• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.31ರಂದು ಸೂಪರ್ ಬ್ಲಡ್ ಬ್ಲ್ಯೂ ಮೂನ್ ನೋಡುವುದು ಹೇಗೆ?

By Sachhidananda Acharya
|
Google Oneindia Kannada News

ಬೆಂಗಳೂರು, ಜನವರಿ 27: ಇದೇ ಜನವರಿ 31ರಂದು ಬಾಹ್ಯಾಕಾಶದಲ್ಲಿ ಚಮಾತ್ಕಾರವೊಂದು ಸಂಭವಿಸಲಿದೆ. ಭೂಮಿಗೆ ಅತೀ ಸಮೀಪದಲ್ಲಿ, ಅತ್ಯಂತ ದೊಡ್ಡ ಗಾತ್ರದಲ್ಲಿ ಚಂದ್ರನನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಅಂದೇ ಪೂರ್ಣ ಚಂದ್ರಗ್ರಹಣವೂ ಸಂಭವಿಸಲಿದೆ.

ಭೂಮಿಯ ಉಪಗ್ರಹ ಚಂದ್ರ ಸಾಮಾನ್ಯವಾಗಿ ನಮ್ಮಿಂದ ಅಂದಾಜು 3.84 ಲಕ್ಷ ಕಿ.ಮೀ. ದೂರದಲ್ಲಿರುತ್ತಾರೆ. ಅಂಡಾಕೃತ ಕಕ್ಷೆಯಲ್ಲಿ ಸುತ್ತುವುದರಿಂದ ಒಮ್ಮೆಮ್ಮೆ ಚಂದ್ರ ಭೂಮಿಗೆ ತೀರಾ ಸಮೀಪ ಅಂದರೆ 3.5 ಲಕ್ಷ ಕಿ.ಮೀ. ದೂರದಲ್ಲಿ ಕಾಣಿಸಲಿದ್ದಾನೆ. ಹೀಗೆ ಭೂಮಿಗೆ ತೀರಾ ಸಮೀಪ ಚಂದ್ರ ಕಾಣಿಸುವುದನ್ನು 'ಸೂಪರ್ ಮೂನ್' ಎನ್ನುತ್ತಾರೆ.

ಜನವರಿ 31ರಂದು ಖಂಡಗ್ರಾಸ ಚಂದ್ರಗ್ರಹಣ, ಯಾವ ರಾಶಿಗೆ ಏನು ಫಲ?ಜನವರಿ 31ರಂದು ಖಂಡಗ್ರಾಸ ಚಂದ್ರಗ್ರಹಣ, ಯಾವ ರಾಶಿಗೆ ಏನು ಫಲ?

ಇದೇ ಜನವರಿ 31ರಂದು ಚಂದ್ರ ಹೀಗೆ ಭೂಮಿಗೆ ಸಮೀಪದಲ್ಲಿ ಕಾಣಸಿಗಲಿದ್ದು ಅಂದು ಪೂರ್ಣ ಚಂದ್ರ ಗ್ರಹಣವೂ ಸಂಭವಿಸಲಿದೆ. ಸಾಮಾನ್ಯಾಗಿ ಚಂದ್ರಗ್ರಹಣದ ಸಂದರ್ಭ ಸೂರ್ಯನ ಬೆಳಕಿಗೆ ಭೂಮಿ ಅಡ್ಡಬರುವುದರಿಂದ ಚಂದ್ರನ ಮೇಲ್ಮೈ ಕಪ್ಪಾಗಿ ಕಾಣುತ್ತದೆ. ಆದರೆ, ಈ ಬಾರಿ ಅದು ರಕ್ತವರ್ಣದಲ್ಲಿ ಕಾಣಿಸಲಿದೆ. ಹೀಗಾಗಿ ಈ ಬಾರಿಯ ಚಂದ್ರನನ್ನು 'ಸೂಪರ್ ಬ್ಲೂ ಬ್ಲಡ್ ಮೂನ್' ಎಂದು ಕರೆಯುತ್ತಿದ್ದಾರೆ.

