ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ರೈಲು, ಇದು ಇತಿಹಾಸದಲ್ಲೇ ಮೊದಲು, ಎಲ್ಲಿ?, ಇಲ್ಲಿದೆ ಮಾಹಿತಿ

ಮಥುರಾ, ಸೆಪ್ಟೆಂಬರ್‌, 28: ರೈಲೊಂದು ತಡರಾತ್ರಿ ಟ್ರ್ಯಾಕ್‌ ಬಿಟ್ಟು ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಘಟನೆ ಉತ್ತರ ಪ್ರದೇಶದ ಮಥುರಾ ರೈಲು ನಿಲ್ದಾಣದಲ್ಲಿ ನಡೆದಿದೆ.

ಎಲೆಕ್ಟ್ರಿಕ್‌ ಮಲ್ಟಿಪಲ್‌ ಯೂನಿಟ್‌ ರೈಲೊಂದು ಏಕಾಏಕಿ ಪ್ಲಾಟ್‌ಫಾರ್ಮ್‌ಗೆ ನುಗ್ಗಿದ ಘಟನೆ ಮಥುರಾ ಜಂಕ್ಷನ್‌ನಲ್ಲಿ ತಡರಾತ್ರಿ ನಡೆದಿದೆ.ರೈಲು ಶಕುರ್ ಬಸ್ತಿಯಿಂದ ಮಂಗಳವಾರ ರಾತ್ರಿ 10:49ಕ್ಕೆ ಮಥುರಾ ನಿಲ್ದಾಣಕ್ಕೆ ಬಂದಿದ್ದು, ಎಲ್ಲಾ ಪ್ರಯಾಣಿಕರು ರೈಲಿನಿಂದ ಇಳಿದ ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ರೈಲು ಪ್ಲಾಟ್‌ಫಾರ್ಮ್‌ಗೆ ನುಗ್ಗಿದೆ. ಈ ವೇಳೆ ತಕ್ಷಣ ಪ್ರಯಾಣಿಕರು ರೈಲಿನಿಂದ ಇಳಿದಿದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Train climbs onto platform at Mathura Railway station, video viral

ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಥುರಾ ರೈಲು ನಿಲ್ದಾಣದ ನಿರ್ದೇಶಕ ಎಸ್‌.ಕೆ ಶ್ರೀವಾಸ್ತವ, "ಮಹಿಳೆಯೊಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಇದನ್ನು ಬಿಟ್ಟರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಇತರೆ ರೈಲುಗಳ ಸಂಚಾರಕ್ಕೆ ಅಡಚಣೆ ಆಗಿದೆ" ಎಂದು ತಿಳಿಸಿದ್ದಾರೆ ಅಂತಾ ಪಿಟಿಐ ವರದಿ ಮಾಡಿದೆ. ಮತ್ತೊಂದೆಡೆ ರೈಲು ಅಪಘಾತದ ವಿಡಿಯೋ ಎನ್‌ಎನ್‌ಐ ಟ್ವೀಟ್‌ನಲ್ಲಿ ಹಂಚಿಕೆಯಾಗಿದೆ.

ಮಹಿಳೆಗೆ ಸಣ್ಣಪುಟ್ಟ ಗಾಯ

ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಸ್ಥಳೀಯ ರೈಲು ಪ್ಲಾಟ್‌ಫಾರ್ಮ್‌ಗೆ ಹತ್ತಿದ ಪರಿಣಾಮ ಝಾನ್ಸಿ ಮೂಲದ ಉಷಾದೇವಿ (39) ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಆಕೆಯನ್ನು ಝಾನ್ಸಿಗೆ ಕಳುಹಿಸಲಾಯಿತು ಎಂದು ಹೇಳಿದರು. ಅಲ್ಲದೆ ಈ ಕುರಿತು ಉನ್ನತ ಮಟ್ಟದ ತನಿಖೆಗೆ ರೈಲ್ವೇ ಇಲಾಖೆ ಆದೇಶಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆಗ್ರಾ ವಿಭಾಗದ ಅಧಿಕಾರಿಯ ಪ್ರಕಾರ, ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲು ಮಂಗಳವಾರ ರಾತ್ರಿ 10.50ಕ್ಕೆ ಶಕುರ್ ಬಸ್ತಿಯಿಂದ ಪ್ಲಾಟ್‌ಫಾರ್ಮ್ 2ಎಗೆ ಆಗಮಿಸಿತು. ಸಿಬ್ಬಂದಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಡಿಬೋರ್ಡ್ ಮಾಡಿದ ನಂತರ, ರೈಲು ಹಳಿ ತಪ್ಪಿದೆ. ನಂತರ ನಿಲ್ದಾಣಕ್ಕೆ ಬರುವ ಮೊದಲು ರೈಲು ಪ್ಲಾಟ್‌ಫಾರ್ಮ್‌ಗೆ ನುಗ್ಗಿತು ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಇನ್ನು 2ಎ ಹೊರತುಪಡಿಸಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲುಗಳ ಸಂಚಾರ ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+