ಶಾಲೆಗೆ ಕೊಠಡಿಯಿಲ್ಲ, ಶುಲ್ಕವೂ ಇಲ್ಲ: ಫ್ಲೈಓವರ್ ಕೆಳಗೆ 200ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸತ್ಯೇಂದ್ರ ಸಿಂಗ್

ಒಂದಿಷ್ಟು ಪೋಷಕರು ತಮ್ಮ ಕೈಯಲ್ಲಿ ಹಣ ಇಲ್ಲದಿದ್ದರು ಕೂಡ ಮಕ್ಕಳ ಭವಿಷ್ಯಕ್ಕಾಗಿ ಸಾಲ ಮಾಡಿಯಾದ್ರೂ ಲಕ್ಷ ಲಕ್ಷ ಫೀಸ್‌ಕೊಟ್ಟು ಖಾಸಗಿ ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೂ ಅಲ್ಲಿ ಮಕ್ಕಳು ಸರಿಯಾಗಿ ಓದದೇ ಪುಂಡಾಟಿಗೆ ಮಾಡಿಕೊಂಡು ತಿರುಗುವವರನ್ನಾ ನಾವು ಸಾಮಾಜದಲ್ಲಿ ನೋಡಿರುತ್ತೇವೆ.

ಆದ್ರೆ ಈ ಶಾಲೆಯಲ್ಲಿ ಮಾತ್ರ ಸುಸಜ್ಜಿತವಾದ ಕೊಠಡಿಗಳಿಲ್ಲ, ಕೂರಲು ಬೆಂಚು ಅಥವಾ ಚೇರ್‌ಗಳಿಲ್ಲ, ಮಕ್ಕಳ ತಲೆಗೆ ಫ್ಯಾನ್ ಗಾಳಿ ತಾಗಲ್ಲ, ಮತ್ತು ವಿಶೇಷವೆಂದರೆ ಮಕ್ಕಳಿಂದ ಒಂದು ರೂಪಾಯಿ ಶುಲ್ಕವನ್ನೂ ಸಹ ಪಡೆಯಲ್ಲ.

Satyendra Singh Pal

ಈ ಶಾಲೆಗೆ ಇರುವುದು ಕೇವಲ ಫ್ಲೈಓವರ್ ಸೇತುವೆಯ ಮೇಲ್ಛಾವಣಿ, ಸಿಮೆಂಟ್ ಕಂಬಕ್ಕೆ ಅಂಟಿಸಿದ ಒಂದು ವೈಟ್‌ಬೋರ್ಡ್ ಮತ್ತು ಕಲಿಯಲೇ ಬೇಕು ಎನ್ನುವ ಹಂಬಲದಿಂದ ಪ್ರತಿದಿನ ಶಾಲೆಗೆ ಹಾಜರಾಗುವ 200ಕ್ಕೂ ಹೆಚ್ಚು ಬಡ ಮಕ್ಕಳು. ಇದು ನಾವು ಕಟ್ಟಿರುವ ಯಾವುದೇ ಕಾಲ್ಪನಿಕ ಕಟ್ಟು ಕಥೆಯಲ್ಲ. ಬದಲಿಗೆ ಇದು, ಸತ್ಯೇಂದ್ರ ಸಿಂಗ್ ಪಾಲ್ ಎಂಬ ನಿಜವಾದ ಹೀರೋ ಒಬ್ಬರು ಸದ್ದಿಲ್ಲದೆ ಬಡ ಮಕ್ಕಳಿಗೆ ಜ್ಞಾನಾರ್ಜನೆ ಮಾಡುತ್ತಿರುವ ರಿಯಲ್‌ ಸ್ಟೋರಿ.

ದಿನ ಬೆಳಗ್ಗೆ ಸೈಕಲಲ್ಲೇ 60 ಮನೆಗೆ ಪೇಪರ್ ಹಾಕಿ ಅಮ್ಮನ ಚಿಕಿತ್ಸೆಗೆ ನೆರವಾದ 20ರ ಅಶ್ವತಿ
ಹೌದು, ನಮ್ಮ ದೇಶದಲ್ಲಿ ಶಿಕ್ಷಣ ನೀತಿ ಮತ್ತು ಮೂಲಸೌಕರ್ಯಗಳ ಕೊರತೆಯ ಬಗ್ಗೆ ಎಸಿ ಕೊಠಡಿಗಳಲ್ಲಿ ಕುಳಿತು ಅಧಿಕಾರಿಗಳು ದೊಡ್ಡ ದೊಡ್ಡ ಚರ್ಚೆಗಳ ಮಾಡುತ್ತಲೇ ಇರುತ್ತಾರೆ. ಆದರೆ ಇಂತಹ ಚರ್ಚೆ, ಮಾತುಗಳಿಂದ ಬಡಮಕ್ಕಳಿಗೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನ ಅರಿತ ಸತ್ಯೇಂದ್ರ ಸಿಂಗ್ ಪಾಲ್, ತಾವೇ ಖುದ್ದಾಗಿ ಫ್ಲೈಓವರ್ ಕೆಳಗೆ ಒಂದು ಪುಟ್ಟ ಶಾಲೆಯನ್ನ ಆರಂಭಿಸಿದ್ದಾರೆ.

ಇವರಿಗೆ ಯಾವುದೇ ಸರಕಾರಿ ಅನುದಾನವಾಗಲಿ, ಕಾರ್ಪೊರೇಟ್ ಕಂಪನಿಗಳ ನೆರವಿನ ನಿರೀಕ್ಷೆಯಾಗಲಿ ಇಲ್ಲ ನೋಡಿ. ಕೇವಲ ತಮ್ಮ ದೃಢ ಸಂಕಲ್ಪದಿಂದಲೇ ಈ ಶಾಲೆಯನ್ನ ಮುನ್ನಡೆಸುತ್ತಿದ್ದಾರೆ.

