Toll Fee Cut: ಈ ಹೈವೇಗಳಲ್ಲಿ ಟೋಲ್ ಶುಲ್ಕ ಇಳಿಸಲು ಮುಂದಾದ ಕೇಂದ್ರ ಸರ್ಕಾರ!
ಕೇಂದ್ರ ಸರ್ಕಾರವು ಹೈವೇಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಗುಡ್‌ನ್ಯೂಸ್ ಕೊಡುವುದಕ್ಕೆ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಟೋಲ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಟೋಲ್ ದರ ಹೆಚ್ಚಳದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಕೆಲವು ನಿರ್ದಿಷ್ಟ ಟೋಲ್‌ಗಳ ಬೆಲೆಯನ್ನು ಇಳಿಸುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ. ಹೌದು ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಗುಡ್‌ನ್ಯೂಸ್ ಕೊಡುವುದಕ್ಕೆ ಕೇಂದ್ರ ಭೂಹೆದ್ದಾರಿ ಇಲಾಖೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅದರ ವಿವರ ಇಲ್ಲಿದೆ.
ಕರ್ನಾಟಕವೂ ಸೇರಿದಂತೆ ದೇಶದ ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಾಗುತ್ತಲ್ಲೇ ಇದೆ. ಟೋಲ್ ದರ ಇಳಿಸಬೇಕು ಎನ್ನುವ ಒತ್ತಡ ವಾಹನ ಪ್ರಯಾಣಿಕರಿಂದ ನಿರಂತರವಾಗಿ ಕೇಳಿ ಬರುತ್ತಲ್ಲೇ ಇದೆ. ಕೆಲವು ನಿರ್ದಿಷ್ಟ ಹೆದ್ದಾರಿಗಳಲ್ಲಿ ಶುಲ್ಕವನ್ನು ಇಳಿಸಿದರೆ ಈ ಭಾಗದಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ. ಇನ್ನು ದೇಶದಲ್ಲಿ ಸಾಮಾನ್ಯ ಹೆದ್ದಾರಿಗಳಿಗೆ ಹೋಲಿಕೆ ಮಾಡಿದರೆ. ಎಲಿವೇಟೆಡ್ ಹೆದ್ದಾರಿಗಳಿಗೆ ಸಂಬಂಧಿಸಿದ ಟೋಲ್ ಶುಲ್ಕ ಪ್ರಮಾಣವು ಅಂದಾಜು ಹತ್ತು ಪಟ್ಟಿಗೂ ಹೆಚ್ಚಳವಾಗಿದೆ ಎನ್ನಲಾಗಿದ್ದು. ಇದನ್ನು ಅರ್ಧಕ್ಕೆ ಇಳಿಸುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

ಟೋಲ್ ಸಂಗ್ರಹಕ್ಕೂ ಪೆಟ್ಟು: ಟೋಲ್ ದರ ಇಳಿಸುವುದರ ಹಿಂದೆ ಜನರ ಹಿತಾಸಕ್ತಿಯ ಜೊತೆಗೆ ಟೋಲ್ ಸಂಗ್ರಹ ಪ್ರಮಾಣ ಇಳಿಕೆಯಾಗಿರುವುದು ಸಹ ಇದಕ್ಕೆ ಕಾರಣವಾಗಿದೆ ಅಂತ ಹೇಳಲಾಗುತ್ತಿದೆ. ಹೈವೇ ಎಲಿವೇಟೆಡ್ ಹಾಗೂ ಸುರಂಗ ಮಾರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಕೆಲವೊಂದು ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ದರವು 10 ಪಟ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಟೋಲ್ ಬೆಲೆಯನ್ನು ಇಳಿಸುವುದಕ್ಕೆ ನಿರ್ಧರಿಸಲಾಗಿದೆ. ಟೋಲ್ ಬೆಲೆ ಹೆಚ್ಚಳವಾದ ಮೇಲೆ ಕೆಲವರು ಟೋಲ್ ಮಾರ್ಗವಾಗಿ ಸಂಚಾರಿಸುವುದನ್ನೇ ಕಡಿಮೆ ಮಾಡಿ. ಬೇರೆ ದಾರಿಗಳ ಮೂಲಕ ಹೋಗುತ್ತಿದ್ದಾರೆ ಅಂತ ಹೇಳಲಾಗಿದೆ. ಇದು ಟೋಲ್ ಆದಾಯ ಸಂಗ್ರಹಕ್ಕೂ ಪೆಟ್ಟು ಕೊಟ್ಟಿದ್ದು ಎನ್ನಲಾಗಿದೆ.
ಎಲ್ಲೆಲ್ಲಿ ಟೋಲ್ ಸಂಗ್ರಹ ಕಡಿಮೆ: ಟೋಲ್ ಸಂಗ್ರಹ ಎಲ್ಲೆಲ್ಲಿ ಕಡಿಮೆ ಮಾಡಬೇಕು ಎಂದು ಕೇಂದ್ರ ಸರ್ಕಾರವು ಚರ್ಚೆ ನಡೆಸಿದೆ. ಇದರಲ್ಲಿ ಕರ್ನಾಟಕದ ಕೆಲವು ಪ್ರಮುಖ ಟೋಲ್‌ಗಳು ಸಹ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದೀಗ ಪ್ರಾಥಮಿಕ ಹಂತದಲ್ಲಿ ಮಹಾರಾಷ್ಟ್ರದ ನಾಶಿಕ್ ಹಾಗೂ ಪಾಟಾ ಎಕ್ಸಪ್ರೆಸ್ ವೇ, ದೆಹಲಿ - ಉತ್ತರಾಖಂಡನ ದೆಹಲಿ ಹಾಗೂ ಡೆಹ್ರಾಡೂನ್ ಎಕ್ಸಪ್ರೆಸ್ ವೇ, ದೆಹಲಿ ಹಾಗೂ ಹರಿಯಾಣದ ದೆಹಲಿ ಹಾಗೂ ಗುರುಗ್ರಾಮ ದ್ವಾರಕಾ ಎಕ್ಸಪ್ರೆಸ್ ವೇ ಹಾಗೂ ಬಿಹಾರದ ಧಾನಪುರ್ ಹಾಗೂ ಭಿಟಾ ಎಕ್ಸ್‌ಪ್ರೆಸ್ ವೇಗಳು ಸೇರಿವೆ ಎಂದು ಹೇಳಲಾಗಿದೆ.
ವಾಹನ ಸವಾರರಿಗೆ ಖುಷಿ: ಪ್ರಮುಖ ಹೈವೇಗಳಲ್ಲಿ ಟೋಲ್ ಶುಲ್ಕ ಮೊತ್ತವನ್ನು ಇಳಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವ ಸುದ್ದಿಯನ್ನು ಕೇಳಿ ಹಲವು ಪ್ರಯಾಣಿಕರು ಹಾಗೂ ವಾಹನ ಸವಾರು ಖುಷಿಗೊಂಡಿದ್ದಾರೆ. ದೇಶದ ಹೈವೇಗಳಲ್ಲಿ ಟೋಲ್ ಶುಲ್ಕ ಹೆಚ್ಚಳವಾಗಿರುವುದರಿಂದ ಕ್ಯಾಬ್, ಬಸ್ ಚಾಲಕರು ಸೇರಿದಂತೆ ಟ್ರೂರ್ಸ್ ಅಂಡ್ ಟ್ರಾವರ್ಸ್ಗೆ ಸಂಕಷ್ಟ ಉಂಟಾಗಿತ್ತು. ಇದೀಗ ಹೊಸ ದರದಿಂದ ಹೈವೇಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ.












Click it and Unblock the Notifications