ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೊ: ಕಟ್ಟಡದಲ್ಲಿ ಅವಿತಿರುವ ಉಗ್ರ 'ಐಸಿಸ್' ಸದಸ್ಯ – ಗುಪ್ತಚರ ದಳ

ಲಕ್ನೋದ ಠಾಕೂರ್ ಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಶಂಕಿತ ಉಗ್ರನೊಬ್ಬ ಅವಿತು ಕುಳಿತಿದ್ದಾನೆ. ಕಟ್ಟಡದ ಸುತ್ತ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ಸುತ್ತುವರಿದಿದ್ದು ಉಗ್ರ ಒಳಗಿನಿಂದಲೇ ಆಗಾಗ ಗುಂಡಿನ ದಾಳಿ ನಡೆಸುತ್ತಿದ್ದಾನೆ.

By Sachhidananda Acharya
|
Google Oneindia Kannada News

ಲಕ್ನೊ, ಮಾರ್ಚ್ 7: ಲಕ್ನೋದ ಠಾಕೂರ್ ಗಂಜ್ ಪ್ರದೇಶದ ಕಟ್ಟಡವೊಂದರಲ್ಲಿ ಶಂಕಿತ ಉಗ್ರನೊಬ್ಬ ಅವಿತು ಕುಳಿತಿದ್ದಾನೆ. ಕಟ್ಟಡದ ಸುತ್ತ ಭಯೋತ್ಪಾದಕ ನಿಗ್ರಹ ದಳದ ಕಮಾಂಡೋಗಳು ಸುತ್ತುವರಿದಿದ್ದು ಉಗ್ರ ಒಳಗಿನಿಂದಲೇ ಆಗಾಗ ಗುಂಡಿನ ದಾಳಿ ನಡೆಸುತ್ತಿದ್ದಾನೆ.

ಶಂಕಿತ ಉಗ್ರನನ್ನು ಸೈಫುಲ್ ಎಂದು ಗುರುತಿಸಲಾಗಿದೆ. ಮಧ್ಯ ಪ್ರದೇಶದ ಇಂದು ಬೆಳಿಗ್ಗೆ ನಡೆದ ರೈಲ್ವೇ ಬಾಂಬ್ ಸ್ಪೋಟದಲ್ಲಿ ಈತನ ಕೈವಾಡ ಇದೆ ಎನ್ನಲಾಗಿದೆ. ಈತ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಸದಸ್ಯ ಎಂದು ಗುಪ್ತಚರ ದಳದ ಅಧಿಕಾರಿಗಳು ಹೇಳಿದ್ದಾರೆ.

ಸೈಫುಲ್ಲಾ ಬಳಿಯಲ್ಲಿ ಎಕೆ-47 ಬಂದೂಕಿದೆ ಎಂದು ಮೂಲಗಳು ಹೇಳಿವೆ. ಇಲ್ಲೀವರೆಗೆ 20 ಸುತ್ತು ಗುಂಡಿನ ಚಕಮಕಿ ನಡೆದಿದೆ. ಅಧಿಕಾರಿಗಳ ಪ್ರಕಾರ ಸೈಫುಲ್ಲಾ ಭೋಪಾಲ್ ಉಜ್ಜೈನಿ ಬಾಂಬ್ ಸ್ಪೋಟದ ನಂತರ ದಕ್ಷಿಣ ಭಾರತದ ಇನ್ನೊಬ್ಬ ಶಂಕಿತ ಭಯೋತ್ಪಾದಕನಿಗೆ ಕರೆ ಮಾಡಿದ್ದಾನೆ. ಈ ಕರೆಯ ಆಧಾರದಲ್ಲಿ ಅಧಿಕಾರಿಗಳು ಆತ ಐಸಿಸ್ ಸದಸ್ಯ ಎಂದು ಹೇಳಿದ್ದಾರೆ.

