ಭಾರತದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ
ನವದೆಹಲಿ, ಡಿಸೆಂಬರ್ 29: ಭಾರತದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.
ಇಂದು ಕೇವಲ 16,432 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 24,900 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು 1,02,24,303 ಪ್ರಕರಣಗಳಿವೆ, 2,68,581 ಸಕ್ರಿಯ ಪ್ರಕರಣಗಳಿವೆ, ಕಳೆದ 24 ಗಂಟೆಯಲ್ಲಿ 252 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ 98,07,569 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 1,48,153 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಇದುವರೆಗೆ 16,98,10,749 ಮಾದರಿಯ ಪರೀಕ್ಷೆ ಮಾಡಲಾಗಿದೆ. ಡಿಸೆಂಬರ್ 28 ರಂದು 9,83,695 ಮಾದರಿಗಳ ಪರೀಕ್ಷೆ ನಡೆದಿದೆ.












Click it and Unblock the Notifications