ಫೋನ್‌ನಲ್ಲಿ ಸಿಮ್ ಇಲ್ಲದಿದ್ರೆ ಈ ಆ್ಯಪ್ ವರ್ಕ್‌ ಆಗಲ್ಲ: ವಾಟ್ಸಾಪ್, ಟೆಲಿಗ್ರಾಮ್ ಬಳಕೆದಾರರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ

ದೈನಂದಿನ ಮಾತುಕತೆಗೆ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಬಳಸುವವರಿಗೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಬಹುದೊಡ್ಡ ಸುದ್ದಿಯೊಂದನ್ನ ನೀಡಿದೆ. 2027ರ ಜನವರಿ 1 ರಿಂದ ಹೊಸ ನಿಯಮವೊಂದು ಕಡ್ಡಾಯವಾಗಲಿದೆ. ಇದರ ಪ್ರಕಾರ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೋಂದಾಯಿತ ಸಿಮ್ ಕಾರ್ಡ್ ಭೌತಿಕವಾಗಿ ಇಲ್ಲದಿದ್ದರೆ, ನೀವು ವಾಟ್ಸಾಪ್ ಅಥವಾ ಟೆಲಿಗ್ರಾಮ್‌ನಂತಹ ಮೆಸೇಜಿಂಗ್ ಆ್ಯಪ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

ಈ ಹೊಸ ಬದಲಾವಣೆ ಏನು, ಯಾಕೆ ಮತ್ತು ಇದರಿಂದ ಸಾಮಾನ್ಯ ಬಳಕೆದಾರರ ಮೇಲಾಗುವ ಪರಿಣಾಮಗಳೇನು ಎಂಬುದನ್ನ ಐದು ಪ್ರಮುಖ ಅಂಶಗಳಲ್ಲಿ ವಿವರಿಸಲಾಗಿದೆ.

SIM Binding Starts Jan 1 2027 What Happens To Your WhatsApp And Telegram Accounts Full Details

ಸಿಮ್ ಬೈಂಡಿಂಗ್ ಎಂದರೇನು?

ಈಗಾಗಲೇ ಗೂಗಲ್ ಪೇ, ಫೋನ್ ಪೇ ನಂತಹ ಯುಪಿಐ ಆ್ಯಪ್‌ಗಳಲ್ಲಿ ನೀವು 'ಸಿಮ್ ಬೈಂಡಿಂಗ್' ತಂತ್ರಜ್ಞಾನವನ್ನ ನೋಡಿದ್ದೀರಿ. ಅಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಅದೇ ಫೋನ್‌ನಲ್ಲಿ ಇದ್ದರೆ ಮಾತ್ರ ಆ್ಯಪ್ ಕೆಲಸ ಮಾಡುತ್ತದೆ. ಇದೇ ನಿಯಮವನ್ನ ಈಗ ಮೆಸೇಜಿಂಗ್ ಆ್ಯಪ್‌ಗಳಿಗೂ ವಿಸ್ತರಿಸಲಾಗುತ್ತಿದೆ.

ನವೆಂಬರ್ 28, 2025ರಂದು ಹೊರಡಿಸಲಾದ ನಿರ್ದೇಶನದಂತೆ, ವಾಟ್ಸಾಪ್, ಟೆಲಿಗ್ರಾಮ್, ಸ್ನ್ಯಾಪ್‌ಚಾಟ್ ಸೇರಿದಂತೆ ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ಖಾತೆಗಳನ್ನ ಅದೇ ಫೋನ್‌ನಲ್ಲಿರುವ ಸಿಮ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕಾಗುತ್ತದೆ.

ವಾಟ್ಸಾಪ್ ಮತ್ತು ಟೆಲಿಗ್ರಾಮ್ ಬಳಕೆಯಲ್ಲಿನ ಸವಾಲುಗಳು

ಪ್ರಸ್ತುತ, ನೀವು ಒಮ್ಮೆ ಓಟಿಪಿ ಮೂಲಕ ಲಾಗಿನ್ ಆದ ನಂತರ, ಆ ಸಿಮ್ ಕಾರ್ಡ್ ಅನ್ನ ಬೇರೆ ಫೋನ್‌ಗೆ ಹಾಕಿದರೂ ಅಥವಾ ಫೋನ್‌ನಿಂದ ತೆಗೆದುಹಾಕಿದರೂ, ವೈ-ಫೈ ಮೂಲಕ ನಿಮ್ಮ ಹಳೆಯ ಫೋನ್‌ನಲ್ಲಿ ವಾಟ್ಸಾಪ್ ಬಳಸಬಹುದು. ಆದರೆ ಜನವರಿ 1, 2027ರ ನಂತರ ವಾಟ್ಸಾಪ್ ಸಿಮ್ ಬೈಂಡಿಂಗ್ ನಿಯಮ ಜಾರಿಗೆ ಬಂದ ಬಳಿಕ ಇದು ಸಾಧ್ಯವಿರುವುದಿಲ್ಲ.

ಹೌದು, ನಿಮ್ಮ ವಾಟ್ಸಾಪ್ ಸಂಖ್ಯೆಯ ಸಿಮ್ ನಿಮ್ಮ ಫೋನ್‌ನಲ್ಲಿದ್ದು, ನೀವು ಟ್ಯಾಬ್ಲೆಟ್‌ನಲ್ಲಿ ಕೇವಲ ವೈಫೈ ಬಳಸಿ ವಾಟ್ಸಾಪ್ ಬಳಸುತ್ತಿದ್ದರೆ, ಆ ಸೇವೆ ಸ್ಥಗಿತಗೊಳ್ಳಬಹುದು. ಆಗಾಗ ಫೋನ್ ಅಥವಾ ಸಿಮ್ ಬದಲಾಯಿಸುವವರು, ವಿದೇಶಿ ಪ್ರವಾಸ ಕೈಗೊಳ್ಳುವಾಗ ಸ್ಥಳೀಯ ಸಿಮ್ ಬಳಸುವವರು ಹಾಗೂ ಕೇವಲ ವೈ-ಫೈ ಆಶ್ರಯಿಸಿರುವ ಬಳಕೆದಾರರಿಗೆ ಈ ನಿಯಮವು ಹೆಚ್ಚು ತೊಂದರೆ ಉಂಟುಮಾಡಬಹುದು.

