School Holiday 2025: ರಾಜ್ಯವಾರು ಬೇಸಿಗೆ ರಜೆಗಳ ವಿವರ

School Summer Holidays 2025: ಈಗಾಗಲೇ ಪರೀಕ್ಷೆಗಳು ಮುಗಿದಿದ್ದು, ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಇನ್ನು ಈ ಪ್ರಕ್ರಿಯೆ ಆರಂಭವಾಗಿಲ್ಲ. ಹಾಗಾದ್ರೆ ಎಲ್ಲೆಲ್ಲಿ ರಜೆ ಘೋಷಿಸಲಾಗಿದೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಮೇ ತಿಂಗಳ ಪ್ರಾರಂಭವಾದ ಕೂಡಲೇ ಅನೇಕ ರಾಜ್ಯಗಳಲ್ಲಿ ಬೇಸಿಗೆ ರಜೆಗಳು ಪ್ರಾರಂಭವಾಗಿದ್ದು, ಜೂನ್ 15 ಅಥವಾ 30ರ ಸುಮಾರಿಗೆ ಶಾಲೆಗಳು ತೆರೆಯಲಿವೆ. ಆಯಾ ರಜ್ಯವಾರು ಶಾಲಾ ಬೇಸಿಗೆ ರಜೆಗಳ ವಿವರವನ್ನು ಇಲ್ಲಿ ನೀಡಲಾಗಿದೆ.

School Holidays State Wise Summer Holidyas details

ಬೇಸಿಗೆ ರಜೆಯ ಹೊರತಾಗಿಯೂ ಮೇ ತಿಂಗಳಿನಲ್ಲಿ ಭಾನುವಾರದ ಜೊತೆಗೆ ಹಲವು ಆಯಾ ಸ್ಥಳೀಯ ಹಬ್ಬಗಳಂದು ಶಾಲೆಗಳಿಗೆ ರಜೆ ಇರಲಿವೆ. ಮೇ 12 ಬುದ್ಧ ಪೂರ್ಣಿಮಾ, ಮೇ 18ರ ಭಾನುವಾರ, ಮೇ 24ರಂದು ಕಾಜಿ ನಜ್ರುಲ್ ಇಸ್ಲಾಂ ಜಯಂತಿ, ಮೇ 25ರ ಭಾನುವಾರ ಮತ್ತು ಮೇ 30ರಂದು ಶ್ರೀ ಗುರು ಅರ್ಜುನ್ ದೇವ್ ಜಿ ಅವರ ಹುತಾತ್ಮ ದಿನ ಇರುವುದರಿಂದ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆ ಇರಲಿದೆ.

ಯಾವ್ಯಾವ ರಾಜ್ಯಗಳಲ್ಲಿ ಬೇಸಿಗೆ ರಜೆ ಪ್ರಾರಂಭ ಯಾವಾಗ?

* ಮಧ್ಯಪ್ರದೇಶದಲ್ಲಿ ಶಾಲೆಗಳಿಗೆ ಮೇ 1 ರಿಂದ ಬೇಸಿಗೆ ರಜೆ ಪ್ರಾರಂಭ ಆಗಿದ್ದು, ಜೂನ್ 15ರ ವರೆಗೆ ಮುಂದುವರಿಯಲಿವೆ. ಈ ರಜಾದಿನಗಳು ರಾಜ್ಯದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಅನ್ವಯವಾಗಲಿದೆ.
* ಛತ್ತೀಸ್‌ಗಢದಲ್ಲಿ ಜೂನ್ 15, 2025 ರವರೆಗೆ ಬೇಸಿಗೆ ರಜೆ
* ದೆಹಲಿಯಲ್ಲಿ ಮೇ 11ರಿಂದ ಜೂನ್ 30ವರೆಗೂ ಶಾಲೆಗಳಿಗೆ ಬೇಸಿಗೆ ರಜೆ ಇರಲಿದೆ. ಆದರೂ, ಶಿಕ್ಷಕರು ಜೂನ್ 28ರಿಂದ ಶಾಲೆಗಳಿಗೆ ದಾಖಲಾತಿ ಕಾರ್ಯ ಆರಂಭಿಸಬೇಕಾಗುತ್ತದೆ.
* ತಮಿಳುನಾಡಿನಲ್ಲಿ 1 ರಿಂದ 12ನೇ ತರಗತಿಗಳಿಗೆ ಬೇಸಿಗೆ ರಜೆ ಪ್ರಾರಂಭವಾಗಿದ್ದು, ಜೂನ್ 1ರ ವರೆಗೆ ಮುಂದುವರಿಯಲಿದೆ.
* ಜಾರ್ಖಂಡ್ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ವಾರ್ಷಿಕ ಕ್ಯಾಲೆಂಡರ್ ಪ್ರಕಾರ, ಈ ಬಾರಿ ಬೇಸಿಗೆ ರಜೆಗಳು ಮೇ 22ರಿಂದ ಪ್ರಾರಂಭವಾಗಿ ಜೂನ್ 4, 2025ರ ವರೆಗೆ ಮುಂದುವರೆಯಲಿದೆ.
* ಹಿಮಾಚಲ ಪ್ರದೇಶದ ಶಾಲೆಗಳಲ್ಲಿ ಜುಲೈ 12ರಿಂದ ಆಗಸ್ಟ್ 12ರ ವರೆಗೆ 32 ದಿನಗಳ ಬೇಸಿಗೆ ರಜೆ ಇರುತ್ತದೆ.
* ನಲಗಢ್, ಫತೇಪುರ್, ನಗರೋಟಾ ಸುರಿಯನ್, ಇಂದೋರಾ, ಪೌಂಟಾ ಸಾಹಿಬ್, ಕಲಾ ಅಂಬ್ ಮತ್ತು ಉನಾ ಜಿಲ್ಲೆಯ ಶಾಲೆಗಳಿಗೆ ಜೂನ್ 1ರಿಂದ 30ರ ವರೆಗೆ 30 ದಿನಗಳ ಬೇಸಿಗೆ ರಜೆ ಇರುತ್ತದೆ.

ಈಗಾಗಲೇ ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಪರೀಕ್ಷೆಗಳೆಲ್ಲವೂ ಮಕ್ತಾಯವಾಗಿದ್ದು, ಬೇಸಿಗೆ ರಜೆಯನ್ನಯ ಸಹ ಘೋಷಣೆ ಮಾಡಲಾಗಿದೆ. ಇದಕ್ಕೂ ಮುಂಚೆ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ, ಪ್ರಮುಖ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರಣಗಳಿಗೆ ಶಾಲೆಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳುಗೆ ರಜೆಗಳ ಹಬ್ಬದೂಟ ಬಡಿಸಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+