'ನಿಮಗೂ ಫ್ರಿಡ್ಜ್‌ ಗತಿ ಬರಬಹುದು': ನಟಿ ಸ್ವರಾ ಭಾಸ್ಕರ್‌ಳನ್ನು ಟೀಕಿಸಿದ ಸಾಧವಿ ಪ್ರಾಚಿ

ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರೊಂದಿಗಿನ ನಟಿ ಸ್ವರಾ ಭಾಸ್ಕರ್ ಅವರ ವಿವಾಹದಿಂದಾಗಿ 'ನಿಮಗೂ ಫ್ರಿಡ್ಜ್‌ ಗತಿ ಬರಬಹುದು' ಎಂದು ವಿಶ್ವ-ಹಿಂದೂ ಪರಿಷತ್ (ವಿಎಚ್‌ಪಿ) ನಾಯಕಿ ಸಾಧವಿ ಪ್ರಾಚಿ ಎಚ್ಚರಿಸಿದ್ದಾರೆ.

ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರೊಂದಿಗಿನ ನಟಿ ಸ್ವರಾ ಭಾಸ್ಕರ್ ಅವರ ವಿವಾಹವನ್ನು ವಿಶ್ವ-ಹಿಂದೂ ಪರಿಷತ್ (ವಿಎಚ್‌ಪಿ) ನಾಯಕಿ ಸಾಧವಿ ಪ್ರಾಚಿ ಟೀಕಿಸಿದ್ದಾರೆ.

ಅಂದಹಾಗೆ ಇತ್ತೀಚಿಗಷ್ಟೇ ನಟಿ ಸ್ವರಾ ಭಾಸ್ಕರ್ ಮುಸ್ಲಿಂ ಪುರಷನನ್ನು ವಿವಾಹವಾಗುವ ಮೂಲಕ ಸಾಕಷ್ಟು ಚರ್ಚೆಯಲ್ಲಿದ್ದರು. ಜಾತಿ ವಿರೋಧಿಯಾಗಿರುವ ನಟಿ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿದ್ದಾರೆ. ಹೀಗಾಗಿ ಸಹಜವಾಗಿಯೇ ಮಾದ್ಯಮದಲ್ಲಿ ಅವರು ಸುದ್ದಿಯಲ್ಲಿದ್ದರು.

She should have seen the fridge: Sadhavi Prachi criticizes actress Swara Bhaskar

'ನಿಮಗೂ ಫ್ರಿಡ್ಜ್‌ ಗತಿ ಬರಬಹುದು' ಎಂದು ಸ್ವರಾ ಭಾಸ್ಕರ್ ಮದುವೆಯ ಬಗ್ಗೆ ಸಾಧವಿ ಪ್ರಾಚಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷ ಲಿವ್-ಇನ್ ಸಂಗಾತಿಯಾದ ಶ್ರದ್ಧಾ ವಾಕರ್ ನನ್ನು ಆಫ್ಟಾಬ್ ಪೂನವಾಲಾ ಎಂಬಾತ 35 ತುಂಡುಗಳಾಗಿ ಕತ್ತರಿಸಿ ಅದನ್ನು ಫ್ರಿಡ್ಜ್‌ನಲ್ಲಿಟ್ಟು ಕೆಲ ದಿನಗಳ ಕಾಲ ಅರಣ್ಯ ಸೇರಿದಂತೆ ಕೆಲವೆಡೆ ಎಸೆದಿದ್ದನು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ ಬಳಿಕ ಇದಕ್ಕೆ ಕೋಮುಬಣ್ಣ ಹಚ್ಚಲಾಗಿತ್ತು.

ಶ್ರದ್ಧಾ ವಾಕರ್ ಮುಸ್ಲಿಂ ಯುವಕ ಆಫ್ಟಾಬ್ ಪೂನವಾಲಾ ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಆತನೊಂದಿಗೆ ವಾಸವಾಗಿದ್ದರು. ಹಿಂದೂ-ಮುಸ್ಲಿಂ ವಿವಾಹವಾದರೆ ಈ ಗತಿ ಬರುತ್ತದೆ ಎನ್ನುವ ಮಾತುಗಳು ಕೂಡ ಶ್ರದ್ಧಾ ವಾಕರ್ ಪ್ರಕರಣದಲ್ಲಿ ಕೇಳಿಬಂದಿದ್ದವು. ಸದ್ಯ ಇದೇ ಹೇಳಿಕೆಯನ್ನೇ ಸಾಧವಿ ಪ್ರಾಚಿ ನಟಿ ಸ್ವರಾ ಭಾಸ್ಕರ್ ಗೆ ಹೇಳಿದ್ದಾರೆ.

