Solar Eclipse 2023 on April 20: ಸೂರ್ಯಗ್ರಹಣ ಸೂತಕ ಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
ಈ ಬಾರಿ ವೈಶಾಖ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತದೆ. ಗ್ರಹಣದ ಸಮಯದಲ್ಲಿ ಏನ್ನನ್ನು ಮಾಡಬೇಕು? ಮತ್ತು ಏನ್ನನ್ನು ಮಾಡಬಾರದು? ಎನ್ನುವುದನ್ನು ತಿಳಿಯೋಣ.
ಸೂರ್ಯಗ್ರಹಣವನ್ನು ಹಿಂದೂ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಈ ವರ್ಷ ವೈಶಾಖ ಅಮಾವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20, 2023 ರಂದು ಸಂಭವಿಸುತ್ತದೆ. ಸೂರ್ಯಗ್ರಹಣ ಬೆಳಿಗ್ಗೆ 07.04 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12.39 ಕ್ಕೆ ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಸೂರ್ಯಗ್ರಹಣ ಅಮಾವಾಸ್ಯೆಯಂದು ಸಂಭವಿಸುತ್ತದೆ ಮತ್ತು ಚಂದ್ರಗ್ರಹಣವು ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ. ಈ ಗ್ರಹಣದಲ್ಲಿ ಸೂತಕ ಕಾಲ ಕೂಡ ಬಹಳ ಮುಖ್ಯ.

ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಶಾಸ್ತ್ರಗಳಲ್ಲಿ ಸೂತಕವನ್ನು ಅಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ಕೆಲವು ವಿಶೇಷ ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಕೆಲವು ವಿಶೇಷ ವಿಷಯಗಳನ್ನು ಅನುಸರಿಸಬೇಕಾಗುತ್ತದೆ.
ಸೂರ್ಯ ಗ್ರಹಣ 2023: ಸೂತಕದಲ್ಲಿ ಏನು ಮಾಡಬಾರದು?
ಹಿಂದೂ ನಂಬಿಕೆಗಳ ಪ್ರಕಾರ, ಸೂತಕ ಕಾಲದಲ್ಲಿ ಭೂಮಿಯ ವಾತಾವರಣ ಕಲುಷಿತಗೊಳ್ಳುತ್ತದೆ. ಸೂತಕದ ಅಶುಭ ದೋಷಗಳಿಂದ ಸುರಕ್ಷಿತವಾಗಿರಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಶಾಸ್ತ್ರಗಳ ಪ್ರಕಾರ, ಗ್ರಹಣ ಮತ್ತು ಸೂತಕದ ಸಮಯದಲ್ಲಿ ಯಾವುದೇ ಶುಭ ಕಾರ್ಯ, ಪೂಜೆ, ಶಾಪಿಂಗ್ ಮಾಡಬಾರದು.
ಸೂತಕದ ಸಮಯದಲ್ಲಿ ಸೂರ್ಯನಿಗೆ ಏನ್ನನ್ನೂ ಅರ್ಪಿಸಲಾಗುವುದಿಲ್ಲ. ತುಳಸಿ ಮತ್ತು ಯಾವುದೇ ಪೂಜಿಸಬಹುದಾದ ಮರಗಳು ಮತ್ತು ಸಸ್ಯಗಳಿಗೆ ನೀರನ್ನು ಅರ್ಪಿಸುವುದಿಲ್ಲ. ಈ ಸಮಯದಲ್ಲಿ ಮಲಗಬಾರದು. ಹೀಗೆ ಮಾಡುವುದರಿಂದ ಜೀವನದಲ್ಲೆ ಕೆಟ್ಟ ಪರಿಣಾಮಗಳು ಬೀರುತ್ತವೆ ಎಮದು ಹೇಳಲಾಗುತ್ತದೆ.