ವಾಟ್ಸಾಪ್ ವೆಬ್ ಮತ್ತು ಇ-ಸಿಮ್ ಕಥೆಯೇನು?

ಮೂಲ ನಿಯಮಗಳ ಪ್ರಕಾರ ವಾಟ್ಸಾಪ್ ವೆಬ್ ಬಳಕೆದಾರರು ಪ್ರತಿ ಆರು ಗಂಟೆಗಳಿಗೊಮ್ಮೆ ಲಾಗೌಟ್ ಆಗಿ, ಮತ್ತೆ ಕ್ಯೂಆರ್ ಕೋಡ್ ಮೂಲಕ ಲಾಗಿನ್ ಆಗಬೇಕೆಂಬ ಕಠಿಣ ಷರತ್ತು ಇತ್ತು. ಆದರೆ ದೂರಸಂಪರ್ಕ ಇಲಾಖೆಯು ಈ ಷರತ್ತನ್ನ ಕೈಬಿಟ್ಟಿದ್ದು, ಅದರ ಬದಲಾಗಿ ಅನುಮಾನಾಸ್ಪದ ಅಥವಾ ವಂಚನೆಯ ಸಂದರ್ಭಗಳಲ್ಲಿ ಮಾತ್ರ ದಿಢೀರ್ ಲಾಗೌಟ್ ಮಾಡುವ 'ರಿಸ್ಕ್-ಬೇಸ್ಡ್ ಲಾಗೌಟ್' ವಿಧಾನವನ್ನ ಜಾರಿಗೆ ತರಲು ಸೂಚಿಸಿದೆ.

ಇನ್ನೂ ಈ ಇ-ಸಿಮ್ (eSIM) ಬಳಕೆದಾರರಿಗೆ ಪ್ರತ್ಯೇಕ ಮಾರ್ಗಸೂಚಿಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಆಕ್ಟಿವ್ ಆಗಿರುವ ಇ-ಸಿಮ್ ಅದೇ ಡಿವೈಸ್‌ನಲ್ಲಿ ಇರುವುದು ಕಡ್ಡಾಯವಾಗಲಿದೆ.

ಸೈಬರ್ ವಂಚನೆ ತಡೆಗಟ್ಟಲು ದಿಟ್ಟ ಹೆಜ್ಜೆ

ಈಗಿನ ವ್ಯವಸ್ಥೆಯಲ್ಲಿ ಸಿಮ್ ಕಾರ್ಡ್ ನಿಷ್ಕ್ರಿಯಗೊಂಡರೂ ಅಥವಾ ಬೇರೆಡೆ ಇದ್ದರೂ ವಾಟ್ಸಾಪ್ ಖಾತೆಗಳು ಕಾರ್ಯನಿರ್ವಹಿಸುತ್ತವೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಸೈಬರ್ ವಂಚಕರು, ಫಿಶಿಂಗ್, ಡಿಜಿಟಲ್ ಅರೆಸ್ಟ್, ಸಾಲ ಮತ್ತು ಹೂಡಿಕೆ ವಂಚನೆಗಳನ್ನ ಎಸಗುತ್ತಿದ್ದಾರೆ. ಭಾರತ ಸರ್ಕಾರದ ವರದಿಗಳ ಪ್ರಕಾರ, ಕೇವಲ 2024 ರಲ್ಲೇ ಸೈಬರ್ ವಂಚನೆಯಿಂದಾಗಿ ಸಾರ್ವಜನಿಕರಿಗೆ ಬರೋಬ್ಬರಿ 22,800 ಕೋಟಿ ರೂಪಾಯಿ ನಷ್ಟವಾಗಿದೆ.

ಹೊಸ ಸಿಮ್ ಬೈಂಡಿಂಗ್ ನಿಯಮ ಜಾರಿಗೆ ಬಂದರೆ, ಪ್ರತಿಯೊಂದು ಖಾತೆಯನ್ನೂ ನಿಖರವಾಗಿ ಟ್ರ್ಯಾಕ್ ಮಾಡಬಹುದು. ಆ ಮೂಲಕ ಬೇರೆ ಯಾವುದೋ ದೇಶದಲ್ಲಿ ಕುಳಿತು ಭಾರತೀಯ ನಂಬರ್‌ಗಳನ್ನು ಬಳಸಿ ನಡೆಯುವ ವಂಚನೆಗಳಿಗೆ, ಹಾಗೂ ಖಾತೆ ಹ್ಯಾಕಿಂಗ್ ಪ್ರಕರಣಗಳಿಗೆ ಸಂಪೂರ್ಣ ಬ್ರೇಕ್ ಹಾಕಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.

2026ರ ಡಿಸೆಂಬರ್ 31ರೊಳಗೆ ಎಲ್ಲಾ ಆ್ಯಪ್‌ಗಳು ಈ ವ್ಯವಸ್ಥೆಯನ್ನ ಅಳವಡಿಸಿಕೊಳ್ಳಬೇಕಿದ್ದು, 2027ರ ಹೊಸ ವರ್ಷದಿಂದ ಸಂಪೂರ್ಣವಾಗಿ ಜಾರಿಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+