ಭಾರತದಲ್ಲಿ ಹೊಸದಾಗಿ 20,036 ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಜನವರಿ 01: ಭಾರತದಲ್ಲಿ ಹೊಸದಾಗಿ 20,036 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಟ್ಟು 1,02,86,710ಕೊರೊನಾ ಸೋಂಕಿತರಿದ್ದಾರೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,036 ಹೊಸ ಸೋಂಕು ಪತ್ತೆಯಾಗಿದ್ದು, ದೇಶದಲ್ಲಿ ಸತತ 19 ದಿನಗಳಿಂದಲೂ ಕೋವಿಡ್-19 ದೈನಂದಿನ ಪ್ರಕರಣಗಳು 30 ಸಾವಿರಕ್ಕಿಂತಲೂ ಕಡಿಮೆ ವರದಿಯಾಗುತ್ತಿರುವುದು ಕಂಡು ಬಂದಿದೆ.
ಕಳೆದ 1 ತಿಂಗಳಿನಿಂದ ವರದಿಯಾದ ದೈನಂದಿನ ಪ್ರಕರಣಗಳಿಗಿಂತ ದೇಶದಲ್ಲಿ ಚೇತರಿಕೆಗೊಂಡ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 23,181 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಒಂದೇ ದಿನ ದೇಶದಲ್ಲಿ 256 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 1,48,994ಕ್ಕೆ ಏರಿಕೆಯಾಗಿದೆ.
ನಿತ್ಯದ ಹೊಸ ಪ್ರಕರಣಗಳಲ್ಲಿ ಕುಸಿತ ಮತ್ತು ಚೇತರಿಕೆ ಸಂಖ್ಯೆ ಗಣನೀಯ ಏರಿಕೆಯಿಂದಾಗ ಸಕ್ರಿಯ ಪ್ರಕರಣಗಳಲ್ಲಿ ಸ್ಥಿರವಾದ ಕುಸಿತ ಮತ್ತು ಮರಣ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ.
ದೇಶದಲ್ಲಿ ಚೇತರಿಸಿಕೊಂಡವರ ಒಟ್ಟು ಸಂಖ್ಯೆ ಶುಕ್ರವಾರ 98.83ಲಕ್ಷ (98,83,461) ಕ್ಕೆ ತಲುಪಿದೆ. ಗುಣಮುಖರಾದವರ ಸಂಖ್ಯೆ ಗಣನೀಯ ಏರಿಕೆಯಿಂದ ಶುಕ್ರವಾರ ಚೇತರಿಕೆ ಪ್ರಮಾಣ ಶೇ 95.78 ಕ್ಕೆ ತಲುಪಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,54,254ರಷ್ಟಿದೆ. ಇದು ಇದುವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಶೇ 2.77ರಷ್ಟಿದೆ.












Click it and Unblock the Notifications