ಟೊಮೇಟೊ ಸಾರ್ವಕಾಲಿಕ ಅಧಿಕ ಬೆಲೆಗೆ ಮಾರಾಟ, ಕೆಂಪು ಸಂದರಿ ದರವೀಗಾ 259 ಓನ್ಲಿ!

ನವದೆಹಲಿ, ಆಗಸ್ಟ್‌ 2: ಟೊಮೇಟೊ ಬೆಲೆ ದಿನೇ ದಿನೇ ಏರುಗತಿಯಲ್ಲೇ ಇದೆ. ಮದರ್ ಡೈರಿಯ ಚಿಲ್ಲರೆ ಅಂಗಡಿಗಳ ಮೂಲಕ ಬುಧವಾರ ಪ್ರತಿ ಕೆಜಿಗೆ 259 ರೂ.ಗೆ ಮಾರಾಟವಾಗುವುದರೊಂದಿಗೆ ಟೊಮೇಟೊ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಮ್ಮೆ ಸುದ್ದಿ ಮಾಡಿದೆ.

ಟೊಮೇಟೊ ಪ್ರಮುಖ ಉತ್ಪಾದಕ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವ ಕಾರಣ ಕೆಂಪು ಸುಂದರಿ ಬೆಲೆಗಳು ಈಗ ಒಂದು ತಿಂಗಳಿಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ.

Tomato at all-time high, sold at Rs 259 at Mother Dairy

ಜುಲೈ 14 ರಿಂದ ಸಬ್ಸಿಡಿ ದರದಲ್ಲಿ ಟೊಮೇಟೊ ಮಾರಾಟದ ಮೂಲಕ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಚಿಲ್ಲರೆ ಬೆಲೆಗಳು ಇತ್ತೀಚೆಗೆ ಕುಸಿಯಲು ಪ್ರಾರಂಭಿಸಿದವು. ಆದರೆ ಪೂರೈಕೆ ಕೊರತೆಯಿಂದಾಗಿ ಮತ್ತೆ ಏರಿಕೆ ಕಂಡು ಬಂದಿತು. ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸಿದ ಅಂಕಿ ಅಂಶಗಳ ಪ್ರಕಾರ, ಟೊಮೇಟೊ ಚಿಲ್ಲರೆ ಬೆಲೆ ಬುಧವಾರ ಕೆಜಿಗೆ 203 ರೂ.ಗೆ ತಲುಪಿದೆ. ಆದರೆ ಮದರ್ ಡೈರಿಯ ಸಫಲ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ, ಪ್ರತಿ ಕೆಜಿಗೆ 259 ರೂಪಾಯಿಗೆ ಮಾರಾಟವಾಗಿದೆ.

ಹವಾಮಾನ ವೈಪರೀತ್ಯಗಳಿಂದಾಗಿ ಕಳೆದ ಎರಡು ತಿಂಗಳಿನಿಂದ ದೇಶಾದ್ಯಂತ ಟೊಮೇಟೊ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಕಳೆದ ಎರಡು ದಿನಗಳಲ್ಲಿ ದೆಹಲಿಯ ಪ್ರಮುಖ ಪೂರೈಕೆದಾರನಾಗಿರುವ ಆಜಾದ್‌ಪುರಕ್ಕೆ ಟೊಮೇಟೊ ಪೂರೈಕೆ ತೀವ್ರವಾಗಿ ಕುಸಿದಿದೆ. ಪೂರೈಕೆಯ ಕೊರತೆಯಿಂದಾಗಿ ಸಗಟು ಮಾರಾಟದಲ್ಲಿ ಬೆಲೆಗಳು ತೀವ್ರವಾಗಿ ಏರಿದೆ, ಇದರ ಪರಿಣಾಮವಾಗಿ ಚಿಲ್ಲರೆ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಮದರ್ ಡೈರಿ ವಕ್ತಾರರು ಹೇಳಿದ್ದಾರೆ.

ಏಷ್ಯಾದ ಅತಿದೊಡ್ಡ ಸಗಟು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಾದ ದೆಹಲಿಯ ಆಜಾದ್‌ಪುರ ಮಂಡಿಯಲ್ಲಿ ಟೊಮೇಟೊದ ಸಗಟು ಬೆಲೆ ಬುಧವಾರ ಗುಣಮಟ್ಟವನ್ನು ಅವಲಂಬಿಸಿ ಕೆಜಿಗೆ 170-220 ರೂ. ಆಗಿತ್ತು. ಈ ಬಗ್ಗೆ ಆಜಾದ್‌ಪುರ ಟೊಮೇಟೊ ಅಸೋಸಿಯೇಷನ್‌ ಅಧ್ಯಕ್ಷ ಅಶೋಕ್‌ ಕೌಶಿಕ್‌ ಮಾತನಾಡಿ, ಕಳೆದ ಮೂರು ದಿನಗಳಿಂದ ಅತಿವೃಷ್ಟಿಯಿಂದ ಟೊಮೇಟೊ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದ್ದು, ಟೊಮೇಟೊ ಆಗಮನ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಆರು ಸಣ್ಣ ಟ್ರಕ್‌ಗಳು ಮಾತ್ರ ಸರಬರಾಜು ಮಾಡಬಹುದಾಗಿರುವುದರಿಂದ ಆಜಾದ್‌ಪುರ ಮಂಡಿಗೆ ಬುಧವಾರ ಕೇವಲ 15 ಪ್ರತಿಶತದಷ್ಟು ಟೊಮೇಟೊಗಳು ಬಂದಿವೆ. ಇದು ಬೆಲೆಯಲ್ಲಿ ಸ್ಥಿರತೆಗೆ ಕಾರಣವಾಗಿದೆ. ಆದಾಗ್ಯೂ ಮುಂದಿನ ಹತ್ತು ದಿನಗಳಲ್ಲಿ ಪೂರೈಕೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ ಎಂದು ಕೌಶಿಕ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+