ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್

Posted By:
Subscribe to Oneindia Kannada

ನವದೆಹಲಿ, ಜ.04: ಪಂಜಾಬಿನ ಪಠಾಣ್ ಕೋಟ್ ವಾಯುನೆಲೆಯಲ್ಲಿ ಅವಿತಿದ್ದ ಉಗ್ರರ ಮೇಲೆ ಗುಂಡಿನ ದಾಳಿ ಮುಂದುವರೆದಿದೆ. ನಾಲ್ವರು ಉಗ್ರರು ಹತರಾಗಿದ್ದರೆ, ಏಳು ಜನ ಭಾರತೀಯ ಯೋಧರು ವೀರ ಮರಣ ಹೊಂದಿದ್ದಾರೆ.

ಡಿಸೆಂಬರ್ 30, 2015: ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಆರು ಜನ ಉಗ್ರರು ಭಾರತದ ಗಡಿಯೊಳಗೆ ನುಸುಳಿರುವ ಮಾಹಿತಿ ಲಭ್ಯವಾಗುತ್ತದೆ. ಪಂಜಾಬಿನ ಕಥುವಾ-ಗುರ್ ದಾಸನ್ಪುರ್ ಗಡಿ ಮೂಲಕ ಒಳ ಪ್ರವೇಶಿಸಿರುತ್ತಾರೆ.[ಪಠಾಣ್‌ಕೋಟ್ ದಾಳಿ : ಬೆಂಗಳೂರಿನ ನಿರಂಜನ್ ಹುತಾತ್ಮ]

Timeline of Pathankot terror attack

ಜನವರಿ 01, 2016:
* ರಾತ್ರಿ ಸುಮಾರು 8 ಗಂಟ್ಎ ವೇಳೆಗೆ ಉಗ್ರರ ಗುಂಪು ಟ್ಯಾಕ್ಸಿ ಬಾಡಿಗೆಗೆ ಪಡೆಯುತ್ತಾರೆ. ಪಾಕಿಸ್ತಾನಿ ನಂಬರ್ ಪ್ಲೇಟ್ ಇದ್ದ ಟ್ಯಾಕ್ಸಿ ಚಲಾಯಿಸುತ್ತಿದ್ದ ಡ್ರೈವರ್ ನ ಕತ್ತು ಸೀಳಿ ಕೊಂದು ಹಾಕುತ್ತಾರೆ.

* 9.30 ರ ಸುಮಾತಿಗೆ ಗುರ್ ದಾಸನ್ ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರನ್ನು ಅಪಹರಿಸುತ್ತಾರೆ. ಟ್ಯಾಕ್ಸಿ ಬಿಟ್ಟು ಎಸ್ಪಿ ಅವರ ಅಧಿಕೃತ ವಾಹನದಲ್ಲಿ ಅವರನ್ನು ಕರೆದುಕೊಂಡು ಅಲ್ಲಿಂದ ಸುಮಾರು 20 ಕಿ.ಮೀ ದೂರದ ಪ್ರದೇಶಕ್ಕೆ ಬಂದು ಅವರನ್ನು ಕೆಳಕ್ಕೆ ತಳ್ಳುತ್ತಾರೆ.[ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಟುಂಬಕ್ಕೆ 30 ಲಕ್ಷ ಪರಿಹಾರ]
* ಎಸ್ಪಿ ಸಲ್ವಿಂದರ್ ಸಿಂಗ್ ಅವರ ಮೊಬೈಲ್ ಫೋನ್ ಬಳಸಿಕೊಂಡು ಪಾಕಿಸ್ತಾನದ ಭವಲ್ಪುರ್ ನಲ್ಲಿರುವ ತಮ್ಮ ಏಜೆಂಟ್ ಗಳಿಗೆ ಕರೆ ಮಾಡುತ್ತಾರೆ.

