ಬಾಲಿವುಡ್ ನಟ- ನಟಿಯರಲ್ಲ, ಇವರೇ ನೋಡಿ ರಿಯಲ್ ಹೀರೋಸ್! 3,661 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ದಂಪತಿ
2004ರ ಸಮಯ.. ಮೊಬೈಲ್ ಫೋನ್ ಎನ್ನುವುದು ಬಹುತೇಕ ಜನರಿಗೆ ಒಂದು ಅಚ್ಚರಿಯ ವಸ್ತು. ಮೊಬೈಲ್ ಅಂಗಡಿಗಳಲ್ಲಿ ಗಾಜಿನ ಕೌಂಟರ್‌ನೊಳಗೆ ಇರುತ್ತಿದ್ದ ಫೋನ್‌ಗಳನ್ನ ದೂರದಿಂದಲೇ ನೋಡಿ ಸಮಾಧಾನ ಪಟ್ಟುಕೊಳ್ಳಬೇಕಿತ್ತು. ಗ್ರಾಹಕರಿಗೆ ಮೊಬೈಲ್ ಮುಟ್ಟಿ ನೋಡುವ ಅವಕಾಶವೇ ಇರಲಿಲ್ಲ.
ಇದೇ ಒಂದು ದೊಡ್ಡ ಸಮಸ್ಯೆ ಎಂದು ಚೆನ್ನೈನ ದಂಪತಿಯೊಬ್ಬರು ಭಾವಿಸಿದರು. ಆ ಒಂದು ಆಲೋಚನೆಯೇ ಇಂದು ದಕ್ಷಿಣ ಭಾರತದ ಅತಿದೊಡ್ಡ ಮೊಬೈಲ್ ರಿಟೇಲ್ ಬ್ರ್ಯಾಂಡ್ ಹುಟ್ಟಿಗೆ ಕಾರಣವಾಯಿತು. ಅದೇ ಪೂರ್ವಿಕಾ ಮೊಬೈಲ್ಸ್ ಯಶೋಗಾಥೆ. ಗ್ಲಾಮರ್ ಪ್ರಪಂಚಕ್ಕೆ ಮಾರು ಹೋಗುವ ಇಂದಿನ ಯುವಜನತೆಗೆ, ಈ ದಂಪತಿಯ ಸಾಧನೆ ನಿಜಕ್ಕೂ ಒಂದು ರಿಯಲ್ ಇನ್ಸ್ಪಿರೇಷನ್.

ಚೆನ್ನೈನ ಕೋಡಂಬಾಕಂನಲ್ಲಿ ಉವರಾಜ್ ನಟರಾಜನ್ ಮತ್ತು ಅವರ ಪತ್ನಿ ಕನ್ನಿ ಉವರಾಜ್ ಸೇರಿ ತಮ್ಮ ಒಂದು ಮೊದಲ ಮೊಬೈಲ್ ಸ್ಟೋರ್ ಆರಂಭಿಸಿದರು. ಅವರ ಐಡಿಯಾ ಬಹಳ ಸರಳವಾಗಿತ್ತು. ಅದೇನೆಂದರೆ, ಗ್ರಾಹಕರು ಹಣ ಪಾವತಿಸುವ ಮುನ್ನ ಮೊಬೈಲ್ ಫೋನ್ ಅನ್ನ ತಮ್ಮ ಕೈಯಲ್ಲಿ ಹಿಡಿದು, ಮುಟ್ಟಿ ನೋಡುವ ಅವಕಾಶ ನೀಡುವುದು.
ಹಾಗಾಗಿ, ಎಲ್ಲಾ ಬ್ರ್ಯಾಂಡ್‌ಗಳ ಮೊಬೈಲ್‌ಗಳನ್ನ ಒಂದೇ ಸೂರಿನಡಿ ತಂದು, ಮೊಬೈಲ್ ಅಂಗಡಿಯೊಂದಕ್ಕೆ ಆಧುನಿಕ ರಿಟೇಲ್ ಸ್ಟೋರ್‌ನ ಸ್ಪರ್ಶ ನೀಡಿದರು. ಯಾವುದೇ ದೊಡ್ಡ ಹೂಡಿಕೆದಾರರಿಲ್ಲದೆ, ಫಂಡಿಂಗ್ ರೌಂಡ್‌ಗಳಿಲ್ಲದೆ ಕೇವಲ ಒಂದು ಅಂಗಡಿಯಿಂದ ಶುರುವಾದ ಪಯಣ, ನಿಧಾನವಾಗಿ ಒಂದೊಂದೇ ಮಳಿಗೆಗಳನ್ನ ತೆರೆಯುತ್ತಾ ಸಾಗಿತು.
