ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ: ಸಲ್ಮಾನ್ ಖಾನ್‌ಗೆ ವೈ+ ಭದ್ರತೆ

|
Google Oneindia Kannada News

ಮುಂಬೈ ನವೆಂಬರ್ 1: ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬಂದ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಭದ್ರತೆಯನ್ನು X ನಿಂದ ವೈ+ ಗೆ ಹೆಚ್ಚಿಸಲಾಗಿದೆ. ನಟನ ಜೊತೆ ಎಲ್ಲಾ ಸಮಯದಲ್ಲೂ ಇಬ್ಬರು ಶಸ್ತ್ರಸಜ್ಜಿತ ಗಾರ್ಡ್‌ ಇರುತ್ತಾರೆ. ಇದಲ್ಲದೇ ಇಬ್ಬರು ಗಾರ್ಡ್‌ಗಳನ್ನು ಅವರ ನಿವಾಸದಲ್ಲಿ ಇರಿಸಲಾಗುತ್ತದೆ. ಬಿಷ್ಣೋಯ್ ಗ್ಯಾಂಗ್ ನಿಂದ ಸಲ್ಮಾನ್ ಖಾನ್ ಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್ ರಕ್ಷಣಾ ವಿಭಾಗ ಈ ನಿರ್ಧಾರ ಕೈಗೊಂಡಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿ ಸಲ್ಮಾನ್ ಖಾನ್ ಇದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಈ ಗ್ಯಾಂಗ್‌ನ ಸದಸ್ಯರು ಕೊಲೆ ಮಾಡಲು ನಟನ ಫಾರ್ಮ್‌ಹೌಸ್‌ನ ಹೊರಗೆ ನಿಂತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಮುಂಬೈ ಪೊಲೀಸ್‌ನ ರಕ್ಷಣಾ ವಿಭಾಗವು ಇದೀಗ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ವೈ+ ಗೆ ಅಪ್‌ಗ್ರೇಡ್ ಮಾಡಲು ನಿರ್ಧರಿಸಿದೆ. ಅವರ ನಿವಾಸಕ್ಕೆ ಇಬ್ಬರು ಕಾವಲುಗಾರರನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರಿಗೂ ಇದೇ ರೀತಿಯ ಭದ್ರತೆಯನ್ನು ನೀಡಲಾಗಿದೆ.

ಕೆಲವು ತಿಂಗಳ ಹಿಂದೆ ಸಲ್ಲು ಬಾಯ್ ಭದ್ರತೆ ದೃಷ್ಟಿಯಿಂದ ವೈಯಕ್ತಿಕ ಶಸ್ತ್ರಾಸ್ತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಿದರು. ಜೊತೆಗೆ ಮುಂಬೈನ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಿದರು. ಮುಂಬೈ ಪೊಲೀಸರು ಸಲ್ಮಾನ್ ಖಾನ್ ಅವರಿಗೆ ವೈಯಕ್ತಿಕ ಶಸ್ತ್ರಾಸ್ತ್ರಕ್ಕಾಗಿ ಪರವಾನಗಿಯನ್ನು ನೀಡಿದ್ದಾರೆ.

