ಪ್ಲಾಸ್ಟಿಕ್ ನೋಟು ಮುದ್ರಣಕ್ಕೆ ಆರ್ ಬಿಐ ನಿರ್ಧಾರ!

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 9: ಪ್ಲಾಸ್ಟಿಕ್ ನೋಟುಗಳ ಮುದ್ರಣ ಮಾಡಲು ನಿರ್ಧರಿಸಲಾಗಿದೆ ಎಂದು ಸರಕಾರವು ಶುಕ್ರವಾರ ಸಂಸತ್ ಗೆ ಮಾಹಿತಿ ನೀಡಿದೆ. ಪ್ಲಾಸ್ಟಿಕ್ ನೋಟಿಗೆ ಅಗತ್ಯವಾದ ವಸ್ತುಗಳನ್ನು ಹೊಂದಿಸಿಕೊಳ್ಳುವುದಕ್ಕೆ ಆರಂಭಿಸಲಾಗಿದೆ ಎಂದು ಕೂಡ ಇದೇ ಸಂದರ್ಭದಲ್ಲಿ ಹೇಳಿದೆ.

"ಬ್ಯಾಂಕ್ ನೋಟುಗಳನ್ನು ಪ್ಲಾಸ್ಟಿಕ್ ಹಾಗೂ ಪಾಲಿಮರ್ ನಿಂದ ತಯಾರಿಸಲಿದ್ದು, ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಆರಂಭಿಸಲಾಗಿದೆ" ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ ವಾಲ್ ಲಿಖಿತ ಉತ್ತರ ನೀಡಿದ್ದಾರೆ. ಪೇಪರ್ ನೋಟಿನ ಬದಲು ಪ್ಲಾಸ್ಟಿಕ್ ನೋಟು ತರುವ ಪ್ರಸ್ತಾವ ರಿಸರ್ವ್ ಬ್ಯಾಂಕ್ ಮುಂದೆ ಇದೆಯಾ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು.

Government decides to print plastic note

ಪ್ರಯೋಗ ನಡೆಸಿದ ನಂತರ ಪ್ಲಾಸ್ಟಿಕ್ ನೋಟು ಬಿಡುಗಡೆ ಮಾಡುವ ಬಗ್ಗೆ ರಿಸರ್ವ್ ಬ್ಯಾಂಕ್ ಹಿಂದಿನಿಂದಲೂ ಯೋಜನೆ ರೂಪಿಸುತ್ತಿದೆ. ಫೆಬ್ರವರಿ 2014ರಲ್ಲಿ ಸರಕಾರ ಸಂಸತ್ ನಲ್ಲಿ ನೀಡಿದ್ದ ಮಾಹಿತಿ ಪ್ರಕಾರ, ಹತ್ತು ರುಪಾಯಿ ಮುಖ ಬೆಲೆಯ ಒಂದು ಬಿಲಿಯನ್ ಪ್ಲಾಸ್ಟಿಕ್ ನೋಟುಗಳನ್ನು ಆಯ್ದ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು.

ಆಯಾ ಪ್ರದೇಶ ಹಾಗೂ ವಾತಾವರಣಕ್ಕೆ ಹೇಗೆ ಹೊಂದಾಣಿಕೆ ಆಗುತ್ತದೆ ಎಂಬುದನ್ನು ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ ಮತ್ತು ಭುವನೇಶ್ವರದಲ್ಲಿ ಪ್ಲಾಸ್ಟಿಕ್ ನೋಟು ಬಿಡುಗಡೆ ಮಾಡಿ ಪರೀಕ್ಷಿಸುವ ಇರಾದೆ ಇತ್ತು. ಪ್ಲಾಸ್ಟಿಕ್ ನೋಟುಗಳ ಆಯುಷ್ಯ ಸರಾಸರಿ ಐದು ವರ್ಷಗಳು. ಮತ್ತು ಅವುಗಳನ್ನು ನಕಲು ಮಾಡುವುದು ಕಷ್ಟ.

ಪೇಪರ್ ನೋಟುಗಳಿಗಿಂತ ಪ್ಲಾಸ್ಟಿಕ್ ನವು ಹೆಚ್ಚು ಸ್ವಚ್ಛವಾಗಿರುತ್ತವೆ. ಇಂಥ ನೋಟುಗಳನ್ನು ಆಸ್ಟ್ರೇಲಿಯಾದಲ್ಲಿ ಮೊದಲು ಪರಿಚಯಿಸಲಾಯಿತು. ಅಲ್ಲೂ ಅಷ್ಟೇ, ನಕಲಿ ನೋಟುಗಳ ಹಾವಳಿ ತಡೆಯುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Government Friday (December 9th) informed Parliament that a decision has been taken to print plastic currency notes and procurement of material has started.
Please Wait while comments are loading...