ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಿತ ದೇವಮಾನವ ಸಾರಥಿ ಬಾಬಾ ಆಸ್ತಿ ಮೌಲ್ಯ ಎಷ್ಟು?

By Mahesh
|
Google Oneindia Kannada News

ಕೇಂದ್ರ ಪಾರ (ಒಡಿಶಾ) ಆಗಸ್ಟ್ 21:ಸ್ವಘೋಷಿತ ದೇವಮಾನವ ಸಾರಥಿಬಾಬಾ ಅಲಿಯಾಸ್ ಸಂತೋಷ್ ರೌಲಾ ಅವರು ಸ್ಥಾಪಿಸಿರುವ ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿರುವ ಆಶ್ರಮ ಅಸ್ತಿ ಮೌಲ್ಯ ಲೆಕ್ಕಾಚಾರ ಹಾಕಲಾಗಿದೆ.

ಸಾರಧಿ ಬಾಬಾ ಅವರ ಆಶ್ರಮದ ಆಸ್ತಿ ಮೌಲ್ಯ ಅಧಿಕೃತವಾಗಿ ರೂ.4.48 ಕೋಟಿ ರು ಅಂದಾಜಿನಷ್ಟಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಾಬಾ ಈಗ ಪೊಲೀಸ್ ಬಂಧನದಲ್ಲಿದ್ದಾರೆ.

ಬರಿಮುಲಾದಲ್ಲಿ 2.47 ಎಕ್ರೆ ಜಮೀನಿನಲ್ಲಿ ವ್ಯಾಪಿಸಿರುವ ಆಶ್ರಮವು 3,760 ಚದರ ಅಡಿಗಳ 2 ಮಹಡಿಗಳ ಮುಖ್ಯ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದ ಮೌಲ್ಯ 1.18 ಕೋಟಿ ರು ಬೆಲೆಯಷ್ಟಿದೆ. ಮೂರು ಮಹಡಿಗಳ ಅತಿಥಿ ಗೃಹವೊಂದಕ್ಕೆ 94.33 ಲಕ್ಷ ರು ಎಂದು ವೌಲ್ಯಮಾಪನ ಮಾಡಲಾಪಿದೆ ಎಂದು ಆರ್ ಅಂಡ್ ಬಿ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಎಂ.ಎಂ. ಖಾನ್ ತಿಳಿಸಿದ್ದಾರೆ. [ಸ್ವಯಂ ಘೋಷಿತ ದೇವ ಮಾನವ ಸಾರಥಿ ಬಾಬಾ ಬಂಧನ]

Sarathi Baba's ashram valued at Rs 4.48 crore

ಆಶ್ರಮದ ಗ್ರಂಥಾಲಯ ಕಟ್ಟಡ 70 ಲಕ್ಷ ರು ಬೆಲೆ ಬಾಳಿದರೆ, ವಿಚಾರಣೆ ಮತ್ತು ಸ್ವಾಗತ ಕೌಂಟರ್‌ನ ಮೌಲ್ಯ 17.05 ರು ಲಕ್ಷ ರು ನಷ್ಟಿದೆ. ಪೈಪ್ ಹಾಗೂ ಆಂಗಲ್ ಫ್ರೇಮ್‌ಗಳ ರಚನೆಯಾಗಿರುವ ಪ್ರಾರ್ಥನಾ ಮಂದಿರದ ಮೌಲ್ಯ 43 ಲಕ್ಷ ರು ಹಾಲಿ ಮಾರುಕಟ್ಟೆ ದರದಂತೆ ಆಶ್ರಮದ ಆವರಣ ಗೋಡೆಗೆ 28 ಲಕ್ಷ ರು ಬೆಲೆಯನ್ನು ಅಂದಾಜಿಸಲಾಗಿದೆ.

ಆಶ್ರಮದಲ್ಲಿ ದೇವ-ದೇವಿಯರ ಹಲವು ರಚನೆಗಳಿವೆ. ಅಲ್ಲಿ ಹುಲಿ, ಕರಡಿ, ಆಮೆ, ಮೊಸಳೆ, ಮಂಗ, ವೀರಾನೆ, ನವಿಲು, ಜಿಂಕೆ, ಹಂಸ ಹಾಗೂ ಜೀಬ್ರಾಗಳಂತಹ ಪ್ರಾಣಿಗಳ ಶಿಲ್ಪಗಳೂ ಇವೆ. ಆಶ್ರಮದಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕಾಗಿ ನಾಲ್ಕು ಅಲಂಕೃತ ದ್ವಾರಗಳಿವೆ. ಅಂತಹ ಅಲಂಕೃತ ದ್ವಾರಗಳ ರಚನೆ ಭಾರೀ ಖರ್ಚಿನ ಬಾಬತ್ತಾಗಿರುತ್ತದೆ.

English summary
The sprawling Ashram founded by arrested self-proclaimed godman Sarathi Baba alias Santosh Raula in Odisha's Kendrapara district was officially evaluated at Rs 4.48 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X