ಸಲ್ಮಾನ್ ಫಾರ್ಮ್ ಹೌಸ್ ಸಿಬ್ಬಂದಿಯೊಂದಿಗೆ ಸ್ನೇಹ

ಸಲ್ಮಾನ್ ಫಾರ್ಮ್ ಹೌಸ್ ಸಿಬ್ಬಂದಿಯೊಂದಿಗೆ ಸ್ನೇಹ

ಸಲ್ಮಾನ್ ಖಾನ್ ಮುಂಬೈಯಲ್ಲಿನ ಫಾರ್ಮ್ ಹೌಸ್‌ಗೆ ಬರುವ ಮತ್ತು ನಿರ್ಗಮಿಸುವ ವೇಳೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಪ್ರಯತ್ನಿಸಿದರಲ್ಲದೇ, ರಸ್ತೆ ಗುಂಡಿಗಳಿಂದಾಗಿ ಸಲ್ಮಾನ್ ಖಾನ್ ಮನೆಗೆ ಬರುವಾಗ ಮತ್ತು ನಿರ್ಗಮಿಸುವಾಗ ಅವರ ಕಾರು ಯಾವ ವೇಗದಲ್ಲಿ ಚಲಿಸುತ್ತದೆ ಎಂಬುದನ್ನು ತಿಳಿಯಲು ಸಲ್ಮಾನ್ ಅವರ ತೋಟದ ಮನೆಯ ಸುತ್ತಲಿನ ಪ್ರದೇಶವನ್ನು ಪರಿಶೀಲಿಸಿದ್ದರು. ಶೂಟರ್‌ಗಳು ಸಣ್ಣ ಪಿಸ್ತೂಲ್ ಕಾರ್ಟ್ರಿಡ್ಜ್‌ಗಳನ್ನು ಹೊತ್ತೊಯ್ದಿದ್ದರು ಎಂದು ದೆಹಲಿ ವಿಶೇಷ ಪೊಲೀಸ್ ಆಯುಕ್ತ ಹೆಚ್ ಜಿಎಸ್ ಧಲಿವಾಲ್ ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಕೊಲ್ಲಲು ಯೋಜನೆ

ಸಲ್ಮಾನ್ ಖಾನ್ ಕೊಲ್ಲಲು ಯೋಜನೆ

ಸಿದ್ದು ಮೂಸ್ ವಾಲಾ ಹತ್ಯೆಗೂ ಮುನ್ನವೇ ಈ ಗ್ಯಾಂಗ್ ಸಲ್ಮಾನ್ ಖಾನ್ ಕೊಲ್ಲಲು ಯೋಜನೆ ಸಿದ್ಧಪಡಿಸಿತ್ತು. ಸಲ್ಮಾನ್ ಖಾನ್ ಅಭಿಮಾನಿಗಳಂತೆ ಬಿಂಬಿಸಿಕೊಂಡು, ಸಲ್ಮಾನ್ ಖಾನ್ ಫಾರ್ಮ್ ಹೌಸ್ ಮನೆಯ ಸಿಬ್ಬಂದಿಯೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಯತ್ನಿಸಿದ್ದರು. ಫಾರ್ಮ್ ಹೌಸ್ ಬಳಿಯೇ ಮನೆಯೊಂದನ್ನು ಬಾಡಿಗೆ ಪಡೆದು ಅಲ್ಲಿಯೇ ಒಂದು ತಿಂಗಳ ಕಾಲ ಇದ್ದರು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ಬಿಷ್ಣೋಯ್ ಸೂಚನೆ ಮೇರೆಗೆ ಮಾಹಿತಿ ಸಂಗ್ರಹ

