ಏಕಕಾಲದಲ್ಲಿ ಎರಡು ಪದವಿಗಳನ್ನು ಓದಬಹುದು; ಉತ್ಸಾಹಿ ವಿದ್ಯಾರ್ಥಿಗಳಿಗೆ ಯುಜಿಸಿ ಅವಕಾಶ

ಬೆಂಗಳೂರು, ಏ. 12: ನಿಮಗೆ ಒಟ್ಟೊಟ್ಟಿಗೆ ಎರಡು ಕೋರ್ಸ್ ಓದುವ ಇಚ್ಛೆ ಇದೆಯಾ? ಅದೂ ಭೌತಿಕ ತರಗತಿಗಳನ್ನೊಳಗೊಂಡ ಪೂರ್ಣಾವಧಿ ಕೋರ್ಸ್‌ಗಳನ್ನು ಮಾಡಬೇಕೆಂದಿದ್ದೀರಾ? ಯುಜಿಸಿ ಈಗ ಅಂಥದ್ದೊಂದು ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸಿದೆ. ಅದರಂತೆ ಏಕಕಾಲದಲ್ಲಿ ಪೂರ್ಣಾವಧಿ ಪದವಿ ಕೋರ್ಸ್‌ಗಳನ್ನು ಓದಬಹುದಾಗಿದೆ. ಈ ಸಂಬಂಧ ಏಪ್ರಿಲ್ 13, ನಾಳೆ ಯುಜಿಸಿಯ ಅಧಿಕೃತ ವೆಬ್ ಸೈಟ್‌ನಲ್ಲಿ ಮಾರ್ಗಸೂಚಿ ಪ್ರಕಟವಾಗಲಿದೆ.

ಈ ಮುಂಚೆ ಇದ್ದ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಒಟ್ಟೊಟ್ಟಿಗೆ ಎರಡು ಪೂರ್ಣಾವಧಿ ಶಿಕ್ಷಣ ಕೋರ್ಸ್ ಮಾಡಲು ಅವಕಾಶ ಇಲ್ಲ. ಒಬ್ಬ ವಿದ್ಯಾರ್ಥಿ ಒಂದು ಪೂರ್ಣಾವಧಿ ಪದವಿ ಕೋರ್ಸ್ ಓದುತ್ತಿದ್ದ ವೇಳೆ ಜೊತೆಯಲ್ಲಿ ಅಲ್ಪಾವಧಿ ಅಥವಾ ಆನ್‌ಲೈನ್ ಅಥವಾ ಡಿಪ್ಲೊಮಾ ಕೋರ್ಸ್ ವೊಂದನ್ನು ಮಾತ್ರ ಮಾಡಬಹುದಾಗಿತ್ತು. ಈಗ ಬದಲಾಗುತ್ತಿರುವ ನಿಯಮವು ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಎರಡು ಪೂರ್ಣಾವಧಿ ಕೋರ್ಸ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಪದವಿ ವ್ಯಾಸಂಗ ಮಾಡುತ್ತಿರುವವರು ಜೊತೆಜೊತೆಗೆ ಡಿಪ್ಲೊಮಾ ಕೋರ್ಸ್ ಮಾಡಬಹುದು. ಅಥವಾ ಒಟ್ಟಿಗೆ ಎರಡು ಸ್ನಾತಕೋತ್ತರ ಪದವಿ ಕೋರ್ಸ್‌ಗಳು ಅಥವಾ ಎರಡು ಪದವಿ ಕೋರ್ಸ್‌ಗಳನ್ನು ಮಾಡಬಹುದು. ಅಥವಾ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನ ಒಟ್ಟಿಗೆ ಮಾಡಬಹುದು.

Students Now On Can Pursue Two Full-time Courses Simultaneously

ಗಮನಿಸಬೇಕಾದ ಅಂಶಗಳೆಂದರೆ, ಏಕಕಾಲದಲ್ಲಿ ಎರಡು ಪೂರ್ಣಾವಧಿ ಕೋರ್ಸ್‌ಗಳನ್ನು ಮಾತ್ರ ಓದಲು ಅವಕಾಶ ಇದೆ. ಮೂರು ಕೋರ್ಸ್ ಮಾಡಲು ಆಗುವುದಿಲ್ಲ. ಹಾಗೆಯೇ, ಎರಡು ಕೋರ್ಸ್‌ಗಳ ಸಮಯ ಭಿನ್ನವಾಗಿರಬೇಕು.

ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿ ಎನ್‌ಇಪಿ 2020 ಆಶಯದಂತೆ ಇಂಥದ್ದೊಂದು ಸುಧಾರಣಾ ಕ್ರಮವನ್ನು ಯುಜಿಸಿ ತೆಗೆದುಕೊಂಡಿದೆ. ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ಕೇವಲ ಒಂದು ಕೌಶಲ್ಯದ ಕಲಿಕೆಗೆ ಸೀಮಿತವಾಗದೇ ಹಲವು ಕೋರ್ಸ್‌ಗಳನ್ನ ಏಕಕಾಲದಲ್ಲಿ ಕಲಿತು ಕೌಶಲ್ಯ ಹೆಚ್ಚಿಸಿಕೊಳ್ಳುವ ಅವಕಾಶ ಕೊಡಬೇಕೆಂಬುದು ಹೊಸ ಶಿಕ್ಷಣ ನೀತಿಯ ಆಶಯ. ವಿದ್ಯಾರ್ಥಿಗಳು ಭೌತಿಕ ತರಗತಿ ಇರುವ ಕೋರ್ಸ್‌ಗಳು ಹಾಗೂ ಆನ್‌ಲೈನ್ ತರಗತಿ ಇರುವ ತಮ್ಮಿಚ್ಛೆಯ ಕೋರ್ಸ್‌ಗಳನ್ನ ಕಲಿತು ಕೌಶಲ್ಯ ಮತ್ತು ಜ್ಙಾನಭಂಡಾರ ಹೆಚ್ಚಿಸಿಕೊಳ್ಳಲು ಸ್ವತಂತ್ರರಿರಲಿದ್ದಾರೆ ಎಂಬುದು ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೀಶ್ ಕುಮಾರ್ ಹೇಳಿಕೆ.

