Get Updates
Get notified of breaking news, exclusive insights, and must-see stories!

Surya Grahan 2023 Live: ಪೂರ್ಣಗೊಂಡ ವರ್ಷದ ಮೊದಲ ಸೂರ್ಯಗ್ರಹಣ: ಗ್ರಹಣದ ನಂತರ ದೇವರ ಪೂಜೆ ಮಾಡುವುದು ಮಂಗಳಕರ

2023ನೇ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20 ಗುರುವಾರ ವೈಶಾಖ ಅಮವಾಸ್ಯೆಯ ಸಮಯದಲ್ಲಿ ಸಂಭವಿಸುತ್ತದೆ. ಭಾರತವನ್ನು ಹೊರತುಪಡಿಸಿ ವಿಶ್ವದ ವಿವಿಧ ಭಾಗಗಳಿಂದ ಇದು ಗೋಚರಿಸುತ್ತದೆ. 2023ರಲ್ಲಿ ಎರಡು ಚಂದ್ರಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣಗಳು ಸೇರಿದಂತೆ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ.

ಭಾರತೀಯ ಜ್ಯೋತಿಷ್ಯ ಕ್ಯಾಲೆಂಡರ್ ಪ್ರಕಾರ 2023 ರ ಮೊದಲ ಸೂರ್ಯಗ್ರಹಣ ಬೆಳಿಗ್ಗೆ 07:04 ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 12:29 ಕ್ಕೆ ಕೊನೆಗೊಳ್ಳುತ್ತದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಸೂತಕ ಅವಧಿಯು ಅನ್ವಯಿಸುತ್ತದೆ. ಸೂರ್ಯ ಗ್ರಹಣವು ಆಕಾಶದಲ್ಲಿ ನಡೆಯುವ ಒಂದು ಅದ್ಭುತ ಘಟನೆಯಾಗಿದ್ದು, ಇದರಲ್ಲಿ ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಹಾದುಹೋಗುತ್ತಾನೆ. ಇದರಿಂದಾಗಿ ಸ್ವಲ್ಪ ಸಮಯ ಭೂಮಿಯಿಂದ ಸೂರ್ಯನ ಬೆಳಕನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮರೆಯಾಗುತ್ತದೆ.

Solar Eclipse 2023 Live Updates in Kannada: Timings, Visibility, Latest News & Highlights

2023 ರ ಸೂರ್ಯಗ್ರಹಣ ಆಸ್ಟ್ರೇಲಿಯಾ, ಪೂರ್ವ ಮತ್ತು ದಕ್ಷಿಣ ಏಷ್ಯಾ, ಪೆಸಿಫಿಕ್ ಮಹಾಸಾಗರ, ಅಂಟಾರ್ಕ್ಟಿಕಾ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ. ನಂಬಿಕೆಗಳ ಪ್ರಕಾರ, ಸೂರ್ಯಗ್ರಹಣವು ಅಮಾವಾಸ್ಯೆಯಂದು ನಡೆದರೆ, ಚಂದ್ರಗ್ರಹಣವು ಹುಣ್ಣಿಮೆ ಅಥವಾ ಪೂರ್ಣಿಮಾ ದಿನ ನಡೆಯುತ್ತದೆ. 2023 ರ ಮೊದಲ ಸೂರ್ಯಗ್ರಹಣದ ಸಮಯ, ಕ್ಷಣ ಕ್ಷಣದ ಅಪ್ಡೇಟ್ಸ್‌ಗಾಗಿ ಇಲ್ಲಿ ಪರಶೀಲಿಸಿ..

Apr 20, 2023, 12:43 pm IST

ಸೂರ್ಯಗ್ರಹಣ ಮುಗಿದ ನಂತರ ಗರ್ಭಿಣಿಯರು ಮಾಡಬೇಕಾದ್ದದ್ದು

ವರ್ಷದ ಮೊದಲ ಸೂರ್ಯಗ್ರಹಣ ಪೂರ್ಣಗೊಂಡಿದೆ. ಗರ್ಭಿಣಿಯರು ಸೂರ್ಯಗ್ರಹಣ ಮುಗಿದ ನಂತರ ಸ್ನಾನ ಮಾಡಬೇಕು. ದೇವರ ಪೂಜೆ ಮಾಡಬೇಕು. ಸೂರ್ಯಗ್ರಹಣ ಮುಗಿದ ನಂತರ, ಎಳ್ಳು ಮತ್ತು ಕಾಳುಗಳನ್ನು ದಾನ ಮಾಡಲು ಮರೆಯದಿರಿ.
Apr 20, 2023, 12:34 pm IST

