ಹೊಸ ನೋಟುಗಳ ಮುದ್ರಣಕ್ಕೆ ಆರ್ ಬಿಐ ಎಷ್ಟು ಖರ್ಚು ಮಾಡ್ತಿದೆ?

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 21: ಕೇಂದ್ರ ಸರ್ಕಾರ 500, 1000 ರು ಮುಖಬೆಲೆಯ ನೋಟುಗಳ ಬಳಕೆ ನಿಷೇಧ ಮಾಡಿ ಆದೇಶ ಹೊರಡಿಸಿದ ಮೇಲೆ ಹೊಸ ನೋಟುಗಳ ಮುದ್ರಣದ ಬಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಗೆ ತಟ್ಟಿತ್ತು. ಪ್ರತಿ ನೋಟುಗಳ ಮುದ್ರಣಕ್ಕೆ ತಗುಲುವ ವೆಚ್ಚ ಹಾಗೂ ಒಟ್ಟಾರೆ ಚಲಾವಣೆಗೆ ಬರಲಿರುವ ನೋಟುಗಳ ಬಗ್ಗೆ ಆರ್ ಬಿಐ ವಿವರಣೆ ನೀಡಿದೆ.

ಹಳೆ ನೋಟುಗಳು ನಿಷೇಧವಾದ ಬಳಿಕ ಹೊಸದಾಗಿ 500 ಹಾಗೂ 2000 ಮುಖಬೆಲೆ ನೋಟುಗಳು ಚಲಾವಣೆಗೆ ಬಂದಿವೆ. ಈ ಹೊಸ ನೋಟುಗಳ ಮುದ್ರಣಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿ ಮಧ್ಯಪ್ರದೇಶ ಮೂಲದ ಆರ್ ಟಿಐ ಕಾರ್ಯಕರ್ತ ಚಂದ್ರಶೇಖರ್ ಅವರು ಪ್ರಶ್ನಿಸಿ, ಉತ್ತರ ಪಡೆದುಕೊಂಡಿದ್ದಾರೆ.

ಆರ್‌ಬಿಐನ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಸಂಸ್ಥೆ (ಬಿಆರ್‌ಬಿಎನ್‌ಎಂಪಿಎಲ್‌) ನೋಟುಗಳನ್ನು ಮುದ್ರಿಸುತ್ತಿದೆ. ಒಂದು 500 ರೂಪಾಯಿ ನೋಟು ಮುದ್ರಿಸಲು 3.09 ಪೈಸೆ. 2,000 ಸಾವಿರ ನೋಟು ಮುದ್ರಣಕ್ಕೆ 3 ರೂ 54ಪೈಸೆಯನ್ನು ಆರ್‌ಬಿಐ ಖರ್ಚು ಮಾಡುತ್ತಿದೆ ಎಂದು ಬಿಆರ್‌ಬಿಎನ್‌ಎಂಪಿಎಲ್‌ ತಿಳಿಸಿದೆ.

For Rs 500 note, RBI pays Rs 3.09; Rs 3.54 for Rs 2,000 note

ಈಗ ರದ್ದಾದ 500, 1000 ನೋಟುಗಳ ಮುದ್ರಣಕ್ಕೂ ಕ್ರಮವಾಗಿ 3.09 ಪೈಸೆ, 3.54 ಪೈಸೆ ಖರ್ಚು ಮಾಡಲಾಗುತ್ತಿತ್ತು ಎಂದು ಬಿಆರ್‌ಬಿಎನ್‌ಎಂಪಿಎ ಹೇಳಿದೆ. ಒಟ್ಟಾರೆ ಮುದ್ರಣ ಹಾಗೂ ಚಲಾವಣೆ ಸಂಖ್ಯೆ ತುಲನೆ ಮಾಡಿದರೆ ಸರಿ ಸುಮಾರು 12,000 ಕೋಟಿ ರು ವೆಚ್ಚವಾಗಲಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bhartiya Reserve Bank Note Mudran Private Limited (BRBNMPL) is printing each new Rs 500 note at the old cost of Rs 3.09, while the cost of Rs 2,000 currency note is Rs 3.54.
Please Wait while comments are loading...