ಸರಳಾ ಬಿರ್ಲಾ ಅಕಾಡೆಮಿ - ವಿಭಿನ್ನತೆಯೊಂದಿಗೆ ವಿಶಿಷ್ಟ ಬಾಲಕರ ವಸತಿ ಶಾಲೆ, ಭಾರತೀಯ ಸಂಸ್ಕೃತಿಗೂ ಇಲ್ಲಿದೆ ಬೆಲೆ

ಅತ್ಯುತ್ತಮ ಶಿಕ್ಷಣದೊಂದಿಗೆ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಸರಳಾ ಬಿರ್ಲಾ ಅಕಾಡೆಮಿ, ಎಜುಕೇಷನ್ ವರ್ಲ್ಡ್ 2025ರ ಪ್ರಕಾರ ಭಾರತದ ನಂಬರ್ 1 ಬಾಲಕರ ಬೋರ್ಡಿಂಗ್ ಸ್ಕೂಲ್. ಜಾಗತಿಕ ಮಟ್ಟದ ಪಠ್ಯಕ್ರಮ, ಉತ್ತಮ ಮೂಲ ಸೌಕರ್ಯ, ಪ್ರತಿ ಮಗುವಿಗೂ ವಿಶೇಷ ಗಮನ ಮತ್ತು ನಾಯಕತ್ವ ಗುಣ ಹಾಗೂ ಜೀವನ ಕೌಶಲ್ಯದೊಂದಿಗೆ ಮಕ್ಕಳನ್ನು ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಹಾಗೂ ಜೀವನದಲ್ಲಿಯೂ ಯಶಸ್ವಿಯಾಗುವಂತೆ ಈ ಶಾಲೆ ಸಿದ್ಧಪಡಿಸುತ್ತದೆ.