ವರ್ಷದ ಮೊದಲ ಸೂರ್ಯಗ್ರಹಣ ಮುಗಿದಿದೆ

ವರ್ಷದ ಮೊದಲ ಸೂರ್ಯಗ್ರಹಣ ಮುಗಿದಿದೆ. ಗ್ರಹಣದ ನಂತರ ದೇವಾನುದೇವತೆಗಳ ದರ್ಶನ ಪಡೆಯುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಗ್ರಹಣ ಮುಗಿದ ನಂತರ, ಸ್ನಾನ ಮಾಡಿದ ನಂತರ ದೇವರ ದರ್ಶನವನ್ನು ಮಾಡಿ.
Apr 20, 2023, 12:14 pm IST

ಪ್ಯಾರಾನಾಕ್: ಆಕಾಶವನ್ನು ಅಲಂಕರಿಸಿದ ಸೂರ್ಯಗ್ರಹಣ

ಅಪರೂಪದ ಹೈಬ್ರಿಡ್ ಸೂರ್ಯಗ್ರಹಣ ಗುರುವಾರ ಬೆಳಿಗ್ಗೆ ಪ್ಯಾರಾನಾಕ್ ನಗರದ ಆಕಾಶವನ್ನು ಅಲಂಕರಿಸುತ್ತು ಹೀಗೆ...
Apr 20, 2023, 12:12 pm IST

ಸೂರ್ಯಗ್ರಹಣದ ನೋಟ

Exmouth ನಿಂದ ಸೂರ್ಯಗ್ರಹಣದ ನೋಟ.
Apr 20, 2023, 11:38 am IST

ಸೂರ್ಯಗ್ರಹಣದ ನಂತರ ಈ ಕೆಲಸವನ್ನು ಮಾಡಿ

ಸೂರ್ಯಗ್ರಹಣ ಮುಗಿದ ನಂತರ ಮನೆಯನ್ನು ಉಪ್ಪುನೀರಿನಿಂದ ಒರೆಸಬೇಕು. ಈ ರೀತಿ ಮಾಡುವುದರಿಂದ ಮನೆಗೆ ಪ್ರವೇಶಿಸುವ ಸೂರ್ಯಗ್ರಹಣದ ನಕಾರಾತ್ಮಕ ಶಕ್ತಿಗಳು ಓಡಿಹೋಗುತ್ತವೆ ಎಂದು ನಂಬಲಾಗುತ್ತದೆ. ಪೂರ್ಣ ಗ್ರಹಣ ಬೆಳಿಗ್ಗೆ 11:26ಕ್ಕೆ ಅಂತ್ಯವಾಗಲಿದೆ. ಮಧ್ಯಾಹ್ನ 12.29ಕ್ಕೆ ಸೂತಕದ ಸಮಯ ಮುಗಿಯಲಿದೆ.
Apr 20, 2023, 11:33 am IST

ಸೂತಕ ಅಂತ್ಯದ ಸರಿಯಾದ ಸಮಯ, ಗ್ರಹಣದ ನಂತರ ಏನು ಮಾಡಬೇಕು?

ಇಂದು ಮಧ್ಯಾಹ್ನ 12.29ಕ್ಕೆ ಸೂತಕದ ಸಮಯ ಮುಗಿಯಲಿದೆ. ಸೂರ್ಯಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಗ್ರಹಣ ಮುಗಿದ ತಕ್ಷಣ ಕೆಲವು ಕೆಲಸಗಳನ್ನು ಮಾಡಬೇಕು. ಸೂರ್ಯಗ್ರಹಣ ಮುಗಿದ ನಂತರ ಇಡೀ ಮನೆಯಲ್ಲಿ ಗಂಗಾಜಲವನ್ನು ಎರಚಬೇಕು.ಮನೆ ಸ್ವಚ್ಚಗೊಳಿಸಿ ಪೂಜೆ ಮಾಡುವ ದೇವರು ಹಾಗೂ ಸ್ಥಳವನ್ನೂ ಶುಚಿಗೊಳಿಸಬೇಕು.
Apr 20, 2023, 11:14 am IST