ಸೂಪರ್ ಬ್ಲ್ಯೂ ಬ್ಲಡ್ ಮೂನ್

ಸೂಪರ್ ಬ್ಲ್ಯೂ ಬ್ಲಡ್ ಮೂನ್

ಸಾಮಾನ್ಯವಾಗಿ ಒಂದುತಿಂಗಳಲ್ಲಿ ಒಂದು ಹುಣ್ಣಿಮೆ, ಒಂದು ಅಮಾವಾಸ್ಯೆ ಬರುತ್ತವೆ. ಅಪರೂಪಕ್ಕೆ ಎರಡು ಹುಣ್ಣಿಮೆಗಳು ಬರುವುದಿದೆ. ಇದನ್ನು ಬ್ಲ್ಯೂಮೂನ್ ಎಂದು ಕರೆಯುತ್ತಾರೆ. ಈ ಜನವರಿಯಲ್ಲಿ ಈ ರೀತಿ ಎರಡು ಹುಣ್ಣಿಮೆಗಳು ಬರುತ್ತಿವೆ.
ಜತೆಗೆ ಈ ಬಾರಿ ಚಂದ್ರ ಭೂಮಿಗೆ ಅತೀ ಸಮೀಪದಲ್ಲಿ ಸೂಪರ್ ಮೂನ್ ಆಗ ಗೋಚರಿಸುವದರ ಜತೆಗೆ ರಕ್ತವರ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಹೀಗಾಗಿ ಈ ಬಾರಿಯದರು 'ಸೂಪರ್ ಬ್ಲ್ಯೂ ಬ್ಲಡ್ ಮೂನ್'!

150 ವರ್ಷ ಹಿಂದೆ ನಡೆದಿತ್ತು ಚಮಾತ್ಕಾರ

150 ವರ್ಷ ಹಿಂದೆ ನಡೆದಿತ್ತು ಚಮಾತ್ಕಾರ

ಈ ರೀತಿಯ ಚಮಾತ್ಕಾರಗಳು ಖಗೋಳದಲ್ಲಿ ಜರುಗುವುದು ತೀರಾ ವಿರಳ. 1866ರ ಮಾ.31ರಂದು ಅಂದರೆ ಅಂದಾಜು 150 ವರ್ಷಗಳ ಹಿಂದೆ ಇಂತಹ ಖಗೋಳ ಚಮತ್ಕಾರ ಸಂಭವಿಸಿತ್ತು.

ಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿಸೂಪರ್ ಕೆಂಪು ಚಂದ್ರನ ಕುರಿತು ಇಂಟರೆಸ್ಟಿಂಗ್ ಸಂಗತಿ

ಗ್ರಹಣ ಗೋಚರ ಎಲ್ಲೆಲ್ಲಿ?

ಗ್ರಹಣ ಗೋಚರ ಎಲ್ಲೆಲ್ಲಿ?

ಅಮೆರಿಕಾದ ಅಲಸ್ಕಾ, ಹವಾಯಿ ಮತ್ತು ಆಗ್ನೇಯ ಕೆನಡಾದಲ್ಲಿ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಇಲ್ಲಿ ಆರಂಭದಿಂದ ಅಂತ್ಯದವರೆಗೂ ಗ್ರಹಣವನ್ನು ವೀಕ್ಷಿಸಬಹುದು.

ಭಾರತೀಯ ಉಪಖಂಡ, ಮಧ್ಯಪ್ರಾಚ್ಯ ಮತ್ತು ಪೂರ್ವ ಯುರೋಪ್ ನಲ್ಲಿ ಗ್ರಹಣದೊಂದಿಗೆ ಚಂದ್ರೋದಯ ಆರಂಭವಾಗಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಟ್ ನಲ್ಲಿ ಸಂಜೆ ಸೂರ್ಯಾಸ್ತ ಮತ್ತು ಚಂದ್ರೋದಯ ಸಮಯದಲ್ಲಿ ಗ್ರಹಣವಾಗಲಿದ್ದು ಆಗಸದಲ್ಲಿ ಅದ್ಭುತ ಚಿತ್ತಾರ ಮೂಡಲಿದೆ. ಇನ್ನುಳಿದ ದೇಶಗಳಲ್ಲೂ ಗ್ರಹಣ ಗೋಚರಿಸಲಿದೆ.

ಯಾಕಿದು ರಕ್ತವರ್ಣ?

ಯಾಕಿದು ರಕ್ತವರ್ಣ?