Students Now On Can Pursue Two Full-time Courses Simultaneously

ಅಂದರೆ ವಿದ್ಯಾರ್ಥಿಗಳು ಏಕಕಾಲದಲ್ಲಿ ಭೌತಿಕ ತರಗತಿಗಳಿರುವ ಎರಡು ಪೂರ್ಣಾವಧಿ ಕೋರ್ಸ್‌ಗಳನ್ನ ಮಾಡಬಹುದು. ಅಥವಾ ಒಂದು ಭೌತಿಕ ತರಗತಿ ಇರುವ ಪೂರ್ಣಾವಧಿ ಕೋರ್ಸ್ ಜೊತೆಗೆ ಆನ್‌ಲೈನ್ ಅಥವಾ ಕರೆಸ್ಪಾಂಡೆನ್ಸ್ ಮೂಲಕ ಒಂದು ಕೋರ್ಸ್ ಮಾಡಬಹುದು. ಅಥವಾ ಆನ್‌ಲೈನ್‌ನಲ್ಲಿ ಒಟ್ಟೊಟ್ಟಿಗೆ ಎರಡು ಡಿಗ್ರಿಗಳನ್ನು ಓದಬಹುದು.

ಈ ಹೊಸ ಮಾರ್ಗಸೂಚಿ ಕಡ್ಡಾಯವಲ್ಲ:
ಯುಜಿಸಿಯ ಈ ಹೊಸ ಮಾರ್ಗಸೂಚಿ ಕಡ್ಡಾಯವಲ್ಲ. ಇದನ್ನ ಅಳವಡಿಸಿಕೊಳ್ಳುವುದು ಬಿಡುವುದು ಆಯಾ ವಿಶ್ವವಿದ್ಯಾಲಯಗಳಿಗೆ ಬಿಟ್ಟಿದ್ದು. ಅಲ್ಲದೇ ಆಯಾ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಇರುವ ಪರೀಕ್ಷೆ ಇತ್ಯಾದಿ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎರಡು ಪದವಿ ಕೋರ್ಸ್ ಓದಬೇಕೆಂದು ಬಯಸುವ ಒಬ್ಬ ವಿದ್ಯಾರ್ಥಿ ಆ ಎರಡು ಕೋರ್ಸ್ ಪ್ರವೇಶಕ್ಕೆ ನಿಗದಿಯಾಗಿರುವ ಪ್ರವೇಶ ಪರೀಕ್ಷೆಯನ್ನ ಬರೆದು ಅರ್ಹತೆ ಪಡೆಯಬೇಕಾಗಬಹುದು.

Students Now On Can Pursue Two Full-time Courses Simultaneously

ಯುಜಿಸಿ ಮಾರ್ಗಸೂಚಿಯ ಪ್ರಮುಖಾಂಶಗಳು:
ಒಬ್ಬ ವಿದ್ಯಾರ್ಥಿ ಏಕಕಾಲದಲ್ಲಿ ಎರಡು ಪೂರ್ಣಾವಧಿ ಶೈಕ್ಷಣಿಕ ಕೋರ್ಸ್ ಮಾಡಬಹುದು
ಎರಡು ಕೋರ್ಸ್‌ಗಳ ಪ್ರವೇಶಕ್ಕೆ ನಿಗದಿಯಾಗಿರುವ ಪರೀಕ್ಷೆ ಇತ್ಯಾದಿ ಅರ್ಹತಾ ಮಾನದಂಡವನ್ನು ವಿದ್ಯಾರ್ಥಿ ಪೂರೈಸಬೇಕು.
ಎರಡು ಕೋರ್ಸ್‌ಗಳ ಟೈಮಿಂಗ್ ಬೇರೆ ಬೇರೆಯದ್ದಾಗಿರಬೇಕು.
ಯುಜಿಸಿ ಮಾರ್ಗಸೂಚಿಯನ್ನ ಸ್ವೀಕರಿಸುವ ಆಯ್ಕೆ ವಿಶ್ವವಿದ್ಯಾಲಯಗಳಿಗೆ ಬಿಟ್ಟಿದ್ದು
ಎಂಫಿಲ್, ಪಿಎಚ್‌ಡಿ ಕೋರ್ಸ್‌ಗಳಿಗೆ ಇದು ಅನ್ವಯ ಆಗುವುದಿಲ್ಲ.

ಈಗ ಭೌತಿಕ ತರಗತಿಗಳಿಗೆ ಹೆಚ್ಚು ವಿದ್ಯಾರ್ಥಿಗಳನ್ನ ಸೇರಿಸಿಕೊಳ್ಳಲು ಕಷ್ಟಸಾಧ್ಯ. ಹೀಗಾಗಿ, ಆನ್‌ಲೈನ್ ಕೋರ್ಸ್‌ಗಳಿಗೆ ಬೇಡಿಕೆ ವಿಪರೀತ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯುಜಿಸಿ ತಿದ್ದುಪಡಿ ನಿಯಮಾವಳಿಗಳನ್ನ ಬಿಡುಗಡೆ ಸದ್ಯದಲ್ಲೇ ಬಿಡುಗಡೆ ಮಾಡಲಿದೆ ಎಂಬ ವಿಚಾರವನ್ನು ಯುಜಿಸಿ ಅಧ್ಯಕ್ಷರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+