ಸೂರ್ಯಗ್ರಹಣ ಮುಗಿದ ನಂತರ ಸ್ನಾನ ಮಾಡುವುದು ಅವಶ್ಯಕ

ಸೂರ್ಯಗ್ರಹಣ ಮುಗಿದ ನಂತರ ಸ್ನಾನ ಮಾಡುವುದು ಅವಶ್ಯಕ
ಜ್ಯೋತಿಷ್ಯದಲ್ಲಿ ಗ್ರಹಣ ಮುಗಿದ ನಂತರ ಜನರು ಮೊದಲು ಸ್ನಾನ ಮಾಡಬೇಕು ಎಂದು ಹೇಳಲಾಗುತ್ತದೆ. ಇದರಿಂದ ಮನಸ್ಸು ಮತ್ತು ದೇಹ ಎರಡೂ ಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಗ್ರಹಣದ ನಕಾರಾತ್ಮಕ ಪರಿಣಾಮವೂ ಕೊನೆಗೊಳ್ಳುತ್ತದೆ. ಇದರೊಂದಿಗೆ ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಇನ್ನೂ ಬಳಸುವುದು ಉತ್ತಮ.
Apr 20, 2023, 11:05 am IST

ಸೂರ್ಯನಿಂದ ಚಂದ್ರ ನಿರ್ಗಮನ ಆರಂಭ

ಸೂರ್ಯನಿಂದ ಚಂದ್ರ ನಿರ್ಗಮನ ಆರಂಭ
ಸಂಪೂರ್ಣ ಸೂರ್ಯಗ್ರಹಣದ ಬಳಿಕ ಚಂದ್ರ ಸೂರ್ಯನಿಂದ ನಿರ್ಗಮಿಸುತ್ತಿದ್ದಾನೆ. ಸೂರ್ಯಗ್ರಹಣ ಇಂದು (ಏಪ್ರಿಲ್ 20) ವೈಶಾಖ ಅಮವಾಸ್ಯೆಯ ಸಮಯದಲ್ಲಿ ಆರಂಭವಾಯಿತು. ಭಾಗಶಃ ಸೂರ್ಯಗ್ರಹಣ ಬೆಳಿಗ್ಗೆ 07:04ಕ್ಕೆ ಆರಂಭವಾಯಿತು. ಪೂರ್ಣ ಸೂರ್ಯಗ್ರಹಣ ಬೆಳಿಗ್ಗೆ 08:07ಕ್ಕೆ, ಗರಿಷ್ಠ ಸೂರ್ಯಗ್ರಹಣ ಬೆಳಿಗ್ಗೆ 09:46ಕ್ಕೆ ಸಂಭವಿಸಿದೆ. ಪೂರ್ಣ ಗ್ರಹಣ ಬೆಳಿಗ್ಗೆ 11:26ಕ್ಕೆ ಅಂತ್ಯವಾಗಲಿದೆ.
Apr 20, 2023, 10:50 am IST

ಸೂರ್ಯಗ್ರಹಣದ ಸಮಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ

ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು. ಹಾಗೆಯೇ ಯಾವುದೇ ದೇವಾಲಯ ಅಥವಾ ಧಾರ್ಮಿಕ ಸ್ಥಳವನ್ನು ಪ್ರವೇಶಿಸಬಾರದು. ಯಾವುದೇ ವಿಗ್ರಹವನ್ನು ಮುಟ್ಟಬೇಡಿ. ಎಣ್ಣೆ ಮಸಾಜ್ ಅನ್ನು ಮಾಡಬೇಡಿ. ಕೂದಲು ಅಥವಾ ಉಗುರುಗಳನ್ನು ಕತ್ತರಿಸಬಾರದು.
Apr 20, 2023, 10:43 am IST

ಸೂರ್ಯಗ್ರಹಣದ ಸಮಯದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ

ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು. ಹಾಗೆಯೇ ಯಾವುದೇ ದೇವಾಲಯ ಅಥವಾ ಧಾರ್ಮಿಕ ಸ್ಥಳವನ್ನು ಪ್ರವೇಶಿಸಬಾರದು. ಯಾವುದೇ ವಿಗ್ರಹವನ್ನು ಮುಟ್ಟಬೇಡಿ. ಎಣ್ಣೆ ಮಸಾಜ್ ಅನ್ನು ಮಾಡಬೇಡಿ. ಕೂದಲು ಅಥವಾ ಉಗುರುಗಳನ್ನು ಕತ್ತರಿಸಬಾರದು.
Apr 20, 2023, 10:40 am IST