ಜನವರಿ ೦2, 2016:
* ಪಠಾಣ್ ಕೋಟ್ ವಾಯುನೆಲೆ ತನಕ ಉಗ್ರರು ತಲುಪುತ್ತಾರೆ.
* 3 ಗಂಟೆ ಗೋಡೆ ಹಾರಿ ವಾಯುನೆಲೆ ಕೇಂದ್ರದೊಳಗೆ ನುಗ್ಗಲು ಯತ್ನಿಸುವಾಗ ಒಬ್ಬ ಉಗ್ರ ಗುಂಡಿಗೆ ಬಲಿಯಾಗುತ್ತಾನೆ.
* 3.30 ಸುಮಾರಿಗೆ ವಾಯುನೆಲೆ ಕೇಂದ್ರ ದೇಶಿ ವಿಮಾನ ಪ್ರದೇಶಕ್ಕೆ ಐವರು ಉಗ್ರರು ಕಾಲಿರಿಸುತ್ತಾರೆ. ಅಲ್ಲಿದ್ದ ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸುತ್ತಾರೆ.
* ಪಠಾಣ್ ಕೋಟ್ ಗೆ ರಾಷ್ಟ್ರೀಯ ಭದ್ರತಾ ಪಡೆ(ಎನ್ ಎಸ್ ಜಿ) ಕಮಾಂಡೋಗಳು ಧಾವಿಸುತ್ತಾರೆ.
* ಎನ್ಎಸ್ ಜಿ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ರಾತ್ರಿ ತನಕ ನಡೆಯುತ್ತದೆ. ಮೂವರು ಉಗ್ರರು ಹತರಾದರೆ, ಒಬ್ಬ ಯೋಧರಿಗೆ ಗಾಯವಾಗುತ್ತದೆ.
* ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಸೇನಾ ಮುಖ್ಯಸ್ಥರು ಹಾಗೂ ಎನ್ಎಸ್ ಎ ಅಧಿಕಾರಿಗಳ ಜೊತೆ ಮಹತ್ವದ ಮಾತುಕತೆ ನಡೆಸುತ್ತಾರೆ.
* ಸಂಜೆ ವೇಳೆಗೆ ಗುಂಡಿನ ಚಕಮಕಿ ತಗ್ಗುತ್ತದೆ. ಉಗ್ರರಿಗಾಗಿ ಶೋಧಕಾರ್ಯ ಮುಂದುವರೆಯುತ್ತದೆ.

ಜನವರಿ 03, 2016:
* ಎನ್ ಎಸ್ ಜಿಯ ಲೆ. ಕರ್ನಲ್ ನಿರಂಜನ್ ಸೇರಿದಂತೆ ಏಳು ಜನ ಯೋಧರು ವೀರ ಮರಣ ಹೊಂದುತ್ತಾರೆ.
* 12.30 PM ವೇಳೆಗೆ ಮತ್ತೆ ಗುಂಡಿನ ಚಕಮಕಿ ಜೋರಾಗುತ್ತದೆ. ಇಬ್ಬರು ಉಗ್ರರ ಹತ್ಯೆಯ ಸುದ್ದಿ ಬರುತ್ತದೆ. ಗ್ರೇನೇಡ್ ದಾಳಿ, ಬೆಂಕಿ, ಸ್ಫೋಟದ ಸದ್ದು ಕೇಳಿಸುತ್ತದೆ. ಒಟ್ಟಾರೆ 5 ಜನ ಉಗ್ರರ ಹತ್ಯೆಯನ್ನು ಖಚಿತಪಡಿಸಲಾಗುತ್ತದೆ.
* ಕಾರ್ಯಾಚರಣೆ ಬಗ್ಗೆ ಭಾರತೀಯ ವಾಯು ಸೇನೆ, ಗೃಹ ಕಾರ್ಯದರ್ಶಿಗಳಿಂದ ಸುದ್ದಿಗೋಷ್ಠಿ.
* ಪಠಾಣ್ ಕೋಟ್ ದಾಳಿ ಬಗ್ಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ.

ಜನವರಿ 04, 2015
* ಉಳಿದಿರುವ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.
* ಪ್ರತಿಯೊಬ್ಬ ಉಗ್ರನ ಬಳಿ 6 ಕೆಜಿ ಆರ್ ಡಿಎಕ್ಸ್, ಗ್ರೇನೇಡ್ಸ್ ಗಳಿರುವ ಬಗ್ಗೆ ಮಾಹಿತಿ.
* ಪಠಾಣ್ ಕೋಟ್ ನಿಂದ 4 ಕಿ.ಮೀ ದೂರದಲ್ಲಿರುವ ಮನ್ವಲ್ ಎಂಬ ಗ್ರಾಮದಲ್ಲಿ ಶಂಕಿತ ವ್ಯಕ್ತಿಗಳಿರುವ ಬಗ್ಗೆ ಮಾಹಿತಿ. ತೀವ್ರ ಹುಡುಕಾಟ, ನಂತರ ಇದು ಗಾಳಿಸುದ್ದಿ ಎಂದು ದೃಢಪಡಿಸಲಾಗಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
December 30 2015- Six terrorists of the Jaish-e-Mohammad enter India through the Kathua-Gurdaspur border in Punjab.Here is timeline of Pathankot terror attack.
Please Wait while comments are loading...