Indian Railways: ಭಾರತೀಯ ರೈಲ್ವೆಯಿಂದ ಮಹಿಳೆಯರಿಗೆ ಸಿಗುವ ವಿಶೇಷ ಸೌಲಭ್ಯಗಳಿವು-ಮಾಹಿತಿ,ವಿವರ
ಭಾರತೀಯ ರೈಲ್ವೆಯು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಆಗಾಗ ವಿಶೇಷ ರೈಲುಗಳನ್ನು ಬಿಡುತ್ತಲೇ ಬರುತ್ತಿದೆ. ಅಷ್ಟೇ ಅಲ್ಲದೆ ಇದೀಗ ಮಹಿಳಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಹಾಗಾದರೆ ಆ ಸೌಲಭ್ಯಗಳು ಯಾವುವು ಹಾಗೂ ಇದರಿಂದ ಆಗುವ ಪ್ರಯೋಜನೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಭಾರತ ಸರ್ಕಾರ ಹಲವು ಪ್ರಮುಖ ಕ್ರಮಗಳನ್ನು ಯೋಜಿಸುತ್ತದೆ.

ರೈಲ್ವೇ ಟಿಸಿ ಮಹಿಳೆಯನ್ನು ರಾತ್ರಿಯಲ್ಲಿ ರೈಲಿನಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಯಾವುದೋ ಕಾರಣಕ್ಕಾಗಿ ಮಹಿಳೆ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ರಾತ್ರಿ ವೇಳೆ ರೈಲ್ವೇ ಟಿಸಿ ಮಹಿಳೆಯನ್ನು ರೈಲಿನಿಂದ ಇಳಿಸಲು ಸಾಧ್ಯವಿಲ್ಲ. ಯಾವುದೇ ಟಿಸಿ ಇದನ್ನು ಮಾಡಿದರೆ ಮಹಿಳೆ ಅವರ ವಿರುದ್ಧ ರೈಲ್ವೆ ಪ್ರಾಧಿಕಾರಕ್ಕೆ ದೂರು ನೀಡಬಹುದು ಎಂದು ತಿಳಿಸಿದೆ.
ರಾತ್ರಿ ವೇಳೆ ಕಾರಣಾಂತರಗಳಿಂದ ಕೆಳಗಿಳಿಸಿದರೆ ಆಕೆಯ ಸುರಕ್ಷತೆಯ ಜವಾಬ್ದಾರಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವುದು ಕಾನೂನುಬಾಹಿರ ಎಂಬುದನ್ನು ಗಮನಿಸಿ. ಆದ್ರೆ ಕೆಲವು ಕಾರಣಗಳಿಂದ ಮಹಿಳೆಯನ್ನು ರಾತ್ರಿಯಲ್ಲಿ ರೈಲಿನಿಂದ ಕೆಳಗಿಳಿಸಿದರೆ ಆಕೆಯ ಸುರಕ್ಷತೆಯ ಜವಾಬ್ದಾರಿ ಆರ್‌ಪಿಎಫ್ ಅಥವಾ ಜಿಆರ್‌ಪಿಗೆ ಇರುತ್ತದೆ. ಮಹಿಳೆಯನ್ನು ಅವರು ಬಿಟ್ಟು ಹೋದ ಸ್ಥಳದಲ್ಲಿ ಅವರು ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆಯೇ ಎಂದು ಅವರು ತಿಳಿದುಕೊಳ್ಳಬೇಕು.
ಭಾರತೀಯ ರೈಲ್ವೇ ಪ್ರತಿ ರೈಲಿನಲ್ಲಿ ಮಹಿಳೆಯರಿಗೆ ಕೋಟಾ ನೀಡಿದೆ. ಪ್ರತಿ ಸ್ಲೀಪರ್ ಕೋಚ್‌ನಲ್ಲಿ 7 ಲೋವರ್ ಬರ್ತ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಆದರೆ, 3 ಟಯರ್ ಎಸಿಯಲ್ಲಿ 4-5 ಸೀಟುಗಳು, 2 ಎಸಿಯಲ್ಲಿ 3-4 ಲೋವರ್ ಬರ್ತ್‌ಗಳು ಮಹಿಳೆಯರಿಗೆ ಮೀಸಲಾಗಿದೆ. ಗರ್ಭಿಣಿಯರು, ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ರೈಲಿನಲ್ಲಿ ಪ್ರಯಾಣಿಸಿದರೆ ಅವರಿಗೆ ಈ ಕೋಟಾದಡಿ ಸೀಟು ನೀಡಲಾಗುತ್ತದೆ.
