ವರದಿ ಓದಿ.
ನವದೆಹಲಿ, ಫೆಬ್ರವರಿ 27: 27 ಫೆಬ್ರವರಿ 2023ರಂದು ನಾಗಾಲ್ಯಾಂಡ್ ವಿಧಾನಸಭೆಯ ಎಲ್ಲಾ 60 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. ಈ ಚುನಾವಣೆಯ ಫಲಿತಾಂಶಗಳು 2 ಮಾರ್ಚ್ 2023 ರಂದು ಹೊರಬರಲಿವೆ. ಚುನಾವಣೋತ್ತರ ಸಮೀಕ್ಷೆಗಳು ಹೇಳಿವುದೇನು? ಫಲಿತಾಂಶ ತಿಳಿಯಲು ಈ ವರದಿ ಓದಿ.
ನಾಗಾಲ್ಯಾಂಡ್‌ನಲ್ಲಿ ಒಟ್ಟು 13,17,632 ಮತದಾರರಿದ್ದು, ಇದರಲ್ಲಿ 6,61,489 ಪುರುಷರು ಮತ್ತು 6,56,143 ಮಹಿಳೆಯರು. ರಾಜ್ಯದಲ್ಲಿ ಒಟ್ಟು 2,351 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಚುನಾವಣಾ ಆಯೋಗದ ಪ್ರಕಾರ, ಸುಗಮ ಮತ್ತು ನ್ಯಾಯಸಮ್ಮತವಾದ ಮತದಾನ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಭದ್ರತಾ ಪಡೆಗಳ 305 ಕಂಪನಿಗಳನ್ನು ರಾಜ್ಯಾದ್ಯಂತ ಮತಗಟ್ಟೆಗಳಲ್ಲಿ ನಿಯೋಜಿಸಲಾಗಿದೆ. ಮಾರ್ಚ್ 2 ರಂದು ತ್ರಿಪುರ ಮತ್ತು ಮೇಘಾಲಯ ಮತಗಳ ಎಣಿಕೆ ನಡೆಯಲಿದೆ.
ಬಿಜೆಪಿಯು 2018 ರ ಈ ವಿಧಾನಸಭೆ ಚುನಾವಣೆಯಲ್ಲಿ ತನ್ನ ಹಳೆಯ ಮೈತ್ರಿಕೂಟದ ಪಾಲುದಾರ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಯೊಂದಿಗೆ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ.
ರಾಜ್ಯದಲ್ಲಿ 20:40 ಸೀಟು ಹಂಚಿಕೆ ಅನುಪಾತಕ್ಕೆ ಒಪ್ಪಿಗೆ ಸೂಚಿಸಿರುವ ಬಿಜೆಪಿ ಕಿರಿಯ ಪಾಲುದಾರನ ಪಾತ್ರವನ್ನು ವಹಿಸುತ್ತಿದೆ. ಕಾಂಗ್ರೆಸ್ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಕ್ರಮವಾಗಿ 23 ಮತ್ತು 22 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಸಿಪಿಐ 1, ಎನ್‌ಸಿಪಿ 12, ಎನ್‌ಪಿಪಿ 12, ಆರ್‌ಪಿಪಿ 1, ಜೆಡಿಯು 7, ಎಲ್‌ಜೆಪಿ 15, ಆರ್‌ಪಿಐ 9, ಆರ್‌ಜೆಡಿ 3 ಮತ್ತು ಸ್ವತಂತ್ರ ಅಭ್ಯರ್ಥಿಗಳು 19 ಸ್ಥಾನಗಳಲ್ಲಿ ಸ್ಪರ್ಧಿಸಿದ್ದಾರೆ.

2018 ರಲ್ಲಿ ಬಿಜೆಪಿಯು NDPP ಯೊಂದಿಗೆ ಮೈತ್ರಿ ಮಾಡಿಕೊಂಡಿತು. ಜನತಾ ದಳ (ಯುನೈಟೆಡ್) ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಯಶಸ್ವಿಯಾಗಿ ಮೈತ್ರಿ ಸರ್ಕಾರವನ್ನು ರಚಿಸಿತು. ಬಿಜೆಪಿ 12 ಸ್ಥಾನಗಳನ್ನು ಗೆದ್ದಿತ್ತು. ಎನ್‌ಡಿಪಿಪಿ 17 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಜೆಡಿಯು 1 ಸ್ಥಾನದಲ್ಲಿ ಜಯಗಳಿಸಿತ್ತು.
ಚುನಾವನೋತ್ತರ ಸಮೀಕ್ಷೆಗಳು
ನಾಗಾಲ್ಯಾಂಡ್‌ನಲ್ಲಿ ಬಿಜೆಪಿ-ಎನ್‌ಡಿಪಿಪಿ 35-43 ಸ್ಥಾನಗಳಲ್ಲಿ ಭಾರಿ ಗೆಲುವು ಸಾಧಿಸಲಿದೆ ಎಂದು ಝೀ ನ್ಯೂಸ್-ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಕಾಂಗ್ರೆಸ್ ಒಂದರಿಂದ ಮೂರು ಮತ್ತು ಎನ್‌ಪಿಎಫ್ ಎರಡರಿಂದ ಐದು ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಹೇಳಿದೆ.
ಟೈಮ್ಸ್‌ನೌ-ಇಟಿಜಿ ಪ್ರಕಾರ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ+ಎನ್‌ಡಿಪಿಪಿ ಮೈತ್ರಿ 39-39 ಸ್ಥಾನಗಳನ್ನು ಗಳಿಸಲಿದೆ. ಕಾಂಗ್ರೆಸ್ 1-3 ಸ್ಥಾನಗಳು, ಎನ್‌ಪಿಎಫ್ 2-5, ಎನ್‌ಪಿಪಿ 0-1, ಇತರೆ 6-11 ಸ್ಥಾನಗಳಲ್ಲಿ ಗೆಲ್ಲಲಿದೆ.
ನಾಗಾಲ್ಯಾಂಡ್‌ನಲ್ಲಿ ಬಿಜೆಪಿ+ಎನ್‌ಡಿಪಿಪಿ 38-48 ಸ್ಥಾನಗಳನ್ನು ಗೆಲ್ಲಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ.
ಇಂಡಿಯಾ ಟುಡೇ ಪ್ರಕಾರ, ಎನ್‌ಡಿಪಿಪಿಗೆ 49, ಕಾಂಗ್ರೆಸ್ 10, ಎನ್‌ಪಿಎಫ್ 13 ಹಾಗೂ ಪಕ್ಷೇತರರು 28 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ.












Click it and Unblock the Notifications