ದಿನಗೂಲಿ ನೌಕರರು, ಕೊಳೆಗೇರಿ ವಾಸಿಗಳು ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಅಕ್ಷರ ಜ್ಞಾನ ನೀಡಬೇಕೆಂಬ ಆಸೆಯಿಂದ ಅವರು ಈ ಮಹತ್ವದ ಹೆಜ್ಜೆಯನ್ನಾ ಇಟ್ಟಿದ್ದಾರೆ. ಪೋಷಕರಿಗೆ ಶಾಲಾ ಶುಲ್ಕ ಕಟ್ಟಲು ಆಗದೆ ಶಾಲೆಯಿಂದ, ಶಿಕ್ಷಣದಿಂದ ಹೊರಗುಳಿದಿದ್ದ ಮಕ್ಕಳಿಗೆ ಸತ್ಯೇಂದ್ರ ಸಿಂಗ್ ಪಾಲ್ ಅವರ ಈ ನಡೆ ಹೊಸ ಭರವಸೆ ಮೂಡಿಸಿದೆ.

200ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ

ಪ್ರತಿದಿನ ಬೆಳಗ್ಗೆ ಫ್ಲೈಓವರ್ ಕೆಳಗಿನ ನೆಲದ ಮೇಲೆ 200ಕ್ಕೂ ಹೆಚ್ಚು ಮಕ್ಕಳು ಶಿಸ್ತಿನಿಂದ ಕುಳಿತುಕೊಂಡು ಪಾಠ ಕೇಳುತ್ತಾರೆ. ಇಲ್ಲಿ ತಿರುಗುವ ವಾಹನಗಳ ಶಬ್ದ, ಧೂಳು ಇವು ಯಾವುದೂ ಈ ಮಕ್ಕಳ ಕಲಿಕೆಗೆ ಇಲ್ಲಿಯವರೆಗೆ ಅಡ್ಡಿಯಾಗಿಲ್ಲ. ಶಿಕ್ಷಕ ಸತ್ಯೇಂದ್ರ ಸಿಂಗ್ ಪಾಲ್ ವೈಟ್‌ಬೋರ್ಡ್ ಮೇಲೆ ಬರೆಯುವ ಪ್ರತಿಯೊಂದು ಅಕ್ಷರವನ್ನ, ಹೇಳುವ ಪ್ರತಿಯೊಂದು ಪಾಠವನ್ನಾ ಮಕ್ಕಳು ಅತ್ಯಂತ ಗಮನವಿಟ್ಟು ಕಲಿಯುತ್ತಾರೆ.

ಮಕ್ಕಳಿಗೆ ಪ್ರಾಥಮಿಕವಾಗಿ ಬೇಕಾದ ಅಕ್ಷರ ಜ್ಞಾನ, ಗಣಿತ, ಭಾಷಾ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರವನ್ನೂ ಇಲ್ಲಿ ಹೇಳಿಕೊಡಲಾಗುತ್ತಿದೆ. ಒಳ್ಳೆಯ ಕೆಲಸವನ್ನ ಆರಂಭಿಸಲು ಒಳ್ಳೆಯ ಸುಸಜ್ಜಿತವಾದ ಕಟ್ಟಡ ಅಥವಾ ಸಂಪನ್ಮೂಲಗಳೇ ಬೇಕೆಂಬ ಯಾವುದೇ ನಿಯಮವಿಲ್ಲ. ಬದಲಿಗೆ ಸಮಾಜಕ್ಕೆ ಒಳ್ಳೆಯದು ಮಾಡಬೇಕೆಂಬ ಮನಸ್ಸಿದ್ದರೆ ಸಾಕು ಎಂಬುದನ್ನು ಈ ಫ್ಲೈಓವರ್ ಶಾಲೆ ಸಾಬೀತುಪಡಿಸಿದೆ.

ಸಮಾಜಕ್ಕೆ ಮಾದರಿಯಾದ ಸತ್ಯೇಂದ್ರ ಸಿಂಗ್ ಪಾಲ್

ಸಮಾಜದಲ್ಲಿ ಬದಲಾವಣೆ ತರಲು ದೊಡ್ಡ ವೇದಿಕೆಗಳು, ಭಾಷಣಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರ ಬೇಕಿಲ್ಲ ಎಂಬುದಕ್ಕೆ ಸತ್ಯೇಂದ್ರ ಸಿಂಗ್ ಅವರ ಈ ಕೆಲಸವೇ ಒಂದು ಒಳ್ಳೆಯ ಉದಾಹರಣೆ ಸಾಕ್ಷಿ. ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣದ ಹಕ್ಕನ್ನ ಒದಗಿಸಿಕೊಡುತ್ತಿರುವ ಇವರ ನಿಸ್ವಾರ್ಥ ಸೇವೆ ನಿಜವಾದ ಸಮಾಜ ಸೇವೆಯಾಗಿದೆ.

ತಮ್ಮ ಸ್ವಂತ ಶ್ರಮದಿಂದ ಬಡ ಮಕ್ಕಳ ಭವಿಷ್ಯಕ್ಕೆ ಬೆಳಕಾಗುತ್ತಿರುವ ಸತ್ಯೇಂದ್ರ ಸಿಂಗ್ ಪಾಲ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+