ಎಲ್ಲಾ ವಿಧದ ಆಹಾರಗಳ ಸೇವನೆಯನ್ನು ಸೂತಕ್‌ನಲ್ಲಿ ನಿಷೇಧಿಸಲಾಗಿದೆ. ಆದರೂ ವೃದ್ಧರು ಮತ್ತು ಅನಾರೋಗ್ಯದ ವ್ಯಕ್ತಿಗಳಿಗೆ ವಿನಾಯಿತಿ ಇದೆ. ಮಾತ್ರವಲ್ಲದೆ ಈ ಸಮಯದಲ್ಲಿ ಆಹಾರವನ್ನು ಬೇಯಿಸಬಾರದು ಅಥವಾ ಸೇವಿಸಬಾರದು. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ಸೂರ್ಯಗ್ರಹಣದ ದಿನದಂದು ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಸೂತಕದ ಆರಂಭದಿಂದ ಗ್ರಹಣ ಮುಗಿಯುವವರೆಗೆ ಮನೆಯಿಂದ ಹೊರಬರಬಾರದೇ ಇರುವುದು ಉತ್ತಮ. ಸೂತಕದ ದಮಯದಲ್ಲಿ ಸೂಜಿ, ಕತ್ತರಿ, ಚಾಕು ಮುಂತಾದ ಚೂಪಾದ ವಸ್ತುಗಳನ್ನು ಯಾವುದೇ ಕೆಲಸಕ್ಕೆ ಬಳಸಬಾರದು.
ಸೂರ್ಯಗ್ರಹಣ 2023: ಏನು ಮಾಡಬೇಕು?
ಹಿಂದೂ ನಂಬಿಕೆಗಳ ಪ್ರಕಾರ, ಸೂತಕ ಅವಧಿಯ ಮೊದಲು ಧಾನ್ಯಗಳು ಮತ್ತು ದ್ರವಗಳಲ್ಲಿ ತುಳಸಿ ದಳ ಬೆರೆಸಿ ಸೇರಿಸಿ. ಇದರಿಂದ ಗ್ರಹಣದ ದುಷ್ಪರಿಣಾಮಗಳಿಂದ ನಿಮ್ಮನ್ನು ನೀವು ರಕ್ಷಿಸಬಹುದು.
ಸೂರ್ಯಗ್ರಹಣದ ಸೂತಕ ಅವಧಿಯ ಮೊದಲು, ದೇವಾಲಯದ ಬಾಗಿಲುಗಳನ್ನು ಮುಚ್ಚಬೇಕು. ಗ್ರಹಣದ ನಂತರ ಗಂಗಾಜಲದಿಂದ ದೇವಸ್ಥಾನ ಮತ್ತು ಪೂಜೆ ಮಾಡುವ ಸ್ಥಳಗಳನ್ನು ಸ್ವಚ್ ಮಾಡಬೇಕು. ಇದೇ ವೇಳೆ ದಾನ ಮಾಡಬಹುದು.
ಗಂಗಾಜಲದಿಂದ ನಿತ್ಯ ಪೂಜೆ ಮಾಡುವ ದೇವರಿಗೆ ಪೂಜೆ ಮಾಡಿಸಿ. ಗಂಗಾಜಲವನ್ನು ಸಿಂಪಡಿಸಿ ಇಡೀ ಮನೆಯನ್ನು ಶುದ್ಧೀಕರಿಸಿ.
ಗ್ರಹಣ ಮತ್ತು ಸೂತಕದ ಸಮಯದಲ್ಲಿ ಪೂಜೆಯನ್ನು ನಿಷೇಧಿಸಲಾಗುತ್ತದೆ. ಆದರೆ ಮಂತ್ರವನ್ನು ಪಠಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ.
ಗ್ರಹಣದ ಸಮಯದಲ್ಲಿ 'ತಮೋಮಯ ಮಹಾಭೀಂ ಸೋಮಸೂರ್ಯವಿಮರ್ದನ' ಮಂತ್ರವನ್ನು ಪಠಿಸಿ. ಇಲ್ಲವೇ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಒಳ್ಳೆಯದು.












Click it and Unblock the Notifications