ಇ-ಕಾಮರ್ಸ್ ಅಬ್ಬರ ಮತ್ತು ಲಾಕ್‌ಡೌನ್ ಸವಾಲು
ಸ್ಟಾರ್ಟ್ಅಪ್ ಜಗತ್ತಿನಲ್ಲಿ ಸವಾಲುಗಳು ಸಾಮಾನ್ಯ. ಈ ದಂಪತಿಗೂ ಕೂಡ ಕಷ್ಟದ ದಿನಗಳು ಎದುರಾದವು. ಇ-ಕಾಮರ್ಸ್ ಮತ್ತು ಆನ್‌ಲೈನ್ ಶಾಪಿಂಗ್ ಬಂದ ನಂತರ, ಭಾರತದಲ್ಲಿ ಅತಿ ಹೆಚ್ಚು ಬೆಲೆ ಹೋಲಿಕೆಗೆ ಒಳಪಟ್ಟ ವಸ್ತು ಎಂದರೆ ಅದು ಮೊಬೈಲ್ ಫೋನೇ ಇರಬಹುದು.
ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕನಿಗೂ ಆನ್‌ಲೈನ್ ಬೆಲೆ ಮೊದಲೇ ತಿಳಿದಿರುತ್ತಿತ್ತು. ಇದರ ಜೊತೆಗೆ, ಮೊಬೈಲ್ ರಿಟೇಲ್ ವ್ಯವಹಾರ ನಡೆಯುವುದೇ ಕೇವಲ ಶೇ. 2ರಷ್ಟು ಲಾಭಾಂಶದ ಮೇಲೆ. ಅಂದರೆ 100 ರೂ. ವ್ಯಾಪಾರ ಮಾಡಿದರೆ ಕೇವಲ 2 ರೂ. ಲಾಭ ಸಿಗುತ್ತದೆ. ಹೆಚ್ಚಿನವರು ಇದನ್ನು ಅತ್ಯಂತ ಕಳಪೆ ಬ್ಯುಸಿನೆಸ್ ಎನ್ನುತ್ತಾರೆ.
ಇನ್ನು 2020ರ ಲಾಕ್‌ಡೌನ್ ಸಮಯದಲ್ಲಿ ಎಲ್ಲಾ ಮಳಿಗೆಗಳು ಮುಚ್ಚಿಹೋದವು. ಇಷ್ಟೆಲ್ಲಾ ಸವಾಲುಗಳಿದ್ದರೂ ಉವರಾಜ್ ದಂಪತಿ ತಮ್ಮ ಮಳಿಗೆಗಳನ್ನ ವಿಸ್ತರಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ.
ಶೂನ್ಯ ಹೂಡಿಕೆಯಲ್ಲಿ 3,661 ಕೋಟಿ ರೂ. ಆದಾಯದ ಸಾಮ್ರಾಜ್ಯ
ಇಂದು 'ಪೂರ್ವಿಕಾ ಇಂಡಿಯಾ' ದಕ್ಷಿಣ ಭಾರತದಲ್ಲಿ ಒಂದು ದೊಡ್ಡ ಹೆಸರು ಮಾಡಿದೆ. ತಮಿಳುನಾಡು, ಕರ್ನಾಟಕ ಮತ್ತು ಪುದುಚೇರಿ ಸೇರಿ ಒಟ್ಟು 438ಕ್ಕೂ ಹೆಚ್ಚು ಬೃಹತ್ ಮಳಿಗೆಗಳನ್ನ ಹೊಂದಿದೆ. ಅಚ್ಚರಿಯೆಂದರೆ ಇವರು ಯಾವುದೇ ವೆಂಚರ್ ಕ್ಯಾಪಿಟಲ್ ಹಣ ಪಡೆದಿಲ್ಲ. ಆದರೂ ಇಂದು ಪೂರ್ವಿಕಾ ಮೊಬೈಲ್ಸ್‌ನ ವಾರ್ಷಿಕ ಆದಾಯ ಬರೋಬ್ಬರಿ 3,661 ಕೋಟಿ ರೂಪಾಯಿಗಳು.