ಸೂರ್ಯಗ್ರಹಣ 2023 ವೃಶ್ಚಿಕ ರಾಶಿಯ ಮೇಲೆ ಪರಿಣಾಮ

ಸೂರ್ಯಗ್ರಹಣ 2023 ವೃಶ್ಚಿಕ ರಾಶಿಯ ಮೇಲೆ ಪರಿಣಾಮ
ಸೂರ್ಯಗ್ರಹಣ ವೃಶ್ಚಿಕ ರಾಶಿಯ ವ್ಯಕ್ತಿಗಳ ಮೇಲೆ ಮಿಶ್ರ ಪರಿಣಾಮಗಳನ್ನು ಬೀರಬಹುದು. ಇದು ಆತ್ಮವಿಶ್ವಾಸ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪ್ರಭಾವ ಬೀರಬಹುದು. ಅನಗತ್ಯ ಚರ್ಚೆಗಳು ಮತ್ತು ರಹಸ್ಯ ಶತ್ರುಗಳ ವಿರುದ್ಧ ಎಚ್ಚರಿಕೆಯನ್ನು ಸೂಚಿಸಲಾಗುತ್ತದೆ. ಆರ್ಥಿಕ ಪರಿಸ್ಥಿತಿಗಳಲ್ಲಿ ಸಂಭಾವ್ಯ ಸುಧಾರಣೆಯೊಂದಿಗೆ ಹೂಡಿಕೆಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆಯ ನಿರ್ಧಾರಗಳು ಅಗತ್ಯ.
Apr 20, 2023, 10:32 am IST

ಸೂರ್ಯಗ್ರಹಣ 2023 ಧನು ರಾಶಿಯ ಮೇಲೆ ಪರಿಣಾಮ

ಧನು ರಾಶಿಯ ವ್ಯಕ್ತಿಗಳು ತಮ್ಮ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಅವರ ಹಿಂದಿನ ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಪರಿಣಾಮವಾಗಿ ಹಠಾತ್ ಆರ್ಥಿಕ ಲಾಭಗಳು ಉಂಟಾಗಬಹುದು. ಧನು ರಾಶಿಯವರು ಜೀವನದ ಅನೇಕ ಕ್ಷೇತ್ರಗಳಲ್ಲಿ ಯಶಸ್ವಿಯಾಗಬಹುದು. ಅನಗತ್ಯ ವಾದಗಳನ್ನು ತಪ್ಪಿಸುವುದು ಮುಖ್ಯವಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಬಹುದು. ಧನು ರಾಶಿಯವರ ಕುಟುಂಬ ಜೀವನ ಅನುಕೂಲಕರ ಫಲಿತಾಂಶಗಳನ್ನು ತರಬಹುದು.
Apr 20, 2023, 10:30 am IST

ಸೂರ್ಯಗ್ರಹಣ 2023 ಕನ್ಯಾ ರಾಶಿಯ ಮೇಲೆ ಪರಿಣಾಮ

ಸೂರ್ಯಗ್ರಹಣ 2023 ಕನ್ಯಾ ರಾಶಿಯ ಮೇಲೆ ಪರಿಣಾಮ
ಸೂರ್ಯಗ್ರಹಣದಿಂದ ಕನ್ಯಾ ರಾಶಿಯ ವ್ಯಕ್ತಿಗಳ ವೃತ್ತಿಜೀವನದಲ್ಲಿ ಸವಾಲುಗಳನ್ನು ಉಂಟುಮಾಡಬಹುದು. ವರ್ತನೆಯಲ್ಲಿ ಬದಲಾವಣೆ ಮತ್ತು ವೆಚ್ಚಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಾವಶ್ಯಕ. ವಿಶೇಷವಾಗಿ ಕಾಲೋಚಿತ ರೋಗಗಳು ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದ ಆರೋಗ್ಯದ ಕಾಳಜಿಗಳು ಅವಶ್ಯಕ. ಮಕ್ಕಳಿಂದ ಒಳ್ಳೆಯ ಸುದ್ದಿ ನಿರೀಕ್ಷಿಸಬಹುದು.
Apr 20, 2023, 10:07 am IST

ಸೂರ್ಯಗ್ರಹಣ 2023 ಸಿಂಹ ರಾಶಿಯ ಮೇಲೆ ಪರಿಣಾಮ

ಸೂರ್ಯಗ್ರಹಣ 2023 ಸಿಂಹ ರಾಶಿಯ ಮೇಲೆ ಪರಿಣಾಮ
ಸೌರ ಗ್ರಹಣ ಸಿಂಹ ರಾಶಿಯ ವ್ಯಕ್ತಿಗಳಿಗೆ ಕೆಲಸದಲ್ಲಿ ಸುಧಾರಿತ ಸಹಕಾರವನ್ನು ತರಬಹುದು. ಆದರೆ ಚಾಲನೆ ಮಾಡುವಾಗ ಜಾಗರೂಕರಾಗಿರಿ. ಈ ಸಮಯದಲ್ಲಿ ಕಾನೂನು ವಿವಾದಗಳನ್ನು ಎದುರಿಸಬಹುದು. ಆರೋಗ್ಯ ಸುಧಾರಿಸುತ್ತದೆ. ಪೋಷಕರ ಸೇವೆ ಮಾಡುವ ಅವಕಾಶಗಳು ಸಿಗಬಹುದು. ಅನಿರೀಕ್ಷಿತ ಅತಿಥಿಗಳಿಂದ ಆಹ್ಲಾದಕರ ಆಶ್ಚರ್ಯಗಳನ್ನು ಸಹ ಸ್ವೀಕರಿಸುವಿರಿ.
Apr 20, 2023, 10:02 am IST

