SIR ವಿರುದ್ಧ ಕರ್ನಾಟಕದಾದ್ಯಂತ ಈ ಕೆಲಸ ಮಾಡಲಿದ್ದೇವೆ ಎಂದ ನಟ ಪ್ರಕಾಶ್ ರಾಜ್, 10 ದಿನಗಳ ವಿಶೇಷ ಅಭಿಯಾನ ಏನಿದು?

ದೇಶದಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹೆಚ್ಚು ಚರ್ಚೆ ನಡೆಯುತ್ತಿದೆ. ಇದೀಗ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಇದರೊಂದಿಗೆ SIR ಒಂದು ಪಿತೂರಿ, ಹಗರಣ ಹಾಗೂ ಅಸಂವಿಧಾನಿಕ ಪ್ರಕ್ರಿಯೆಯಾಗಿದೆ ಅಂತಲೂ ಹೇಳಿದ್ದಾರೆ. ಅಲ್ಲದೆ ಮುಂದಿನ 10 ದಿನಗಳ ಕಾಲ ವಿಶೇಷ ಅಭಿಯಾನ ನಡೆಸುವುದಾಗಿಯೂ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

SIR ಒಂದು ಪಿತೂರಿ, ಹಗರಣ ಹಾಗೂ ಅಸಂವಿಧಾನಿಕ ಪ್ರಕ್ರಿಯೆಯಾಗಿದೆ ಎಂದು ನಟ ಪ್ರಕಾಶ್ ರಾಜ್ ಅವರು ದೂರಿದ್ದಾರೆ. ಮುಂದಿನ 10 ದಿನಗಳ ಕಾಲ ಜನಪರ ಸಂಘಟನೆಯ ವಿವಿಧ ಪ್ರತಿನಿಧಿಗಳೊಂದಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುವುದಾಗಿ ಪ್ರಕಾಶ್ ರಾಜ್ ಅವರು ಘೋಷಿಸಿದ್ದಾರೆ. ಮುಂದುವರಿದು ಸಂಕಷ್ಟದಲ್ಲಿರುವ ಜನರನ್ನು ಭೇಟಿಯಾಗಿ, 100 ಮತಗಟ್ಟೆಗಳ ಸಾಮಾಜಿಕ ಪರಿಶೋಧನೆ (Social Audit) ನಡೆಸಲಿದ್ದೇವೆ.

SIR Actor Prakash Raj Announces 10 Day Special Campaign Across Karnataka What Is This Social Audit

ಈ ಮೂಲಕ ಚುನಾವಣಾ ಆಯೋಗವು ದೇಶದ ನಾಗರಿಕರಿಗೆ ಉಂಟುಮಾಡಿದೆ ಎನ್ನಲಾಗುತ್ತಿರುವ ಸಂಕಷ್ಟ ಮತ್ತು ದುರುಪಯೋಗವನ್ನು ಎತ್ತಿ ತೋರಿಸಲಿದ್ದೇವೆ ಎಂದಿದ್ದಾರೆ. ಈ ಪರಿಶೋಧನೆಯ ಫಲಿತಾಂಶಗಳ ಕುರಿತು ನಿರಂತರವಾಗಿ ಮಾಹಿತಿ ಹಂಚಿಕೊಳ್ಳುತ್ತೇನೆ. ಅಲ್ಲದೆ ಇದೀಗ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು / ಎಸ್‌ಐಆರ್ ಒಂದು ಪಿತೂರಿ, ಹಗರಣ ಹಾಗೂ ಅಸಂವಿಧಾನಿಕ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.

ನಟ ಪ್ರಕಾಶ್ ರಾಜ್ ಅವರು ಎಸ್‌ಐಆರ್ ಪಿತೂರಿ, ಹಗರಣ ಹಾಗೂ ಅಸಂವಿಧಾನಿಕ ಪ್ರಕ್ರಿಯೆ ಅಂತ ಹೇಳಿರುವುದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ಹೇಳಿದ್ದೇನು ಎನ್ನುವ ವಿವರ ಮುಂದಿದೆ.