ಬೆಂಗಳೂರಿನ ಬನ್ನೇರುಘಟ್ಟದಲ್ಲಿ 67 ಎಕರೆ ಹಸಿರು ಪ್ರದೇಶದಲ್ಲಿರುವ ಈ ಶಾಲೆಯಲ್ಲಿ ಅತ್ಯುತ್ತಮ ಮೂಲ ಸೌಕರ್ಯಗಳಿದ್ದು, ಕಲಿಯಲು ಪೂರಕವಾದ ವಾತಾವರಣವಿದೆ. ಇದು ಬಿರ್ಲಾ ಗ್ರೂಪ್ ಆಫ್ ಕಂಪನಿಯ ಎಂಡಿ ಆದಿತ್ಯ ಬಿರ್ಲಾ ಕನಸಿನ ಕೂಸು. ಪ್ರತಿ ವಿದ್ಯಾರ್ಥಿಯೂ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಇಲ್ಲಿ ಉತ್ತೇಜಿಸಲಾಗುತ್ತದೆ. ಅಲ್ಲದೇ ಮಕ್ಕಳಲ್ಲಿ ಹೆಚ್ಚಿನ ಆತ್ಮ ಗೌರವ ಬೆಳೆಸುವುದು ಈ ಶಾಲೆಯ ಮುಖ್ಯ ಉದ್ದೇಶ. 5ನೇ ತರಗತಿಯಿಂದ 12ನೇ ತರಗತಿಯವರೆಗೂ ಇಲ್ಲಿ ಬೋಧಿಸಲಾಗುತ್ತದೆ. ಈ ಶಾಲೆಗೆ IGCSE ಗಾಗಿ ಕೇಂಬ್ರಿಜ್ ಅಸೆಸ್‌ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್ (CAIE), ICSE ಮತ್ತು ISC ಗಾಗಿ CISCE, ಹಾಗೂ IBDPಗಾಗಿ International Baccalaureate Organisation (IBO) ಜೊತೆ ಒಡಂಬಡಿಕೆ ಇದೆ. ಆಧುನಿಕ ತಂತ್ರಜ್ಞಾನದೊಂದಿಗೆ ಹೊಸ ಹೊಸ ಬೋಧನಾ ವಿಧಾನಗಳನ್ನು ಈ ಶಾಲೆಯ ಶಿಕ್ಷಕರು ಅಳವಡಿಸಿಕೊಂಡ, ಮಕ್ಕಳ ಬೌದ್ಧಿಕ ಕುತೂಹಲವನ್ನು ಹೆಚ್ಚಿಸುತ್ತಾರೆ. ಒಂದು ತರಗತಿಯಲ್ಲಿ ಗರಿಷ್ಠ 25 ಬಾಲಕರಿರುತ್ತಾರೆ. ಆದ್ದರಿಂದ ಒಟ್ಟಾರೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ 1:7 ಮೀರುವುದೇ ಇಲ್ಲ. ಈ ಶಾಲೆಯ ವಿದ್ಯಾರ್ಥಿಗಳು ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಮುಂದಿನ ಶಿಕ್ಷಣವನ್ನು ಪಡೆಯುವಂತೆಯೇ ಸಿದ್ಧಪಡಿಸಲಾಗುತ್ತದೆ. 100ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಪ್ರತಿ ವರ್ಷ ಈ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗಾಗಿಯೇ ಕಾರ್ಯಾಗಾರ ಮತ್ತು ಶಿಕ್ಷಣ ಮೇಳಗಳನ್ನು ನಡೆಸುತ್ತವೆ. ಶೈಕ್ಷಣಿಕ ಶ್ರೇಷ್ಠತೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಈ ಶಾಲೆ ಹೆಚ್ಚಿನ ಒತ್ತು ನೀಡುತ್ತದೆ - ಕರುಣೆ, ಗೌರವ, ಪ್ರಾಮಾಣಿಕತೆ ಮತ್ತು ಶಿಸ್ತಿನಂತಹ ಗುಣಗಳನ್ನು ಬೆಳೆಸಿ, ಮಗುವನ್ನು ಒಳ್ಳೆಯ ವ್ಯಕ್ತಿಯನ್ನಾಗಿ ಹಾಗೂ ಸಜ್ಜನನನ್ನಾಗಿ ರೂಪಿಸುವುದೇ ಈ ಶಾಲೆಯ ಗುರಿ. ಭಾರತೀಯ ಮೌಲ್ಯಗಳನ್ನು ಬೆಳೆಸುತ್ತಲೇ ಜಾಗತಿಕ ದೃಷ್ಟಿಕೋನವನ್ನೂ ಬೆಳೆಸಲು ಈ ಶಾಲೆ ಪ್ರಯತ್ನಿಸುತ್ತದೆ. ಶೈಕ್ಷಣಿಕ ವಿಷಯಗಳೊಂದಿಗೆ ಕಲೆ, ಸಂಸ್ಕೃತಿ, ಸಂಗೀತ, ನಾಟಕ, ಕ್ರೀಡೆ ಮತ್ತು ವೃತ್ತಿಪರ ತರಬೇತಿಯೂ ಪಠ್ಯಕ್ರಮದ ಮುಖ್ಯ ಭಾಗವಿಲ್ಲಿ. ಮಗುವಿನ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಹಲವು ಸಹ ಪಠ್ಯ ಚಟುವಟಿಕೆಗಳ ಆಯ್ಕೆಗಳಿವೆ.

Sarala Birla Academy India s No 1 Boys Boarding School World-Class Education and Leadership

