Electric Bike: ಸವಾರ ಮದ್ಯಪಾನ ಮಾಡಿದ್ದರೆ ಸ್ಟಾರ್ಟ್ ಆಗದ ಬೈಕ್ ಇದು
ತಂತ್ರಜ್ಞಾನ ದಿನಕ್ಕೊಂದು ಹೊಸ ರೂಪ ಪಡೆಯುತ್ತದೆ. ತಂತ್ರಜ್ಞಾನ ಜಗತ್ತಿನಲ್ಲಿ ಹೊಸ ಹೊಸ ಅನ್ವೇಷಣೆಗಳಾಗುತ್ತಲೇ ಇರುತ್ತದೆ. ಇದೀಗ ಕೇಳುವಾಗ ಅಚ್ಚರಿಯಾಗುವಂತಹ ಅನ್ವೇಷಣೆಯೊಂದನ್ನು ವಿದ್ಯಾರ್ಥಿಗಳು ಮಾಡಿದ್ದು, ಇದರಿಂದ ಅಪಘಾತಗಳ ಸಂಖ್ಯೆ ಕೊಂಚ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಸುರಕ್ಷಿತ. ಇದರಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕಾನೂನು ಬಾಹಿರ. ಹೀಗೆ ಮಾಡಿದರೆ ಟ್ರಾಫಿಕ್ ಪೊಲೀಸರು ದಂಡ ಕೂಡ ವಿಧಿಸುತ್ತಾರೆ. ಈ ಎಲ್ಲಾ ತಲೆ ನೋವಿಗೆ ಬ್ರೇಕ್ ಹಾಕಲು ಉತ್ತರ ಪ್ರದೇಶದ ವಿದ್ಯಾರ್ಥಿಗಳು ವಿಶೇಷವಾದ ಬೈಕ್‌ವೊಂದನ್ನು ಆವಿಷ್ಕರಿಸಿದ್ದಾರೆ. ಈ ಬೈಕ್ ಬಹಳ ವಿಶೇಷವಾಗಿದ್ದು, ಸವಾರ ಮದ್ಯಪಾನ ಮಾಡಿ ಬಂದರೆ ಈ ಬೈಕ್ ಸ್ಟಾರ್ಟ್ ಆಗುವುದೇ ಇಲ್ಲ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (National Institute of Technology), ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಅಲಹಾಬಾದ್‌ನ ವಿದ್ಯಾರ್ಥಿಗಳು, ಸೊಸೈಟಿ ಆಫ್ ಆಟೋಮೋಟಿವ್ ಇಂಜಿನಿಯರ್ಸ್ (ಎಸ್‌ಎಇ) ಕ್ಲಬ್‌ನ ಸಹಯೋಗದೊಂದಿಗೆ ಈ ಆವಿಷ್ಕಾರ ಮಾಡಿದ್ದಾರೆ. ಇ-ಬೈಕ್, ಸವಾರ ಮದ್ಯಪಾನ ಮಾಡಿ ಬಂದು ಚಲಾಯಿಸಿದರೆ ಮುಂದಕ್ಕೆ ಚಲಿಸದೇ ನಿಂತಲ್ಲಿಯೇ ನಿಲ್ಲುತ್ತದೆ ಎಂದು ವರಿದಿಯಾಗಿದೆ.
ಈ ನೂತನ ಎಲೆಕ್ಟ್ರಿಕ್ ಬೈಕ್ ನಾಲ್ಕು ಗಂಟೆಗಳ ಚಾರ್ಜ್‌ನಲ್ಲಿ 60 ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದರ ಟಾಪ್ ಸ್ಪೀಡ್ ಗಂಟೆಗೆ 70 ಕಿಲೋಮೀಟರ್‌ನಷ್ಟಿದೆ. ಇದು ಸ್ಮೋಕ್ ಸೆನ್ಸರ್‌ಗಳು, ಕಳ್ಳತನ ಪತ್ತೆ ಹಚ್ಚುವ ಅಲಾರಮ್‌ಗಳು ಮತ್ತು ಸುರಕ್ಷತೆಗಾಗಿ ಆಲ್ಕೋಹಾಲ್ ಪತ್ತೆ ವ್ಯವಸ್ಥೆಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಭೋಪಾಲ್‌ನಲ್ಲಿ ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿಯರ್ಸ್ (ISIE) ಆಯೋಜಿಸಿದ್ದ ಪ್ರತಿಷ್ಠಿತ ಸ್ಪರ್ಧೆಯಲ್ಲಿ 70 ತಂಡಗಳ ಸ್ಪರ್ಧೆಯಯಲ್ಲಿ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಅಲಹಾಬಾದ್‌ನ ವಿದ್ಯಾರ್ಥಿಗಳು ಬೆಸ್ಟ್ ಡಿಸೈನ್ ಹಾಗೂ ಫ್ಯೂಚರ್ ಅವಾರ್ಡ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಟಾಪ್ 10 ತಂಡಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.












Click it and Unblock the Notifications