SIR: ಎಸ್‌ಐಆರ್ ಪಿತೂರಿ ಎಂದ ಪ್ರಕಾಶ್ ರಾಜ್: ನೆಟ್ಟಿಗರು ಹೇಳಿದ್ದೇನು

ನೀವು ಬದಲಾಗುವುದಿಲ್ಲ ಅಂತ ನನಗೆ ಅನಿಸುತ್ತೆ. ತಪ್ಪು ನಿಮ್ಮದೇ, ನಿಮ್ಮ ಬಳಿ ಎಷ್ಟು ವೋಟರ್ ಐಡಿಗಳಿವೆ. ಅದನ್ನು ರದ್ದುಗೊಳಿಸಿದಾಗ ನೀವು ಅದನ್ನು ಸರ್ಕಾರದ ತಪ್ಪು ಎಂದು ಹೇಳುತ್ತೀರಿ ಎಂದು ನೆಟ್ಟಿಗರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಹೆಚ್ಚಾದ ನಂತರ ಯಾವುದೇ ಸಿನಿಮಾ ಪಾತ್ರಗಳು ಬರುತ್ತಿಲ್ಲ, ಆದ್ದರಿಂದ ಪಿಆರ್ ರಾಜಕೀಯಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದೂ ಕೆಲವರು ದೂರಿದ್ದಾರೆ.

ನೀವೇ ಹಲವು ವೋಟರ್ ಐಡಿ ಹೊಂದಿದ್ದೀರಿ, ನೀವು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಮತ್ತು ECI ಹಗರಣ ಎಂದು ಕರೆದಿದ್ದೀರಿ, ಅವರು ನಿಮ್ಮನ್ನು ಬಹು ರಾಜ್ಯಗಳಲ್ಲಿ ಮತ ಚಲಾಯಿಸಲು ಏನು ಮಾಡಬೇಕೆಂದು ನೀವು ಬಯಸುತ್ತೀರಿ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವರು ಎಸ್‌ಐಆರ್ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಅನವಶ್ಯಕವಾಗಿ ತೊಂದರೆ ಕೊಡಲಾಗುತ್ತಿದೆ ಎಂದೂ ದೂರಿದ್ದಾರೆ.

ಪ್ರಿಯ ಪ್ರಕಾಶ್ ರಾಜ್ ಅವರೇ ಇದು ನಿಮಗೆ ಸಮಯ ವ್ಯರ್ಥ. ನಿಮಗೆ ಧೈರ್ಯವಿದ್ದರೆ ಹೋಗಿ ಇವಿಎಂ ವಿರುದ್ಧ ಪ್ರಕರಣ ದಾಖಲಿಸಿ. ಉನ್ನತ ದರ್ಜೆಯ ಸಾಫ್ಟ್‌ವೇರ್ ಹ್ಯಾಕಿಂಗ್ ತಜ್ಞರನ್ನು ನೇಮಿಸಿ ಮತ್ತು ಅದನ್ನು ಸಾಬೀತುಪಡಿಸಿ. ನಾವು ಇನ್ನು ಮುಂದೆ ನೀವು ಹೇಳುವುದನ್ನು ಯಾರೂ ಕೇಳಲ್ಲ ಎಂದೂ ಕೆಲವು ನೆಟ್ಟಿಗರು ಹೇಳಿದ್ದಾರೆ.

ಚುನಾವಣಾ ಆಯೋಗವು ಎಸ್‌ಐಆರ್‌ ಕುರಿತು ಇದುವರೆಗೆ ಯಾವುದೇ ಲಿಖಿತ ಆದೇಶ ಹೊರಡಿಸಿಲ್ಲ. ಈ ಕುರಿತು RTI ಅರ್ಜಿಯನ್ನೂ ಸಲ್ಲಿಸಲಾಗಿಲ್ಲ. ಈ ಮಾಹಿತಿಯು ಚುನಾವಣಾ ಆಯೋಗದ ಬಜೆಟ್‌ನಲ್ಲಿಯೂ ಸೇರಿದೆ. ಆದರೂ ಈ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಇದರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಇದು ದೊಡ್ಡ ಹಗರಣದ ಸ್ವರೂಪದ್ದಾಗಿದೆ ಎಂದೂ ಕೆಲವರು ಪ್ರಕಾಶ್ ರಾಜ್ ಅವರ ತೀರ್ಮಾನಕ್ಕೆ ಬೆಂಬಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+