ಒಟ್ಟಾಗಿ ಕಲಿಯುವ ಮತ್ತು ಕೆಲಸ ಮಾಡುವ ಕಾಲವಿದು. ಇದಕ್ಕಾಗಿ ಶಾಲೆಯು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಹಲವು ವೇದಿಕೆಗಳನ್ನು ಒದಗಿಸುತ್ತದೆ. ಈ ಶಾಲೆ ರೌಂಡ್ ಸ್ಕ್ವೇರ್, IFSPD (ಇಂಟರ್‌ನ್ಯಾಷನಲ್ ಫೌಂಡೇಶನ್ ಫಾರ್ ಸಸ್ಟೈನೇಬಲ್ ಪೀಸ್ ಆ್ಯಂಡ್ ಡೆವಲಪ್‌ಮೆಂಟ್), ಜನರೇಶನ್ ಗ್ಲೋಬಲ್, IPSC (ಇಂಡಿಯನ್ ಪಬ್ಲಿಕ್ ಸ್ಕೂಲ್ಸ್ ಕಾನ್ಫರೆನ್ಸ್), TAISI (ದಿ ಅಸೋಸಿಯೇಶನ್ ಆಫ್ ಇಂಟರ್ನ್ಯಾಷನಲ್ ಸ್ಕೂಲ್ಸ್ ಆಫ್ ಇಂಡಿಯಾ) ಮತ್ತು ASISC (ಅಸೋಸಿಯೇಶನ್ ಆಫ್ ಸ್ಕೂಲ್ಸ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್) ಎಂಬ ಪ್ರಮುಖ ಸಂಸ್ಥೆಗಳ ಸದಸ್ಯತ್ವ ಹೊಂದಿದೆ. ಡ್ಯೂಕ್ ಆಫ್ ಎಡಿನ್ಬರೊ ಇಂಟರ್ನ್ಯಾಷನಲ್ ಅವಾರ್ಡ್ ಫೌಂಡೇಶನ್ ಅಡಿಯಲ್ಲಿ ಶಾಲೆಯು IAYP (ಇಂಟರ್ನ್ಯಾಷನಲ್ ಅವಾರ್ಡ್ ಫಾರ್ ಯಂಗ್ ಪೀಪಲ್) ಕಾರ್ಯಕ್ರಮವನ್ನೂ ನಡೆಸುತ್ತಿದೆ. ಇದೊಂದು YES (ಯೂತ್ ಎಂಗೇಜಿಂಗ್ ಸೊಸೈಟಿ) ಕೇಂದ್ರವೂ ಹೌದು. ಇತ್ತೀಚೆಗೆ, ಬ್ರಿಟಿಷ್ ಕೌನ್ಸಿಲ್ ಈ ಶಾಲೆಗೆ ISA (ಇಂಟರ್ನ್ಯಾಷನಲ್ ಸ್ಕೂಲ್ ಅವಾರ್ಡ್) ಪ್ರಶಸ್ತಿ ನೀಡಿ ಗೌರವಿಸಿದೆ.

