ಬಿಜೆಪಿಯನ್ನು ಬೆಚ್ಚಿಬೀಳಿಸಿದ 2 ರಾಜ್ಯಗಳ RSS ಚುನಾವಣಾ ಸರ್ವೇ
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಈ ವರ್ಷಾಂತ್ಯದಲ್ಲಿ ಮತ್ತು ಮುಂದಿನ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿರುವ ಎರಡು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಮೀಕ್ಷೆ ನಡೆಸಿದ್ದು, ಇದು ಅಕ್ಷರಸಃ ಬಿಜೆಪಿಯನ್ನು ಬೆಚ್ಚಿಬೀಳಿಸಿದೆ.
ಬಿಜೆಪಿಯ ಮಾತೃಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಈ ವರ್ಷಾಂತ್ಯದಲ್ಲಿ ಮತ್ತು ಮುಂದಿನ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿರುವ ಎರಡು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಮೀಕ್ಷೆ ನಡೆಸಿದ್ದು, ಇದು ಅಕ್ಷರಸಃ ಬಿಜೆಪಿಯನ್ನು ಬೆಚ್ಚಿಬೀಳಿಸಿದೆ.
ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಗುಜರಾತ್ ಚುನಾವಣೆ ಈ ವರ್ಷಾಂತ್ಯದಲ್ಲಿ ಮತ್ತು ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆ 2018ರಲ್ಲಿ (ನವೆಂಬರ್ ತಿಂಗಳೊಳಗೆ) ನಡೆಯಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅನುಕೂಲಕರವಾಗುವ ಯಾವುದೇ ಪರಿಸ್ಥಿತಿ ಅಲ್ಲಿಲ್ಲ ಎಂದು ಸರ್ವೇಯನ್ನು ಉಲ್ಲೇಖಿಸಿ ನ್ಯೂಸ್ ರಿಪಬ್ಲಿಕ್ ವರದಿ ಮಾಡಿದೆ.
ಈ ಚುನಾವಣೆಗಳ ಮೂಲಕ ಬಿಜೆಪಿಯ 'ಕೆಟ್ಟದಿನ'ಗಳ ಆರಂಭವಾಗುವ ಸಾಧ್ಯತೆಯಿದೆ ಎಂದು ಆರ್ ಎಸ್ ಎಸ್ ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿದ್ದು, ಈ ಕೂಡಲೇ ಬಿಜೆಪಿಯ ಚಾಣಕ್ಯ ಅಮಿತ್ ಶಾ ತಲೆ ಓಡಿಸಬೇಕಾಗಿದೆ. ಇಲ್ಲದಿದ್ದರೆ, ಬಿಜೆಪಿಗೆ ತೀವ್ರ ಮುಖಭಂಗ ನಿಶ್ಚಿತ.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ಈಗಿನ ವಾತವಾರಣ ಪ್ರತಿಕೂಲವಾಗಿದೆ. ಅದೇ ರೀತಿ ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗಿದ್ದ ಜನಪ್ರಿಯತೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿರುವುದನ್ನು ಬಿಜೆಪಿ ಅವಲೋಕಿಸಿಕೊಳ್ಳಬೇಕಿದೆ ಎಂದು RSS ಸರ್ವೇಯಲ್ಲಿ ಹೇಳಲಾಗಿದೆ.
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಗುಜರಾತ್ ನಲ್ಲಿ ಶೇ. 8-10ರಷ್ಟು ಮತಗಳು ಬಿಜೆಪಿಗೆ ಕಮ್ಮಿಯಾಗುವ ಸಾಧ್ಯತೆಯಿದೆ. ಇದೇ ರೀತಿ ವ್ಯಾಪಂ ಹಗರಣ ಶಿವರಾಜ್ ಸಿಂಗ್ ಸರಕಾರಕ್ಕೆ ಮುಳುವಾಗಲಿದೆ. ಜಾತಿ ಲೆಕ್ಕಾಚಾರವೂ ಎರಡು ರಾಜ್ಯಗಳಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. RSS ಸಮೀಕ್ಷೆ ಪ್ರಕಾರ, ಬಿಜೆಪಿಗೆ ಎಷ್ಟು ಸ್ಥಾನ ಸಿಗಬಹುದು, ಮುಂದೆ ಓದಿ..