ಬಿಷ್ಣೋಯ್ ಸೂಚನೆ ಮೇರೆಗೆ ಮಾಹಿತಿ ಸಂಗ್ರಹ

ಕಪಿಲ್ ಪಂಡಿತ್, ಸಂತೋಷ್ ಜಾಧವ್, ಸಚಿನ್ ವಿಷ್ಣೋಯ್ ಥಾಪನ್ ಮುಂಬೈನ ವಾಝೆ ಪ್ರದೇಶದ ಪನ್ವೇಲ್‌ನಲ್ಲಿ ಬಾಡಿಗೆ ಕೊಠಡಿಯೊಂದಿಗೆ ಉಳಿದುಕೊಳ್ಳಲು ಬಂದಿದ್ದರು. ಪನ್ವೆಲ್‌ನಲ್ಲಿ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್ ಇದೆ. ಆದ್ದರಿಂದ ಅದೇ ಫಾರ್ಮ್‌ಹೌಸ್‌ಗೆ ಹೋಗುವ ಮಾರ್ಗದಲ್ಲಿ ಲಾರೆನ್ಸ್ ಶೂಟರ್‌ಗಳು ಬಾಡಿಗೆಗೆ ಪಡೆದ ಕೊಠಡಿಯಲ್ಲಿ ಸುಮಾರು ಒಂದೂವರೆ ತಿಂಗಳು ಅಲ್ಲಿಯೇ ಉಳಿದುಕೊಂಡಿದ್ದರು ಎಂದು ಅವರು ಹೇಳಿದರು. ಬಿಷ್ಣೋಯ್ ಸೂಚನೆ ಮೇರೆಗೆ ಕಪಿಲ್ ಪಂಡಿತ್, ಸಂತೋಷ್ ಜಾಧವ್ ಮತ್ತು ಸಚಿನ್ ಬಿಷ್ಣೋಯ್ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದರು. ಆದರೆ ಆ ಅವಧಿಯಲ್ಲಿ ಸಲ್ಮಾನ್ ಖಾನ್ ಹತ್ಯೆಗೆ ಗ್ರೌಂಡ್ ವರ್ಕ್ ಮಾಡಲಾಯಿತು. ಆದರೆ, ಸಿಬ್ಬಂದಿ ಸಿಧು ಹತ್ಯೆಗೆ ಹೆಚ್ಚಿನ ಪ್ರಯತ್ನ ನಡೆಸಿದ್ದರಿಂದ ಮೇ 29 ರಂದು ಆತನ ಹತ್ಯೆಯಾಯಿತು ಎಂದು ಅಧಿಕಾರಿ ತಿಳಿಸಿದರು.

ಕಪಿಲ್ ಪಂಡಿತ್ ಗೋಲ್ಡಿ-ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್ ಆಗಿದ್ದು, ಇತ್ತೀಚೆಗೆ ಭಾರತ-ಪಾಕ್ ಗಡಿಯಲ್ಲಿ ದೆಹಲಿ ಪೊಲೀಸ್ ಮತ್ತು ಪಂಜಾಬ್ ಪೊಲೀಸರ ವಿಶೇಷ ಸೆಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಯಿತು. ಈ ಮಧ್ಯೆ ಸಲ್ಮಾನ್ ಖಾನ್ ಬೆದರಿಕೆ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ.

ಶಾರುಖ್ ಖಾನ್ ಜೊತೆ ಮತ್ತೆ ತೆರೆಗೆ ಬರಲಿರುವ ಸಲ್ಮಾನ್

ಶಾರುಖ್ ಖಾನ್ ಜೊತೆ ಮತ್ತೆ ತೆರೆಗೆ ಬರಲಿರುವ ಸಲ್ಮಾನ್

ಅಕ್ಟೋಬರ್ 5 ರಂದು ಥಿಯೇಟರ್‌ಗಳಲ್ಲಿ ತೆರೆಕಂಡ ಚಿರಂಜೀವಿ ಅಭಿನಯದ ಗಾಡ್‌ಫಾದರ್‌ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದಾರೆ. ಈ ಚಿತ್ರವು ಮೋಹನ್‌ಲಾಲ್‌ರ ಲೂಸಿಫರ್‌ನ ರಿಮೇಕ್ ಆಗಿದೆ. ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ವೀರಂನ ರಿಮೇಕ್ ಎಂದು ಹೇಳಲಾಗುತ್ತಿದೆ. ಟೈಗರ್ ಫ್ರಾಂಚೈಸಿಯ ಮೂರನೇ ಭಾಗವಾದ ಟೈಗರ್ 3 ನಲ್ಲಿ ಕತ್ರಿನಾ ಕೈಫ್ ಜೊತೆಗೆ ಸಲ್ಲು ಭಾಯ್ ಕಾಣಿಸಿಕೊಳ್ಳಲಿದ್ದಾರೆ. ಇದು 2023 ರ ದೀಪಾವಳಿಯಂದು ಥಿಯೇಟರ್‌ಗಳಲ್ಲಿ ತೆರೆ ಕಾಣಲು ಸಿದ್ಧವಾಗುತ್ತಿದೆ. ಶಾರುಖ್ ಖಾನ್ ಅವರ ಪಠಾನ್‌ನಲ್ಲಿ ಸಲ್ಮಾನ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Bollywood star Salman Khan's security has been upgraded from X to Y+ after receiving threats from the Bishnoi gang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X