ವೈಶಾಖ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ

ವೈಶಾಖ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸಿದೆ. ಅಮವಾಸ್ಯೆಯ ದಿನ ಪೂರ್ವಜರಿಗೆ ನೈವೇದ್ಯಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಪೂರ್ವಜರ ಹೆಸರಿನಲ್ಲಿ ದಾನ ಮಾಡುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. ಈ ದಿನ ಸೂರ್ಯದೇವನೊಂದಿಗೆ ವಿಷ್ಣುವನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ.
Apr 20, 2023, 9:58 am IST

ಸೂರ್ಯಗ್ರಹಣ- ಬಾನಂಗಳದಲ್ಲಿ 'ಬೆಂಕಿಯ ಉಂಗುರ'

ಸೂರ್ಯಗ್ರಹಣ- ಬಾನಂಗಳದಲ್ಲಿ 'ಬೆಂಕಿಯ ಉಂಗುರ'
ಸೂರ್ಯನನ್ನು ಚಂದ್ರ ಸಂಪೂರ್ಣವಾಗಿ ಮರೆ ಮಾಡಿದ್ದಾನೆ. ಪಶ್ಚಿಮ ಆಸ್ಟ್ರೇಲಿಯಾದ ನಿಂಗಲೂ ಕರಾವಳಿಯಲ್ಲಿ ಕತ್ತಲು ಆವರಿಸಿದೆ. ವೈಶಾಖ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸಿದೆ. ಬಾನಂಗಳದಲ್ಲಿ ಬೆಂಕಿಯ ಉಂಗುರ ಕಾಣಿಸುತ್ತಿದೆ.
Apr 20, 2023, 9:35 am IST

ಗ್ರಹಣದ ಸಮಯದಲ್ಲಿ ಈ ಪಾಠವನ್ನು ಮಾಡಿ

ಸೂರ್ಯಗ್ರಹಣದ ಸಮಯದಲ್ಲಿ, ಸೂರ್ಯನಿಗೆ ಸಂಬಂಧಿಸಿದ ಗ್ರಂಥಗಳಾದ ಸೂರ್ಯ ದೇವರ ಆರಾಧನೆ, ಆದಿತ್ಯ ಹೃದಯ ಸ್ತೋತ್ರ, ಸೂರ್ಯಾಷ್ಟಕ ಸ್ತೋತ್ರಗಳನ್ನು ಪಠಿಸಬೇಕು. ಇದಲ್ಲದೆ, ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡವನ್ನು ಪಠಿಸುವುದನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Apr 20, 2023, 9:25 am IST

ಸೂರ್ಯಗ್ರಹಣ 2023: ಬೆಂಕಿಯ ಉಂಗುರ ಕಾಣಿಸುವುದು ಯಾವಾಗ?

ಬೆಳಿಗ್ಗೆ 9:46:53 ರ ಹೊತ್ತಿಗೆ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಈ ವೇಳೆ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತಾನೆ. ಇದು ಆಕಾಶದಲ್ಲಿ ಸಂಭವಿಸುವ ಅದ್ಬುತ ನೋಟವಾಗಿದೆ. ಈ ವೇಳೆ ಕೆಲ ಪ್ರದೇಶಗಳಲ್ಲಿ ಕತ್ತಲೆ ಆವರಿಸುತ್ತದೆ. ಜೊತೆಗೆ ಸೂರ್ಯನನ್ನು ಚಂದ್ರ ಆವರಿಸಿದಾಗ ಈ ದೃಶ್ಯ ವೃತ್ತಾಕಾರದಲ್ಲಿ ಕಾಣುತ್ತದೆ. ಇದನ್ನು 'ಬೆಂಕಿಯ ಉಂಗುರ' ಎಂದು ಕೂಡ ಕರೆಯಲಾಗುತ್ತದೆ.
Apr 20, 2023, 9:02 am IST

