• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1 ರೂಪಾಯಿ ನೋಟು ಮತ್ತೆ ಮುದ್ರಣ, ಚಾಲನೆಗೆ

By ವಿಕಾಸ್ ನಂಜಪ್ಪ
|

ನವದೆಹಲಿ, ಮೇ 26: ಭಾರತೀಯ ರಿಸರ್ವ್‌ ಬ್ಯಾಂಕ್‌ ಶೀಘ್ರದಲ್ಲೇ ಒಂದು ರೂಪಾಯಿ ನೋಟುಗಳನ್ನು ಚಲಾವಣೆಗೆ ತರಲಿದೆ. ಈ ನೋಟು­ಗಳ ಮುದ್ರಣ, ಹೊಸ ವಿನ್ಯಾಸದ ಬಗ್ಗೆ ವಿವರಣೆ ಇಲ್ಲಿದೆ.

1,2 ಹಾಗೂ 5 ನಾಣ್ಯಗಳು ಚಲಾವಣೆ ಹೆಚ್ಚಾದ ನಂತರ ಈ ಮೌಲ್ಯದ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ಈಗ ಒಂದು ರೂಪಾಯಿ ನೋಟುಗಳ ಮುದ್ರಣವನ್ನು ಮತ್ತೆ ಆರಂಭಿಸಲು ಆದೇಶ ಹೊರಡಿಸಲಾಗಿದೆ. ಹಿಂದೊಮ್ಮೆ 2014ರಲ್ಲಿ ನೋಟುಗಳ ಮುದ್ರಣಕ್ಕೆ ಆದೇಶಿಸಲಾಗಿತ್ತು.[ಚಲಾವಣೆಗೆ ಬರಲಿದೆ ಹೊಸ 10 ರುಪಾಯಿ ನೋಟು]

2011ರ ನೋಟು, ನಾಣ್ಯ ಕಾಯ್ದೆಯ ಅನ್ವಯ ಮೇ 05, 2017ರಂದು ವಿತ್ತ ಸಚಿವಾಲಯದಿಂದ ಅಧಿಸೂಚನೆ ಹೊರಡಿಸಲಾಗಿದೆ. ಅಧಿಕೃತ ಗೆಜೆಟ್ ನಲ್ಲಿ ನೋಟು ಮುದ್ರಣ ದಿನಾಂಕದ ವಿವರ ಹೊರ ಬರಲಿದೆ.[ಹೊಸ ನೋಟುಗಳ ಮುದ್ರಣಕ್ಕೆ ಆರ್ ಬಿಐ ಎಷ್ಟು ಖರ್ಚು ಮಾಡ್ತಿದೆ?]

ರು 1 ನೋಟು ವಿನ್ಯಾಸ: ಆಯುತಾಕಾರದಲ್ಲಿರಲಿದ್ದು, 9.7 ‍X 6.3 ಸೆಂ.ಮೀ ಅಳತೆ ಹೊಂದಿರಲಿದೆ. ತೂಕ 90 ಜಿಎಸ್ಎಂ ಪ್ರತಿ ಚದರ ಮೀಟರ್ ನಂತೆ ಇರಲಿದೆ. ನೋಟಿನ ದಪ್ಪ 110 ಮೈಕ್ರಾನ್ ಮೀರಬಾರದು.[ಪ್ಲಾಸ್ಟಿಕ್ ನೋಟು ಮುದ್ರಣಕ್ಕೆ ಆರ್ ಬಿಐ ನಿರ್ಧಾರ!]

ವಾಟರ್ ಮಾರ್ಕ್ ಗಳಲ್ಲಿ ಅಶೋಕ ಸ್ತಂಭ(ಸತ್ಯಮೇವ ಜಯತೇ ರಹಿತ, ಮಧ್ಯಭಾಗದಲ್ಲಿ ಅಂಕಿಯಲ್ಲಿ 1 ಎಂದು ಬರೆಯಲಾಗಿರುತ್ತದೆ. ಜತೆಗೆ Bharat ಎಂದು ಹಿಂದಿ ಭಾಷೆಯಲ್ಲಿ ಲಂಬವಾಗಿ ಬಲಗೈ ಬದಿಯಲ್ಲಿ ಮುದ್ರಿತವಾಗಿರುತ್ತದೆ.