ಮಕ್ಕಳ ವರ್ತನೆ, ಆಲೋಚನೆ ಕಡೆಗೂ ಒತ್ತು

ಮಕ್ಕಳು ಯಶಸ್ವಿ ಯುವಕರಾಗಿ ಬೆಳೆಯಲು ಶೈಕ್ಷಣಿಕ ವಿಷಯಗಳಲ್ಲಿ ಮುಂದಿದ್ದರಷ್ಟೇ ಸಾಲದೆಂದು SBA ನಂಬಿದೆ. ಮಕ್ಕಳ ವರ್ತನೆ, ಆಲೋಚನೆಗಳು ಹೇಗಿವೆ ಅವನ್ನು ಹೇಗೆ ಅಭಿವ್ಯಕ್ತಗೊಳಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕಷ್ಠದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ, ಎಷ್ಟು ವಿನಯದಿಂದ ನಾಯಕತ್ವ ಗುಣ ಪ್ರದರ್ಶಿಸುತ್ತಾರೆ ಮತ್ತು ಎಲ್ಲವುಕ್ಕಿಂತ ಮುಖ್ಯವಾಗಿ ಮಕ್ಕಳು ತಮ್ಮ ಯೋಚನಾ ಶೈಲಿಯನ್ನು ಹೇಗೆ ಬೆಳೆಯಿಸಿಕೊಳ್ಳುತ್ತಾರೆಂಬುವುದು ಮಕ್ಕಳ ಶೈಕ್ಷಣಿಕ ಫಲಿತಾಂಶಗಳಷ್ಟೇ ಮುಖ್ಯ ಎಂದು ಶಾಲೆ ನಂಬುತ್ತದೆ. ಜಗತ್ತಿನ ಸವಾಲುಗಳನ್ನು ಎದುರಿಸಲು ಈ ಗುಣಗಳ ಸಹಕಾರಿ. ಈ ರೀತಿಯ ಕೌಶಲ್ಯಗಳು ಬೋರ್ಡಿಂಗ್ ಶಾಲಾ ವ್ಯವಸ್ಥೆಯಿಂದ ಮಾತ್ರ ಬರಲು ಸಾಧ್ಯ ಎಂದು ಶಾಲೆ ಭಾವಿಸುತ್ತದೆ. ಅಂಥ ವ್ಯವಸ್ಥೆ ಈ ಗುಣಗಳನ್ನು ಬೆಳೆಸಲು ಮತ್ತು ಬೆಂಬಲಿಸಲು ಸಹಕರಿಸುತ್ತದೆ. ಹಲವು ವರ್ಷಗಳಿಂದ, SBA ವಿದ್ಯಾರ್ಥಿಗಳು ಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಹ ವ್ಯವಸ್ಥೆಯನ್ನು ರೂಪಿಸಿದೆ. ಮಗು ತನ್ನ ವಯಸ್ಸಿಗನುಗುಣವಾಗಿ ಜವಾಬ್ದಾರಿಗಳನ್ನು ವಹಿಸಿಕೊಂಡು, ಆ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಅವನು ನಿಜವಾಗಿಯೂ ಪ್ರಗತಿ ಸಾಧಿಸಲು ಸಾಧ್ಯ ಎಂಬ ತಿಳುವಳಿಕೆಯಿಂದ ಈ ವ್ಯವಸ್ಥೆ ರೂಪುಗೊಂಡಿದೆ.

ವಿದ್ಯಾರ್ಥಿಗಳ ಪೋಷಕರನ್ನೂ SBA ಮುಖ್ಯ ಪಾಲುದಾರರೆಂದು ಪರಿಗಣಿಸುತ್ತದೆ.'ಮನೆಯಲ್ಲಿ ಪೋಷಕರುಮತ್ತು ಶಾಲೆಯಲ್ಲಿ ನಾವು - ಇಬ್ಬರೂ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಒಟ್ಟಾಗಿ ಹಂಚಿಕೊಳ್ಳಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ', ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲರಾದ ಶ್ರೀ ಸಂತನು ದಾಸ್. ಜಗತ್ತನ್ನು ಉಳಿಸಿಕೊಳ್ಳಲು ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವ ಜಾಗತಿಕ ನಾಗರಿಕರ ಪೀಳಿಗೆಯನ್ನು ಎಲ್ಲರೂ ಒಟ್ಟಾಗಿ ಸೃಷ್ಟಿಸಬೇಕು. ಒಂದು ದಿನ ನಮ್ಮ ಪೀಳಿಗೆ ನಿರ್ಗಮಿಸುವಾಗ, ಈ ಸುಂದರವಾದ ನೀಲಿ ಗ್ರಹ ಸಮರ್ಥ ಮತ್ತು ಸುರಕ್ಷಿತ ಕೈಗಳಲ್ಲಿವೆ ಎಂಬ ಭರವಸೆಯೊಂದಿಗೆ ಮಕ್ಕಳನ್ನು ಬೆಳೆಸಬೇಕೆನ್ನುತ್ತಾರೆ ದಾಸ್. ಅಂತಹ ಕೈಗಳನ್ನು ನಾವು ಒಟ್ಟಾಗಿ ಸೃಷ್ಟಿಸಿದ್ದೇವೆ ಎಂಬ ತೃಪ್ತಿ ಈ ಶಾಲಾ ಆಡಳಿತ ಮಂಡಳಿಗಿದೆ.

ಈ ಕಾರಣದಿಂದಲೇ ಸರಳಾ ಬಿರ್ಲಾ ಅಕಾಡೆಮಿ ದೇಶ ಹಾಗೂ ಅದರಾಚೆಗೂ ಇರುವ ಪೋಷಕ ಹೃದಯದಲ್ಲಿ ಜಾಗ ಪಡೆದಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+