ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿಯುವ ನೀರಿಗೂ ಸಂಕಷ್ಟ : ಬರಗಾಲಕ್ಕೆ ಕಾರಣ ಯಾರು?

By ಮೈತ್ರೀಯಿ
|
Google Oneindia Kannada News

ಬೆಂಗಳೂರು, ಮೇ 02 : ಭೀಕರ ಬರಗಾಲದಿಂದಾಗಿ ದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ವರ್ಷಗಳಿಂದ ಪರಿಸರ ತಜ್ಞರ ಎಚ್ಚರಿಕೆಯನ್ನು ಪರಿಗಣಿಸುತ್ತಲೇ ಇರಲಿಲ್ಲ. ಅದರ ಫಲವಾಗಿ ಈ ಬಾರಿ ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ದೇಶಾದ್ಯಂತ ಬರ ಪರಿಸ್ಥಿತಿ ಇದೆ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಜಾರ್ಖಂಡ್ ಸೇರಿದಂತೆ 13 ರಾಜ್ಯಗಳ ಪರಿಸ್ಥಿತಿ ಭೀಕರವಾಗಿದೆ. ಕುಡಿಯುವ ನೀರಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆದ ಬೆಳೆಗಳು ಬಿಸಿಲಿನ ಝಳಕ್ಕೆ ಸುಟ್ಟು ಕರಕಲಾಗಿವೆ. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]

drought

200 ರೈತರ ಆತ್ಮಹತ್ಯೆ : ಬರಪೀಡಿತ ಮಹಾರಾಷ್ಟ್ರದಿಂದ ಏಪ್ರಿಲ್ 30ರ ನಂತರ ನಡೆಯುವ ಎಲ್ಲಾ ಐಪಿಎಲ್‌ ಪಂದ್ಯಗಳನ್ನು ಸ್ಥಳಾಂತರ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿದ ಬಳಿಕ ರಾಷ್ಟ್ರೀಯ ಮಾಧ್ಯಮಗಳಲ್ಲಿ ಬರದ ಬಗ್ಗೆ ಚರ್ಚೆ ನಡೆಯಿತು. ['ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ']

ಭಾರತೀಯ ಮಾಧ್ಯಮಗಳು ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿವೆ. ಈ ವರ್ಷ ದೇಶದ ವಿವಿಧ ರಾಜ್ಯಗಳಲ್ಲಿ 200ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಅವುಗಳ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿಲ್ಲ ಎಂಬುದು ವಿಮರ್ಶಕರ ಮಾತು. [ಕುಡಿಯುವ ನೀರಿನ ನಿರೀಕ್ಷೆಯಲ್ಲಿ ಖಾಲಿ ಬಿಂದಿಗೆ ಸಾಲು]

ರಣ ಬಿಸಿಲಿಗೆ ರೈತರು ಬೆಳೆದ ಬೆಳೆ ನೆಲ ಕಚ್ಚಿದೆ. ಬ್ಯಾಂಕ್ ಸಾಲ ತೀರಿಸಲಾಗದೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಿಗೆ ಹೋಲಿಕೆ ಮಾಡಿದರೆ, ಅಂತರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಬರ ಪರಿಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಿವೆ. [ಭೀಕರ ಬರ, ಮಳೆ ಕೊಯ್ಲು, ನದಿ ಸ್ವಚ್ಛತೆ ಬಗ್ಗೆ ಮೋದಿ]

ಮಳೆ ಇಲ್ಲ, ಅಂತರ್ಜಲವೂ ಇಲ್ಲ : ಕರ್ನಾಟಕದ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. 16 ಜಿಲ್ಲೆಗಳ ಪೈಕಿ 10 ಜಿಲ್ಲೆಗಳು ಉತ್ತರ ಕರ್ನಾಟಕ ಭಾಗಕ್ಕೆ ಸೇರಿದವು. ಯಾದಗಿರಿ, ಗದಗ, ಕಲಬುರಗಿ, ರಾಯಚೂರು, ವಿಜಯಪುರ ಜಿಲ್ಲೆಗಳು ಹೆಚ್ಚು ಬರಕ್ಕೆ ತುತ್ತಾಗಿವೆ.

drinking water

ನೀರಿನ ಕೊರತೆ ಮಾತ್ರ ಉಂಟಾಗಿಲ್ಲ. ಅಂತರ್ಜಲ ಮಟ್ಟವೂ ನಿರೀಕ್ಷೆಗೂ ಮೀರಿ ಕುಸಿದಿದೆ. ಕೋಲಾರ ಮುಂತಾದ ಜಿಲ್ಲೆಗಳಲ್ಲಿ ರೈತರು ಕೊಳವೆ ಬಾವಿ ಕೊರೆಸಲು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ಕೊಳವೆ ಬಾವಿ ಕೊರೆದು ಬೆಳೆಗಳಿಗೆ ನೀರು ಪೂರೈಕೆ ಮಾಡುವ ಪ್ರಯತ್ನವೂ ಫಲ ಕೊಡುತ್ತಿಲ್ಲ.

English summary
The truth is knocking on the door and there is no escaping that. After ignoring the warning from the environmentalists all these years, the enormity of water crisis is staring in our face this year. With 13 states including Maharashtra, Karnataka, Telangana and Jharkhand reeling under severe drought and acute water shortage, time demands immediate action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X