TRUE REAL INSPIRATION 💯 👌
— AstroCounselKK 🇮🇳 (@AstroCounselKK) September 25, 2026
Stop creating ideals of good for nothing bollywood bimbos..
This is the REAL Deal..
Read Full ..
In 2004, a mobile phone was still something most people pointed at through a glass counter.
A husband and wife in Chennai thought that was the problem.… pic.twitter.com/gTseNkNZG3
ಈ ಸ್ಟಾರ್ಟ್ಅಪ್ ಕಥೆ ಕಲಿಸುವ ಈ 3 ಪ್ರಮುಖ ವ್ಯವಹಾರ ತಂತ್ರಗಳು
ಯಾವುದೇ ಹೊಸ ವ್ಯವಹಾರ ಆರಂಭಿಸುವವರಿಗೆ ಪೂರ್ವಿಕಾ ಮೊಬೈಲ್ಸ್ ದಂಪತಿಯ ಈ ಅದ್ಭುತ ವ್ಯವಹಾರ ತಂತ್ರ ಮೂರು ದೊಡ್ಡ ಪಾಠಗಳನ್ನು ಕಲಿಸುತ್ತದೆ:
1. ಗ್ರಾಹಕರ ಅನುಭವವೇ ಶ್ರೇಷ್ಠ: ಬೇರೊಬ್ಬರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನ ನೆಚ್ಚಿಕೊಳ್ಳುವುದಕ್ಕಿಂತ, ಗ್ರಾಹಕರಿಗೆ ನೇರವಾಗಿ ಅತ್ಯುತ್ತಮ ಅನುಭವ ನೀಡುವುದೇ ನಿಜವಾದ ಯಶಸ್ಸಿನ ಗುಟ್ಟು.
2. ನಂಬಿಕೆಯೇ ಬಂಡವಾಳ: 2% ನಷ್ಟು ಅತ್ಯಂತ ಕಡಿಮೆ ಲಾಭಾಂಶವಿದ್ದರೂ, ಗ್ರಾಹಕರ ನಂಬಿಕೆ ಮತ್ತು ವ್ಯಾಪಾರದ ಪ್ರಮಾಣ ಹೆಚ್ಚಾದಾಗ ದೊಡ್ಡ ಮಟ್ಟದ ಲಾಭ ಗಳಿಸಬಹುದು. ಕಡಿಮೆ ಮಾರ್ಜಿನ್ ಎಂದರೆ ವ್ಯಾಪಾರ ಮುಳುಗಿತು ಎಂದರ್ಥವಲ್ಲ.
3. ಒಂದೇ ಕಡೆ ಪ್ರಬಲವಾಗಿರಿ: ನೀವು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಪಂಚದಾದ್ಯಂತ ಮಳಿಗೆ ತೆರೆಯಬೇಕಿಲ್ಲ. ಇಂದಿಗೂ ಪೂರ್ವಿಕಾ ಮೊಬೈಲ್ಸ್‌ನ ಶೇ. 70ರಷ್ಟು ಆದಾಯ ಕೇವಲ ಒಂದೇ ರಾಜ್ಯದಿಂದ ಬರುತ್ತಿದೆ.
ಯಾವುದೇ ಬ್ಯುಸಿನೆಸ್ ಹಿನ್ನೆಲೆ ಇಲ್ಲದೆ, ಕೇವಲ ಗ್ರಾಹಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಶೂನ್ಯದಿಂದ ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ ಉವರಾಜ್ ಮತ್ತು ಕನ್ನಿ ಉವರಾಜ್ ದಂಪತಿಯ ಈ ಯಶೋಗಾಥೆ ಇಂದಿನ ಯುವ ಉದ್ಯಮಿಗಳಿಗೆ ನಿಜಕ್ಕೂ ಮಾದರಿ.


Click it and Unblock the Notifications
