ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂನಲ್ಲಿ ಬಿಜೆಪಿ ಆಡಳಿತ ಆರಂಭ, ಸಿಎಂ ಆದ ಸೋನೊವಾಲ್

By Mahesh
|
Google Oneindia Kannada News

ಗುವಾಹಟಿ, ಮೇ 24: ಅಸ್ಸಾಂನಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಸ್ಥಾಪಿಸಿದೆ. ಮುಖ್ಯಮಂತ್ರಿಯಾಗಿ ಮಂಗಳವಾರ ಸಂಜೆ ಸರ್ಬಾನಂದ ಸೋನೊವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಈ ಐತಿಹಾಸಿಕ ಕ್ಷಣ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ, ಹಿರಿಯ ರಾಜಕಾರಣಿ ಎಲ್ ಕೆ ಅಡ್ವಾಣಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.

ಮಂಗಳವಾರ(ಮೇ 24) ಸಂಜೆ ನಡೆದ ಸಮಾರಂಭದಲ್ಲಿ ಅಸ್ಸಾಂ ರಾಜ್ಯಪಾಲರಾದ ಪಿ.ಬಿ. ಆಚಾರ್ಯ ಸೋನೊವಾಲ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಮೊದಲ ಬಾರಿಗೆ ಬಿಜೆಪಿಯ ಆಡಳಿತ ಶಕೆ ಆರಂಭಗೊಂಡಿದೆ.

Sarbananda Sonowal takes oath as CM; PM Modi marks presence

ಕೇಂದ್ರ ಸರ್ಕಾರದಲ್ಲಿ ಕ್ರೀಡಾ ಖಾತೆ ರಾಜ್ಯ ಸಚಿವರಾಗಿದ್ದ ಸೋನುವಾಲ್ ಅವರು ಇತ್ತೀಚೆಗೆ ನಡೆದ ಅಸ್ಸಾಂ ಅಸೆಂಬ್ಲಿ ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯ ಗಳಿಸಿದ್ದರು. ಅಸ್ಸಾಂನಲ್ಲಿ ಬಹುಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ನಾಯಕ ತರುಣ್ ಗೋಗಾಯ್ ಕೂಡಾ ಈ ಸಮಾರಂಭಕ್ಕೆ ಆಗಮಿಸಿ ಸೋನುವಾಲ್ ಅವರಿಗೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.

ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಲ್ಲದೆ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ರಾಮ್ ವಿಲಾಸ್ ಪಾಸ್ವಾನ್, ಅನಂತ್ ಕುಮಾರ್, ಸುರೇಶ್ ಪ್ರಭು, ವೆಂಕಯ್ಯ ನಾಯ್ಡು,ಪಂಜಾಬ್ ಸಿಎಂ ಪ್ರಕಾಶ್ ಸಿಂಗ್ ಬಾದಲ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ರಾಜಸ್ಥಾನ ಸಿಎಂ ವಸುಂಧರಾ ರಾಜೇ, ಛತ್ತೀಸ್​ಗಢ ಸಿಎಂ ರಮಣ್ ಸಿಂಗ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮುಂತಾದವರು ಉಪಸ್ಥಿತರಿದ್ದರು.

ಅಸ್ಸಾಂನಲ್ಲಿ ಬಿಜೆಪಿ ಆಡಳಿತ ಆರಂಭ, ಸಿಎಂ ಆದ ಸೋನೊವಾಲ್

ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಮತ್ತು ಆಸೋಮ್ ಗಣ ಪರಿಷದ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿಕೂಟ ರಚಿಸಿದೆ. ಈ ಮೈತ್ರಿಕೂಟ 126 ಸ್ಥಾನಗಳ ಪೈಕಿ 86 ಸ್ಥಾನ ಗಳಿಸಿ ಅಧಿಕಾರ ಸ್ಥಾಪಿಸಿದೆ. ಸೋನುವಾಲ್ ಜೊತೆಗೆ ಹೇಮಂತ್ ಬಿಸ್ವಾ ಶರ್ಮ, ಎಜಿಪಿ ಅಧ್ಯಕ್ಷ ಅತುಲ್ ಬೋರಾ, ಪ್ರಮೀಳಾ ರಾಣಿ ಬ್ರಹ್ಮ, ಪರಿಮಳ್ ಶುಕ್ಲಾ ವೈದ್ಯ ಅವರು ಸಚಿವ ಸಂಪುಟ ಸೇರಿದ್ದಾರೆ.

English summary
Marking the history in a north-east state, BJP MLA Sarbananda Sonowal on Tuesday sworn in as Chief Minister of Assam.To witness the history in making, Prime Minister Narendra Modi, BJP veteran L K Advani and BJP president Amit Shah and Nitin Gadkari attended the swearing in ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X