ಶಿವರಾಜ್ ಸಿಂಗ್ ಸರಕಾರದ ಈಗಿನ ಬಲಾಬಲ
ಮಧ್ಯಪ್ರದೇಶದಲ್ಲಿ ಈಗಿನ ಬಲಾಬಲ
ಒಟ್ಟು ಸ್ಥಾನಗಳು: 230
ಬಿಜೆಪಿ: 165
ಕಾಂಗ್ರೆಸ್: 58
ಇತರರು: 07

ಅರ್ಥದಷ್ಟು ಸ್ಥಾನವನ್ನು ಗೆಲ್ಲಲೂ ಬಿಜೆಪಿಗೆ ತೊಂದರೆ
RSS ಸಮೀಕ್ಷೆ ಪ್ರಕಾರ, ಈಗಿರುವ ಸ್ಥಾನಕ್ಕಿಂತ ಅರ್ಥದಷ್ಟು ಸ್ಥಾನವನ್ನು ಗೆಲ್ಲಲೂ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ತೊಂದರೆಯಾಗಬಹುದು. ಸಮೀಕ್ಷೆ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸಿಗೆ ಅಲ್ಲಿ ಅನುಕೂಲ ವಾತಾವರಣವಿದ್ದು, 120 ಕ್ಷೇತ್ರದಲ್ಲಿ ಕಾಂಗ್ರೆಸ್, 57 ರಿಂದ 60 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯುದೆ.

ವ್ಯಾಪಂ ಮತ್ತು ಬಿಜೆಪಿ ಮುಖಂಡರ ಸೆಕ್ಸ್ ಹಗರಣ
ಕಾಂಗ್ರೆಸ್ ವ್ಯವಸ್ಥಿತವಾಗಿ ಚುನಾವಣಾ ತಂತ್ರ ರೂಪಿಸಿದರೆ, ಬಿಜೆಪಿಗೆ ಸೋಲು ಕಟ್ಟಿಟ್ಟಬುತ್ತಿ. ವ್ಯಾಪಂ ಮತ್ತು ಬಿಜೆಪಿ ಮುಖಂಡರ ಸೆಕ್ಸ್ ಹಗರಣ ಪಕ್ಷಕ್ಕೆ ಮುಳುವಾಗಲಿದೆ. ರೈತರ ಜಾಥಾದಲ್ಲಿ ನಡೆದ ಹಿಂಸಾಚಾರ, ಮೇಧಾ ಪಾಟ್ಕರ್ ಮುಂತಾದ ಮುಖಂಡರನ್ನು ಜೈಲಿಗೆ ಕಳುಹಿಸಿದ್ದು ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಗುಜರಾತ್ ರೂಪಾನಿ ಸರಕಾರದಲ್ಲಿ ಈಗಿನ ಬಲಾಬಲ
ಗುಜರಾತ್ ನಲ್ಲಿನ ಈಗಿನ ಬಲಾಬಲ
ಒಟ್ಟು ಸ್ಥಾನಗಳು: 182
ಬಿಜೆಪಿ: 119
ಕಾಂಗ್ರೆಸ್: 57
ಇತರರು: 06

ನಿರ್ಣಾಯಕ ಪಾತ್ರ ವಹಿಸಲಿರುವ ಪಟೇದಾರ್ ಸಮುದಾಯ
ಪಟೇದಾರ್ ಚಳುವಳಿಯ ವೇಳೆ ಹದಿನಾಲ್ಕು ಜನ ಸಾವನ್ನಪ್ಪಿದ್ದು ಬಿಜೆಪಿಗೆ ಮುಳುವಾಗಲಿದೆ. ಸೌರಾಷ್ಟ್ರ ಭಾಗದಲ್ಲಿ ಪಟೇದಾರ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದೆ. ಕಾಂಗ್ರೆಸ್ಸಿಗೆ ಸದ್ಯ ಇಲ್ಲಿ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ 120, ಬಿಜೆಪಿ 57-60 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎಂದು ಆರ್ ಎಸ್ ಎಸ್ ನಡೆಸಿದ ಸರ್ವೇಯಲ್ಲಿ ಹೊರಬಿದ್ದ ಅಂಶವೆಂದು ನ್ಯೂಸ್ ರಿಪಬ್ಲಿಕ್ ವರದಿ ಮಾಡಿದೆ.












Click it and Unblock the Notifications