ಗ್ರಹಣ ಕಾಲದಲ್ಲಿ ಈ ಕೆಲಸ ಮಾಡಬೇಡಿ

ಸೂರ್ಯಗ್ರಹಣದ ಸಮಯದಲ್ಲಿ ಯಾವುದೇ ನಿರ್ಜನ ಸ್ಥಳ ಅಥವಾ ಸ್ಮಶಾನಕ್ಕೆ ಹೋಗಬೇಡಿ. ಈ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಎಂದು ನಂಬಲಾಗುತ್ತದೆ. ಗ್ರಹಣ ಕಾಲದಲ್ಲಿ ಮನೆಯಲ್ಲಿಯೇ ಇರಬೇಕು. ಗ್ರಹಣದ ಸಮಯದಲ್ಲಿ ಮಂತ್ರಗಳನ್ನು ಪಠಿಸುವುದರಿಂದ ಫಲಪ್ರದವಾಗುತ್ತದೆ. ಈ ಸಮಯದಲ್ಲಿ ದೇವರ ಮೂರ್ತಿಯನ್ನು ಮುಟ್ಟಬೇಡಿ. ಗ್ರಹಣ ಕಾಲದಲ್ಲಿ ಏನನ್ನೂ ತಿನ್ನಬೇಡಿ ಮತ್ತು ಕುಡಿಯುವುದನ್ನು ತಪ್ಪಿಸಿ. ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಿ. ಈ ದಿನ ಪೂರ್ವಜರನ್ನು ಶಾಂತ ಮನಸ್ಸಿನಿಂದ ಸ್ಮರಿಸಬೇಕು.
Apr 20, 2023, 8:46 am IST

ಸೂರ್ಯಗ್ರಹಣ 2023: ಮಿಥುನ ರಾಶಿಯ ಮೇಲೆ ಪರಿಣಾಮ

ಸೂರ್ಯಗ್ರಹಣ 2023: ಮಿಥುನ ರಾಶಿಯ ಮೇಲೆ ಪರಿಣಾಮ
ಈ ಸೂರ್ಯಗ್ರಹಣ ಮಿಥುನ ರಾಶಿಯ ವ್ಯಕ್ತಿಗಳಿಗೆ ಆತ್ಮ ವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಶಿಕ್ಷಣದಲ್ಲಿ ಹೆಚ್ಚಿನ ಪ್ರಯತ್ನ ಅಗತ್ಯವಿರುತ್ತದೆ. ಮತ್ತು ಸಂಬಂಧಗಳಲ್ಲಿ ಸಂಭಾವ್ಯ ಭಿನ್ನಾಭಿಪ್ರಾಯಗಳು ಎದುರಾಗಬಹುದು. ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಉಂಟಾಗಬಹುದು. ವ್ಯಾಪಾರದಲ್ಲಿ ಆರ್ಥಿಕ ಬೆಳವಣಿಗೆ ಹೊಂದುವ ಸಾಧ್ಯತೆ ಇದೆ.
Apr 20, 2023, 8:43 am IST

ಸೂರ್ಯ ಗ್ರಹಣ ಮಂತ್ರ: ಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿ

ಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಈ ಮಂತ್ರಗಳನ್ನು ಪಠಿಸಿ- 1. ಓಂ ಆದಿತ್ಯಾಯ ವಿದ್ಮಹೇ ದಿವಾಕರಾಯ ಧೀಮಹಿ ತನ್ನೋ: ಸೂರ್ಯ: ಪ್ರಚೋದಯಾತ್. 2. ಓಂ ಹ್ರೀ ಹ್ರೀ ಸೂರ್ಯ ಸಹಸ್ರಕಿರಣರಾಯ, ಇಚ್ಛಿತ ಫಲ, ದೇಹ, ದೇಹ ಸ್ವಾಹಾ. 3. ಅಹಿ ಸೂರ್ಯ ಶಾಸ್ತ್ರಾಂಶೋ ತೇಜೋ ರಾಶಿ ಜಗತಪಾತೇ, ಅನುಕಂಪಯೇಮಾಂ ಭಕ್ತ್ಯಾ, ಭಕ್ತ್ಯಾ. 4. ಓಂ ಹ್ರೀ ಘೃಣಿ: ಸೂರ್ಯ ಆದಿತ್ಯ: ಓಂ.
Apr 20, 2023, 8:39 am IST