ಘಟನೆಯಲ್ಲಿ ಸಿಮಿ ಉಗ್ರರ ಕೃತ್ಯವೂ ಇದೆಯಾ ಎಂದು ತನಿಖೆ ಮಾಡುತ್ತಿದ್ದೇವೆ ಎಂದು ಹಿರಿಯ ಗುಪ್ತಚರ ದಳದ ಅಧಿಕಾರಿ ಹೇಳಿದ್ದಾರೆ. ಈಗಾಗಲೇ ಕಟ್ಟಡದಲ್ಲಿ ಅಡಗಿ ಕುಳಿತ ಉಗ್ರನ ಬಗ್ಗೆ ಗೃಹ ಇಲಾಖೆಗೆ ಮಾಹಿತಿಯನ್ನೂ ನೀಡಲಾಗಿದೆ.

" ಕಟ್ಟಡದೊಳಗಿರುವ ಉಗ್ರ ಬಹುಶಃ ಲಕ್ನೊಗೆ ಸೇರಿದವನು. ನಮ್ಮ ಅಂದಾಜಿನ ಪ್ರಕಾರ ಅವನ ಬಳಿಯಲ್ಲಿ ಶಸ್ತ್ರಾಸ್ತ್ರಗಳಿವೆ. ಸದ್ಯದಲ್ಲೇ ನಾವು ಅವನನ್ನು ಬಂಧಿಸಲಿದ್ದೇವೆ. ನಂತರ ಆತನನ್ನು ವಿಚಾರಣೆಗೆ ಒಳಪಡಿಸುತ್ತೇವೆ," ಎಂದು ಹಿರಿಯ ಪೊಲೀಸ್ ಅಧಿಕಾರಿ ದಲ್ಜೀತ್ ಚೌಧರಿ ಹೇಳಿದ್ದಾರೆ.

ಇಂದು ಮಧ್ಯಾಹ್ನ 3:30ಕ್ಕೆ ಕಾರ್ಯಾಚರಣೆ ಆರಂಭವಾಗಿದೆ. ಇಲ್ಲಿನ ಹಾಜಿ ಕಾಲೊನಿಯಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಕಟ್ಟಡದಿಂದ ಗುಂಡಿನ ದಾಳಿ ಆರಂಭವಾಗಿದೆ.

Suspected terrorist holed up by Uttar Pradesh ATS

ನಂತರ ಪೊಲೀಸರು ಸ್ಥಳೀಯ ಮನೆಗಳಿಂದ ಜನರನ್ನು ಸ್ಥಳಾಂತರ ಮಾಡಿದ್ದಾರೆ. ಮಾತ್ರವಲ್ಲ ಎಟಿಎಸ್ ಪೊಲೀಸರಿಗೆ ಸ್ಥಳಕ್ಕೆ ಬರುವಂತೆ ಕರೆ ನೀಡಿದ್ದಾರೆ. ಅದರಂತೆ ಬಿಜನೌರ್ ನಿಂದ 10 ಕಮಾಂಡೋಗಳು ಸ್ಥಳಕ್ಕಾಗಮಿಸಿದ್ದು ಕಾರ್ಯಾಚರಣೆ ನಡೆಯುತ್ತಿದೆ.

ಇನ್ನು ಕಟ್ಟಡದ ಸುತ್ತ ಮುತ್ತಲಿನ ಪ್ರದೇಸದಲ್ಲೂ ಉಗ್ರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಾರ್ಯಾಚರಣೆ ಮುಗಿಯುವವರೆಗೆ ಸ್ಥಳೀಯರು ಯಾರೂ ಮನೆ ಬಿಟ್ಟು ಹೊರ ಬರದಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಕಟ್ಟಡದಿಂದ ಉಗ್ರನ್ನು ಹೊರಬರುವಂತೆ ಮಾಡಲು ಕಮಾಂಡೋಗಳು ಶ್ರಮಿಸುತ್ತಿದ್ದಾರೆ. ಆದರೆ ಆತ ಹೊರ ಬರುತ್ತಿಲ್ಲ. ಕಾರ್ಯಾಚರಣೆ ಚಾಲ್ತಿಯಲ್ಲಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

English summary
Suspected terrorist holed up by Uttar Pradesh ‘Anti Terrorist Squad’ in Thakurganj area of Lucknow. Operation is in progress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X