ತ್ರಿಪುರಾ ಚುನಾವಣಾ ಎಕ್ಸಿಟ್ ಪೋಲ್ ಫಲಿತಾಂಶ 2023: ಎಲ್ಲಿ? ಯಾವಾಗ ವೀಕ್ಷಿಸಬೇಕು?
ತ್ರಿಪುರ ವಿಧಾನಸಭೆ ಚುನಾವಣಾ ಎಕ್ಸಿಟ್ ಫೋಲ್ ಫಲಿತಾಂಶಗಳು ಇಂದು ಸಂಜೆ (ಫೆಬ್ರವರಿ 27, 2023) 7ಕ್ಕೆ ಪ್ರಕಟವಾಗಲಿದೆ. ಅದನ್ನು ಎಲ್ಲಿ ವೀಕ್ಷಿಸಬೇಕು?
ಫೆಬ್ರವರಿ 16 ರಂದು ತ್ರಿಪುರಾದ ಎಲ್ಲಾ 60 ಅಸೆಂಬ್ಲಿ ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸಲಾಯಿತು. ಚುನಾವಣಾ ಆಯೋಗದ ಪ್ರಕಾರ, ರಾಜ್ಯ ಸುಮಾರು 88 ರಷ್ಟು ಮತದಾನವನ್ನು ದಾಖಲಿಸಿದ್ದರಿಂದ ಮತದಾನದ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು 28.14 ಲಕ್ಷ ಮತದಾರರಲ್ಲಿ 24.66 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ 18 ಹಿಂಸಾಚಾರದ ಘಟನೆಗಳಲ್ಲಿ ಕನಿಷ್ಠ 21 ಜನರನ್ನು ಬಂಧಿಸಲಾಗಿದೆ.
ಮಾರ್ಚ್ 2 ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ. ತ್ರಿಪುರ ವಿಧಾನಸಭೆ ಚುನಾವಣೆಯ ನಿರ್ಗಮನ ಸಮೀಕ್ಷೆಗಳು ಇಂದು ಸಂಜೆ (ಫೆಬ್ರವರಿ 27, 2023) 7ಕ್ಕೆ ಪ್ರಕಟವಾಗಲಿದೆ. ತ್ರಿಪುರಾ ಮುಖ್ಯ ಚುನಾವಣಾಧಿಕಾರಿ ಕಿರಣ್ ಗಿಟ್ಟೆ ಅವರು, ಎಕ್ಸಿಟ್ ಪೋಲ್ ವರದಿಗಳನ್ನು ಫೆಬ್ರವರಿ 27ರಂದು ಸಂಜೆ 7ಗಂಟೆವರೆಗೆ ನಿಷೇಧಿಸಲಾಗಿದೆ ಎಂದು ಹೇಳಿದರು. ಹೀಗಾಗಿ ತ್ರಿಪುರಾಮ ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆ 2023ಕ್ಕೆ ಸಂಬಂಧಿಸಿದ ವವಿಧ ಸಂಸ್ಥೆಗಳು ನಡೆಸಿದ ಪ್ರಮುಖ ಎಕ್ಸಿಟ್ ಪೋಲ್ ಫಲಿತಾಂಶಗಳು ಇಂದು ಸಂಜೆ 7ಗಂಟೆಯ ನಂತರ ಪ್ರಕಟವಾಗಲಿದೆ.

ತ್ರಿಪುರಾ ಚುನಾವಣಾ ಎಕ್ಸಿಟ್ ಪೋಲ್ ಫಲಿತಾಂಶ 2023: ಲೈವ್ ಸ್ಟ್ರೀಮಿಂಗ್
ತ್ರಿಪುರಾ ಅಸೆಂಬ್ಲಿ ಚುನಾವಣಾ ಎಕ್ಸಿಟ್ ಪೋಲ್ ಫಲಿತಾಂಶಗಳು 2023 ರ ಲೈವ್ ಸ್ಟ್ರೀಮಿಂಗ್ YouTube ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ವಿವಿಧ ಸುದ್ದಿ ಚಾನಲ್‌ಗಳಲ್ಲಿ ವೀಕ್ಷಿಸಲು ಲಭ್ಯವಿರುತ್ತದೆ. P-MARQ, ETG, BARG, MATRIZE, Jan Ki Baat, Axis My India, Today's Chanakya, TV9, C-Voter ತಮ್ಮ ಎಕ್ಷಿಟ್ ಪೋಲ್ ಫಲಿತಾಂಶಗಳನ್ನು ಸಂಜೆ 7 ಗಂಟೆಯ ನಂತರ ಪ್ರಕಟಿಸುವ ನಿರೀಕ್ಷೆಯಿಂದೆ.
ತ್ರಿಪುರಾ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ
ತ್ರಿಪುರಾದ 60 ಕ್ಷೇತ್ರಗಳಲ್ಲಿ 55 ಕ್ಷೇತ್ರಗಳಿಗೆ ಬಿಜೆಪಿ ಸ್ಪರ್ಧಿಸಿದ್ದರೆ, ಅದರ ಮಿತ್ರಪಕ್ಷ - ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT) ಆರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದೆ.

20 ವರ್ಷಗಳ ಸುದೀರ್ಘ ಅವಧಿಯ ನಂತರ 2018 ರಲ್ಲಿ ಬಿಜೆಪಿ-ಐಪಿಎಫ್‌ಟಿ ಸಂಯೋಜನೆಗೆ ಸೋತ ಎಡರಂಗವು 47 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ 13 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಪ್ರಾದೇಶಿಕ ತಿಪ್ರಾ ಮೋಥಾ ಯಾವುದೇ ಮೈತ್ರಿಕೂಟವಿಲ್ಲದೆ 42 ಸ್ಥಾನಗಳಿಂದ ಚುನಾವಣಾ ಕಣದಲ್ಲಿದೆ. ಒಟ್ಟು 58 ಸ್ವತಂತ್ರರೂ ಕಣದಲ್ಲಿದ್ದಾರೆ.
ಬರ್ದೋವಾಲಿ ಟೌನ್ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆದ್ದಿರುವ ಮುಖ್ಯಮಂತ್ರಿ ಮಾಣಿಕ್ ಸಹಾ ಅದೇ ಸ್ಥಾನದಿಂದ ಮರಳಲು ಪ್ರಯತ್ನಿಸುತ್ತಿದ್ದರೆ, ಎಡ-ಕಾಂಗ್ರೆಸ್ ಒಕ್ಕೂಟದ ಮುಖವಾಗಿರುವ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಅವರು ಸಬ್ರೂಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.












Click it and Unblock the Notifications