ಎಕ್ಸ್‌ಮೌತ್‌ ಹೊರಭಾಗದಲ್ಲಿ ಸೂರ್ಯಗ್ರಹಣ ವೀಕ್ಷಣೆ

ಎಕ್ಸ್‌ಮೌತ್‌ನ ಹೊರಭಾಗದಲ್ಲಿ ಸೂರ್ಯಗ್ರಹಣ ವೀಕ್ಷಿಸಲೆಂದು ವ್ಯವಸ್ಥೆ ಮಾಡಲಾದ ವೀಕ್ಷಣಾ ಪ್ರದೇಶದಲ್ಲಿ ಸಾಕಷ್ಟು ದುಬಾರಿ ಲೆನ್ಸ್‌ಗಳಲ್ಲಿ ಜನ ಸೂರ್ಯಗ್ರಹಣವನ್ನು ವೀಕ್ಷಿಸುತ್ತಿದ್ದಾರೆ. ಆಕಾಶದಲ್ಲಿ ಸೂರ್ಯಯನ್ನು ಚಂದ್ರ ಮರೆ ಮಾಡುವ ಅದ್ಬುತ ದೃಶ್ಯವನ್ನು ನೋಡಲು ಎಕ್ಸ್‌ಮೌತ್‌ನ ಹೊರಭಾಗದಲ್ಲಿ ಜನ ಸೇರಿದ್ದಾರೆ.
Apr 20, 2023, 8:22 am IST

ಪೂರ್ಣ ಸೂರ್ಯಗ್ರಹಣದ ಅವಧಿ

ಸೂರ್ಯಗ್ರಹಣ ಇಂದು (ಏಪ್ರಿಲ್ 20) ವೈಶಾಖ ಅಮವಾಸ್ಯೆಯ ಸಮಯದಲ್ಲಿ ಆರಂಭವಾಗಿದೆ. ಭಾಗಶಃ ಸೂರ್ಯಗ್ರಹಣ ಬೆಳಿಗ್ಗೆ 07:04ಕ್ಕೆ ಆರಂಭವಾಗುತ್ತದೆ. ಪೂರ್ಣ ಸೂರ್ಯಗ್ರಹಣ ಬೆಳಿಗ್ಗೆ 08:07ಕ್ಕೆ, ಗರಿಷ್ಠ ಸೂರ್ಯಗ್ರಹಣ ಬೆಳಿಗ್ಗೆ 09:46ಕ್ಕೆ, ಪೂರ್ಣ ಗ್ರಹಣ ಬೆಳಿಗ್ಗೆ 11:26ಕ್ಕೆ ಅಂತ್ಯವಾಗಲಿದೆ.
Apr 20, 2023, 8:21 am IST

Solar Eclipse 2023: ಸೂರ್ಯಗ್ರಹಣ ದಿನಾಂಕ, ಸಮಯ, ವೀಕ್ಷಣಾ ವಿಧಾನಗಳು, ಇನ್ನಷ್ಟು ಮಾಹಿತಿ ಇಲ್ಲಿದೆ

ಏಪ್ರಿಲ್ 20 ಗುರುವಾರ ವೈಶಾಖ ಅಮವಾಸ್ಯೆಯ ಸಮಯದಲ್ಲಿ ಸೂರ್ಯಗ್ರಹಣ ಸಂಭವಿಸುತ್ತದೆ. ಇದು 2023ನೇ ವರ್ಷದ ಮೊದಲ ಸೂರ್ಯಗ್ರಹಣವಾಗಿದ್ದು, ಭಾರತವನ್ನು ಹೊರತುಪಡಿಸಿ ವಿಶ್ವದ ವಿವಿಧ ಭಾಗಗಳಿಂದ ಇದು ಗೋಚರಿಸುತ್ತದೆ. 2023ರಲ್ಲಿ ಎರಡು ಚಂದ್ರಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣಗಳು ಸೇರಿದಂತೆ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ.
Apr 20, 2023, 8:20 am IST

Solar Eclipse 2023 on April 20: ಸೂರ್ಯಗ್ರಹಣ ಸೂತಕ ಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

ಈ ಬಾರಿ ವೈಶಾಖ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹಣದ ಸಮಯದಲ್ಲಿ ಏನ್ನನ್ನು ಮಾಡಬೇಕು? ಮತ್ತು ಏನ್ನನ್ನು ಮಾಡಬಾರದು? ಎನ್ನುವುದನ್ನು ತಿಳಿಯೋಣ.
Apr 20, 2023, 8:19 am IST