ಎರಡನೇ ಇನ್ನಿಂಗ್ಸ್ ಶುರು

ಎರಡನೇ ಇನ್ನಿಂಗ್ಸ್ ಶುರು

Government of India ಪದ ಹಾಗೂ Bharat Sarkar(ಹಿಂದಿಯಲ್ಲಿ) ಎಂದು ಬರೆಯಲಾಗಿರುತ್ತದೆ. ವಿತ್ತ ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರ ಸಹಿ(ದ್ವಿಭಾಷೆಯಲ್ಲಿ) ಇರಲಿದೆ. 1 ರು ಕಾಯಿನ್ ಪ್ರತಿಕೃತಿ ಹಾಗೂ ಹಿಂದಿಯಲ್ಲಿ ಚಿಹ್ನೆ ಕಾಣಬಹುದು. ಸತ್ಯಮೇವ ಜಯತೇ, 'L' ಒಳಭಾಗದಲ್ಲಿ ಇರಲಿದೆ.

ಸಂಕೇತಗಳು ಕಾಣಬಹುದಾಗಿದೆ

ಸಂಕೇತಗಳು ಕಾಣಬಹುದಾಗಿದೆ

ಬಲಗೈ ಕೆಳಭಾಗದಲ್ಲಿ ಕಪ್ಪು ಬಣ್ಣ ಹಾಗೂ ಅಂಕಿಗಳು ಎಡದಿಂದ ಬಲಕ್ಕೆ ಇರಲಿದೆ.ಮೊದಲ ಮೂರು ಆಲ್ಫಾನ್ಯೂಮೆರಿಕ್ ಸಂಕೇತಗಳು ಕಾಣಬಹುದಾಗಿದೆ.

ನೋಟಿನ ಅಂಚಿನಲ್ಲಿ ಹೂವಿನ ವಿನ್ಯಾಸ

ನೋಟಿನ ಅಂಚಿನಲ್ಲಿ ಹೂವಿನ ವಿನ್ಯಾಸ

ನೋಟಿನ ಅಂಚಿನಲ್ಲಿ ಹೂವಿನ ವಿನ್ಯಾಸ ಹಾಗೆ ಉಳಿಸಿಕೊಳ್ಳಲಾಗಿದೆ. ಭಾರತ್ ಸರ್ಕಾರ್ ಹಿಂದಿ ಭಾಷೆಯಲ್ಲಿರಲಿದೆ. ತೈಲ ನಿಕ್ಷೇಪ ವೇದಿಕೆ ಸಾಗರ್ ಸಾಮ್ರಾಟ್ ಚಿತ್ರ ಹಾಗೂ 15 ಭಾಷೆಗಳಲ್ಲಿ ಒಂದು ರೂಪಾಯಿ ಎಂದು ಕಾಣಬಹುದು. ಪಿಂಕ್ ಹಾಗೂ ಹಸಿರು ಬಣ್ಣವನ್ನು ನೋಟಿನಲ್ಲಿ ಹೆಚ್ಚು ಬಳಕೆಮಾಡಲಾಗಿದೆ.

1 ರು ನೋಟು ಮುದ್ರಣ ಸರ್ಕಾರದ ಹೊಣೆ

1 ರು ನೋಟು ಮುದ್ರಣ ಸರ್ಕಾರದ ಹೊಣೆ

ಮಿಕ್ಕ ಎಲ್ಲ ಮೌಲ್ಯದ ನೋಟುಗಳ ಮುದ್ರಣದ ಜವಾಬ್ದಾರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇಲಿದ್ದರೆ, 1 ರುಪಾಯಿ ನೋಟು ಹಾಗೂ ಎಲ್ಲಾ ಕಾಯಿನ್ ಗಳ ಮುದ್ರಣ, ಮರು ಮುದ್ರಣ, ಚಾಲನೆ, ವಹಿವಾಟು ಸ್ಥಗಿತದ ನಿರ್ಧಾರವನ್ನು ಕೇಂದ್ರ ಸರ್ಕಾರ ಖುದ್ದು ನೋಡಿಕೊಳ್ಳಲಿದೆ. ಈ ಹಿಂದೆ ನಾಣ್ಯಗಳ ವಹಿವಾಟು ಜೋರಾಗಿದ್ದರಿಂದ 1,2 ಹಾಗೂ 5 ರುಪಾಯಿ ನೋಟುಗಳ ಮುದ್ರಣವನ್ನು ಹಿಂಪಡೆಯಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: The Re 1 note is back
English summary
The government has announced that the Re 1 note will be printed. The one rupee note shall conform to the dimensions and composition as specified in the first schedule the Ministry of Finance has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more