Ration Card: ಈ ಮಾರ್ಗಸೂಚಿ ಪಾಲನೆ ಮಾಡದಿದ್ದವರಿಗೆ ಫೆಬ್ರವರಿ 15ರಿದಂಲೇ ಪಡಿತರ ವಿತರಣೆ ರದ್ದು
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದರಿಂದ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಪಡಿತರವನ್ನು ವಿತರಣೆ ಮಾಡಲಾಗುತ್ತದೆ. ಇದೇ ರೇಷನ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಆಗಾಗ ಹೊಸ ನಿಯಮಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮಹತ್ವದ ಅಪ್ಡೇಟ್‌ವೊಂದನ್ನು ಕೊಟ್ಟಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ಭಾರತ ಸರ್ಕಾರವು ಪಡಿತರ ಚೀಟಿ ಹೊಂದಿರುವವರಿಗೆ ಹಲವು ಯೋಜನೆಗಳನ್ನು ನೀಡುತ್ತಲೇ ಇರುತ್ತದೆ. ಅದೆಲ್ಲೂ ಜನರು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಭಾರತ ಸರ್ಕಾರ ಪಡಿತರವನ್ನು ಕೂಡ ವಿತರಣೆ ಮಾಡುತ್ತಿದೆ. ದೇಶದ ಹಲವೆಡೆ ಇಂದಿಗೂ ಕೂಡ ಒಂದೊತ್ತಿನ ಊಟಕ್ಕೂ ಕಷ್ಟಪಡುವವರಿದ್ದಾರೆ. ಇಂತಹವರಿಗಾಗಿಯೇ ಸರ್ಕಾರವು ಹಲವು ಯೋಜನೆಗಳನ್ನ ತಂದಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಕಡಿಮೆ ದರ ಮತ್ತು ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿದೆ. ಈ ಯೋಜನೆಯು ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿಯಲ್ಲಿದೆ.
ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಾತ್ರ ಕಡಿಮೆ ದರದಲ್ಲಿ ಪಡಿತರವನ್ನು ವಿತರಣೆ ಮಾಡಲಾಗುತ್ತದೆ. ಆದ್ದರಿಂದ ಸರ್ಕಾರವು ಫಲಾನುಭವಿಗಳನ್ನ ಗುರುತಿಸಲು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿದ್ದು, ಈ ಅರ್ಹತಾ ಮಾನದಂಡಗಳನ್ನಾಧರಿಸಿ ಪಡಿತರ ಚೀಟಿ ವಿತರಣೆ ಮಾಡಲಾಗುತ್ತಿದೆ.
ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಇನ್ನು ಇದೀಗ ಪಡಿತರ ಚೀಟಿದಾರರಿಗೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿ ಪಾಲನೆ ಮಾಡದವರಿಗೆ ಫೆಬ್ರವರಿ 15ರಿಂದ ಪಡಿತರ ಸಿಗುವುದಿಲ್ಲ ಅಂತಲೂ ತಿಳಿಸಿದೆ.
ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಸೂಚನೆ ನೀಡಿದೆ. ಆದ್ದರಿಂದ ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲೇಬೇಕಾಗುತ್ತದೆ. ಒಂದು ವೇಳೆ ಇ-ಕೆವೈಸಿ ಮಾಡಿಸಿಕೊಳ್ಳದ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ನಿಲ್ಲಿಸಲಾಗುತ್ತದೆ ಅಂತಲೂ ತಿಳಿಸಿದೆ. ಆದ್ದರಿಂದ ನೀವು ಇ-ಕೆವೈಸಿ ಮಾಡಿಕೊಳ್ಳದೇ ಇದ್ದರೆ, ಶೀಘ್ರದಲ್ಲಿಯೇ ಮಾಡಿಸಿಕೊಳ್ಳಬೇಕಿದೆ.
ಪಡಿತರ ಚೀಟಿಗಾಗಿ ಇ-ಕೆವೈಸಿ ಮಾಡಲು, ನೀವು ನಿಮ್ಮ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.ಇ-ಕೆವೈಸಿ ಮಾಡಿಸಲು ಆಧಾರ್ ಕಾರ್ಡ್ ಕಡ್ಡಾಯ ಆಗಿದೆ. ಆನ್‌ಲೈನ್ ಮೂಲಕವೂ ಪಡಿತರ ಚೀಟಿಯ ಇ-ಕೆವೈಸಿಯನ್ನ ಮಾಡಿಸಬಹುದಾಗಿದೆ.
ಹೊಸ ಸದಸ್ಯರ ಸೇರ್ಪಡೆ ಹೇಗೆ?
* ಅಧಿಕೃತ ವೆಬ್‌ಸೈಟ್ https://ahara.karnataka.gov.in/ ಭೇಟಿ ನೀಡಿ. * ಪಬ್ಲಿಕ್ ಯೂಸ್ ಎಂಬ ಮೆನು ಬಾರ್ ಕೆಳಗೆ ಜಿಲ್ಲಾವಾರು ಮಾಹಿತಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿ ತಿದ್ದುಪಡಿ ಅಯ್ಕೆ ವಿಭಾಗಗಳು ಇವೆ.
* ಹೊಸ ರೇಷನ್ ಕಾರ್ಡ್ ಬೇಕಾದರೆ ಅಪ್ಲೈ ಫಾರ್ ನ್ಯೂ ರೇಷನ್ ಕಾರ್ಡ್ ಮತ್ತು ಪಡಿತರ ಚೀಟಿ ತಿದ್ದುಪಡಿಗಾದರೆ ಅಪ್ಲೈ ಫಾರ್ ರೇಷನ್ ಕಾರ್ಡ್ ಕರೆಕ್ಷನ್ಸ್ ಆಯ್ಕೆ ಸೆಲೆಕ್ಟ್ ಮಾಡಬೇಕಾಗುತ್ತದೆ.
* ಹೊಸ ಪೇಜ್‌ನಲ್ಲಿ ಕಾಣಸುವ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
* ನಂತರ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಬೇಕು.
* ಪರಿಷ್ಕೃತ ಪಡಿತರ ಚೀಟಿ, ಹೊಸ ಪಡಿತರ ಚೀಟಿ ವಿತರಣೆ ಆಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳು
* ಕುಟುಂಬದ ಸದಸ್ಯರ ಆಧಾರ್ ಕಾರ್ಡ್
* ಕುಟುಂಬದ ಸದಸ್ಯರ ಜಾತಿ ಪ್ರಮಾಣ ಪತ್ರ
* ಕುಟುಂಬದ ಸದಸ್ಯರ ಆದಾಯ ಪ್ರಮಾಣ ಪತ್ರ
* ಮಕ್ಕಳ ಜನನ ಪ್ರಮಾಣ ಪತ್ರ
* ಮೊಬೈಲ್ ನಂಬರ್
* ರೇಷನ್ ಕಾರ್ಡ್
* ಇತರ ಅಗತ್ಯ ದಾಖಲಾತಿಗಳು












Click it and Unblock the Notifications