Surya Grahana 2023 Effects: ಸೂರ್ಯಗ್ರಹಣದಿಂದ ದ್ವಾದಶಿ ರಾಶಿಗಳ ಮೇಲಾಗುವ ಪರಿಣಾಮಗಳು

ಜ್ಯೋತಿಷ್ಯದಲ್ಲಿ ಸೂರ್ಯಗ್ರಹಣ ಅತ್ಯಂತ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. ಇದು ವೀಕ್ಷಕರನ್ನು ವಿಸ್ಮಯಗೊಳಿಸುವುದಲ್ಲದೆ ಕೆಲ ಪರಿಣಾಮಗಳನ್ನು ಬೀರುತ್ತದೆ. ಪ್ರತಿ ರಾಶಿಯವರ ಮೇಲೆ ಈ ಸೂರ್ಯಗ್ರಹಣ ಪರಿಣಾಮ ಬೀರುತ್ತದೆ. ಕೆಲವರಿಗೆ ಒಳ್ಳೆಯ ಸುದ್ದಿ ಇದು ಉತ್ತಮ ಫಲವನ್ನು ನೀಡಬಹುದು ಇನ್ನೂ ಹಲವರಿಗೆ ಈ ಗ್ರಹಣ ಇಷ್ಟಪಡದ ಸುದ್ದಿಯೂ ಆಗಿರಬಹುದು.
Apr 20, 2023, 8:17 am IST

Surya Grahana 2023 Benefits: ಸೂರ್ಯಗ್ರಹಣ 2023: ಈ 4 ರಾಶಿಯವರು ಅದೃಷ್ಟಶಾಲಿಗಳು..

ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ಸಂಭವಿಸುತ್ತದೆ. ಗ್ರಹಣವನ್ನು ಮಂಗಳಕರ ಘಟನೆ ಎಂದು ಪರಿಗಣಿಸದಿದ್ದರೂ, ಜ್ಯೋತಿಷ್ಯದಲ್ಲಿ ಇದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನು ದುರ್ಬಲನಾಗಿರುತ್ತಾನೆ. ಸೂರ್ಯನು ಮೇಷ ಮತ್ತು ಅಶ್ವಿನಿ ನಕ್ಷತ್ರದಲ್ಲಿದ್ದಾಗ ಗ್ರಹಣ ಸಂಭವಿಸುತ್ತದೆ.
Apr 20, 2023, 8:15 am IST

ಸೂರ್ಯಗ್ರಹಣ 2023: ಎಕ್ಸಮೌತ್ ಗಲ್ಫ್‌ನಲ್ಲಿ ಇಂದು ಸೂರ್ಯೋದಯ

ಸೂರ್ಯಗ್ರಹಣ 2023: ಎಕ್ಸಮೌತ್ ಗಲ್ಫ್‌ನಿಂದ ಇಂದು ಸೂರ್ಯೋದಯ ದೃಶ್ಯ ಹೀಗಿತ್ತು.
Apr 20, 2023, 8:06 am IST

ಈ ರಾಶಿಯವರು ಜಾಗ್ರತೆ

ಈ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಸಂಭವಿಸಲಿದೆ. ಅದಕ್ಕಾಗಿಯೇ ಈ ಗ್ರಹಣದ ಗರಿಷ್ಠ ಪರಿಣಾಮವನ್ನು ಮೇಷ ರಾಶಿಯ ಜನರ ಮೇಲೆ ಕಾಣಬಹುದು. ನಿಮ್ಮ ಆರೋಗ್ಯ ಹದಗೆಡಬಹುದು. ಮಾನಸಿಕ ಒತ್ತಡವೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಗ್ರಹಣ ವೃಷಭ ರಾಶಿಯವರ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಸಮಯದಲ್ಲಿ ತರಾತುರಿಯಲ್ಲಿ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಕನ್ಯಾ ರಾಶಿಯ ಜನರು ಕೂಡ ಈ ಸಮಯದಲ್ಲಿ ಜಾಗರೂಕರಾಗಿರಬೇಕು. ಗ್ರಹಣದ ಅಶುಭ ಪರಿಣಾಮಗಳಿಂದ ನಿಮಗೆ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬಹುದು.
Apr 20, 2023, 8:02 am IST

ಕೆಲವೇ ಕ್ಷಣಗಳಲ್ಲಿ ಕತ್ತಲಾಗಲಿರುವ ನಿಂಗಲೂ ಕರಾವಳಿ

ಸೂರ್ಯಗ್ರಹಣ ಆರಂಭವಾಗಿದೆ. ಚಂದ್ರಗ್ರಹ ನಿಧಾನವಾಗಿ ಭೂಮಿ ಹಾಗೂ ಸೂರ್ಯನ ನಡುವೆ ಆಗಮಿಸುತ್ತಿದ್ದಾನೆ. ಇನ್ನೂ ಕೆಲವೇ ಸಮಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ನಿಂಗಲೂ ಕರಾವಳಿಯಲ್ಲಿ ಕತ್ತಲು ಆವರಿಸಲಿದೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+