Ram Mandir: 57 ವರ್ಷದ ಹಿಂದಿನ ನೇಪಾಳದ ಅಂಚೆ ಚೀಟಿ ವೈರಲ್, ಇದರಲ್ಲೇನಿದೆ ಗೊತ್ತಾ?-ಇಲ್ಲಿದೆ ಮಾಹಿತಿ
ಅಯೋಧ್ಯೆ, ಜನವರಿ, 17: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗಲಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶದ ಜನ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ ನೇಪಾಳದ ಅಂಚೆ ಚೀಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇದು ಚರ್ಚೆಗಳಿಗೆ ಗ್ರಾಸವಾಗಿದೆ. ಹಾಗಾದರೆ ಈ ಅಂಚೆ ಚೀಟಿ ಹಿಂದಿರುವ ಇತಿಹಾಸ ಎಂಥಹದ್ದು ಅಂತೀರಾ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿರುವ ಅಂಚೆ ಚೀಟಿಯನ್ನು 1967ರಲ್ಲಿ ನೇಪಾಳದಿಂದ ಬಿಡುಗಡೆ ಮಾಡಲಾಗಿದ್ದು, 57 ವರ್ಷಗಳ ಹಿಂದೆಯೇ ರಾಮಮಂದಿರ ನಿರ್ಮಾಣದ ದಿನಾಂಕವನ್ನು ನಮೂದಿಸಲಾಗಿತ್ತು ಎನ್ನುವ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ಈ ಅಪರೂಪದ ಅಂಚೆ ಚೀಟಿ ಲಕ್ನೋದ ಅಶೋಕ್ ಕುಮಾರ್ ಬಳಿ ಇದೆ. ಅವರು ಅದನ್ನು ತಮ್ಮ "ದಿ ಲಿಟಲ್ ಮ್ಯೂಸಿಯಂ"ನಲ್ಲಿ ಇಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಅಂಚೆ ಚೀಟಿಯನ್ನು ಅಪರೂಪ ಎಂದು ಕರೆಯಲಾಗುತ್ತಿದೆ. ಏಕೆಂದರೆ ಅದರ ಹಿಂದೆ ರಹಸ್ಯವೊಂದು ಅಡಗಿದೆ. ವಾಸ್ತವವಾಗಿ, 1967ರಲ್ಲಿ ಬಿಡುಗಡೆಯಾದ ಈ ಅಂಚೆ ಚೀಟಿಯನ್ನು ಭಗವಾನ್ ರಾಮ ಮತ್ತು ಸೀತೆಗೆ ಸಮರ್ಪಿಸಲಾಗಿದೆ. ಇದರಲ್ಲಿ ಪ್ರಾಸಂಗಿಕವಾಗಿ ರಾಮ ಮಂದಿರದ ಪ್ರತಿಷ್ಠಾಪನೆಯ ವರ್ಷವನ್ನು ನಮೂದಿಸಲಾಗಿದೆ. 15 ಪೈಸೆಯ ಈ ಅಂಚೆ ಚೀಟಿಯ ಮೇಲೆ ರಾಮ ನವಮಿ 2024ಅನ್ನು ಬರೆಯಲಾಗಿದೆ.
ಅಂಚೆ ಚೀಟಿಯನ್ನು 1967ರಲ್ಲಿ ನೇಪಾಳದಲ್ಲಿ ಬಿಡುಗಡೆ ಮಾಡಲಾಯಿತು ಎಂದು ಲಿಟಲ್ ಮ್ಯೂಸಿಯಂನ ಮಾಲೀಕ ಅಶೋಕ್ ಕುಮಾರ್ ವರದಿಯಲ್ಲಿ ತಿಳಿಸಿದ್ದಾರೆ. ಇದರಲ್ಲಿ ಶ್ರೀ ರಾಮ, ಸೀತಾಮಾತೆ ಚಿತ್ರವಿದೆ. ಇದರ ಮೇಲೆ 'ರಾಮ ನವಮಿ 2024' ಎಂದು ಬರೆಯಲಾಗಿದ್ದು, ಏಪ್ರಿಲ್ 18, 1967ರಂದು ರಾಮನವಮಿಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.
2024 ಎಂದು ಈ ವೈರಲ್ ನೇಪಾಳಿ ಅಂಚೆ ಚೀಟಿಯ ಮೇಲೆ ಬರೆಯಲಾದ ರಾಮ ನವಮಿಯನ್ನು ಇಂಗ್ಲಿಷ್ ಕ್ಯಾಲೆಂಡರ್‌ನಲ್ಲಿ ಬರೆಯಲಾಗಿಲ್ಲ. ಆದರೆ ವಿಕ್ರಮ್ ಸಂವತ್‌ನಲ್ಲಿ ಬರೆಯಲಾಗಿದೆ ಎಂದು ಅಶೋಕ್ ಕುಮಾರ್ ವರದಿಯಲ್ಲಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ. ವಿಕ್ರಮ್ ಸಂವತ್ ಇಂಗ್ಲಿಷ್ ಕ್ಯಾಲೆಂಡರ್‌ಗಿಂತ 57 ವರ್ಷ ಮುಂದಿದೆ. ಈ ರೀತಿ 1967ರಲ್ಲಿ ಬಿಡುಗಡೆಯಾದ ಅಂಚೆ ಚೀಟಿಯಲ್ಲಿ 2024 ವರ್ಷವನ್ನು ಬರೆಯಲಾಗಿದ್ದು, ಆದ್ದರಿಂದ ಇದು ಆಶ್ಚರ್ಯಕರವಾಗಿದೆ. ಅನೇಕ ವರ್ಷಗಳ ಹಿಂದೆ ನೀಡಲಾದ ಇದರಲ್ಲಿ ಪ್ರತಿಷ್ಠಾಪನೆಯ ದಿನಾಂಕವನ್ನು ಬರೆಯಲಾಗಿದೆ ಎನ್ನುವ ಮಾಹಿತಿಯೊಂದು ಇದೀಗ ಬಹಿರಂಗವಾಗಿದೆ.












Click it and Unblock the Notifications