ವಾತಾವರಣದಲ್ಲಿರುವ ಧೂಳಿನ ಕಣಗಳಿಂದಾಗಿ ಗ್ರಹಣದ ವೇಳೆ ಚಂದ್ರನ ಬಣ್ಣ ರಕ್ತವರ್ಣಕ್ಕೆ ತಿರುಗುತ್ತದೆ. ಗ್ರಹಣದ ಸಂದರ್ಭ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು, ಚಂದ್ರ ಕಾಂತಿ ಕಳೆದುಕೊಳ್ಳುತ್ತಾನೆ. ಈ ಸಂದರ್ಭ ವಾತಾವರಣವು ಶೋಧಕ (ಫಿಲ್ಟರ್) ದಂತೆ ವರ್ತಿಸುತ್ತದೆ.

ಸೂರ್ಯನ ಬೆಳಕಿಗೆ ವಾತಾವರಣದಲ್ಲಿರುವ ಧೂಳಿನ ಕಣಗಳು ಅಡ್ಡಬಂದು ಸ್ಪೆಕ್ಟ್ರಂ (ರೋಹಿತ) ನಂತೆ ವರ್ತಿಸಿ, ಬೆಳಕನ್ನು ವಿಭಜಿಸಿ ಕೇವಲ ರಕ್ತವರ್ಣವನ್ನು ಮಾತ್ರ ಚಂದ್ರನ ಮೇಲೆ ಬೀಳುವಂತೆ ಮಾಡುತ್ತವೆ. ಹೀಗಾಗಿ ಚಂದ್ರ ರಕ್ತವರ್ಣದಲ್ಲಿ ಗೋಚರಿಸುತ್ತಾನೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಗ್ರಹಣ ವೀಕ್ಷಣೆಗೆ ವ್ಯವಸ್ಥೆ

ಗ್ರಹಣ ವೀಕ್ಷಣೆಗೆ ವ್ಯವಸ್ಥೆ

ಶತಮಾನದ ಈ ವಿರಳ ಖಗೋಳ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯದಲ್ಲಿ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗುತ್ತಿದೆ.
ರಾಜ್ಯದ ಬೇರೆ ಬೇರೆ ತಾರಾಲಯಗಳು, ಕಾಲೇಜು, ಶಾಲೆಗಳಲ್ಲಿಯೂ ಇದೇ ರೀತಿ ವ್ಯವಸ್ಥೆಗಳನ್ನು ಅಧ್ಯಾಪಕರು, ವಿಜ್ಞಾನಿಗಳು ಮಾಡುತ್ತಿದ್ದಾರೆ.

10 ವರ್ಷ ಪೂರ್ಣ ಚಂದ್ರ ಗ್ರಹಣವಿಲ್ಲ

10 ವರ್ಷ ಪೂರ್ಣ ಚಂದ್ರ ಗ್ರಹಣವಿಲ್ಲ

2018ರ ಮೊದಲ ಚಂದ್ರಗ್ರಹಣ ಭಾರತೀಯ ಕಾಲಮಾನ ಜನವರಿ 31ರಂದು ಸಂಜೆ 5.18ಕ್ಕೆ ಗ್ರಹಣ ಆರಂಭವಾಗಲಿದ್ದು ಸಂಪೂರ್ಣ ಚಂದ್ರಗ್ರಹಣ 6.21ಕ್ಕೆ ಸಂಭವಿಸಲಿದೆ. 7.37 ಕ್ಕೆ ಚಂದ್ರ ಗ್ರಹಣ ಮುಕ್ತಾಯವಾಗಲಿದೆ.

ಮುಂದಿನ 10 ವರ್ಷಗಳು ಕಾಲ ಇನ್ನು ಚಂದ್ರ ಗ್ರಹಣ ವೀಕ್ಷಣೆಗೆ ಸಿಗುವುದಿಲ್ಲ. 2028ರ ಡಿಸೆಂಬರ್ 31ರಂದು ಹಾಗೂ 2037ರ ಜನವರಿ 31ರಂದು ಇನ್ನೊಮ್ಮೆ ಇಂತಹ ಪೂರ್ಣ ಚಂದ್ರ ಗ್ರಹಣಗಳು ಸಂಭವಿಸಲಿವೆ.

English summary
The first lunar eclipse of 2018, a total eclipse, on January 31 will be visible from India. Where and When to See the Super Blood Blue Moon? A lunar eclipse occurs when the sun, earth and moon are so aligned that for a certain period of time, the full moon passes through the shadow of earth in space, called earth s umbra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X