ಹೆಣ್ಣುಮಕ್ಕಳನ್ನು ಬಿಜೆಪಿಗರಿಂದ ರಕ್ಷಿಸಿ: ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ

ನವದೆಹಲಿ, ಏಪ್ರಿಲ್ 23: ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಘೋಷಣೆ 'ಬೇಟಿ ಬಚಾವೊ, ಬಿಜೆಪಿ ಕೆ ಲೋಗೋನ್‌ ಸೆ ಬಚಾವೊ' (ಮಗಳನ್ನು ರಕ್ಷಿಸಿ, ಬಿಜೆಪಿಗರಿಂದ ಅವರನ್ನು ರಕ್ಷಿಸಿ) ಎಂದಾಗಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದರು.

'ಸಂವಿಧಾನವನ್ನು ರಕ್ಷಿಸಿ' ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದರು.

ದೆಹಲಿಯ ಟಲ್ಕಾಟೊರಾ ಕ್ರೀಡಾಂಗಣದಲ್ಲಿ ಚಳವಳಿಗೆ ಚಾಲನೆ ನೀಡಲಾಯಿತು. ದೇಶದಾದ್ಯಂತ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ವಿರುದ್ಧ ಈ ಆಂದೋಲನ ನಡೆಯುತ್ತಿದೆ.

ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ಆದರೆ ಮೋದಿಜಿ ಏನನ್ನೂ ಹೇಳುತ್ತಿಲ್ಲ. ಅಂತರರಾಷ್ಟ್ರೀಯ ಹಣಕಾಸು ನಿಧಿಯು ಮಹಿಳೆಯರ ಅಭಿವೃದ್ಧಿಗಾಗಿ ಏನನ್ನೂ ಮಾಡುತ್ತಿಲ್ಲ ಎಂದು ಮೋದಿ ಅವರನ್ನು ಕುಟುಕಿದೆ. ಆದರೆ ಮೋದಿಜಿ ಅವರಿಗೆ ಮೋದಿ ಅವರ ಮೇಲೆ ಮಾತ್ರ ಆಸಕ್ತಿ ಎಂದು ವ್ಯಂಗ್ಯವಾಡಿದರು.

ದೇಶ ಸುಟ್ಟು ಉರಿದು ಹೋಗಲಿ. ಮಹಿಳೆಯರನ್ನು ಅತ್ಯಾಚಾರ ಮಾಡಲಿ. ಅದರೆ ಮೋದಿ ಅವರು ಮಾತ್ರ ಮತ್ತೆ ಪ್ರಧಾನಿಯಾಗುವುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದರು.

ತಮ್ಮ ಪುಸ್ತಕ 'ಕರ್ಮಯೋಗ'ದಲ್ಲಿ ಪ್ರಧಾನಿ ಮೋದಿ, ಸಫಾಯಿ ಕರ್ಮಚಾರಿ ಕೆಲಸವನ್ನು ವಾಲ್ಮೀಕಿ ಸಮುದಾಯದ ಅಧ್ಯಾತ್ಮದ ಅನುಭವ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇದು ಅವರಲ್ಲಿನ ದಲಿತ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ವಾಕ್ ಪ್ರಹಾರ ನಡೆಸಿದರು.

ನಮ್ಮ ಸಂಸ್ಥೆಗಳು ಸಂವಿಧಾನ ನೀಡಿದ ಕಾಣಿಕೆ. ಪ್ರಮುಖ ಹುದ್ದೆಗಳಿಗೆ ಆರ್‌ಎಸ್‌ಎಸ್‌ ಸಿದ್ಧಾಂತಿಗಳನ್ನು ನೇಮಿಸುವ ಮೂಲಕ ಮೋದಿ ಸರ್ಕಾರ ಈ ಸಂಸ್ಥೆಗಳನ್ನು ನಾಶಪಡಿಸುತ್ತಿದೆ. ನಮ್ಮ ಸಂವಿಧಾನವನ್ನು ನಾಶಪಡಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ನಾವು ಅವಕಾಶ ನೀಡುವುದಿಲ್ಲ. 2019ರಲ್ಲಿ ಜನರು ತಮ್ಮ ಮನ್‌ ಕಿ ಬಾತ್ ಮಾತನಾಡಲಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+