ಇನ್ನು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು ಭಾರತೀಯ ರೈಲ್ವೇಯಲ್ಲಿ ಲೋವರ್ ಬರ್ತ್ ಸೀಟುಗಳನ್ನು ಪಡೆಯುತ್ತಾರೆ. ಈ ವ್ಯವಸ್ಥೆಯು ಭಾರತೀಯ ರೈಲ್ವೆಯಲ್ಲಿ ಸ್ವಯಂಚಾಲಿತ ಆಗಿದೆ. ಮಹಿಳೆಯು ಟಿಕೆಟ್ ಕಾಯ್ದಿರಿಸುವಾಗ ಸೀಟ್ ಆಯ್ಕೆಯಲ್ಲಿ ಲೋವರ್ ಬರ್ತ್ ಅನ್ನು ಆಯ್ಕೆ ಮಾಡದಿದ್ದರೆ ಮತ್ತು ಅವರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿದ್ದರೆ, ಆಕೆಗೆ ಲೋವರ್ ಸೀಟು ಸಿಗುತ್ತದೆ.
ಇಲಾಖೆಯ ಪ್ರಕಾರ, ಮಹಿಳೆಯರಿಗೆ ಎಕ್ಸ್‌ಪ್ರೆಸ್ ರೈಲುಗಳಲ್ಲಿಯೂ ಸಹ ಕಾಯ್ದಿರಿಸದ ವರ್ಗದಲ್ಲಿ ಕೋಚ್ ಸಿಗುತ್ತದೆ. ಅಲ್ಲದೆ ಉಪನಗರ ರೈಲುಗಳು ಅಥವಾ ಸ್ಥಳೀಯ ರೈಲುಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೋಚ್ ಸಹ ಇರುತ್ತದೆ.
ಭಾರತೀಯ ರೈಲ್ವೇ ಮಹಿಳೆಯರಿಗಾಗಿ ಹಲವು ವಿಶೇಷ ರೈಲುಗಳನ್ನು ಸಹ ನಡೆಸುತ್ತಿದೆ. ರೈಲ್ವೇ ಕಚೇರಿಗೆ ಭೇಟಿ ನೀಡುವ ಮೂಲಕ ಈ ರೈಲುಗಳ ಬಗ್ಗೆ ಮಾಹಿತಿ ಪಡೆಯಬಹುದು. ಅಲ್ಲದೆ, ಅನೇಕ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕಾಯುವ ಕೊಠಡಿಗಳನ್ನು ಮಾಡಲಾಗಿದೆ.
ಮಹಿಳಾ ಪ್ರಯಾಣಿಕರು ಸಹಾಯವಾಣಿ ಸಂಖ್ಯೆ 182 ಅನ್ನು ಡಯಲ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ಭದ್ರತಾ ಸಹಾಯವನ್ನು ಕೋರಬಹುದು. ಈ ಸಂಖ್ಯೆಯು ನೇರವಾಗಿ ರೈಲ್ವೆ ಸಂರಕ್ಷಣಾ ಪಡೆ (RPF) ಅಡಿಯಲ್ಲಿ ಬರುವ ವಿಭಾಗೀಯ ಭದ್ರತಾ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿದ್ದು, ಅಧಿಕಾರಿಗಳು ಮಹಿಳಾ ಪ್ರಯಾಣಿಕರಿಗೆ ಅತೀ ಬೇಗ ನೆರವು ನೀಡುತ್ತಾರೆ.
ಆರ್‌ಪಿಎಫ್ 'ಮೇರಿ ಸಹೇಲಿ' ಅಭಿಯಾನವನ್ನು ನಡೆಸುತ್ತಿದೆ, ಇದರ ಅಡಿಯಲ್ಲಿ ಅಧಿಕಾರಿಗಳು ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸುತ್ತಾರೆ. ಪೊಲೀಸ್ ಸಿಬ್ಬಂದಿ ಯಾವುದೇ ಕಾಳಜಿ ಅಥವಾ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ದೂರದ ಪ್ರಯಾಣದಲ್ಲಿ ಸುತ್ತಾಕುತ್ತಾರೆ. ಮಹಿಳೆಯರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲು ಸಮಸ್ಯೆಗಳನ್ನು ತಕ್ಷಣವೇ ನಿವಾರಿಸಲಾಗುತ್ತದೆ.












Click it and Unblock the Notifications