She should have seen the fridge: Sadhavi Prachi criticizes actress Swara Bhaskar

'ಶ್ರದ್ಧಾಳಂತೆ ಸ್ವರಾಗೂ ಸಾವು ಬರಬಹುದು'

"ಸ್ವರಾ ಭಾಸ್ಕರ್ ಯಾವಾಗಲೂ ಹಿಂದೂ ಧರ್ಮಕ್ಕೆ ವಿರುದ್ಧವಾಗಿರುತ್ತಾಳೆ. ಅವಳು ಧರ್ಮದಿಂದಲ್ಲದ ವ್ಯಕ್ತಿಯನ್ನು ಮದುವೆಯಾಗುತ್ತಾಳೆ ಎಂದು ನನಗೆ ಖಾತ್ರಿಯಿತ್ತು. ಅವಳು ಮುಸ್ಲಿಮರನ್ನು ಮದುವೆಯಾದಳು" ಎಂದು ಸಾಧವಿ ಪ್ರಾಚಿ ಸುದ್ದಿಗಾರರಿಗೆ ತಿಳಿಸಿದರು.

"ಬಹುಶಃ ಶ್ರದ್ಧಾ ಅವರ ದೇಹವನ್ನು 35 ತುಂಡುಗಳಾಗಿ ಹೇಗೆ ಕತ್ತರಿಸಲಾಯಿತು ಎಂಬ ಸುದ್ದಿಗೆ ಸ್ವರಾ ಭಾಸ್ಕರ್ ಗಮನ ಹರಿಸಿಲ್ಲ ಎನಿಸುತ್ತದೆ. ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವಳು ಒಮ್ಮೆ ಫ್ರಿಜ್ ಅನ್ನು ನೋಡಬೇಕಾಗಿತ್ತು" ಎಂದು ಪ್ರಾಚಿ ವ್ಯಂಗ್ಯವಾಡಿದ್ದಾರೆ. ಅದು ಅವಳ ವೈಯಕ್ತಿಕ ಆಯ್ಕೆಯಾಗಿದೆ. ಆದರೆ ಶ್ರದ್ಧಾಳಂತೆ ಸ್ವರಾಗೂ ಸಾವು ಬರಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಸ್ವರಾ ಭಾಸ್ಕರ್ ಮತ್ತು ಫಹಾದ್ ಜಿರಾರ್ ಅಹ್ಮದ್ ಮದುವೆ

ಫೆಬ್ರವರಿ 16 ರಂದು ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ಕಾರ್ಯಕರ್ತ ಫಹಾದ್ ಜಿರಾರ್ ಅಹ್ಮದ್ ಅವರೊಂದಿಗಿನ ವಿವಾಹ ಮಾಡಿಕೊಂಡದರು. ಸಾಮಾಜಿಕ ಮಾಧ್ಯಮದಲ್ಲಿ ಅವರ ಮದುವೆಯ ಫೋಟೋಗಳು ಮತ್ತು ವಿಡಿಯೋ ತುಣುಕುಗಳು ವೈರಲ್ ಆಗಿವೆ.

She should have seen the fridge: Sadhavi Prachi criticizes actress Swara Bhaskar

"ಕೆಲವೊಮ್ಮೆ ನಾವು ನಿಮ್ಮ ಪಕ್ಕದಲ್ಲಿಯೇ ಇರುವವರನ್ನು ಬಿಟ್ಟು ದೂರದವರೆಗೆ ಅವರನ್ನು ಹುಡುಕುತ್ತೇವೆ. ನಾವಿಬ್ಬರು ಮೊದಲು ಸ್ನೇಹವನ್ನು ಕಂಡುಕೊಂಡಿದ್ದೇವೆ. ತದನಂತರ ನಾವು ಒಬ್ಬರನ್ನೊಬ್ಬರು ಕಂಡುಕೊಂಡಿದ್ದೇವೆ. ನನ್ನ ಹೃದಯಕ್ಕೆ ಸ್ವಾಗತ ಫಹಾದ್ ಜಿರಾರ್ ಅಹ್ಮದ್! " ಎಂದು ಸ್ವರಾ ಭಾಸ್ಕರ್ ಪೋಸ್ಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+